ಉಪಾಸನಾ ಮಾರ್ಗ

ಯಾವಾಗ ಸಂಪೂರ್ಣ ಜಗತ್ತು ಶಾಂತವಾಗಿ ಮಲಗಿತ್ತೊ ಆಗ ರಾಮಕೃಷ್ಣ ಪರಮಹಂಸರು ನಿರ್ಜನವಾದ ದಟ್ಟ ವನದಲ್ಲಿ ವೃಕ್ಷದ ಕೆಳಗೆ ಹೋಗಿ ಕಾಳಿಮಾತೆಯ ಉಪಾಸನೆ ಮಾಡುತ್ತಿದ್ದರು. ರಾಮಕೃಷ್ಣರ ಅಣ್ಣನ ಮಗ ಹರಿದಾ ಅವರ ಮನಸ್ಸಿನಲ್ಲಿ ಪ್ರಶ್ನೆ ಬರುತ್ತಿತ್ತು, ಪ್ರತಿ ರಾತ್ರಿ ರಾಮಕೃಷ್ಣರು ಎಲ್ಲಿ ಹೋಗುತ್ತಾರೆ? ಎನು ಮಾಡುತ್ತಾರೆ? ಎಂದು. ಒಂದು ರಾತ್ರಿ ಹರಿದಾ ರಾಮಕೃಷ್ಣರ ಹಿಂದೆ-ಹಿಂದೆ ಹೋದನು. ರಾಮಕೃಷ್ಣರು ದಟ್ಟ ಕಾಡಿನಲ್ಲಿ ಹೋದರು. ಅವರ ಕೈಯಲ್ಲಿ ದೀಪವೂ ಇಲ್ಲ, ಮೇಣಬತ್ತಿಯು ಇರಲಿಲ್ಲ. ರಾಮಕೃಷ್ಣರು ನೆಲ್ಲಿಕಾಯಿ ಮರದ ಕೆಳಗೆ ಪದ್ಮಾಸನ ಹಾಕಿ ಕಣ್ಣುಗಳನ್ನು ಮುಚ್ಚಿಕೊಂಡರು. ಇದಕ್ಕಿಂತ ಮುಂಚೆ ಅವರು ಕೊರಳಲ್ಲಿ ಹಾಕಿದ ಜನಿವಾರವನ್ನು ಮತ್ತು ಕೇಸರಿ ವಸ್ತ್ರ ತೆಗೆದರು. ಇದನ್ನು ನೋಡಿ ಹರಿದಾಗೆ ಆಶ್ಚರ್ಯವಾಯಿತು. ರಾಮಕೃಷ್ಣರು ಸೂರ್ಯೋದಯತನಕ ಅಲುಗಾಡದೆ ಕುಳತಿದ್ದರು. ಸ್ವಲ್ಪ ಸಮಯದ ನಂತರ ಅವರು ಯಜ್ಞೋಪವಿತ (ಜನಿವಾರ) ಹಾಕಿಕೊಂಡರು. ಸೂರ್ಯೋಪಾಸನೆಯನ್ನು ಮಾಡಿದರು. ಹರಿದಾ ಇದನ್ನೆಲ್ಲ ನೋಡುತ್ತಿದ್ದನು. ರಾತ್ರಿಯಿಂದ ಅಸ್ವಸ್ಥ ಮಾಡಿದ ಪ್ರಶ್ನೆಯನ್ನು ಕೇಳಿದನು, “ನೀವು ಉಪಾಸನೆಯ ಸಮಯದಲ್ಲಿ ಜನಿವಾರ ಸಹಿತ ಎಲ್ಲ ವಸ್ತ್ರವನ್ನು ಯಾಕೆ ತೆಗೆಯುತ್ತೀರಿ? ಇದು ಹುಚ್ಚತನ ಅನಿಸುವದಿಲ್ಲವೆ?” ಅದಕ್ಕೆ ರಾಮಕೃಷ್ಣರು ಹೇಳಿದರು, “ಹರಿದಾ, ಈಶ್ವರಪ್ರಾಪ್ತಿಯ ಮಾರ್ಗದಲ್ಲಿ ಅನೇಕ ಅಡಚಣೆಗಳು ಬರುತ್ತವೆ. ನಾನು ಯಾವಾಗ ಜಗನ್ಮಾತೆಯ ಧ್ಯಾನ ಮಾಡುತ್ತೇನೆ, ಆಗ ದ್ವೇಶ, ಮತ್ಸರ, ಭಯ, ಅಹಂಕಾರ, ಲೋಭ, ಮೋಹ, ಜಾತಿಯ ಅಭಿಮಾನ ಹೀಗೆ ಅನೇಕ ವಿಷಯಗಳ ತ್ಯಾಗ ಮಾಡಲು ಪ್ರಯತ್ನ ಮಾಡುತ್ತೇನೆ. ಇಲ್ಲವಾದರೆ ಇವೆಲ್ಲ ವಿಷಯಗಳು ಮನಸ್ಸಿನಲ್ಲಿ ಕೋಲಾಹಲ ಎಬ್ಬಿಸುತ್ತವೆ. ಜನಿವಾರ ಅಂದರೆ ಜಾತಿಯ ಅಭಿಮಾನ, ಜ್ಞಾನದ ಅಹಂಕಾರ, ಇದನ್ನೂ ದೂರ ಮಾಡುವುದು ಅವಶ್ಯಕವಿದೆ. ಅಹಂಕಾರದ ಅಡಚಣೆಯನ್ನು ದೂರ ಮಾಡುತ್ತ ನನಗೆ ಅಲ್ಲಿ ತಲುಪುವದಿದೆ”.

ಮಕ್ಕಳೇ, ಸಾಧನೆಯಲ್ಲಿ ಅಹಂಕಾರ ದೊಡ್ಡ ಅಡಚಣೆಯಾಗಿದೆ. ಅಹಂಕಾರದ ಕಾರಣ ನಾವು ಈಶ್ವರನಿಂದ ದೂರ ಹೋಗುತ್ತೇವೆ. ಅರ್ಥಾತ್: ’ನಾನು,ನನ್ನದು’ ಎಂದು ತ್ಯಾಗ ಮಾಡಬೇಕು. ಹೀಗೆ ಮಾಡಿದರೆ ಮಾತ್ರ ನಾವು ಸರ್ವವ್ಯಾಪಿ ಆಗುತ್ತೇವೆ ಮತ್ತು ಈಶ್ವರನಿಗೆ ಇದೆ ಅಪೇಕ್ಷಿತವಿದೆ.