ಸಂತರ ಕ್ಷಮಾಶೀಲತೆ !

ಮಕ್ಕಳೇ, ಇದು ಛತ್ರಪತಿ ಶಿವಾಜಿ ಮಹಾರಾಜರ ಕಾಲದ ವಿಷಯ. ಮಹಾರಾಷ್ಟ್ರದ ದೇಹು ಎಂಬ ಗ್ರಾಮದಲ್ಲಿ, ಬಹಳ ದೊಡ್ಡ ಸಂತ ವಾಸಿಸುತ್ತಿದ್ದರು, ಅವರ ಹೆಸರು ಸಂತ ತುಕಾರಾಮ ಮಹಾರಾಜ. ಸಂತ ತುಕಾರಾಮ ಮಹಾರಾಜರು ವಿಠ್ಠಲನ ಅನನ್ಯ ಭಕ್ತರಾಗಿದ್ದರು.

ಸಂತ ತುಕಾರಾಮ ಮಹಾರಾಜರ ಭಕ್ತಿಯ ಖ್ಯಾತಿ ಮತ್ತು ಜನಪ್ರಿಯತೆ ದೂರದವರೆಗೆ ಹರಡಿತು. ತುಕಾರಾಮ ಮಹಾರಾಜರು ಭಜನೆ-ಕೀರ್ತನೆ ಮಾಡುವಾಗ ಆ ಸ್ಥಳದಲ್ಲಿ ಭಾರೀ ಜನಸಂದಣಿಯಾಗುತ್ತಿತ್ತು. ಆದರೆ ಅವರ ಖ್ಯಾತಿಯಿಂದ ಕೆಲವರಿಗೆ ಹೊಟ್ಟೆಕಿಚ್ಚಿತ್ತು. ಸಂತ ತುಕಾರಾಮ ಮಹಾರಾಜರು ಕೂಡ ಇಬ್ಬರು ವಿರೋಧಿಗಳನ್ನು ಹೊಂದಿದ್ದರು. ಇಬ್ಬರೂ ಯಾವಾಗಲೂ ತುಕಾರಾಮ ಮಹಾರಾಜರನ್ನು ಅವಮಾನಿಸಲು ಪ್ರಯತ್ನಿಸಿದರು; ಆದರೆ ಅವರಿಗೆ ಯಶಸ್ಸು ಸಿಗಲಿಲ್ಲ. ಒಂದು ಸಲ ತುಕಾರಾಮ ಮಹಾರಾಜರಿಗೆ ಒಂದು ಗತಿ ಕಾಣಿಸಬೇಕು ವಿರೋಧಿಗಳು ಇಬ್ಬರೂ ಪುಣೆ ಪುರಸಭೆ ಅಧಿಕಾರಿ ದಾದೋಜಿ ಕೊಂಡದೇವರಲ್ಲಿ ತುಕಾರಾಮ ಮಹಾರಾಜರ ಬಗ್ಗೆ ಸುಳ್ಳು ದೂರು ನೀಡಿದರು. ದಾದೋಜಿ ಕೋಂಡದೇವ ಅವರು ಛತ್ರಪತಿ ಶಿವಾಜಿ ಮಹಾರಾಜರಿಗೆ ಶಸ್ತ್ರವಿದ್ಯೆಯನ್ನು ಕಲಿಸಿದ್ದರು. ಅವರಿಬ್ಬರೂ ದೂರು ನೀಡಿ, ದೇಹು ಗ್ರಾಮದ ತುಕಾರಾಮ ಎಂಬ ವ್ಯಕ್ತಿ ಸನಾತನ ಹಿಂದೂ ಧರ್ಮವನ್ನು ನಾಶಮಾಡಲು ಪ್ರಾರಂಭಿಸಿದ್ದಾನೆ ಎಂದು ಹೇಳಿದರು ! ಅವನು ದೇವರನ್ನು ಆರಾಧಿಸುವುದು, ವ್ರತ-ವೈಕಲ್ಯ ಇತ್ಯಾದಿಗಳನ್ನು ತೆಗೆದುಹಾಕಿ ಭಕ್ತಿಯ ಮಾರ್ಗದಿಂದ ಸಾಗುತ್ತಿದ್ದಾನೆ. ತುಕಾರಾಮ ಒಬ್ಬ ಶೂದ್ರ ಮತ್ತು ದೇವರ ಮಹಿಮೆಯನ್ನು ವಿವರಿಸಲು ಯಾವುದೇ ಹಕ್ಕಿಲ್ಲ. ಅವನು ಜನರನ್ನು ಮೋಸ ಮಾಡುತ್ತಿದ್ದಾನೆ. ಅವನು ವೈದಿಕ ಧರ್ಮವನ್ನು ಕಡೆಗಣಿಸಲು ಪ್ರಾರಂಭಿಸಿದ್ದಾನೆ. ನೀವು ಅವನಿಗೆ ಸೂಕ್ತ ಶಿಕ್ಷೆಯನ್ನು ನೀಡಿ ಎಂದು ಹೇಳಿದರು.

ಆ ಇಬ್ಬರು ವಿರೋಧಿಗಳು ದೂರು ನೀಡಿದ ನಂತರ, ದಾದೋಜಿ ತುಕಾರಾಮ ಮಹಾರಾಜ ಅವರನ್ನು ಪುಣೆಗೆ ಕರೆದು ವಿಷಯದ ಬಗ್ಗೆ ವಿಚಾರಿಸಿದರು. ದಾದೋಜಿಯವರ ಆದೇಶಕ್ಕೆ ಮನ್ನಣೆ ನೀಡುವ ಮೂಲಕ ಮಹಾರಾಜರು ಪುಣೆಗೆ ಹೋಗಲು ಮನೆಯಿಂದ ಹೊರಟರು. ವಿಠ್ಠಲನ ಭಜನೆ ಮಾಡುತ್ತ ಅವರು ರಸ್ತೆಯಲ್ಲಿ ನಡೆಯುತ್ತಿದ್ದರು. ಪುಣೆಯ ಹೊರಗೆ ಮುಲಾ ಮತ್ತು ಮುಠಾ ಎಂಬ ಎರಡು ನದಿಗಳ ಸಂಗಮವಿದೆ. ತುಕಾರಾಮ ಮಹಾರಾಜರು ಪುಣೆ ನಗರದ ಹೊರಗಿನ ಮುಲಾ-ಮುಠಾ ನದಿಗಳ ಸಂಗಮದ ಜಾಗದಲ್ಲಿ ವಿಶ್ರಾಂತಿ ಪಡೆದರು. ಆ ಸ್ಥಳದಲ್ಲಿ, ಅವರ ಭಜನೆಗಳನ್ನು ಕೇಳಲು ತುಂಬಾ ಜನರು ಒಟ್ಟುಗೂಡಿದರು. ತುಕಾರಾಮ ಮಹಾರಾಜರ ಭಜನೆ-ಕೀರ್ತನೆಯನ್ನು ಕೇಳುವ ಲಾಭ ಪಡೆಯಲು ಹತ್ತಿರದ ಅನೇಕ ಗ್ರಾಮಗಳ ಜನರು ಸಹ ಸಂಗಮದಲ್ಲಿ ಸೇರಿದರು.ಈ ಸ್ಥಳವು ತೀರ್ಥಕ್ಷೇತ್ರದಂತೆ ಕಾಣತೊಡಗಿತು. ಈ ವಿಷಯ ದಾದೋಜಿ ಕೊಂಡದೇವರಿಗೆ ತಲುಪಿತು. ಆ ಸಮಯದಲ್ಲಿ ದಾದೋಜಿ ಕೊಂಡದೇವ ಕೂಡ ಜಿಜ್ಞಾಸೆಯಿಂದ ಸಂಗಮಕ್ಕೆ ತೆರಳಿ ತುಕಾರಾಮ ಮಹಾರಾಜರ ಭಜನೆಯಲ್ಲಿ ಮಗ್ನರಾದರು.

ತುಕಾರಾಮ ಮಹಾರಾಜ ಅವರ ಮಧುರ ಧ್ವನಿಯಿಂದ ದಾದೋಜಿ ಪ್ರಭಾವಿತರಾದರು. ಮಹಾರಾಜರನ್ನು ನಗರಕ್ಕೆ ಬರಲು ಗೌರವದಿಂದ ಆಹ್ವಾನಿಸಿದರು. ತುಕಾರಾಮ ಮಹಾರಾಜ ಅವರಿಗೆ ಎರಡು ಸಾವಿರ ಬ್ರಾಹ್ಮಣರ ಭೋಜನಕೂಟವನ್ನು ಆಯೋಜಿಸುವ ಮೂಲಕ ಗೌರವಿಸಲಾಯಿತು.

ದಾದೋಜಿಯವರು ಈ ಪರಿ ತುಕಾರಾಮ ಮಹಾರಾಜರನ್ನು ಗೌರವಿಸಿದ್ದು ನೋಡಿ ಆ ಇಬ್ಬರು ವಿರೋಧಿಗಳಿಗೆ ಇನ್ನಷ್ಟು ಕೋಪ ಬಂತು. ಅವರು ದಾದೋಜಿಯವರಿಗೆ, ‘ತುಕಾರಾಮನನ್ನು ಶಿಕ್ಷಿಸಲು ನಾವು ನಿಮಗೆ ಹೇಳಿದ್ದೆವು’ ಎಂದು ಹೇಳಿದರು. ‘ಬದಲಾಗಿ ನೀವು ಅವನನ್ನು ಗೌರವಿಸುತ್ತಿದ್ದೀರಿ ! ನಿಮ್ಮ ಉದ್ದೇಶವೇನು?’ ಅವರ ಪ್ರಶ್ನೆಯನ್ನು ಕೇಳಿದ ದಾದೋಜಿ ಕೊಂಡದೇವರು, ‘ನೀವು ತುಕಾರಾಮ ಮಹಾರಾಜರೊಂದಿಗೆ ಈಶ್ವರನ ಬಗ್ಗೆ ಚರ್ಚಿಸಬೇಕು. ಒಂದುವೇಳೆ ಅವರು ನಿಮಗೆ ಸೋತರೆ, ನಾವು ಅವರನ್ನು ಕತ್ತೆಯ ಮೇಲೆ ಕುಳ್ಳಿರಿಸಿ ಊರು ಸುತ್ತಿಸುತ್ತೇವೆ; ಆದರೆ ನೀವು ಗಮನದಲ್ಲಿಡಿರಿ ಒಂದು ವೇಳೆ ನೀವು ಸೋತರೆ ನಿಮ್ಮನ್ನೂ ಕ್ಷಮಿಸಲಾಗುವುದಿಲ್ಲ! ನಿಮಗೂ ಕತ್ತೆಯ ಮೇಲೆ ಕುಳ್ಳಿರಿಸಿ ಊರು ಸುತ್ತಿಸುತ್ತೇವೆ’ ಎಂದರು. ಆ ಇಬ್ಬರು ವಿರೋಧಿಗಳು ದಾದೋಜಿಯವರ ಸವಾಲನ್ನು ಸ್ವೀಕರಿಸಿದರು.

ವಿರೋಧಿಗಳು ತುಕಾರಾಮ ಮಹಾರಾಜರ ಅವರ ಮನೆಯನ್ನು ತಲುಪಿದರು. ಆ ಸಮಯದಲ್ಲಿ ತುಕಾರಾಮ ಮಹಾರಾಜರು ಕೀರ್ತನೆ-ಭಜನೆಯಲ್ಲಿ ಮಗ್ನರಾಗಿದ್ದರು. ಆದ್ದರಿಂದ, ವಿರೋಧಿಗಳು ಇಬ್ಬರೂ ಮೌನವಾಗಿ ಕುಳಿತುಕೊಳ್ಳಬೇಕಾಯಿತು. ತುಕಾರಾಮ ಮಹಾರಾಜರ ಹರಿನಾಮ ಘೋಷದಿಂದ ಅಲ್ಲಿ ನೆರೆದಿದ್ದ ಎಲ್ಲ ಭಕ್ತರು ಮಗ್ನರಾದರು. ಮಕ್ಕಳೇ, ಆಗ ವಿರೋಧಿಗಳು ದಿಗ್ಭ್ರಮೆಗೊಳಿಸುವಂತಹದನ್ನು ನೋಡಿದರು. ಸಂತ ತುಕಾರಾಮ ಮಹಾರಾಜರ ಬದಲು ಚತುರ್ಭುಜ ಭಗವಾನ್ ಶ್ರೀ ಕೃಷ್ಣನು ಕಾಣಿಸಿಕೊಂಡನು ! ತುಕಾರಾಮ ಮಹಾರಾಜರೊಂದಿಗೆ ಚರ್ಚಿಸಲು ಬಂದ ಅವರಿಬ್ಬರು ವಿರೋಧಿಗಳು ತುಂಬಾ ಆಶ್ಚರ್ಯಚಕಿತರಾಗಿ ನೋಡತೊಡಗಿದರು. ಅವರಿಗೆ ತಮ್ಮ ತಪ್ಪಿನ ಬಗ್ಗೆ ಅರಿವಾಯಿತು ಮತ್ತು ಅವರು ತಪ್ಪನ್ನು ಒಪ್ಪಿಕೊಂಡರು. ತುಕಾರಾಮ ಮಹಾರಾಜರ ಕಾಲಿಗೆ ಬಿದ್ದು ತಮ್ಮ ತಪ್ಪು ಒಪ್ಪಿಕೊಂಡರು.

ಇಲ್ಲಿ ವಿರೋಧಿಗಳ ಸೋಲಿನ ಸುದ್ಧಿ ದಾದೋಜಿಯವರಿಗೆ ತಲುಪಿತ್ತು. ಕತ್ತೆಯ ಮೇಲೆ ಸವಾರಿ ಮಾಡಿ ಊರು ಸುತ್ತಿಸಲು ಅವರು ಸಂಪೂರ್ಣ ಸಿದ್ಧತೆಗಳನ್ನು ಮಾಡಿಕೊಂಡಿದ್ದರು. ಅವರ ತಲೆಯ ಫೇಟಾವನ್ನು ಸಹ ತೆಗೆದುಹಾಕಲಾಯಿತು; ಆದರೆ ತುಕಾರಾಮ ಮಹಾರಾಜರು ನಡುವೆ ಬಂದು ಆ ವಿರೋಧಿಗಳನ್ನು ಕ್ಷಮಿಸುವಂತೆ ದಾದೋಜಿಯವರನ್ನು ವಿನಂತಿಸಿದರು.

ಮಕ್ಕಳೇ, ಈ ಕಥೆಯನ್ನು ಕೇಳಿ ನಿಮಾಗೆ ‘ಸಂತರು ಎಷ್ಟು ಕ್ಷಮಾಶೀಲರು ಇರುತ್ತಾರೆ’ ಎಂದು ಗಮನಕ್ಕೆ ಬಂದಿರಬಹುದಲ್ಲವೇ? ಅವರ ಮನಸ್ಸಿನಲ್ಲಿ ಯಾರ ಬಗ್ಗೆಯೂ ದ್ವೇಷ ಇರುವುದಿಲ್ಲ. ಅದಕ್ಕಾಗಿಯೇ ಅವರು ವಿರೋಧಿಗಳನ್ನು ಸಹಜವಾಗಿ ಕ್ಷಮಿಸುತ್ತಾರೆ. ಇದರೊಂದಿಗೆ ನೀವು ನಾಮಸ್ಮರಣೆಯ ಶಕ್ತಿಯನ್ನು ಸಹ ಅರಿತುಕೊಂಡಿದ್ದೀರಿ, ಅಲ್ಲವೇ? ನಾಮಸ್ಮರಣೆ ಮಾಡುವುದರಿಂದ, ಭಗವಂತನ ಗುಣಗಳು ವ್ಯಕ್ತಿಯಲ್ಲಿ ಬರಲು ಪ್ರಾರಂಭಿಸುತ್ತವೆ. ಆದ್ದರಿಂದ, ಭಗವಂತನ ಗುಣಗಳನ್ನು ನಿಮ್ಮಲ್ಲಿ ತರಲು ನೀವು ಸಹ ನಾಮಸ್ಮರಣೆ ಮಾಡಲು ಪ್ರಾರಂಭಿಸುತ್ತೀರಿ ಅಲ್ಲವೇ ?

Leave a Comment