ಸಂತ ಶ್ರೀ ಗೋರಾ ಕುಂಭಾರ

ತೆರೆಡೊಕಿ ಊರಿನಲ್ಲಿ ಗೋರಾ ಕುಂಭಾರನೆಂಬ ವಿಠಲನ ಭಕ್ತನಿದ್ದನು. ಕುಂಭಾರನು ಕೆಲಸಮಾಡುತ್ತಿರುವಾಗಲೂ ನಿರಂತರವಾಗಿ ಪಾಂಡುರಂಗನ ಭಜನೆ ಮಾಡುತ್ತಿದ್ದನು. ಯಾವಾಗಲು ಅವನು ಪಾಂಡುರಂಗನ ನಾಮಜಪದಲ್ಲಿ ಮಗ್ನನಾಗಿರುತ್ತಿದ್ದನು. ಒಂದು ಸಲ ಅವನ ಪತ್ನಿ ಅವರ ಒಂದೇ ಮಗನನ್ನು ಅಂಗಳದಲ್ಲಿ ಬಿಟ್ಟು ನೀರು ತರಲು ಹೋದಳು. ಆ ಸಮಯದಲ್ಲಿ ಗೋರಾಕುಂಭಾರನು ಗಡುಗೆಯನ್ನು ಮಾಡಲು ಅವಷ್ಯವಾಗಿರುವ ಮಣ್ಣನ್ನು ಕಾಲಿನಿಂದ ತುಳಿಯುತ್ತಾ ಪಾಂಡುರಂಗನ ಭಜನೆ ಮಾಡುತ್ತಿದ್ದನು. ಅದರಲ್ಲಿ ಅವನು ಬಹಳ ತಲ್ಲೀನನಾಗಿದ್ದನು. ಪಕ್ಕದಲ್ಲೇ ಆಡುತ್ತಿರುವ ಚಿಕ್ಕ ಮಗು ಅಳುತ್ತ ಬಂದು ಆ ಮಣ್ಣಿನಲ್ಲಿ ಬಿದ್ದು ಬಿಟ್ಟಿತು. ಗೋರಾ ಕುಂಭಾರನು ಮಣ್ಣನ್ನು ಮೇಲೆ ಕೆಳಗೆ ಮಾಡಿ ತುಳಿಯುತ್ತಿದ್ದನು. ಮಣ್ಣಿನ ಜೊತೆಗೆ ತನ್ನ ಮಗುವನ್ನೂ ತುಳಿದು ಬಿಟ್ಟನು. ಪಾಂಡುರಂಗನ ಭಜನೆಯಲ್ಲಿ ಮಗ್ನನಾಗಿರುವದರಿಂದ ಮಗುವಿನ ಅಳುವು ಅವನಿಗೆ ಕೇಳಿಸಲೇ ಇಲ್ಲ.

ನೀರು ತಂದ ಮೇಲೆ ಅವನ ಪತ್ನಿ ಮಗುವನ್ನು ಹುಡುಕುತ್ತಿದ್ದಳು. ಬಾಲಕ ಸಿಗದ ಕಾರಣ ಅವಳು ಗೋರಕುಂಭಾರನ ಬಳಿ ಹೋದಳು. ಅಷ್ಟರಲ್ಲಿ ಅವಳ ದ್ರುಷ್ಟಿ ಮಣ್ಣಿನ ಕಿಚಡಿಯಲ್ಲಿ ಹೋಯಿತು, ಕಿಚಡಿಯಲ್ಲಿ ಇರುವ ಕೆಂಪು ರಕ್ತವನ್ನು ನೋಡಿ, ಮಗು ಕೂಡ ಆ ಮಣ್ಣಿನಲ್ಲಿ ತುಳಿಯಲ್ಪಟ್ಟಿದೆ ಅಂತ ತಿಳಿಯಿತು. ಅವಳು ಜೋರಾಗಿ ಚೀರಿದಳು ಮತ್ತು ಗಂಡನ ಮೇಲೆ ಸಿಟ್ಟು ಮಾಡಿದಳು. ಅರಿವಿಲ್ಲದೆ ಮಾಡಿರುವ ಈ ಕೃತ್ಯಕ್ಕಾಗಿ ಗೋರಾ ಕುಂಭಾರನು ತನ್ನ ಕೈಗಳನ್ನು ಕತ್ತರಿಸಿಕೊಂಡನು. ಇದೆ ಕಾರಣಕ್ಕಾಗಿ ಅವನ ಕುಂಭಾರ ವ್ಯವಸಾಯ ನಿಂತು ಹೋಯಿತು.

ಆಗ ಭಗವಾನ ವಿಠಲರುತಾವೇಕೆಲಸದವರಾಗಿ ಬಂದು ಅವನ ಮನೆಯಲ್ಲಿ ಇದ್ದರು. ಪುನಃ ಅವನ ಕುಂಭಾರ ವ್ಯವಸಾಯ ಚಿಗುರಿತು.ಸ್ವಲ್ಪ ದಿನಕ್ಕೆ ಆಷಾಡ ಏಕಾದಶಿ ಬಂದಿತು. ಶ್ರೀ ಜ್ಞಾನೇಶ್ವರರು ಮತ್ತು ಶ್ರೀ ನಾಮದೇವರು,ಈ ಸಂತಮಂಡಳಿಯು ಪಂಡರಪುರಕ್ಕೆ ಹೊರಟರು. ಮಾರ್ಗದಲ್ಲಿ ತೆರೆಡೊಕಿಗೆ ಬಂದು ಶ್ರೀ ಜ್ಞಾನೇಶ್ವರರು ಗೋರಾ ಕುಂಭಾರ ಮತ್ತು ಅವರ ಪತ್ನಿಯನ್ನು ಕರೆದುಕೊಂಡು ಹೋದರು. ಗರುಡ ದಾಟಿದಮೇಲೆ ನಾಮದೇವರ ಕೀರ್ತನೆ ಆಯಿತು. ಜ್ಞಾನೇಶ್ವರರ ಸಹಿತ ಎಲ್ಲಾ ಸಂತಮಂಡಳಿ ಕೀರ್ತನೆ ಕೇಳುತ್ತಿದ್ದರು. ಗೋರಾ ಕುಂಭಾರನು ಪತ್ನಿಯ ಜೊತೆಗೆ ಕೀರ್ತನೆ ಕೇಳುತ್ತಿದ್ದನು. ಕೀರ್ತನೆಯ ಸಮಯದಲ್ಲಿ ಎಲ್ಲರು ಕೈ ಮೇಲೆ ಮಾಡಿ ಚಪ್ಪಾಳೆ ಹಾಕುತ್ತಿದ್ದರು. ವಿಠ್ಠಲನ ಜಯಕಾರವನ್ನು ಮಾಡುತ್ತಿದ್ದರು, ಅದೆ ಸಮಯಕ್ಕೆ ಗೋರಾ ಕುಂಭಾರನು ಕೂಡ ತನ್ನ ಕತ್ತರಿಸಿದಕೈಗಳನ್ನು ಎತ್ತಿದನು. ಆಗ ಅವನಿಗೆ ಹೊಸ ಕೈಗಳು ಬಂದವು. ಇದನ್ನು ನೋಡಿ ಸಂತಮಂಡಳಿಗೆ ಹರ್ಷಿತವಾಯಿತು. ಎಲ್ಲ ಜನರು ಪಾಂಡುರಂಗನ ಜಯಘೋಶವನ್ನು ಮಾಡಿದರು.

ಗೋರಾ ಕುಂಭಾರನ ಪತ್ನಿಯು ಶ್ರೀ ವಿಠಲನಲ್ಲಿ ದಯೆಯ ಭಿಕ್ಷೆ ಬೇಡಿದಳು. ಹೇ ಪಂಡರಿನಾಥ, ನನ್ನ ಮಗು ಪತಿಯ ಚರಣದಲ್ಲಿ ಸತ್ತು ಹೋಯಿತು, ಮಗುವಿಲ್ಲದೆ ನಾನು ದುಖಿಯಾಗಿದ್ದೇನೆ.ಹೇವಿಠಲಾ, "ನನ್ನ ಮೇಲೆ ದಯೆಮಾಡು". ನನಗೆ ನನ್ನ ಮಗುವನ್ನು ಕೊಡು. ಪಂಡರಿನಾಥಾನು ಅವಳ ವಿನಂತಿಯನ್ನು ಕೇಳಿದನು. ಕಿಚಡಿಯಲ್ಲಿ ಬಿದ್ದಿರುವ ಮಗು ಸಭೆಯಿಂದ ಅವಳ ಹತ್ತಿರ ಬರುವುದನ್ನು ನೋಡಿದಳು. ಅವಳು ಹೋಗಿ ಮಗುವನ್ನು ಕರೆದುಕೊಂಡಳು. ಸಂತಮಂಡಳಿಯ ಜೊತೆಗೆ ಎಲ್ಲರೂ ಹರ್ಷಿತರಾಗಿ ಚಪ್ಪಾಳೆ ಹಾಕಿದರು.