‘ನಮಃ ಶಿವಾಯ |’ ಎಂಬ ಪಂಚಾಕ್ಷರಿ ಮಂತ್ರದ ಅರ್ಥ

shiv

'ನಮಃ ಶಿವಾಯ |'ಇದು ಶಿವಪಂಚಾಕ್ಷರಿ ಮಂತ್ರವಾಗಿದೆ. ಯಜುರ್ವೇದದಲ್ಲಿನ ರುದ್ರಾಧ್ಯಾಯದಲ್ಲಿ 'ನಮಃ ಶಿವಾಯ|'ಈ ಶಬ್ದದಿಂದ ಒಂದು ಅನುವಾಕ (ಒಂದು ಉಪಭಾಗ) ಪ್ರಾರಂಭವಾಗುತ್ತದೆ. ಈ ಮಂತ್ರವನ್ನು ಅಲ್ಲಿಂದಲೇ ತೆಗೆದುಕೊಳ್ಳಲಾಗಿದೆ. ಇದರ ಪ್ರಾರಂಭದಲ್ಲಿ ಪ್ರಣವವನ್ನು ಸೇರಿಸಿದರೆ ಅದು 'ಓಂ ನಮಃ ಶಿವಾಯ|'ಎಂಬ ಷಡಕ್ಷರಿ ಮಂತ್ರವಾಗುತ್ತದೆ.

'ನಮಃ ಶಿವಾಯ |'ಮಂತ್ರದಲ್ಲಿನ ಪ್ರತಿಯೊಂದು ಅಕ್ಷರದ ಆಧ್ಯಾತ್ಮಿಕ ಅರ್ಥ

= ಸಮಸ್ತ ಲೋಕಗಳ ಆದಿದೇವ
ಮಃ = ಪರಮನವನ್ನು ಕೊಡುವವನು ಮತ್ತು ಮಹಾಪಾತಕಗಳನ್ನು ನಾಶಗೊಳಿಸುವವನು
ಶಿ = ಕಲ್ಯಾಣಕಾರಕ, ಶಾಂತ ಮತ್ತು ಶಿವನ ಅನುಗ್ರಹಕ್ಕೆ ಕಾರಣವಾದವನು
ವಾ = ವೃಷಭವಾಹನ, ವಾಸುಕಿ ಮತ್ತು ವಾಮಾಂಗಿ ಶಕ್ತಿಗಳ ಸೂಚಕ
= ಪರಮಾನಂದರೂಪ ಮತ್ತು ಶಿವನ ಶುಭ ನಿವಾಸಸ್ಥಾನ ಆದುದರಿಂದ ಈ ಐದು ಅಕ್ಷರಗಳಿಗೆ ನಮಸ್ಕಾರ.

ನಟರಾಜ ಶಿವನ ತಾಂಡವ ನೃತ್ಯದೊಂದಿಗಿರುವ ಮೇಲಿನ ಮಂತ್ರದಲ್ಲಿನ ಐದು ಅಕ್ಷರಗಳ ಸಂಬಂಧವು ಕೆಳಗಿನಂತಿದೆ.

= ಅಗ್ನಿಯಿರುವ ಕೈ
ಮಃ = ಮುಯಲಕ ದೈತ್ಯನನ್ನು ಮೆಟ್ಟುವ ಕಾಲು
ಶಿ = ಡಮರುಹಸ್ತ
ವಾ = ಪಸರಿಸಿರುವ ಹಸ್ತ
= ಅಭಯಹಸ್ತ

ಅನುಕ್ರಮವಾಗಿ ಈ ಐದು ಅಕ್ಷರಗಳ ಅರ್ಥವನ್ನು ಈಶ್ವರ, ಶಕ್ತಿ, ಆತ್ಮ, ಅಂತರ್ಧಾನ ಮತ್ತು ಪಾಪನಿವಾರಣೆ ಎಂದೂ ಹೇಳಲಾಗಿದೆ.

Leave a Comment