ಮಹಾನ ವಿಠ್ಠಲಭಕ್ತ ಸಂತ ಸೇನಾಜಿ

ಮಕ್ಕಳೇ, ಮಹಾರಾಷ್ಟ್ರದ ಸಂತ ಶೃಂಖಲದಲ್ಲಿ ಮಧ್ಯಪ್ರದೇಶ ಪ್ರಾಂತದ ಸಂತ ಸೇನಾಜಿ ಮಹಾರಾಜರಿಗೆ ಭಕ್ತಿಮಾರ್ಗದಲ್ಲಿ ಅದ್ವಿತೀಯ ಸ್ಥಾನವಿದೆ. ಅವರ ಜನ್ಮವು ಮಧ್ಯಪ್ರದೇಶದ ಬಾಂಧವಗಡ ಸಂಸ್ಥಾನದಲ್ಲಿ ಆಗಿದೆ. ಅವರು ಪಂಡರಪುರದ ಒಂದು ಮಹಾನ ವಾರಕರಿ ಸಂತರಿದ್ದರು. ಈಗ ಅವರ ಜೀವನದ ಒಂದು ಪ್ರಸಂಗವನ್ನು ಕೇಳಿ. ಸಂತ ಸೇನಾಜಿಯವರಿಗೆ ಚಿಕ್ಕಂದಿನಿಂದಲೆ ಪರಮೇಶ್ವರನ ಭಕ್ತಿಯಲ್ಲಿ ರುಚಿ ಇತ್ತು. ಅವರ ತಂದೆ ಮತ್ತು ಸಂತ ಜ್ಞಾನೇಶ್ವರರ ತಂದೆ ವಿಠ್ಠಲಪಂತರ ಗುರುಬಂಧುಗಳಾಗಿದ್ದರು. ಅವರ ಮನೆಗೆ ನಿರಂತರವಾಗಿ ಸಾಧು-ಸಂತರು ಬರುತ್ತಿದ್ದರು. ಸೇನಾಜಿ ಮತ್ತು ಅವನ ತಂದೆ ಗುರುಗಳ ಸೇವೆಯನ್ನು ಭಾವಪೂರ್ಣವಾಗಿ ಮಾಡುತ್ತಿದ್ದರು. ಸೇನಾಜಿ ತಮ್ಮ ಕೆಲಸದಲ್ಲಿ (ಕ್ಷೌರ್ಯ ಕರ್ಮ) ಕುಶಲರಾಗಿದ್ದರು. ಜನರು ಅವರ ಹತ್ತಿರ ಕ್ಷೌರ ಮಾಡಿಸಿಕೊಳ್ಳಲು ಬರುತ್ತಿದ್ದರು ಮತ್ತು ಅವರ ಭಜನೆ ಕೀರ್ತನೆಯಲ್ಲಿಯೂ ದೊಡ್ಡ ಸಂಖ್ಯೆಯಲ್ಲಿ ಉಪಸ್ತಿತರಿರುತ್ತಿದ್ದರು. ಸೇನಾಜಿಯ ಕೀರ್ತಿ ಸಾಮ್ರಾಟನ ಕಿವಿಗೆ ಬಿದ್ದಿತು, ಅವರು ಸೇನಾಜಿಯನ್ನು ಕರೆದು ತಮ್ಮಲ್ಲಿಯೇ ಕೆಲಸ ಕೊಟ್ಟರು.

ಒಂದು ಸಲ ಸೇನಾಜಿ ಪಾಂಡುರಂಗನ ಪೂಜೆ ಮಾಡುತ್ತಿದ್ದರು. ಅದೇ ಸಮಯಕ್ಕೆ ಸೇನಾಜಿಗೆ ಸಾಮ್ರಾಟನಿಂದ ಮೂರು-ನಾಲ್ಕು ಸಲ ಕರೆ ಬಂದಿತು. ಪ್ರತಿಬಾರಿ ಅವರ ಪತ್ನಿಯು "ಅವರು ಮನೆಯಲ್ಲಿ ಇಲ್ಲ" ಎಂದು ಹೇಳಿದಳು. ಇದನ್ನು ನೋಡಿದ ಪಕ್ಕದ ಮನೆಯವನು ಕೂಡಲೆ ಸಾಮ್ರಾಟನಿಗೆ ತಿಳಿಸಿದರು. ‘ಸೇನಾ ಮನೆಯಲ್ಲಿ ಪೂಜೆಯನ್ನೂ ಮಾಡುತ್ತಿದ್ದಾನೆ, ಆದರೂ ಅವನ ಪತ್ನಿ ಅವರು ಮನೆಯಲ್ಲಿ ಇಲ್ಲ ಎಂದು ಸುಳ್ಳು ಹೇಳುತ್ತಿದ್ದಾಳೆ, ಇದು ಸುಳ್ಳು ಎಂದು ತಿಳಿದು ಸಾಮ್ರಾಟನಿಗೆ ಸಿಟ್ಟು ಬಂದಿತು’. ಅದಕ್ಕಾಗಿ ಸಮ್ರಾಟನು ಸೇವಕರಿಗೆ "ಸೇನಾಜಿಯನ್ನು ಕಟ್ಟಿ ಹರಿಯುವ ನದಿಯ ಪ್ರವಾಹದಲ್ಲಿ ಬೀಸಾಡಲು ಆಜ್ಞೆ ಮಾಡಿದನು". ತನ್ನ ಪ್ರಿಯ ಭಕ್ತ ಸಂಕಟದಲ್ಲಿ ಇರುವುದನ್ನು ನೋಡಿ ಪಾಂಡುರಂಗನು ಸೇನಾಜಿಯ ರೂಪದಲ್ಲಿ ಸಾಮ್ರಾಟನ ಬಳಿ ಹೋದನು.

ಅವನನ್ನು ನೋಡುತ್ತಲೆ ಸಾಮ್ರಾಟನ ಸಿಟ್ಟು ಶಾಂತವಾಯಿತು. ಸಾಮ್ರಾಟನು ಕ್ಷೌರ ಮಾಡಿಸಿಕೊಳ್ಳುತ್ತಿರುವಾಗ ಕುತ್ತಿಗೆಯನ್ನು ಕೆಳಗೆ ಮಾಡಿದನು ಆಗ ರತ್ನಖಚಿತ ಬಟ್ಟಲದಲ್ಲಿರುವ ಎಣ್ಣೆಯಲ್ಲಿ ಪಾಂಡುರಂಗನ ಪ್ರತಿಬಿಂಬ ಕಾಣಿಸಿತು. ತಿರುಗಿ ಮೇಲೆ ನೋಡಿದಾಗ ಸೇನಾ ಕಾಣುತ್ತಿದ್ದನು. ಬಟ್ಟಲದ ಎಣ್ಣೆಯಲ್ಲಿ ಪಾಂಡುರಂಗನನ್ನು ಕಂಡು ಸಾಮ್ರಾಟನು ಮೋಹಿತನಾಗಿ, ತನ್ನನು ತಾನು ಮರೆತನು. ಸಾಮ್ರಾಟನು ಕ್ಷೌರ ಮುಗಿದಮೇಲೆ ಅವನಿಗೆ ಹೊನ್ನು (ಮುದ್ರೆಯಾದ ಧನವನ್ನು) ಕೊಟ್ಟನು. ಆಗ ಪಾಂಡುರಂಗನು ಆ ಧನವನ್ನು ಚೀಲದಲ್ಲಿ ಹಾಕಿ ಆ ಚೀಲವನ್ನು ಸೇನಾಜಿಯ ಮನೆಯಲ್ಲಿ ಇಟ್ಟು ಅಂತರಧ್ಯಾನನಾದನು.

ಸಾಮ್ರಾಟನ ಮನಸ್ಸಿನಲ್ಲಿ ಈಶ್ವರನ ರೂಪ ನೋಡುವ ಆಸೆಯಾಯಿತು. ಮಧ್ಯಾಹ್ನ ಸೇನಾಜಿಗೆ ಪುನಃ ಕರೆಸಿದನು. ಅವನನ್ನು ನೋಡುತ್ತಲೆ ಸಾಮ್ರಾಟನು ಮುಂಜಾನೆ ನನಗೆ ಈ ಬಟ್ಟಲಿನಲ್ಲಿ ಕಂಡ ಚತುರ್ಭುಜ ರೂಪವನ್ನು ಈಗ ನನಗೆ ಪುನಃ ನೋಡಬೇಕು ಎಂದನು. "ಈ ವಿಷಯವನ್ನು ಕೇಳಿ ಸೇನಾಜಿ ಆಶ್ಚರ್ಯಚಕಿತನಾದನು. ಈ ಚಮತ್ಕಾರ ಪಾಂಡುರಂಗನದ್ದೇ ಇರಬಹುದು ಎಂದು ತಿಳಿದು ಸೇನಾಜಿ ಪಾಂಡುರಂಗನನ್ನು ಕರೆದನು. ಆಗ ಸಾಮ್ರಾಟನಿಗೆ ಪುನಃ ಮೋಹಕ ರೂಪ ಕಂಡಿತು. ಅದರ ನಂತರ ಸೇನಾಜಿಗೆ ಚೀಲದಲ್ಲಿ ಹೊನ್ನು (ಮುದ್ರೆಯಾದ ಧನ) ಕಾಣಿಸಿತು. ಆದ್ದರಿಂದ ಅವನು ಈ ಚಮತ್ಕಾರ ಪಾಂಡುರಂಗನದ್ದೇ ಎಂದು ನಿಶ್ಚಿಂತನಾಗಿದ್ದನು ಮತ್ತು ತಕ್ಷಣವೇ ಪಾಂಡುರಂಗನಿಗೆ ಕೃತಜ್ಞತೆಯನ್ನು ವ್ಯಕ್ತ ಮಾಡಿದನು. ಈ ಚಮತ್ಕಾರದ ಕಾರಣ ಸಾಮ್ರಾಟ ವಿರಕ್ತನಾದನು ಮತ್ತು ಪಾಂಡುರಂಗನ ಭಜನೆ ಮಾಡಲು ಆರಂಭಮಾಡಿದನು. ಈ ಅದ್ಭುತ ಪ್ರಸಂಗದಿಂದ ಸೇನಾಜಿಯ ಜೀವನದಲ್ಲಿ ಪರಿವರ್ತನೆಯಾಯಿತು.

ಮಕ್ಕಳೇ, ನೋಡಿದಿರಾ! ಈಶ್ವರನು ಭಕ್ತರ ಸಲುವಾಗಿ ಹೇಗೆ ಓಡಿ ಬರುತ್ತಾನೆ, ಎಂದು. ನಾವು ಈಶ್ವರನ ಭಕ್ತಿ ಮಾಡೋಣ, ಆಗ ಈಶ್ವರನು ನಮ್ಮ ಸಹಾಯಕ್ಕೆ ಓಡಿ ಬರುತ್ತಾನೆ. ಅದಕ್ಕಾಗಿ ನಾವು ಮನಸ್ಸಿನಿಂದ ಭಕ್ತಿ ಮಾಡಲೇಬೇಕು. ಭಕ್ತಿಯಿಂದ ಅಸಾಧ್ಯವೂ ಸಾಧ್ಯವಾಗುತ್ತದೆ.