ಶಿವನ ಹೆಸರುಗಳ ಅರ್ಥಗಳು

ಶಂಕರ

‘ಶಂ ಕರೋತಿ ಇತಿ ಶಂಕರಃ|’ ‘ಶಂಮ’ ಎಂದರೆ ಕಲ್ಯಾಣ ಮತ್ತು ‘ಕರೋತಿ’ ಎಂದರೆ ಮಾಡುವವನು. ಕಲ್ಯಾಣವನ್ನು ಮಾಡುತ್ತಾನೆಯೋ ಅವನೇ ಶಂಕರ.

ಮಹಾಂಕಾಲೇಶ್ವರ

ಅಖಿಲ ವಿಶ್ವಬ್ರಹ್ಮಾಂಡದ ಅಧಿಷ್ಠಾನ ದೇವರು (ಕ್ಷೇತ್ರಪಾಲ ದೇವರು). ಇವನು ಕಾಲಪುರುಷ ಅಂದರೆ ಮಹಾಕಾಲ (ಮಹಾನ್‌ಕಾಲ) ನಾಗಿದ್ದಾನೆ. ಅವನ ಈಶ್ವರನ ರೂಪಕ್ಕೆ ಮಹಾಂಕಾಲೇಶ್ವರ ಎನ್ನುತ್ತಾರೆ.

ಮಹಾದೇವ

ವಿಶ್ವಸೃಜನದ ಮತ್ತು ವ್ಯವಹಾರದ ವಿಚಾರಗಳಲ್ಲಿ ಮೂರು ವಿಚಾರಗಳಿರುತ್ತವೆ – ಪರಿಪೂರ್ಣ ಪಾವಿತ್ರ್ಯ, ಪರಿಪೂರ್ಣ ಜ್ಞಾನ ಮತ್ತು ಪರಿಪೂರ್ಣ ಸಾಧನೆ. ಈ ಮೂರೂ ವಿಷಯಗಳು ಯಾವ ದೇವರಲ್ಲಿ ಒಟ್ಟಿಗೆ ಇರುತ್ತವೆಯೋ ಅವನಿಗೆ ‘ದೇವರ ದೇವ’ ಅಂದರೆ ‘ಮಹಾದೇವ’ ಎಂದು ಹೇಳುತ್ತಾರೆ.

ಭಾಲಚಂದ್ರ

ಭಾಲಿ, ಅಂದರೆ ಹಣೆಯ ಮೇಲೆ ಚಂದ್ರನನ್ನು ಧರಿಸಿದ್ದಾನೆಯೋ, ಅವನೇ ಭಾಲಚಂದ್ರ. ಶಿವನ ಪುತ್ರ ಶ್ರೀಗಣಪತಿಗೂ ‘ಭಾಲಚಂದ್ರ’ ಎಂಬ ಒಂದು ಹೆಸರಿದೆ.

ಗಂಗಾಧರ

ಗಂಗೆಯು ಸ್ವರ್ಗದಲ್ಲಿದ್ದಳು. ಭಗೀರಥನು ಕಠೋರ ತಪಸ್ಸು ಮಾಡಿದ್ದರಿಂದ ಅವಳು ಪೃಥ್ವಿಯ ಮೇಲೆ ಬಂದಳು, ಆಗ ಗಂಗೆಯ ಪ್ರವಾಹದ ಅಸಾಮಾನ್ಯ ವೇಗವನ್ನು ತಡೆಯಲು ಯಾರಿಂದಲೂ ಸಾಧ್ಯವಾಗಲಿಲ್ಲ. ಶಂಕರನು ಗಂಗೆಯನ್ನು ತನ್ನ ಜಡೆಯಲ್ಲಿ ಧರಿಸಿದನು. ಆದುದರಿಂದ ಅವನಿಗೆ ‘ಗಂಗಾಧರ’ ಎಂಬ ಹೆಸರು ಬಂದಿತು.

ಕರ್ಪೂರಗೌರ

ಶಿವನ ಬಣ್ಣವು ಕರ್ಪೂರದಂತೆ ಬೆಳ್ಳಗಿದೆ, ಆದುದರಿಂದ ಅವನನ್ನು ‘ಕರ್ಪೂರಗೌರ’ ಎಂದೂ ಕರೆಯುತ್ತಾರೆ.

ಪಿಂಗಲಾಕ್ಷ

ಪಿಂಗಲ್ಚ ಅಕ್ಷ = ಪಿಂಗಲಾಕ್ಷ. ‘ಪಿಂಗಲ’ = ಪಿಂಗಲಾ, ಇದು ಗೂಬೆಯ ಒಂದು ಜಾತಿಯಾಗಿದೆ. ಈ ಪಕ್ಷಿಗೆ ಭೂತಕಾಲ, ವರ್ತಮಾನಕಾಲ ಮತ್ತು ಭವಿಷ್ಯತ್ಕಾಲಗಳ ಬಗ್ಗೆ ತಿಳಿಯುತ್ತದೆ. ಶಿವನಿಗೂ ಈ ರೀತಿ ತಿಳಿಯುತ್ತದೆ. ಆದುದರಿಂದ ಅವನನ್ನು ‘ಪಿಂಗಲಾಕ್ಷ’ ಎಂದು ಕರೆಯುತ್ತಾರೆ.

ಅಘೋರ

ಅಘೋರ ಅಂದರೆ ಚಿಂತೆಯಿಲ್ಲದವನು. ಶಿವನು ಸ್ಮಶಾನದಲ್ಲಿರುತ್ತಾನೆ, ಭೂತಗಳ ಸಹವಾಸದಲ್ಲಿರುತ್ತಾನೆ, ನಾಗಗಳನ್ನು ಧರಿಸಿರುತ್ತಾನೆ, ವಿಷವನ್ನು ಕುಡಿಯುತ್ತಾನೆ, ಆದರೂ ಅವನಿಗೆ ಯಾವುದರ ಚಿಂತೆಯೂ ಇಲ್ಲ. (ಶ್ರೀವಿಷ್ಣುವಿನ ವಾಸ್ತವ್ಯವು ವಿಷ್ಣುಲೋಕದಲ್ಲಿರುತ್ತದೆ ಮತ್ತು ಅವನು ಶೇಷನಾಗನ ಮೇಲೆಯೂ ವಿರಮಿಸುತ್ತಾನೆ. ಅದರಂತೆಯೇ ಶಿವನ ವಾಸ್ತವ್ಯವು ಕೈಲಾಸದಲ್ಲಿರುತ್ತದೆ ಮತ್ತು ಅವನು ಸ್ಮಶಾನದಲ್ಲಿಯೂ ವಾಸಿಸುತ್ತಾನೆ. ಶಿವನು ಕೈಲಾಸದಲ್ಲಿರುವಾಗ ಧ್ಯಾನಾವಸ್ಥೆಯಲ್ಲಿರುತ್ತಾನೆ ಮತ್ತು ಸ್ಮಶಾನದಲ್ಲಿರುವಾಗ ಕಾರ್ಯನಿರತ ಅವಸ್ಥೆಯಲ್ಲಿರುತ್ತಾನೆ.)

ಕಲ್ಯಾಣಸುಂದರಮೂರ್ತಿ

ಈ ಮೂರ್ತಿಯಲ್ಲಿ ಶಿವ-ಪಾರ್ವತಿಯ ವಿವಾಹ ಸಮಾರಂಭವನ್ನು ಸಾಕಾರಪಡಿಸಲಾಗಿದೆ.

ದಕ್ಷಿಣಾಮೂರ್ತಿ

‘ದಕ್ಷಿಣಾ ಎಂಬ ಶಬ್ದವು ಬುದ್ಧಿವಾಚಕವಾಗಿದೆ. ಬುದ್ಧಿಯ ಸಹಾಯದಿಂದ ಯಾವ ಪರಮೇಶ್ವರನ ಜ್ಞಾನವಾಗುತ್ತದೆಯೋ ಅವನಿಗೆ ‘ದಕ್ಷಿಣಾಮೂರ್ತಿ’ ಎನ್ನುತ್ತಾರೆ. ಶಿವನು ಭಕ್ತರಿಗೆ ಅದ್ವೈತದ ತತ್ತ್ವಜ್ಞಾನವನ್ನು ಉಪದೇಶಿಸಲು ಈ ರೂಪವನ್ನು ತಾಳಿದನು ಎಂಬ ಕಥೆಯಿದೆ. ದಕ್ಷಿಣಾಮೂರ್ತಿಯ ವೀಣಾಧರ, ಯೋಗ, ಜ್ಞಾನ ಮತ್ತು ವ್ಯಾಖ್ಯಾನ ಹೀಗೆ ಒಟ್ಟು ನಾಲ್ಕು ಪ್ರಕಾರಗಳಿವೆ.

ಅ. ವೀಣಾಧರಮೂರ್ತಿ

ಇದು ನಾಲ್ಕು ಕೈಗಳಿರುವ ನಿಂತಿರುವ ಮೂರ್ತಿಯಾಗಿದೆ. ಅದು ಭಕ್ತರಿಗೆ ವೀಣೆಯನ್ನು, ಅಂದರೆ ನಾದಾನುಸಂಧಾನವನ್ನು ಕಲಿಸುತ್ತದೆ.

ಆ. ಯೋಗಮೂರ್ತಿಯು

ಧ್ಯಾನಾವಸ್ಥೆಯಲ್ಲಿ ಕುಳಿತಿರುವ ಭಂಗಿಯಲ್ಲಿರುತ್ತದೆ. ಅದರ ಕೃಪೆ ಯಿಂದ ಯೋಗವಿದ್ಯೆ ಪ್ರಾಪ್ತವಾಗುತ್ತದೆ.

ಇ. ಜ್ಞಾನಮೂರ್ತಿಯು

ತತ್ತ್ವಜ್ಞಾನವನ್ನು ಕಲಿಸುವಂತಹದ್ದಾಗಿದೆ.

ಈ. ವ್ಯಾಖ್ಯಾನಮೂರ್ತಿಯು

ಇತರ ಶಾಸ್ತ್ರಗಳ ಜ್ಞಾನವನ್ನು ನೀಡುತ್ತದೆ. ಇದು ವೀರಾಸನದ ಮೇಲೆ ಕುಳಿತುಕೊಂಡಿರುವಂತಹದ್ದಾಗಿದೆ ಮತ್ತು ಜ್ಞಾನ, ಸಂದರ್ಭ ಮತ್ತು ವ್ಯಾಖ್ಯಾನ ಈ ಮುದ್ರೆಗಳನ್ನು ದರ್ಶಿಸುತ್ತದೆ.’

ಈ ರೂಪದಲ್ಲಿ ಶಿವನು ನಿಂತಿರುತ್ತಾನೆ ಅಥವಾ ಕುಳಿತುಕೊಂಡಿರುತ್ತಾನೆ. ಅವನ ಮುಖ ಮುದ್ರೆಯು ಸೌಮ್ಯ ಹಾಗೂ ಸುಂದರವಾಗಿರುತ್ತದೆ. ಅವನು ಸಾಮಾನ್ಯವಾಗಿ ಚತುರ್ಭುಜ ನಾಗಿರುತ್ತಾನೆ. ಇಂತಹ ಮೂರ್ತಿಯ ಸುತ್ತಲೂ ಬಹಳಷ್ಟು ಸಲ ಪಶು, ಸರ್ಪ ಮತ್ತು ಯತಿ-ಮುನಿಗಳಿರುತ್ತಾರೆ. ಕೆಲವೊಮ್ಮೆ ಪಾರ್ವತಿಯೂ ಹತ್ತಿರದಲ್ಲಿ ಇರುತ್ತಾಳೆ. ಆದಿ ಶಂಕರಾಚಾರ್ಯರು ದಕ್ಷಿಣಾಮೂರ್ತಿಯ ಎರಡು ಸ್ತೋತ್ರಗಳನ್ನು ರಚಿಸಿದ್ದಾರೆ.