ಸಂತರ ಸರ್ವಜ್ಞತೆ


ಮಕ್ಕಳೇ, ಸಂತರು ಈಶ್ವರನ ಸಗುಣ ರೂಪವಾಗಿದ್ದಾರೆ. ಆದ್ದರಿಂದಲೇ ಅವರಲ್ಲಿ ಈಶ್ವರನ ಎಲ್ಲ ಗುಣಗಳು ಕಾಣಿಸುತ್ತವೆ. ಸಂತರ ಮೇಲೆ ಶ್ರಧ್ಧೆ ಇರುವ ಭಕ್ತರಿಗೆ ಇದರ ಅನುಭವವು ಅನೇಕ ಸಲ ಬಂದಿದೆ, ಆದರೆ ಸ್ವಲ್ಪ ಜನರಿಗೆ ಇದರ ಮೇಲೆ ವಿಶ್ವಾಸ ಇಲ್ಲ. ವಿಭಿನ್ನ ಘಟನೆಗಳಿಂದ ಅವರು ನಮಗೆ ಇದನ್ನು ತಿಳಿಸಿ ಕೊಡುತ್ತಾರೆ ಮತ್ತು ಈಶ್ವರನ ಪ್ರತಿ ಶ್ರಧ್ಧೆ ಹೆಚ್ಚಿಸುತ್ತಾರೆ. ಭಗವಾನ ಶ್ರೀ ದತ್ತಾತ್ರೇಯರ ಅವತಾರ ಅಕ್ಕಲಕೋಟೆಯ ಸ್ವಾಮಿ ಶ್ರೀ ಸಮರ್ಥರು ಈಶ್ವರನಸಮಾನ ಸರ್ವಜ್ಞರಾಗಿದ್ದಾರೆ, ಇದರ ಅನುಭವವನ್ನು ಒಂದು ಮಗುವಿಗೆ ಹೇಗೆ ಮಾಡಿಸಿದರು ಎಂದು ನಾವು ಈಗ ನೋಡೋಣ.

ಸ್ವಾಮಿ ಶ್ರೀ ಸಮರ್ಥರು ಅವರ ಭಕ್ತ ಶ್ರೀ ಚೋಳಪ್ಪನ ಆಗ್ರಹದ ಕಾರಣ ಅವರ ಮನೆಯಲ್ಲಿ ಇರಲು ಹೋದರು. ಒಂದು ದಿನ ಚೋಳಪ್ಪನ ಮನೆಗೆ ಅವರ ನಾದಿನಿ ಬಂದಿದ್ದಳು. ರಾತ್ರಿ ಮಲಗುವಾಗ ಅವಳು ಮೂಗಿನ ನತ್ತನ್ನು ತೆಗೆದು ಹಾಸಿಗೆಯ ಮೇಲಿಟ್ಟು ಮಲಗಿದಳು. ಚೋಳಪ್ಪನ ಅಣ್ಣನ ಮಗ ಇದನ್ನು ನೋಡಿದರು. ಅವನು ಪ್ರತಿದಿನ ಮುಂಜಾನೆ ಎದ್ದು ತೋಟದಿಂದ ಹೂವನ್ನು ತರಲು ಹೋಗುತ್ತಿದ್ದನು. ಆ ದಿನ ತೋಟಕ್ಕೆ ಹೋಗುವಾಗ ನತ್ತನ್ನು ಕದ್ದನು.

ಮುಂಜಾನೆ ಎದ್ದು ಆ ಸ್ತ್ರೀಯು ನೋಡಿದಾಗ, ಆ ನತ್ತು ಇರಲಿಲ್ಲ. ಅವಳು ಹೆದರಿದಳು. ಅವಳು ಎಲ್ಲ ಸ್ಥಳದಲ್ಲಿ ಹುಡುಕಿದಳು, ಆದರೆ ನತ್ತು ಸಿಗಲಿಲ್ಲ. ಅವಳ ಪತಿಯು ಆ ನತ್ತನ್ನು ಬಹಳ ಕಷ್ಟಪಟ್ಟು ಮಾಡಿಸಿದ್ದನು. ಅಕ್ಕಲಕೋಟವಾಸಿಗಳಿಗೆ ಪೋಲಿಸ, ವೈದ್ಯ, ಜ್ಯೋತಿಷ್ಯ ಎಲ್ಲವುದು ಸ್ವಾಮಿ ಶ್ರೀ ಸಮರ್ಥರೆ. ಎಲ್ಲರ ಹಾಗೆ ಅವಳೂ ಸ್ವಾಮಿ ಶ್ರೀ ಸಮರ್ಥರ ಹತ್ತಿರ ಹೋದಳು ಮತ್ತು ಅಳು-ಅಳುತ್ತ ನತ್ತು ಕಳೆದಿರುವದನ್ನು ಹೇಳಿದಳು. ಸ್ವಾಮಿ ಶ್ರೀಸಮರ್ಥರು ಸಾಂತ್ವಾನ ಮಾಡುತ್ತ, "ಅಳಬೇಡ, ಶಾಂತಳಾಗು. ಇಲ್ಲಿ ಕುಳಿತುಕೊ, ನಿನಗೆ ನಿನ್ನ ನತ್ತು ಸಿಗುತ್ತದೆ"ಎಂದರು. ಅವಳು ಕಣ್ಣು ವರಸಿಕೊಂಡು ಅಲ್ಲೇ ಕುಳಿತಳು. ಅವಳು ಪುನಃ ಸ್ವಾಮಿ ಸಮರ್ಥರಲ್ಲಿ ಪ್ರಾರ್ಥನೆ ಮಾಡುತ್ತಿದ್ದಳು. ಸ್ವಾಮೀಜಿಗಳು ಹೇಳಿದರು, "ಇರು, ನಿನಗೆ ನಿನ್ನ ನತ್ತು ಸಿಗುವುದು, ಯಾಕೆ ಹೆದರುವೆ? ಎಂದರು." ಸ್ವಲ್ಪ ಸಮಯದ ನಂತರ ಕಳವು ಮಾಡಿದ ಬಾಲಕನು ಹೂ ತೆಗೆದುಕೊಂಡು ಮಂದಿರದಲ್ಲಿ ಹೋದನು. ಅದಾದಮೇಲೆ ಅವನು ಮನೆಗೆ ಬಂದನು. ಅವನನ್ನು ನೋಡಿ ಸ್ವಾಮಿ ಸಮರ್ಥರು, "ಅರೆ ಅವಳು ಅಳುತ್ತಿದ್ದಾಳೆ, ಅವಳ ನತ್ತನ್ನು ಅವಳಿಗೆ ಹಿಂತಿರುಗಿಸು"ಎಂದರು. ಇದನ್ನು ಕೇಳಿ ಅವನು ದಂಗಾದನು. ಅದರೆ ತನ್ನನ್ನು ತಾನು ಸಂಭಾಳಿಸುತ್ತ ಹೇಳಿದನು, "ಯಾವ ನತ್ತು, ನನಗೆ ಎನೂ ಗೊತ್ತಿಲ್ಲ" ಎಂದನು. ಇದನ್ನು ಕೇಳಿ ಸ್ವಾಮಿ ಸಮರ್ಥರು ಒಮ್ಮಲೆ ಕ್ರೋಧಿತರಾದರು. ಉಚ್ಚಸ್ವರದಲ್ಲಿ ಹೇಳಿದರು,"ಮುಂಜಾನೆ ಹಾಸಿಗೆಯಿಂದ ತೆಗೆದುಕೊಂಡಿರುವ ನತ್ತನ್ನು ಅವಳಿಗೆ ಹಿಂತಿರುಗಿಸು". ಆಗ ಸ್ವಾಮಿ ಸಮರ್ಥರು ಕ್ರೋಧಿತರಾಗಿದ್ದನ್ನು ನೋಡಿ ಹುಡುಗನು ನತ್ತನ್ನು ಸುಮ್ಮನೆ ಕೊಟ್ಟುಬಿಟ್ಟನು.

ಮಕ್ಕಳೇ, ಸಂತರು ಸರ್ವಜ್ಞರಾಗಿರುತ್ತರೆ ಎಂದು ಈ ಕಥೆಯಿಂದ ನಿಮ್ಮ ಗಮನಕ್ಕೆ ಬಂದಿರಲೇಬಹುದು. ಸಂತರಿಂದ ಎನನ್ನೂ ಮುಚ್ಚಿಡಲು ಸಾಧ್ಯವಿಲ್ಲ. ಕಳ್ಳತನ ಮಾಡುವುದು, ಸುಳ್ಳು ಹೇಳುವುದು ಇದು ಮಹಾಪಾಪವಾಗಿದೆ. ಈಶ್ವರನಿಗೆ ಎನೂ ಗೊತ್ತಾಗುವದಿಲ್ಲ ಅಂತ ನಮಗೆ ಅನಿಸುತ್ತದೆ, ಅದರೆ ಅದು ಹೀಗಾಗುವದಿಲ್ಲ. ಮಾಡಿರುವ ಪಾಪ ಯಾವಾಗಲಾದರೂ ಹೊರಗೆ ಬರುತ್ತದೆ. ಅದಕ್ಕಾಗಿ ನಿರಂತರ ಸತ್ಯವನೇ ಮಾತನಾಡಿರಿ.