ಅಹಂಕಾರ

ಒಮ್ಮೆ ಶಂಕರಾಚರ್ಯರು ಅವರ ಶಿಷ್ಯರ ಜೊತೆಗೆ ಹಿಮಾಲಯದತ್ತ ಯಾತ್ರೆ ಮಾಡುತ್ತಿದ್ದರು. ಮುಂದೆ ನಡೆಯುತ್ತಾ ಅಲಕನಂದಾ ನದಿಯ ತೀರಕ್ಕೆ ಅವರೆಲ್ಲರೂ ಬಂದು ಸೇರಿದರು. ಆಗ ಒಬ್ಬ ಶಿಷ್ಯನು ಅವರ ಸ್ತುತಿ ಮಾಡುತ್ತಆಚಾರ್ಯರೆ, ನಿಮ್ಮ ಜ್ಞಾನವು ಎಷ್ಟು ಅಗಾಧವಾಗಿದೆ! ನಮ್ಮ ಮುಂದೆ ಪವಿತ್ರ ಅಲಕನಂದಾ ನದಿಯು ಹರಿಯುತ್ತಿದೆ. ನಿಮ್ಮ ಜ್ಞಾನವು ಈ ಅಲಕನಂದಾ ನದಿಯ ಪ್ರವಾಹಕ್ಕಿಂತಲೂ ಎಷ್ಟೊ ಪಟ್ಟು ದೊಡ್ಡದಾಗಿರುವ ಮಹಾಸಾಗರದಂತೆ ಭಾಸವಾಗುತ್ತದೆ‘.

ಆಗ ಶಂಕರಾಚರ್ಯರು ಕೈಯಲ್ಲಿರುವ ಕೋಲನ್ನು ನೀರಿನಲ್ಲಿ ಮುಳುಗಿಸಿ ಹೊರತೆಗೆದರು. ಶಿಷ್ಯನಿಗೆ ತೋರಿಸಿ ಹೀಗೆ ಹೇಳಿದರುನೋಡು, ಈ ಕೋಲನ್ನು ಆ ಪವಿತ್ರ ನದಿಯಲ್ಲಿ ಅದ್ದಿ ತೆಗೆದಿದ್ದೇನೆ. ಆದರೆ ಇದಕ್ಕೆ ಒಂದೇ ಒಂದು ಹನಿ ನೀರು ಮಾತ್ರ ಅಂಟಿಕೊಂಡಿದೆ ಅಲ್ಲವೇ!’ ನಗುತ್ತಲೇ ಶಂಕರಾಚಾರ್ಯರು ಮುಂದುವರಿಸಿದರು. ‘ಅರೆ ಹುಚ್ಚ, ನನ್ನ ಜ್ಞಾನದ ಪರಿಮಿತಿ ಏನು ಗೊತ್ತೇ? ಅಲಕನಂದೆಯಲ್ಲಿ ಎಷ್ಟೊಂದು ನೀರಿದೆ! ಆದರೆ ಅದಷ್ಟೂ ನೀರಿನಲ್ಲಿ ಈ ಕೋಲನ್ನು ಅಂಟಿಕೊಂಡಿದ್ದು ಕೇವಲ ಒಂದು ಬಿಂದು! ಅಂತಯೇ ಸಮಸ್ತ ಬ್ರಹ್ಮಾಂಡದಲ್ಲಿರುವ ಜ್ಞಾನಸಾಗರದಲ್ಲಿ ನನ್ನಲ್ಲಿರುವುದು ಕೇವಲ ಒಂದು ಬಿಂದು ಜ್ಞಾನವಷ್ಟೇ!’

ಮಿತ್ರರೇ, ಆದಿ ಶಂಕರಾಚಾರ್ಯರು ತಮ್ಮಲ್ಲಿರುವ ಜ್ಞಾನದ ಬಗ್ಗೆ ಹೀಗೆ ಹೇಳಬೇಕಾದರೆ, ನಾವು ನೀವು ಏನು ಹೇಳುವುದು?

ಇದರ ತಾತ್ಪರ್ಯ, ಯಾವುದೇ ವಿಷಯದ ಬಗ್ಗೆ ಅಹಂಕಾರ ಬೇಡ.

Leave a Comment