ಶಿವನ ರೂಪಗಳು


shiv

ರುದ್ರ

ಯಾರುಅಳಿಸುವವನಾಗಿದ್ದಾನೆಯೋ, ಅವನೇ ರುದ್ರ,ಅಂದರೆ ದುಃಖ ನಾಶ ಮಾಡುವುದು. ದುಃಖವನ್ನು ನಾಶ ಮಾಡುವವನೇ ರುದ್ರ. ದುಃಖವೆಂದರೆ ಅವಿದ್ಯೆ ಅಥವಾ ಸಂಸಾರ. ರುದ್ರನೆಂದರೆ ಅವಿದ್ಯೆಯಿಂದ ನಿವೃತ್ತಗೊಳಿಸುವವನು.

ನಟರಾಜ

ಶಿವನ ಎರಡು ಅವಸ್ಥೆಗಳನ್ನು ಒಪ್ಪಿಕೊಳ್ಳಲಾಗಿದೆ. ಅದರಲ್ಲಿನ ಒಂದು ಸಮಾಧಿ ಅವಸ್ಥೆ ಮತ್ತು ಎರಡನೆಯ ಅವಸ್ಥೆ ಅಂದರೆ ತಾಂಡವ ಅಥವಾ ಲಾಸ್ಯ ನೃತ್ಯಾವಸ್ಥೆ. ಸಮಾಧಿ ಅವಸ್ಥೆ ಎಂದರೆ ನಿರ್ಗುಣ ಅವಸ್ಥೆ ಮತ್ತು ನೃತ್ಯಾವಸ್ಥೆ ಎಂದರೆ ಸಗುಣ ಅವಸ್ಥೆ. ‘ನಟನೆ ಅಥವಾ ನಾಟ್ಯವೆಂದರೆ ಯಾವುದಾದರೊಂದು ನಿಶ್ಚಿತ ಘಟನೆ ಅಥವಾ ವಿಷಯವನ್ನು ವ್ಯಕ್ತಪಡಿಸಲು ಮಾಡಲಾಗುವ ಶರೀರದ ಚಲನವಲನೆ. ಈ ನಟನೆಯನ್ನು ಯಾವನು ಮಾಡುತ್ತಾನೆಯೋ ಅವನೇ ನಟ. ಶಿವನು ನಟರಾಜನ ರೂಪದಲ್ಲಿ ನಾಟ್ಯಕಲೆಯನ್ನು ಪ್ರೇರೇಪಿಸಿದನು ಎಂದು ಪಾರಂಪರಿಕ ನಂಬಿಕೆಯಿದೆ. ಶಿವನು ಆದಿನಟನಾಗಿದ್ದಾನೆ ಎಂಬ ಶ್ರದ್ಧೆಯಿರುವುದರಿಂದಲೇ ಅವನಿಗೆ ನಟರಾಜ ಎಂಬ ಬಿರುದು ಬಂದಿದೆ. ಈ ಬ್ರಹ್ಮಾಂಡವು ನಟರಾಜನ ನೃತ್ಯಶಾಲೆಯಾಗಿದೆ. ಯಾವ ರೀತಿ ಅವನು ನರ್ತಕನಾಗಿದ್ದಾನೆಯೋ ಹಾಗೆಯೇ ಅವನು ಅದರ ಸಾಕ್ಷಿಯೂ ಆಗಿದ್ದಾನೆ. ಯಾವಾಗ ಅವನ ನೃತ್ಯವು ಪ್ರಾರಂಭವಾಗುತ್ತದೆಯೋ, ಆಗ ಆ ನೃತ್ಯದ ಝೇಂಕಾರದಿಂದ ಎಲ್ಲ ವಿಶ್ವವ್ಯಾಪಾರಗಳಿಗೆ ಚಾಲನೆಯು ಸಿಗುತ್ತದೆ ಮತ್ತು ಯಾವಾಗ ಅವನ ನೃತ್ಯವು ನಿಲ್ಲುತ್ತದೆಯೋ ಆಗ ಈ ಸಂಪೂರ್ಣ ವಿಶ್ವವನ್ನು ತನ್ನಲ್ಲಿ ಸಮಾವೇಶಗೊಳಿಸಿಕೊಂಡು ಅವನು ಒಬ್ಬನೇ ಆತ್ಮಾನಂದದಲ್ಲಿ ಮಗ್ನನಾಗುತ್ತಾನೆ, ಹೀಗೆ ನಟರಾಜನ ಕಲ್ಪನೆಯಿದೆ. ಅಂದರೆ ನಟರಾಜನು ಈಶ್ವರನ ಎಲ್ಲ ಕ್ರಿಯಾಕಲಾಪಗಳ ಪ್ರತಿರೂಪವಾಗಿದ್ದಾನೆ. ನಟರಾಜನ ನೃತ್ಯವನ್ನು ಸೃಷ್ಟಿ, ಸ್ಥಿತಿ, ಸಂಹಾರ, ತಿರೋಭಾವ (ಮಾಯೆಯ ಆವರಣ) ಮತ್ತು ಅನುಗ್ರಹ (ಮಾಯೆಯಿಂದ ಬಿಡುಗಡೆ ಹೊಂದಲು ಕೃಪೆ) ಎಂಬ ಐದು ಈಶ್ವರೀ ಕ್ರಿಯೆಗಳ ಪ್ರತೀಕವೆಂದು ತಿಳಿದುಕೊಳ್ಳಲಾಗಿದೆ.’

ತ್ರಿಮೂರ್ತಿರೂಪ

ತ್ರಿಮೂರ್ತಿಯ ಎದುರಿಗೆ ಶಿವಲಿಂಗ ಅಥವಾ ನಂದಿಯಿದ್ದರೆ ಅದು ಶಂಕರನ ಮೂರ್ತಿಯಾಗಿರುತ್ತದೆ, ಇಲ್ಲದಿದ್ದರೆ ಅದು ದತ್ತನ ಮೂರ್ತಿಯಾಗಿರುತ್ತದೆ.

ಅಷ್ಟಮೂರ್ತ

‘ಶಿವನನ್ನು ಬಿಟ್ಟರೆ ಈ ಸೃಷ್ಟಿಯಲ್ಲಿ ಬೇರೆ ಏನೂ ಇಲ್ಲ. ಆದುದರಿಂದ ಶಂಕರನ ಎಂಟು ಹೆಸರುಗಳ ಚಿಂತನೆಯನ್ನು ಮಾಡುತ್ತಾರೆ. ಪೃಥ್ವಿ, ಜಲ, ತೇಜ, ವಾಯು, ಆಕಾಶ, ಚಂದ್ರ, ಸೂರ್ಯ ಮತ್ತು ಜೀವಾತ್ಮ ಇವು ಚರಾಚರದ ಬೋಧವನ್ನು ಮಾಡಿಕೊಡುವ ಅಷ್ಟಮೂರ್ತಿಗಳಾಗಿವೆ.

– ಗುರುದೇವ ಡಾ. ಕಾಟೇಸ್ವಾಮೀಜಿ

Leave a Comment