ದೀಪಾವಳಿಯ ಸಮಯದಲ್ಲಿ ಮಾಡಬಹುದಾದ ಸಾತ್ವಿಕ ಮತ್ತು ಧರ್ಮಾಭಿಮಾನವನ್ನು ಜಾಗೃತಗೊಳಿಸುವ ಕೃತಿಗಳು

ದೀಪಾವಳಿಯ ಸಮಯದಲ್ಲಿ ಮಾಡಬಹುದಾದ
ಸಾತ್ವಿಕ ಮತ್ತು ಧರ್ಮಾಭಿಮಾನವನ್ನು ಜಾಗೃತಗೊಳಿಸುವ ಕೃತಿಗಳು

ದೇವತೆಗಳ ತತ್ವವನ್ನು ಆಕರ್ಷಿಸುವ ಸಾತ್ವಿಕ ರಂಗೋಲಿಗಳನ್ನು ಬಿಡಿಸ : 'ಕಾರ್ಟೂನ್' ಮತ್ತು ದೇವತೆಗಳ ವಿಡಂಬನಾತ್ಮಕ ಚಿತ್ರಗಳ ರಂಗೋಲಿಗಳಿಂದಾಗುವ ಧರ್ಮಹಾನಿಯನ್ನು ತಡೆಯಿರಿ ! ದೀಪಾವಳಿಗೆ ಪ್ರತಿಯೊಂದು ಮನೆಯ ಮುಂದೆಯೂ ರಂಗೋಲಿಯನ್ನು ಬಿಡಿಸುತ್ತಾರೆ. ಅನೇಕರು 'ಕಾರ್ಟೂನ್' ಅಥವಾ ದೇವತೆಗಳ ವಿಡಂಬನೆಯನ್ನು ಮಾಡುವಂತಹ ರಂಗೋಲಿಗಳನ್ನು ಬಿಡಿಸುತ್ತಾರೆ. ಇದು ಪಾಪವಾಗುತ್ತದೆ! ಇಂತಹ ತಪ್ಪು ಆಚರಣೆಗಳನ್ನು ನಿಲ್ಲಿಸಿ, ನಾವು ಹಿಂದೂ ಧರ್ಮದ ರಕ್ಷಣೆಯನ್ನು ಮಾಡಬೇಕು.

ಪಟಾಕಿಗಳನ್ನು ಸಿಡಿಸುವುದರಿಂದಾಗುವ ಧ್ವನಿ ಮತ್ತು ವಾಯು ಮಾಲಿನ್ಯವನ್ನು ತಡೆಯಿರಿ !

ಮಿತ್ರರೇ, ದೀಪಾವಳಿಯ ಹಬ್ಬವು ಕೇವಲ ಮೋಜಿಗಾಗಿ ಆಚರಿಸುವುದಲ್ಲ; ಇದು ನಮ್ಮ ಧರ್ಮ ಮತ್ತು ಸಂಸ್ಕೃತಿಯ ರಕ್ಷಣೆಗಾಗಿ ಮತ್ತು ಇತರರಿಗೆ ಆನಂದವನ್ನು ನೀಡಲು ಆಚರಿಸುವಂತಹ ಹಬ್ಬವಾಗಿದೆ. ಪಟಾಕಿಗಳ ಕರ್ಣ ಕಠೋರ ಶಬ್ಧದಿಂದ ಇತರರಿಗೆ ಆನಂದವಾಗುವುದೋ, ದುಃಖವಾಗುವುದು? ದೀಪಾವಳಿಯ ಸಮಯದಲ್ಲಿ ಅನೇಕರು ಪಟಾಕಿಗಳ ಶಬ್ದವನ್ನು ಸಹಿಸಲಾಗದೆ ಬೇರೆಡೆ ಹೋಗಿ ವಾಸಿಸುತ್ತಾರೆ. ಶಾಲೆಯಲ್ಲಿ ನಮಗೆ 'ಪರಿಸರವನ್ನು ಸಂರಕ್ಷಿಸಿ' ಎಂದು ಕಲಿಸುತ್ತಾರೆ. ಈ ದೀಪಾವಳಿಯಂದು ಎಲ್ಲರೂ ಪರಿಸರವನ್ನು ರಕ್ಷಿಸಲು ನಿಶ್ಚಯಿಸೋಣ.

ಪಟಾಕಿಗಳ ದುಷ್ಪರಿಣಾಮಗಳು

ಅ. ಶಾರೀರಿಕ ಮತ್ತು ಮಾನಸಿಕ ಸಮಸ್ಯೆಗಳು : ಪಟಾಕಿಗಳ ಕರ್ಕಶ ಶಬ್ದದಿಂದ ಕಿವುಡುತನ ಬರುವ ಸಾಧ್ಯತೆ ಇದೆ. ಪಟಾಕಿಗಳ ಹೊಗೆಯಿಂದ ವೃದ್ಧರಿಗೆ ಉಸಿರಾಟದಲ್ಲಿ ತೊಂದರೆಗಳಾಗುತ್ತವೆ. ದೊಡ್ಡ ಶಬ್ದದಿಂದ ಚಿಕ್ಕ ಮಕ್ಕಳಿಗೆ ಮಾನಸಿಕ ಆಘಾತವಾಗುತ್ತದೆ.

ಆ. ಬೆಂಕಿ ತಗುಲುವ ಭೀತಿ : ಕ್ಷಿಪಣಿಯಂತಹ ಪಟಾಕಿಗಳಿಂದ ಒಣ ಹುಲ್ಲಿನ ಛಾವಣಿಯಿರುವ ಮನೆಗಳಿಗೆ, ಹುಲ್ಲಿನ ರಾಶಿ ಇತ್ಯಾದಿಗಳಿಗೆ ಬೆಂಕಿ ತಾಗಿ ಅಪಾರ ನಷ್ಟವಾಗುತ್ತದೆ.

ಇ. ದುಂದುವೆಚ್ಚ : ಇಂದು ದೇಶದೆಲ್ಲೆಡೆ ಅನೇಕ ಜನರು ಹಸಿವಿನಿಂದ ಹವಣಿಸುತ್ತಿದ್ದಾರೆ. ತಿನ್ನಲು ಒಪ್ಪೊತ್ತಿನ ಊಟವೂ ಸಿಗದ ಅನೇಕರಿರುವಾಗ, ನೀವು ಪಟಾಕಿಗಳನ್ನು ಸುಡಲು ದುಂದುವೆಚ್ಚ ಮಾಡುತ್ತೀರಿ. ನೀವೂ ಕೂಡ ಈ ದೇಶದ ನಾಗರಿಕರು. ಇಂತಹ ವಿಷಯಗಳಲ್ಲಿ ಪೋಲಾಗುತ್ತಿರುವ ಹಣವನ್ನು ಉಳಿಸಿ ದೇಶಕ್ಕೆ ಆಗುವ ಹಾನಿಯನ್ನು ತಪ್ಪಿಸಿ.

ಈ. ದೇವತೆಗಳ ಮತ್ತು ರಾಷ್ಟ್ರಪುರುಷರ ಚಿತ್ರಗಳಿರುವ ಪಟಾಕಿಗಳನ್ನು ಸುಬೇಡಿ ! : ಅನೇಕ ಮಕ್ಕಳು ದೇವತೆಗಳ ಚಿತ್ರವಿರುವ ಪಟಾಕಿಗಳನ್ನು ಸುಡುತ್ತಾರೆ. ಇದರಿಂದ ಆ ದೇವತೆಯ ಚಿತ್ರವೂ ಛಿದ್ರಛಿದ್ರವಾಗುತ್ತದೆ. ಇದೊಂದು ದೊಡ್ಡ ಪಾಪವಾಗಿದೆ. ನಿಮ್ಮ ತಂದೆ ತಾಯಿಯ ಚಿತ್ರಗಳು ಹೀಗೆ ಛಿದ್ರವಾದರೆ ನಿಮಗೆ ಒಪ್ಪಿಯಿದೆಯೇ? ಈ ವಿಷಯದಲ್ಲಿ ನಿಮಗೆ ಕೋಪ ಬರಬೇಕಲ್ಲವೇ?

ದೇವತೆಗಳನ್ನು ಒಲಿಸಲು ಹಾಡುವ ಭಜನೆಗಳು, ಆರತಿ ಹಾಡುಗಳಿಂದ ದೇವತೆಗಳು ನಮ್ಮತ್ತ ಆಕರ್ಶಿತರಾಗುತ್ತಾರೆ. ಪಟಾಕಿಗಳ ಕರ್ಕಶ ಶಬ್ದದಿಂದ ಮನುಷ್ಯರಿಗೆ ಅಲ್ಲಿರಲು ಆಗುವುದಿಲ್ಲ, ಹೀಗಿರುವಾಗ ದೇವತೆಗಳು ಅಲ್ಲಿ ಬರುವರೆ? ನೀವೇ ಯೋಚಿಸಿ ನೋಡಿ! ಇಂತಹ ಶಬ್ದವನ್ನು ಮಾಡುವುದರಿಂದ ವಾತಾವರಣದಲ್ಲಿರುವ ದೇವತೆಗಳ ಶಕ್ತಿ ಮತ್ತು ಚೈತನ್ಯವನ್ನು ನಷ್ಟಪಡಿಸುತ್ತೇವೆ. ಈ ರೀತಿ ಮಾಡುವುದರಿಂದ ನಮ್ಮ ಮೇಲೆ ದೇವರ ಕೃಪೆ ಆಗುವುದೇ? ಮಿತ್ರರೇ, ಈ ದೀಪಾವಳಿಯಂದು ಪಟಾಕಿಗಳ ಈ ಕೆಟ್ಟ ಪದ್ಧತಿಯನ್ನು ಸಂಪೂರ್ಣವಾಗಿ ನಿಲ್ಲಿಸಲು ಪ್ರಯತ್ನಗಳನ್ನು ಮಾಡಿ !

ಆಂತರಿಕವಾಗಿ 'ಕತ್ತಲಿನಿಂದ ಬೆಳಕಿನೆಡೆಗೆ' ಪ್ರಯಾಣ ಮಾಡಿ!

ಹೇಗೆ ಒಂದು ದೀಪವು ಕತ್ತಲನ್ನು ನಾಶ ಮಾಡುತ್ತದೆಯೋ, ಅದೇ ರೀತಿ ಸ್ವಭಾವ ದೋಷ ಮತ್ತು ಅಹಂಗಳನ್ನು ನಿವಾರಿಸುವುದರ ಪ್ರಯತ್ನಗಳನ್ನು ಮಾಡಿ ಆಂತರಿಕ ದೀಪಾವಳಿಯನ್ನು ಆಚರಿಸಿ ! : ದೀಪವು ಅಂಧಕಾರವನ್ನು ನಶಿಸುತ್ತದೆ. ಮಿತ್ರರೇ, ನಮ್ಮೆಲ್ಲರ ಜೀವನದಲ್ಲಿಯೂ ಒಂದು ರೀತಿಯ ಕತ್ತಲು ಆವರಿಸಿದೆ. ಸ್ವಭಾವದೋಷಗಳು ಮತ್ತು ಅಹಂ ನಿಂದಾಗಿ ನೀವು ಅನೇಕ ಬಾರಿ ದುಃಖಿಯಾಗುತ್ತೀರಿ. ದೀಪ ಆನಂದದ ಪ್ರತೀಕವಾಗಿದೆ. ದೀಪಾವಳಿಯಲ್ಲಿ ದೋಷ ಮತ್ತು ಅಹಂ ಇವುಗಳನ್ನು ನಿವಾರಿಸುವತ್ತ ಹೆಚ್ಚು ಹೆಚ್ಚು ಪ್ರಯತ್ನವನ್ನು ಮಾಡಿದರೆ ಆಂತರಿಕ ದೀಪಾವಳಿಯನ್ನು ಆಚರಿಸಿದಂತೆ ಆಗುತ್ತದೆ. ಅಹಂನ ಆವರಣ ಹೋದರೆ ಮಾತ್ರ ಆನಂದ ಅನುಭವವಾಗುತ್ತದೆ. 'ನಾನೇ ಬುದ್ಧಿವಂತ, ಅವರಿಗೇನು ತಿಳಿಯುವುದಿಲ್ಲ' ಎಂಬುವುದು ಅಹಂನ ಸೂಚಕವಾಗಿದೆ. 'ದೇವರೇ ಎಲ್ಲೆವನ್ನು ಮಾಡುತ್ತಾರೆ. ಅವರೇ ಎಲ್ಲರಲ್ಲಿಯೂ ನೆಲೆಸಿ ಪ್ರತಿಯೊಂದು ಕಾರ್ಯವನ್ನು ಮಾಡುತ್ತಾರೆ' ಎಂಬುವುದನ್ನು ಮನದಟ್ಟು ಮಾಡಿಕೊಳ್ಳಬೇಕು. 'ದೇವರಿಲ್ಲದೆ ನಾವು ಏನನ್ನು ಮಾಡಲು ಸಾಧ್ಯವಿಲ್ಲ' ಎಂಬುವುದರ ಅರಿವು ನಿಮಗಾಗಬೇಕು. ಸತತವಾಗಿ ಇಂತಹ ವಿಚಾರಗಳು ಬಂದರೆ ನೀವೂ ಆನಂದವನ್ನು ಅನುಭವಿಸಬಹುದು.

'ಹೇ ಶ್ರೀಕೃಷ್ಣ, ನಿನ್ನ ಅಪೇಕ್ಷೆಯಂತೆ ನಮ್ಮಿಂದ ದೀಪಾವಳಿಯ ಹಬ್ಬ ಆಚರಿಸುವಂತಾಗಲಿ, ಮತ್ತು ದೀಪಾವಳಿಯಲ್ಲಿ ನಡೆಯುವ ಪ್ರತಿಯೊಂದು ತಪ್ಪು ಆಚರಣೆಯನ್ನು ತಡೆಯುವ ಶಕ್ತಿ ಮತ್ತು ಬುದ್ಧಿಯನ್ನು ನೀನೆ ನಮ್ಮಲ್ಲರಿಗೆ ನೀಡು. ಇದೇ ನಿನ್ನ ಚರಣಗಳಲ್ಲಿ ಪ್ರಾರ್ಥನೆ'.

– ಶ್ರೀ. ರಾಜೇಂದ್ರ ಪಾವಸ್ಕರ (ಗುರುಜಿ), ಪನವೇಲ್