ದೀಪಾವಳಿಯಲ್ಲಿ ಕೋಟೆಯನ್ನು ಏಕೆ ಕಟ್ಟುತ್ತಾರೆ ?

ಕೋಟೆ ಕಟ್ಟುವುದು ಎಂದರೆ ಏನು ?

ಕೋಟೆ ಕಟ್ಟುವುದು ಎಂದರೆ ಮನಸ್ಸು ಹಾಗೂ ಬುದ್ಧಿಯ ಮೇಲೆ ಈಶ್ವರನ ಶಕ್ತಿಯ ತೇಜವು ನಿರ್ಮಾಣವಾಗುವುದು. ಆದುದರಿಂದಲೇ ಕೋಟೆ ಕಟ್ಟುವುದರ ಮಾಧ್ಯಮದಿಂದ ನಾವು ಈಶ್ವರನ ಚೈತನ್ಯವನ್ನು ಪಡೆಯಬಹುದು.

ಕೋಟೆಯನ್ನು ಚಿಕ್ಕಮಕ್ಕಳೇ ಏಕೆ ಕಟ್ಟುತ್ತಾರೆ ?

ಚಿಕ್ಕ ಮಕ್ಕಳಲ್ಲಿ ನಿರ್ಮಲತೆಯಿರುತ್ತದೆ. ಚಿಕ್ಕ ಮಕ್ಕಳು ’ಈಶ್ವರನ ರೂಪವಾಗಿರುತ್ತಾರೆ’ ಎಂದು ಹೇಳಲಾಗುತ್ತದೆ; ಏಕೆಂದರೆ ಚಿಕ್ಕ ಮಕ್ಕಳ ಮನಸ್ಸಿನ ಮೇಲೆ ಹೆಚ್ಚಿನ ಸಂಸ್ಕಾರಗಳಾಗಿರುವುದಿಲ್ಲ. ೧೧ ವರ್ಷದೊಳಗಿನ ಮಕ್ಕಳು ಮುಗ್ಧರಾಗಿರುತ್ತಾರೆ. ಅನಂತರವೇ ಅವರು ಯಾವುದೇ ಕೃತಿಯನ್ನು ಬುದ್ಧಿಯಿಂದ ಮಾಡುತ್ತಾರೆ. ಮಕ್ಕಳಲ್ಲಿ ಈಶ್ವರನಿಂದ ಬಂದಂತಹ ಶಕ್ತಿಯನ್ನು ಹೆಚ್ಚಿನ ಪ್ರಮಾಣದಲ್ಲಿ ಗ್ರಹಿಸುವ ಕ್ಷಮತೆಯಿರುತ್ತದೆ.

ಕೋಟೆಯನ್ನು ಮನೆಯ ಹೊರಗೆ ಏಕೆ ಕಟ್ಟುತ್ತಾರೆ ?

ಮನೆಯು ಸಮೃದ್ಧಿಯನ್ನು ದರ್ಶಿಸುವುದರ ಪ್ರತೀಕವಾಗಿರುತ್ತದೆ. ಮನೆಯೆದುರು ಕೋಟೆಯನ್ನು ನಿರ್ಮಿಸುವುದರಿಂದ ಮನೆಯ ರಕ್ಷಣೆ ಮಾಡಲು. ಅಂದರೆ ಮನೆಯಲ್ಲಿರುವ ಧನ, ಸಮೃದ್ಧಿಯನ್ನು ಉಳಿಸಲು ಛತ್ರಪತಿ ಶಿವಾಜಿ ಮಹಾರಾಜರಂತಹ ಕ್ಷಾತ್ರತೇಜವನ್ನು ಪ್ರತಿನಿಧಿಸುವ, ಕೋಟೆಯ ನೇತೃತ್ವವಿರುವ ಧರ್ಮಾಚರಣಿ ರಾಜನೊಂದಿಗೆ, ಅಭೇದ್ಯ ಕವಚವನ್ನು ನಿರ್ಮಿಸುತ್ತದೆ.