ಸಂತ ಜನಾಬಾಯಿ

ಸಂತ ಜನಾಬಾಯಿಯವರು ಅವರ ಅಭಂಗದಲ್ಲಿ ತನ್ನ ಹೆಸರನ್ನು “ದಾಸಿ ಜನೀ”, “ನಾಮದೇವಕಿ ದಾಸೀ” ಮತ್ತು “ಜನೀ ನಾಮಯಾಚೀ” ಹೀಗೆ ಬರದಿದ್ದಾರೆ. ಅವರು ಸಂತ ನಾಮದೇವರ ಮನೆಯ ದಾಸಿಯ ರೂಪದಲ್ಲಿ ಹೇಗೆ ಬಂದರು? ಈ ವಿಷಯ ತಿಳಿಯಲು ಕೇವಲ ಹತ್ತು-ಹನ್ನೆರೆಡು ಸಾಲಿನಲ್ಲಿ ತಿಳಿದುಕೊಳ್ಳಬಹುದು. ಆದರೆ ತಮ್ಮ ದಾಸ್ಯತ್ವದ, ತಮ್ಮ ಜಾತಿಯ ತಮ್ಮ “ಸ್ತ್ರೀತ್ವದ” ಅನುಭವ ವ್ಯಕ್ತ ಮಾಡುವಂತಹ ಅನೇಕ ಅಭಂಗ (ಭಜನೆಗಳು) ಅವರಿಗೆ ಸ್ವತಃ ತಿಳಿದಿವೆ ಮತ್ತು ಅವರು ಅದನ್ನು ತಮ್ಮ ಶಬ್ದಗಖಲ್ಲಿ ವ್ಯಕ್ತವನ್ನೂ ಮಾಡಿದ್ದರೆ. ವಿಠ್ಠಲನನ್ನೇ ತಂದೆ-ತಾಯಿ ಮತ್ತು ಅನೇಕ ಪ್ರಸಂಗದಲ್ಲಿ ಮಿತ್ರ, ಪ್ರೀತಿಯ ಮಿತ್ರ ಎಂದು ಸಂಬೋಧಿಸುವ ಸಂತ ಜನಾಬಾಯಿ, ವಿಠ್ಠಲನ ಜೊತೆ ನಡೆದ ಸಂವಾದವು ಅವರ ಅಭಂಗಗಳಲ್ಲಿ ಕಾಣಿಸುತ್ತದೆ.

ಜನಾಬಾಯಿ ಗಂಗಾಖೆಡ ಊರಿನವರು, ಶೂದ್ರ ಜಾತಿಯ ಭಕ್ತ “ದಮಾ” ಎಂಬುವನ ಪುತ್ರಿ. ಅವರ ಜಾತಿಯ ಉಲ್ಲೇಖವನ್ನು ಅವರದೆ ಆದ ಅನೇಕ ಅಭಂಗಗಳಲ್ಲಿ ಮಾಡಿದ್ದಾರೆ. ಜನಾಬಾಯಿ ಐದು ವರ್ಷದವಳಿದ್ದಾಗ, ಅವರ ತಾಯಿಯ ನಿಧನವಾಯಿತು. ದಮಾಗೆ ಬಂದ ಕನಸಿನ ದೃಷ್ಟಂತಕ್ಕನುಸಾರ, ವಿಠ್ಠಲ ಭಕ್ತ, ಪಂಢರಪುರದ ನಿವಾಸಿ ದರ್ಜಿ ಜಾತಿಯ ದಾಮಾಶೆಟ್ಟಿಯ ಹತ್ತಿರ ತಮ್ಮ ಚಿಕ್ಕ ಜನೀಯನ್ನು ಬಿಟ್ಟು ದಮಾ ಹೋದರು. ದಾಮಾಶೆಟ್ಟಿಯ ಸಂಪೂರ್ಣ ಪರಿವಾರ ಭಗವಂತನ ಭಕ್ತರಾಗಿದ್ದರು. ಅವರ ಪುತ್ರ ನಾಮದೇವನು ಎಂತಹ ವಿಠ್ಠಲಪ್ರೇಮಿ ಎಂದರೆ ವಿಠ್ಠಲನನ್ನೇ ತನ್ನ ಮಿತ್ರನೆಂದು ತಿಳಿದಿದ್ದನು. ಹೀಗೆ ನಾಮದೇವರ ಪರಿವಾರದಲ್ಲಿ ಜನಾಬಾಯಿ ಆಶ್ರಯ ಪಡೆದಳು.

ಜನೀಯ ತಾಯಿ ಮೊದಲೇ ಸ್ವರ್ಗ ಸೇರಿದ್ದಳು, ಈಗ ಅವರ ತಂದೆಯು ರಾಮ-ರಾಮ ಹೇಳುತ್ತ ಅವರೂ ಹೋದರು. ಇದನ್ನು ಜನಾಬಾಯಿ ತಮ್ಮ ಅಭಂಗದಲ್ಲಿ ಮುಂದಿನಂತೆ ವಿವಾರಿಸಿದ್ದಾರೆ – ತಂದೆ ತೀರಿದರು ತಾಯಿ ತೀರಿದಳು, ನನ್ನ ಸಂಭಾಳಿಸಿದರು ವಿಠ್ಠಲ. ಹರಿಯೇ ನನ್ನವರು ಯಾರು ಇಲ್ಲ, ನನ್ನ ಸ್ಥಿತಿ ಹೀಗಿದೆ. ಹೀಗೆ ಕಲ್ಪನೆ ಮಾಡಿ ಜನಿ ವಿಠ್ಠಲನಿಗೆ ತನ್ನ ಬಗ್ಗೆ ವಾರ್ತೆಯನ್ನು ಕಳುಹಿಸುತ್ತಿದ್ದಳು. ಎಲ್ಲರ ಮಿತ್ರ, ಪರಮೇಶ್ವರ, ಮಾಯೆಯ ಆಧಾರ ತೆಗೆಯುವ ಮಾನಿಸಿಕತೆ ಈ ಅಭಂಗದಲ್ಲಿದೆ.

ಜನಾಬಾಯಿ ಆಶ್ರಯ ಪಡೆದಿದ್ದರೂ, ಅವಳು ದಮಾಶೆಟ್ಟಿಯ ಪರಿವಾರದ ಓರ್ವ ಸದಸ್ಯೆಯಾಗಿದ್ದಳು. ಅವಳ ಮೇಲೆ ವಿಠ್ಠಲನ ಸರದ ಕಳ್ಳತನದ ಆರೋಪವಾದಾಗ, ಆ ಪೂಜಾರಿಯೂ ಹೇಳುತ್ತಾರೆ, “ಏ ದರ್ಜಿಯ ಮಗಳೇ, ನೀನು ತಗೊಂಡು ಹೋಗಿರುವ ಹಾರವನ್ನು ನನಗೆ ಹಿಂತಿರುಗಿಸು”.

ನಾಮದೇವರ ಮನೆಯಲ್ಲಿ ಇರುವಾಗ ಆ ದಾಸಿಯ ಸಂಸಾರ ಎಷ್ಟು ಇರಬಹುದು? ಅಂಗಳ, ಹಿತ್ತಲು, ಪಾಕಶಾಲೆ, ವಸ್ತುಗಳ ಗೋದಾಮು ಇದೇ ಅವಳ ವಿಶ್ವವಾಗಿತ್ತು. ಶರೀರದಿಂದ ಸೀಮಿತವಾದ ಸಂಸಾರದಲ್ಲಿ ಇರುವಾಗಲೂ ಜನಿ ಮನಸ್ಸಿನಿಂದ ಅಸೀಮ ಪಾರಮಾತ್ಮನ ಧ್ಯಾನದಲ್ಲಿ ಇರುತ್ತಿದ್ದಳು. ಅವನ ಸ್ವರೂಪ ತಿಳಿದುಕೊಳ್ಳಲು ಪ್ರಯತ್ನ ಮಾಡುತ್ತಿದ್ದಳು. ತುಳಸಿ ವೃಂದಾವನ, ಅಂಗಳ, ದೊಡ್ಡ ಗಡಿಯಾರ, ಹಿಟ್ಟು, ಗೊಬ್ಬರ ಇಡುವ ಕೋಣೆ ಇಂತಹ ಸ್ಥಳಗಳ ಉಲ್ಲೇಖ ಈ ಅಭಂಗಗಳಲ್ಲಿ ಸಿಗುತ್ತದೆ. ಈ ಎಲ್ಲ ಸ್ಥಾನಗಳಲ್ಲಿ ಪ್ರಭು (ವಿಠ್ಠಲನು) ಯಾವಗಲೂ ಅವರ ಜೊತೆಗಿದ್ದರು. ಅವರು ಕೊಣೆಯಲ್ಲಿ ಅವರ ಜೊತೆಗೆ ಬೀಸುವ ಕಲ್ಲು ತಿರುಗಿಸಿ ಹಿಟ್ಟು ತಯಾರಿಸುವುದು, ಗೊಬ್ಬರ ಹಾಕುತ್ತಿದ್ದರು, ಅಂಗಳ ಸ್ವಚ್ಛ ಮಾಡಿ ರಂಗೋಲಿ ಹಾಕುತ್ತಿದ್ದರು. ಹೀಗೆ ಮನೆಯ ೪ ಗೋಡೆಗಳ ಒಳಗಿದ್ದರೂ ಅದೇ ಅನಂತ, ನಿಸ್ಸೀಮ ಪರಮೆಶ್ವರನನ್ನು ಅವರು ಕರೆಯುತ್ತಿದ್ದರು. ಮನೆಯಲ್ಲಿ ಕಷ್ಟ ಸಹಿಸಿ, ದಾಸಿಯಾಗಿ ಕೆಲಸ ಮಾಡಿ ಅವರು ಮನಸ್ಸಿನಿಂದ ಆಧ್ಯಾತ್ಮಿಕ ಮತ್ತು ಪಾರಮಾರ್ಥಿಕ ಉನ್ನತಿ ಮಾಡಿಕೊಂಡರು.

ಪೂರ್ವಜನ್ಮದ ಸುಕೃತ, ದಾಮಾಶೆಟ್ಟಿಯ ಮನೆಯ ಭಕ್ತಿಯ ವಾತಾವರಣ ಮತ್ತು ನಾಮದೇವ ಮುಂತಾದ ಸಂತರ ಆಧ್ಯಾತ್ಮಿಕ ಸಂಸ್ಕಾರ ಇವೆಲ್ಲ ಕಾರಣಗಳಿಂದ ಭಕ್ತ ದಾಸಿ ಜನಿ “ಸಂತ ಜನಾಬಾಯಿ” ಆದರು, ಎಂದು ಒಂದು ಅಭಂಗದಲ್ಲಿ ಹೇಳುತ್ತಾರೆ. ಎಲ್ಲೆಡೆ ಪರಮೇಶ್ವರನನ್ನು ಕಾಣಿಸುವಷ್ಟು ಅವರ ಅಂತರ್ಚಕ್ಷುಗಳು ತೆರೆದವು. ಪರಮಾತ್ಮನನ್ನು ಅವರು ಅರಿತರು.