ಚಿಕ್ಕಂದಿನಿಂದಲೇ ಅಲೌಕಿಕ ತತ್ವಹೊಂದಿದ ಆದಿ ಶಂಕರಾಚಾರ್ಯರು


ಬಾಲಮಿತ್ರರೇ, ಭಗವಾನ ಶಂಕರಾಚಾರ್ಯರು ಭರತವರ್ಷ ಭೂಮಿಯ ಒಂದು ದಿವ್ಯ ವಿಭೂತಿಯಾಗಿದ್ದಾರೆ. ಅವರ ಕೌಶಲ್ಯ ಬುದ್ಧಿಯು ಈ ಘಟನೆಯಿಂದತಿಳಿಯುತ್ತದೆ. ಏಳನೇ ವಯಸ್ಸಿನಲ್ಲಿಯೇ ಶಂಕರರ ಪ್ರಖಂಡ ಪಾಂಡಿತ್ಯ ಮತ್ತು ಜ್ಞಾನಸಾಮರ್ಥ್ಯದ ಕೀರ್ತಿ ಎಲ್ಲ ಕಡೆಗಳಲ್ಲಿ ಹಬ್ಬಿತು. ಈ ಜ್ಞಾನ ಮತ್ತು ಕೀರ್ತಿ ಕೇರಳದ ರಾಜ ರಾಜಶೇಖರನ ಕಿವಿಗೆ ಬಿದ್ದಿತು. ರಾಜನು ಶಾಸ್ತ್ರಗಳಲ್ಲಿ ರುಚಿ ಇದ್ದವರಿಗೆ, ವಿದ್ವಾನರಿಗೆ, ಈಶ್ವರ ಭಕ್ತರಿಗೆ, ಶ್ರದ್ಧಾವಾನರಿಗೆ ಮತ್ತು ಪಂಡಿತರಿಗೆ ಆದರದಿಂದ ನೋಡುತ್ತಿದ್ದನು. ಅದಕ್ಕಾಗಿ ರಾಜನಿಗೆ ಈ ಬಾಲಕನನ್ನು ನೋಡುವ ತೀವ್ರ ಇಚ್ಛೆ ಇತ್ತು.

ರಾಜ ರಾಜಶೇಖರನು ಶಂಕರನನ್ನು ಆಸ್ಥಾನಕ್ಕೆ ಕರೆದು ತರಲು ತನ್ನ ಪ್ರಧಾನ ಮತ್ತು ಆನೆಯ ಜೊತೆಗೆ ಆಮಂತ್ರಣವನ್ನು ಕಳುಹಿಸಿದನು. ಪ್ರಧಾನನು ಶಂಕರನ ಮನೆಗೆ ಹೋಗಿ ನಮ್ರತೆಯಿಂದ ರಾಜನು ಕೊಟ್ಟ ಸಂದೇಶವನ್ನು ತಿಳಿಸಿದನು. ಸಂದೇಶವನ್ನು ನೋಡಿ ಶಂಕರನು "ಉಪಜೀವನ ಮಾಡಲು ಭಿಕ್ಷೆಯೇ ಯಾರ ಸಾಧನೆಯಾಗಿದೆಯೋ, ತ್ರಿಕಾಲ ಸಂಧ್ಯಾ ಈಶ್ವರ ಚಿಂತನ,ಪೂಜೆ-ಅರ್ಚನೆ ಮತ್ತು ಗುರುಸೇವೆಯೇ ಯಾರ ಜೀವನದ ನಿತ್ಯ ವ್ರತವಾಗಿದೆಯೋ ಅವರಿಗೆ ಈ ಆನೆಯ ಸವಾರಿ ಯಾಕೆ? ನಾಲ್ಕು ವರ್ಣದ ಸರ್ವ ಕರ್ತವ್ಯಗಳ ಪಾಲನೆ ಮಾಡಿ ಬ್ರಾಹ್ಮಣಾದಿ ಧರ್ಮಮಯ ಜೀವನ ಜೀವಿಸಲು ವ್ಯವಸ್ತೆ ಮಾಡುವುದು ರಾಜನ ಕರ್ತವ್ಯವಾಗಿದೆ. ನನ್ನ ಈ ಸಂದೇಶವನ್ನು ನಿನ್ನ ಸ್ವಾಮಿಗೆ ಹೇಳು",ಎಂದರು. ಈ ಸಂದೇಶದ ಜೊತೆಗೆ ರಾಜ ರಾಜಶೇಖರನು ಕಳಿಸಿರುವ ರಾಜಪ್ರಸಾದ ಆಮಂತ್ರಣಕ್ಕೆ ಸ್ಪಶ್ಟವಾಗಿ ನಿರಾಕರಿಸಿದನು.

ಉತ್ತರದಿಂದ ರಾಜನು ಅತ್ಯಧಿಕ ಪ್ರಸನ್ನನಾದನು. ಅವನ ಮನಸ್ಸಿನಲ್ಲಿ ಶಂಕರನ ಪ್ರತಿ ಇನ್ನೂ ಶ್ರದ್ಧೆ ಬೆಳೆಯಿತು. ಸ್ವತಃ ರಾಜನೆ ತನ್ನ ಪ್ರಧಾನನ ಜೊತೆ ಶಂಕರನಿಗೆ ಭೇಟಿಯಾಗಲು ಕಾಲ್ನಡಿಗೆಯಲ್ಲಿ ಹೋದನು. ರಾಜನು ಅಲ್ಲಿ ಕುಳಿತಿರುವ ತೇಜಸ್ವಿ ಬಾಲಕ ಮತ್ತು ಅವನ ಸುತ್ತಲೂ ಕುಳಿತಿರುವ ಬ್ರಾಹ್ಮಣರು ವೇದಾಧ್ಯಯನ ಮಾಡುವುದನ್ನು ಕಂಡನು.

ರಾಜನು ಬರುವುದನ್ನು ಕಂಡು ಶಂಕರನು ನಮ್ರತೆಯಿಂದ ಸಮ್ಮಾನಪೂರ್ವಕ ಸ್ವಾಗತ ಮಾಡಿದನು. ರಾಜನಿಗೆ ಶಂಕರನ ಜೊತೆ ಚರ್ಚೆ ಮಾಡಿದಾಗ ಅವನ ಪ್ರಖಂಡ ಪಾಂಡಿತ್ಯ ಮತ್ತು ಅಲೌಕಿಕ ವಿಚಾರ ಶಕ್ತಿಯ ಅನುಭವವಾಯಿತು. ರಾಜನು ಅಲ್ಲಿಂದ ಹೊರಡುವಾಗ ರತ್ನದ ಮುದ್ರೆಗಳನ್ನು ಶಂಕರನ ಚರಣದಲ್ಲಿ ಅರ್ಪಣೆ ಮಾಡಿ ಸ್ವೀಕರಿಸಲು ವಿನಂತಿಸಿಕೊಂಡನು. ಆಗ ಶಂಕರನು ರಾಜನಿಗೆ "ಮಹಾರಾಜರೇ, ನಾನು ಬ್ರಾಹ್ಮಣ ಮತ್ತು ಬ್ರಹ್ಮಚಾರಿಯಾಗಿದ್ದೇನೆ, ಇದರಿಂದ ನನಗೇನು ಉಪಯೋಗವಿದೆ? ನೀವು ದೇವರ ಪೂಜೆಗೆ ಕೊಟ್ಟಿರುವ ಭೂಮಿ ನನಗೆ ಮತ್ತು ನನ್ನ ತಾಯಿಗೆ ಸಾಕು. ನಿಮ್ಮ ಕೃಪೆಯಿಂದ ನನಗೆ ಯಾವ ಪ್ರಕಾರದ ಅಭಾವವಾಗಿಲ್ಲ",ಎಂದರು.

ಶಂಕರನ ಉತ್ತರ ರಾಜನಿಗೆ ತಿಳಿಯಲಿಲ್ಲ. ಕೊನೆಗೆ ರಾಜನು ಶಂಕರನಿಗೆ ಕೈಮುಗಿದು "ನಿಮ್ಮ ದರ್ಶನದಿಂದ ನಾನು ಧನ್ಯನಾದೆ",ಎಂದು ಹೇಳಿ ಅವರಿಗೆ ದುಡ್ಡನ್ನು ಅರ್ಪಣೆಮಾಡಿ "ಒಂದು ಸಲ ಅರ್ಪಣೆ ನೀಡಿ ಅದನ್ನು ಮತ್ತೆ ನಾನು ತೆಗೆದುಕೊಳ್ಳುವುದು ಸರಿಯಲ್ಲಾ, ಅದಕ್ಕೆ ನೀವೇ ಆ ಹಣವನ್ನು ಯೋಗ್ಯ ವ್ಯಕ್ತಿಗೆ ಕೊಡಿರಿ",ಎಂದನು. ಮುಗುಳ್ನಗುತ್ತಾ ಶಂಕರರು "ಮಹಾರಾಜರೆ, ನೀವು ರಾಜರಾಗಿದ್ದು ಯಾರು ಸುಪಾತ್ರರು, ಯಾರು ಯೋಗ್ಯರಂದು ನಿಮಗೆ ತಿಳಿದಿರಬೇಕು, ನನ್ನಂಥ ಬ್ರಹ್ಮಚಾರಿಗೇನು ಇಂಥಹ ಜ್ಞಾನ ಇರಬಹುದು? ವಿದ್ಯಾದಾನವೇ ಬ್ರಾಹ್ಮಣನ ಧರ್ಮ ಮತ್ತು ಸತ್ಪಾತ್ರೆದಾನವೇ ರಾಜಧರ್ಮವಾಗಿದೆ. ನೀವೆ ಯೋಗ್ಯ ಸತ್ಪಾತ್ರನಿಗೆ ಈ ಧನವನ್ನು ನೀಡಿ",ಎಂದರು. ರಾಜನು ನಿರುತ್ತರನಾಗಿ ಶಂಕರನಿಗೆ ವಂದಿಸಿ ಅಲ್ಲಿರುವ ಬ್ರಾಹ್ಮಣರಿಗೆ ಆ ಧನವನ್ನು ಹಂಚಿದನು.

ಮಕ್ಕಳೇ,ನಿರಪೇಕ್ಷೆಯಿಂದ ವಿದ್ಯಾದಾನ ಮಾಡುವ ಮಹತ್ವ ಈಗ ನಿಮಗೆ ತಿಳಿದಿರಬಹುದು. ನಾವು ಕೂಡ ಹೀಗೆ ಮಾಡಬಹುದು. ಯಾವ ವಿಷಯದಲ್ಲಿ ನಿಮಗೆ ಅಧಿಕ ಜ್ಞಾನವಿದೆಯೋ ಅದನ್ನು ತಿಳಿಯದವರಿಗೆ ನೀವು ತಿಳಿಸಿ ಅವರಿಗೆ ಸಹಾಯ ಮಾಡಬಹುದು.

Leave a Comment