ಶಿವಲಿಂಗದ ಪೂಜೆ ಹೇಗೆ ಮಾಡಬೇಕು?

ಅಭಿಷೇಕ

ಶಿವಲಿಂಗಕ್ಕೆ ತಣ್ಣೀರು, ಹಾಲು ಮತ್ತು ಪಂಚಾಮೃತಗಳಿಂದ ಅಭಿಷೇಕವನ್ನು ಮಾಡುತ್ತಾರೆ. (ಹದಿನಾಲ್ಕನೆಯ ಶತಮಾನದ ಮೊದಲು ಲಿಂಗಕ್ಕೆ ಕೇವಲ ನೀರಿನಿಂದ ಅಭಿಷೇಕವನ್ನು ಮಾಡುತ್ತಿದ್ದರು, ಹಾಲು ಮತ್ತು ಪಂಚಾಮೃತಗಳಿಂದ ಅಭಿಷೇಕವನ್ನು ಮಾಡುತ್ತಿರಲಿಲ್ಲ. ಹಾಲು ಮತ್ತು ತುಪ್ಪ ಇವು ಸ್ಥಿತಿಯ ಪ್ರತೀಕವಾಗಿರುವುದರಿಂದ ಲಯದ ದೇವತೆಯಾಗಿರುವ ಶಂಕರನ ಪೂಜೆಯಲ್ಲಿ ಅವುಗಳನ್ನು ಉಪಯೋಗಿಸುತ್ತಿರಲಿಲ್ಲ. ಆದರೆ ಹದಿನಾಲ್ಕನೆಯ ಶತಮಾನದಲ್ಲಿ ಹಾಲನ್ನು ಶಕ್ತಿಯ ಪ್ರತೀಕವೆಂದು ತಿಳಿದುಕೊಂಡು ಪಂಚಾಮೃತಾಭಿಷೇಕ, ದುಗ್ಧಾಭಿಷೇಕ ಮುಂತಾದವುಗಳನ್ನು ಪ್ರಾರಂಭಿಸಿದರು.)

ಅರಿಶಿನ ಮತ್ತು ಕುಂಕುಮ ನಿಷಿದ್ಧವಾಗಿವೆ

ಮುಂದೆ ನೀಡಿರುವ ಕಾರಣಗಳಿಗಾಗಿ ಅರಿಶಿನ ಮತ್ತು ಕುಂಕುಮವನ್ನು ಅರ್ಪಿಸುವುದಿಲ್ಲ. ಅರಿಶಿನವು ಭೂಮಿಯಲ್ಲಿ ತಯಾರಾಗುತ್ತದೆ ಮತ್ತು ಅದು ಉತ್ಪತ್ತಿಯ ಪ್ರತೀಕವಾಗಿದೆ. ಕುಂಕುಮವನ್ನು ಅರಿಶಿನದಿಂದಲೇ ತಯಾರಿಸುತ್ತಾರೆ, ಆದುದರಿಂದ ಅದೂ ಸಹ ಉತ್ಪತ್ತಿಯ ಪ್ರತೀಕವಾಗಿದೆ. ಶಂಕರನು ಲಯದ ದೇವತೆಯಾಗಿರುವುದರಿಂದ ಅವನ ಪೂಜೆಯಲ್ಲಿ ಉತ್ಪತ್ತಿಯ ಪ್ರತೀಕವಾಗಿರುವ ಅರಿಶಿನ-ಕುಂಕುಮವನ್ನು ಉಪಯೋಗಿಸುವುದಿಲ್ಲ. ಭಸ್ಮವು ಲಯದ ಪ್ರತೀಕವಾಗಿರುವುದರಿಂದ ಅದನ್ನು ಮಾತ್ರ ಉಪಯೋಗಿಸುತ್ತಾರೆ.

ಭಸ್ಮ

ಲಿಂಗದ ಮುಂದಿನ ಭಾಗದ ಮೇಲೆ ಭಸ್ಮದ ಮೂರು ಅಡ್ಡ ಪಟ್ಟೆಗಳನ್ನು ಎಳೆಯುತ್ತಾರೆ ಅಥವಾ ಅಡ್ಡ ಪಟ್ಟೆಗಳನ್ನೆಳೆದು ಅದರ ಮಧ್ಯದಲ್ಲಿ ಒಂದು ವೃತ್ತವನ್ನು ಬಿಡಿಸುತ್ತಾರೆ. ಇದಕ್ಕೆ ‘ಶಿವಾಕ್ಷ’ ಎನ್ನುತ್ತಾರೆ.

ಅಕ್ಷತೆ

ಲಿಂಗದ ಪೂಜೆಯನ್ನು ಮಾಡುವಾಗ ಬಿಳಿ ಬಣ್ಣದ ಅಕ್ಷತೆಗಳನ್ನು ಉಪಯೋಗಿಸುವುದು ಯೋಗ್ಯವಾಗಿದೆ. ಅಕ್ಷತೆಯು ವೈರಾಗ್ಯದ ಅಂದರೆ ನಿಷ್ಕಾಮ ಸಾಧನೆಯ ದ್ಯೋತಕವಾಗಿದೆ. ಅಕ್ಷತೆಗಳೆಡೆಗೆ ನಿರ್ಗುಣಕ್ಕೆ ಸಂಬಂಧಿಸಿದ ಮೂಲ ಉಚ್ಚದೇವತೆಗಳ ಲಹರಿಗಳು ಆಕರ್ಷಿತವಾಗುತ್ತವೆ. ಶಂಕರನು ಉಚ್ಚದೇವತೆಯಾಗಿದ್ದು ಅವನು ಅತಿಹೆಚ್ಚು ಪ್ರಮಾಣದಲ್ಲಿ ನಿರ್ಗುಣಕ್ಕೆ ಸಂಬಂಧಿಸಿರುವುದರಿಂದ ಲಿಂಗಪೂಜೆಯಲ್ಲಿ ಅಕ್ಷತೆಯನ್ನು ಉಪಯೋಗಿಸುವುದರಿಂದ ಶಿವತತ್ತ್ವದಿಂದ ಹೆಚ್ಚು ಲಾಭವಾಗುತ್ತದೆ.

ಹೂವುಗಳು

ಧೋತ್ರಾ, ಶ್ವೇತಕಮಲ, ಶ್ವೇತಕಣ್ಹೆರ, ಚಮೇಲಿ, ಮಂದಾರ, ನಾಗಸಂಪಿಗೆ, ಪುನ್ನಾಗ, ನಾಗಕೇಶರ, ರಾತ್ರಿರಾಣಿ, ಜೂಯಿ, ಜಾಜಿ ಹಾಗೂ ಬಿಳಿ ಹೂವುಗಳನ್ನು ಶಿವನಿಗೆ ಅರ್ಪಿಸಬೇಕು. (ಶಿವನಿಗೆ ಕೇದಗೆ ನಿಷಿದ್ಧವಾಗಿದೆ, ಆದುದರಿಂದ ಕೇದಗೆಯನ್ನು ಅರ್ಪಿಸಬಾರದು. ಕೇವಲ ಮಹಾಶಿವರಾತ್ರಿಯ ದಿನ ಮಾತ್ರ ಅರ್ಪಿಸಬೇಕು.)

Leave a Comment