ಸ್ಪರ್ಧಾತ್ಮಕ ಜೀವನಶೈಲಿಯನ್ನು ಪೂರ್ಣವಿರಾಮಗೊಳಿಸಿ!

/* Style Definitions */
table.MsoNormalTable
{mso-style-name:”Table Normal”;
mso-tstyle-rowband-size:0;
mso-tstyle-colband-size:0;
mso-style-noshow:yes;
mso-style-priority:99;
mso-style-qformat:yes;
mso-style-parent:””;
mso-padding-alt:0in 5.4pt 0in 5.4pt;
mso-para-margin-top:0in;
mso-para-margin-right:0in;
mso-para-margin-bottom:10.0pt;
mso-para-margin-left:0in;
line-height:115%;
mso-pagination:widow-orphan;
font-size:11.0pt;
font-family:”Calibri”,”sans-serif”;
mso-ascii-font-family:Calibri;
mso-ascii-theme-font:minor-latin;
mso-hansi-font-family:Calibri;
mso-hansi-theme-font:minor-latin;
mso-bidi-font-family:”Times New Roman”;
mso-bidi-theme-font:minor-bidi;}

ಇವತ್ತಿನ ಜಗತ್ತು ಸ್ಪರ್ಧಾತ್ಮಕವಾಗಿದೆ. ಅನೇಕ ಮನೋವಿಜ್ಞಾನಿಗಳ ಅಭಿಪ್ರಾಯದಂತೆ ಪ್ರಸ್ತುತ ಯಾವ ಹುಡುಗರು ಆತ್ಮಹತ್ಯೆ ಮಾಡಿಕೊಂಡಿದ್ದಾರೋ ಅಥವಾ ಯತ್ನಿಸಿದರೋ, ಅವರಲ್ಲಿ 'ಈ ಸ್ಪರ್ಧಾತ್ಮಕ ಯುಗ ಹೇಗೆ ಎದುರಿಸುವುದು' ಎಂಬ ಪ್ರಶ್ನೆ ನಿರ್ಮಾಣವಾಗಿತ್ತು. ಇಗ ಸ್ಪರ್ಧಾತ್ಮಕ ಯುಗದ ಬಗ್ಗೆ ಸ್ವಲ್ಪವಾದರೂ ವಿಚಾರವಾಗಬೇಕು.

ಮನುಷ್ಯನ ಆಸೆ ಆಕಾಂಕ್ಷೆಗಳಿಗೆ ಮಿತಿಯಿಲ್ಲ. ಸ್ಪರ್ಧೆ ಬಗ್ಗೆ ವಿಚಾರ ಮಾಡಬೇಕಾದರೆ ವಿಶ್ವದ ಮೊದಲನೆಯ ಹತ್ತು ಧನಿಕರು, ಏಳು ವರ್ಷದ ಹಿಂದಿನ ವಿಶ್ವಸುಂದರಿಯರು, ಈ ವರ್ಷದ ಐದು ನೊಬೆಲ ಪ್ರಶಸ್ತಿ ಪಡೆದವರು, ಕಳೆದ ಎರಡು ವರ್ಷದ ಆಸಕರ ಪ್ರಶಸ್ತಿ ಪಡೆದವರ ಹೆಸರು ಈ ಕ್ಷಣ ನಿಮಗೆ ನೆನಪು ಇದೆಯಾ? ಇಲ್ಲವಲ್ಲ. ಗೆದ್ದವರಿಗೆ ತಟ್ಟಿದ ಚಪ್ಪಾಳೆಯ ಸಪ್ಪಳ ಶಾಂತವಾಗುತ್ತದೆ, ಪದಕ ಮತ್ತು ವಿಜಯ ಸ್ಮಾರಕವನ್ನು ಧೂಳು ಹಿಡಿಯುತ್ತದೆ ಮತ್ತು ಜೀವನವು ಪುನಃ ಸಾಮಾನ್ಯವಾಗುತ್ತದೆ. ಸ್ಪರ್ಧೆಯ ಕಾರಣ ಆನಂದಿತನಾಗುವ ಒಬ್ಬ ಮತ್ತು ಅವನ ಪ್ರಸನ್ನತೆಯ ಸಮಯವು ಸಿಮಿತವಾಗುತ್ತದೆ. ಆದ್ದರಿಂದ ಶಾಶ್ವತ ಆನಂದ ಎಲ್ಲಿ ಸಿಗುವುದು ಎಂಬ ಪ್ರಶ್ನೆ ಬರುತ್ತದೆ. ಇದು ಯಾವುದೇ ಶಾಲೆ ಅಥವಾ ಮಹಾವಿದ್ಯಾಲಯದಲ್ಲಿ ಕಲಿಸುವುದಿಲ್ಲ. ಅದಕ್ಕೆ ಸಾಧನೆ ಮಾಡುವುದು ಅಗತ್ಯವಾಗಿದೆ. ಪ್ರತಿಕೂಲ ಪರಿಸ್ಥಿತಿಯಲ್ಲಿ ಸಹ ಭಕ್ತ ಪ್ರಲ್ಹಾದ ಆನಂದದಿಂದ ಇದ್ದನು. ಛತ್ರಪತಿ ಶಿವಾಜಿ ಮಹಾರಾಜರು ಸಾಧನೆಯ ಬಲದಿಂದ ಹಿಂದವಿ ಸ್ವರಾಜ್ಯದ ಸ್ಥಾಪನೆ ಮಾಡಿದರು, ಅದರೆ ಮುಸಲಮಾನರೊಂದಿಗೆ ಸ್ಪರ್ಧೆ ಮಾಡಲ್ಲಿಲ. ಸ್ವರಸಮ್ರಾಜ್ಞಿ ಲತಾ ಮಂಗೆಶಕರಸರಸ್ವತಿಯ ರೂಪದಲ್ಲಿ ಕಲೆಯ ಉಪಾಸನೆ ಮಾಡಿದರು. ಗಣಕಯಂತ್ರ ತಜ್ಞ ಡಾ. ವಿಜಯ ಭಾಟಕರರು 'ಪರಮ'ಗಣಕಯಂತ್ರ ಸಿದ್ಧ ಮಾಡುವುದಕ್ಕೆ ಯಾರೊಂದಿಗೂ ಸ್ಪರ್ಧೆ ಮಾಡಲ್ಲಿಲ. ಸಾಧಕರು ಆಧ್ಯಾತ್ಮಿಕ ಹಂತದ ಗರಿಷ್ಠ ಹಂತ ತಲುಪಿದ್ದಾರೆ, ಸ್ಪರ್ಧಾತ್ಮಕ ಕಾರಣದಿಂದವಲ್ಲ ಆದರೆ ಅವರ ಆಂತರಿಕ ಸಾಧನೆ ಮತ್ತು ಗುರುಕೃಪೆಯಿಂದ. ಅದ್ದರಿಂದ ಆತ್ಮಹತ್ಯೆಯ ಸಂಸರ್ಗ ತಡೆಯಲು ಸ್ಪರ್ಧಾತ್ಮಕ ಜೀವನಕ್ಕೆ ಪೂರ್ಣವಿರಾಮಗೊಳಿಸಬೇಕು ಮತ್ತು ಇದಕ್ಕೆ ಸಾಧನೆ ಮಾಡುವುದು ಒಂದೇ ಉಪಾಯವಾಗಿದೆ.