ರಾಜ ವಿಕ್ರಮಾದಿತ್ಯ (೬ನೇ ಶತಮಾನ)

೬ನೇ ಶತಮಾನದಲ್ಲಿ, ರಾಜ ವಿಕ್ರಮಾದಿತ್ಯ ಉಜ್ಜೈನನ್ನು ಪೂರ್ಣವಾಗಿ ಆಳಿದನು. ಅವನ ರಾಜ್ಯದಲ್ಲಿ, ಎಲ್ಲಾ ಕಾಯಿದೆಗಳು ಮತ್ತು ಕ್ರಮ ವ್ಯವಸ್ಥೆಯು ಧರ್ಮಶಾಸ್ತ್ರದ ಅನುಸಾರ ಆಧರಿಸಲ್ಪಟ್ಟಿತ್ತು ಮತ್ತು ಉತ್ತಮವಾಗಿದ್ದವು.

ಅವನ ರಾಜ್ಯವು ಅರಭಸ್ಥಾನದವರೆಗೂ ವಿಸ್ತಾರವಾಯಿತು ಮತ್ತು ರಾಜನು ಉದಾರ ಸ್ವಭಾವದವನಾಗಿದ್ದು ಯಾವಾಗಲೂ ತನ್ನ ಜನರ ನೆಮ್ಮದಿಯನ್ನು ನೋಡುತ್ತಿದ್ದನು. ವಿಕ್ರಮಾದಿತ್ಯನ ತಂದೆ ಮಹೇಂದ್ರದತ್ತ, ತಾಯಿ ಸೌಮ್ಯದರ್ಶನ ಮತ್ತು ತಮ್ಮ ಬಾರತುಹರಿ. ಅರಭಸ್ಥಾನ ಆಳುವವರನ್ನು ವಿಕ್ರಮಾದಿತ್ಯನು ಸೋಲಿಸಿದನು ಮತ್ತು ಪ್ರದೇಶವನ್ನು ತನ್ನ ರಾಜ್ಯಕ್ಕೆ ಸೇರಿಸಿಕೊಂಡನು. “ಬರಹಂ ಭೀನ್ ಸೋಯಿ" ಎಂಬ ಪದ್ಯದಲ್ಲಿ ಜಯವನ್ನು ಸುಂದರವಾಗಿ ವರ್ಣಿಸಲಾಗಿದೆ. ವಿಕ್ರಮಾದಿತ್ಯನು ೬೦ ವರ್ಷಗಳ ಆಳುವಿಕೆಯಲ್ಲಿ, ೨೫ ವರ್ಷ ಯುದ್ಧದಲ್ಲಿ ಕಾಲಕಳೆದನು. ಉದಾರ ಸ್ವಭಾವದ ಪ್ರಭುವಾಗಿದ್ದು ಯಾವಾಗಲೂ ಅವನ ಜನರ ನೆಮ್ಮದಿಗಾಗಿ ಯೋಚಿಸಿದನು ಮತ್ತು ಹಾಗೆಯೇ ಆಳಿದನು. ಅವನು ಶೈವ ಧರ್ಮದ ಅನುಯಾಯಿ ಆಗಿದ್ದರೂ ಸಹ, ಎಲ್ಲ ಧರ್ಮಗಳನ್ನು ಸಮಾನವಾಗಿ ಗೌರವಿಸಿದನು. ಧನವಂತ್ರಿ, ಶಪಾನಕ, ಅಮರ ಸಿಂಗ್ ಶಂಕು, ವೇಟಲ್ ಭಟ್, ಖಾರಪರ, ಕಾಳಿದಾಸ, ವರಾಹಮಿಹಿರ ಮತ್ತು ವಾರುಚೀ ಇವು ಅವನ ಮಂತ್ರಾಲೋಚನ ಗೃಹದ ರತ್ನಗಳು.
ಪರಮಪೂಜ್ಯ ಪರಶುರಾಮ ಮಾಧವ ಪಾಂಡೆ ಮಾಹಾರಾಜರು, ಅಕೋಲಾ, ಮಹಾರಾಷ್ಟ್ರ.