ಶ್ರೀ ಗುರುನಾನಕರ ಈಶ್ವರನ ಮೇಲಿನ ಭಕ್ತಿ

ಗುರುನಾನಕಸಿಖ್ಖ ಪಂಥವನ್ನು ಸ್ಥಾಪಿಸಿದರು.ನಮ್ಮ ಶರೀರ ಒಂದು ಸುಂದರವಾದ ಹೊಲ. ನಮ್ಮ ಮನಸ್ಸು ರೈತ.ಈಶ್ವರನ ನಾಮವೇ ಈ ಹೊಲದಲ್ಲಿ ಬಿತ್ತುವಬೀಜಗಳಾಗಿವೆ. ಪ್ರೇಮದಿಂದಲೇ ಈ ಬೀಜಗಳು ಮೊಳಕೆಯೊಡೆಯುತ್ತವೆ, ಅರಳುತ್ತವೆ ಹಾಗೂ ಫಲ ನೀಡುತ್ತವೆ. ನನ್ನ ಹೊಲದಿಂದ ನಾನು ಈ ರೀತಿಯಲ್ಲಿ ನನ್ನ ಕುಟುಂಬಕ್ಕೆ ಸಾಕಷ್ಟು ಆದಾಯ ದೊರಕುವಷ್ಟು ಫಸಲು ತೆಗೆಯುತ್ತೇನೆ ಇವು ಗುರುನಾನಕರ ವಾಕ್ಯಗಳಾಗಿವೆ.

ಪಂಜಾಬಿನ ತಳವಡೆ ಎಂಬ ಊರಿನಲ್ಲಿ ಕಾಳೂ ಎಂಬ ಓರ್ವ ರೈತಮತ್ತು ಅವನ ಹೆಂಡತಿವಾಸಿಸುತ್ತಿದ್ದರು. ಆ ರೈತ ದಂಪತಿಗೆಒಬ್ಬ ಮಗಹುಟ್ಟಿದನು. ಅವನಿಗೆ 'ನಾನಕ' ಎಂದು ಹೆಸರಿಲಾಯಿತು. ನಾನಕನು ಚಿಕ್ಕಂದಿನಿಂದಲೇ ಧಾರ್ಮಿಕ ವೃತ್ತಿಯವನಾಗಿದ್ದನು. ನಾನಕ ಸ್ವಲ್ಪ ದೊಡ್ಡವನಾದಾಗ ಅವನ ತಂದೆ ಅವನನ್ನು ಶಾಲೆಗೆ ಸೇರಿಸಿದರು. ಶಾಲೆಯ ನಂತರ ಅವನು ದನಕರುಗಳನ್ನು ಮೇಯಿಸಲು ಅರಣ್ಯಕ್ಕೆ ಕರೆದುಕೊಂಡು ಹೋಗುತ್ತಿದ್ದನು. ಅಲ್ಲಿ ಹೋಗಿ ಅವನು ದೇವರ ನಾಮಸ್ಮರಣೆ ಮಾಡುತ್ತಿದ್ದನು.

ಒಂದು ದಿನ ಅವನು ದೇವರಿಗೆ ಪ್ರಾರ್ಥನೆ ಮಾಡುತ್ತಿದ್ದಾಗ ಓರ್ವ ವೃದ್ಧ ರೈತನು ಅಲ್ಲಿಗೆ ಬಂದನು. ಅವನು ನಾನಕಗೆ ನನಗೆ ತೀರ್ಥಯಾತ್ರೆಗೆ ಹೋಗುವುದಿದೆ. ನಾನು ದಿನಗಳಲ್ಲಿ ಮರಳಿ ಬರುತ್ತೇನೆ. ಅಲ್ಲಿಯವರೆಗೆ ನನ್ನ ಹೊಲವನ್ನು ಕಾಯುತ್ತಿರು, ನಾನು ನಿನಗೆ ಚೀಲತುಂಬಿ ಗೋಧಿ ಕೊಡುತ್ತೇನೆ. ನನ್ನ ಹೊಲದಲ್ಲಿ ಹತ್ತು ಚೀಲ ಗೋಧಿ ಬೆಳೆಯುತ್ತದೆ.ಎಂದು ಹೇಳಿದನು. ನಾನಕ ಒಪ್ಪಿಕೊಂಡನು. ಆ ರೈತನು ಆನಂದದಿಂದ ತೀರ್ಥಯಾತ್ರೆಗೆ ಹೊರಟನು. ನಾನಕ ಅವನ ಹೊಲದ ದಿಬ್ಬದ ಮೇಲೆ ಕುಳಿತ. ಹೊಲದಲ್ಲಿ ಗೋಧಿಯ ಸಾಕಷ್ಟು ತೆನೆಗಳು ಬಂದಿದ್ದವು. ನೋಡುತ್ತಿದ್ದಂತೆಯೇ ಹಕ್ಕಿಗಳು ಗುಂಪು ಗುಂಪಾಗಿ ಅಲ್ಲಿ ಬಂದವು. ಆ ಹಕ್ಕಿಗಳು ಗೋಧಿಯ ಕಾಳುಗಳನ್ನು ತಿನ್ನತೊಡಗಿದವು. ಆಗ ನಾನಕ ದೇವರಿಗೆ ದೇವರೇ, ರೈತನ ಗೋಧಿ ರಕ್ಷಣೆ ಮಾಡು. ಹಕ್ಕಿಗಳಿಗೆ ನಿನ್ನ ಕಾಳುಗಳನ್ನು ತಿನ್ನಿಸು ಎಂದು ಪ್ರಾರ್ಥನೆ ಮಾಡಿದರು. ೪ ದಿನಗಳ ವರೆಗೆ ಹೀಗೆಯೇ ನಡೆಯಿತು. ಹಕ್ಕಿಗಳು ಪ್ರತಿದಿನ ಕಾಳು ತಿನ್ನುತ್ತಿದ್ದವು. ನಾಲ್ಕು ದಿನಗಳ ನಂತರ ರೈತನು ಮರಳಿ ಬಂದನು. ಹೊಲದಲ್ಲಿನ ಬೆಳೆಯ ಮೇಲಿನ ಹಕ್ಕಿಗಳ ಗುಂಪನ್ನು ನೋಡಿ ಅವನು ಕೋಪಗೊಂಡನು. ಆಗ ನಾನಕರು ರೈತ ಅಜ್ಜ, ಕೋಪಗೊಳ್ಳದಿರಿ.ಹೊಲದಲ್ಲಿ ಪೈರು ಕೊಯ್ದು, ಕಾಳಿನ ಎಣಿಕೆ ಮಾಡಿ. ನಾನು ದೇವರ ಕಾಳನ್ನು ಹಕ್ಕಿಗಳಿಗೆ ತಿನಿಸಿದ್ದೇನೆ. ನಿಮ್ಮ ಕಾಳು ಹಾಗೆ ಇದೆ,ಎಂದು ಹೇಳಿದರು. ಇದನ್ನು ಕೇಳಿ ರೈತನು ಹೊಲದ ಬೆಳೆಯನ್ನು ಕೊಯ್ದು. ಕಾಳುಗಳನ್ನು ಬೇರ್ಪಡಿಸಿ, ಅದನ್ನು ಅಳೆದು ನೋಡಿದಾಗ ಗೋಧಿಯಹನ್ನೊಂದು ಚೀಲಗಳು ತುಂಬಿದ್ದವು. ದೇವರ ಈ ಕೃಪೆಯನ್ನು ಕಂಡು ರೈತನು ನಾನಕ ಕಾಲು ಹಿಡಿದನು.

ಮಕ್ಕಳೇ, ಪ್ರಾರ್ಥನೆಯ ಮಹತ್ತ್ವವು ನಿಮಗೆ ತಿಳಿದಿರಬೇಕು. ಮನಸ್ಸಿನಿಂದ ಆರ್ತತೆಯಿಂದ ಪ್ರಾರ್ಥನೆ ಮಾಡಿದರೆ ಈಶ್ವರನು ಧಾವಿಸಿ ಬರುತ್ತಾನೆ; ಆದುದರಿಂದ ಸತತ ಕುಲದೇವತೆಯ ನಾಮಸ್ಮರಣೆ, ಪ್ರಾರ್ಥನೆ ಮಾಡಬೇಕು ಹಾಗೂ ಕೃತಜ್ಞತೆಯನ್ನು ಸಲ್ಲಿಸಬೆಕು. ಪ್ರಾರ್ಥನೆಯಲ್ಲಿ ಸಾಕಷ್ಟು ಬಲವಿದೆ.

Leave a Comment