ಮೇವಾಡದ ಸಿಸೋದಿಯಾ ರಾಜವಂಶದ ಶೂರ ರಜಪೂತ ರಾಜರು: ಬಾಪ್ಪಾ ರಾವಳ ಮತ್ತು ರಾಣಾಸಂಗ

ಮೇವಾಡದ ಶೂರ ರಜಪೂತ ರಾಜರು

ಮೇವಾಡದ ಇತಿಹಾಸ, ಮತ್ತು ಚಿತ್ತೋಡ, ಉದಯಪುರ, ಹಳದಿ ಘಾಟ ಮುಂತಾದ ಧರ್ಮಕ್ಷೇತ್ರಗಳ ತೇಜಸ್ವಿ ಪರಂಪರೆಯು ಅಜರಾಮರವಾಗಿವೆ. ಪಂಜಾಬ, ಹರಿಯಾಣಾ, ಸಿಂಧ ಮತ್ತು ರಾಜಸ್ಥಾನ ಈ ನಾಲ್ಕು ಪ್ರಾಂತಗಳಲ್ಲಿ ಲಕ್ಷಗಟ್ಟಲೆ ಶೂರ-ವೀರರು ನೂರಾರು ವರ್ಷಗಳ ಕಾಲ ಧರ್ಮಕ್ಕಾಗಿ ಯುಧ್ಧ ಮಾಡಿ, ಬಲಿದಾನ ನೀಡುವ ಉಚ್ಚ ಪರಂಪರೆಯನ್ನು ನಿರ್ಮಾಣ ಮಾಡಿದರು. ಇದೇ ಪರಂಪರೆ "ಸಿಸೋದಿಯಾ" ರಾಜವಂಶಸ್ಥರು ರಾಜಸ್ಥಾನದಲ್ಲಿ ಮತ್ತು ಶಿವಛತ್ರಪತಿಯವರು ಮಹಾರಾಷ್ಟ್ರದಲ್ಲಿ ಕೂಡ ನಡೆಸಿದರು. ಮೇವಾಡದಲ್ಲಿ ಈ ಒಂದೇ ರಾಜವಂಶ ಕೊನೆಯ ತನಕ ಪರಕೀಯರೊಂದಿಗೆ ಯುಧ್ಧ ಮಾಡಿ ಯಶಸ್ವಿ ಆಯಿತು. ಈ ಪರಂಪರೆಯ ಶ್ರೇಷ್ಠ ವೀರಪುರುಷರ ಪರಿಚಯ ನಾವು ನೊಡೋಣ.

ಬಾಪ್ಪಾ ರಾವಳ

ಕ್ರಿ. ೭೩೫ ರಲ್ಲಿ ಎಲ್ಲ ಅರಬ ರಾಜರು ಕೂಡಿಕೊಂಡು ಮೇವಾಡದ ಮೇಲೆ ಯುದ್ಧ ಸಾರಿದರು. ಆ ವೇಳೆಯಲ್ಲಿ ಸಿಸೋದಿಯಾ ವಂಶದ ಬಾಪ್ಪಾ ರಾವಳ ಅವರೊಂದಿಗೆ ಘೋರವಾದ ಯುಧ್ಧ ಮಾಡಿ ಅವರನ್ನು ಓಡಿಸಿದನು. ಅವರ ಪ್ರಾಂತದಲ್ಲಿ ಹೋಗಿ ಅವರಲ್ಲಿ ತನ್ನ ಬಗ್ಗೆ ಭಯವನ್ನು ಹುಟ್ಟಿಸಿದನು. ಈ ಯುದ್ಧದಿಂದ ರಾಜಪೂತರ ಮೇಲೆ ಮಾತ್ರವಲ್ಲದೆ ಭಾರತದ ದಿಕ್ಕಿನಲ್ಲಿಯೂ ಮುಂದಿನ ೩೦೦ ವರ್ಷದ ತನಕ ಯುದ್ಧಕ್ಕೆ ಬರದಂತೆ ಅಂಜಿಕೆಯು ಪರಕೀಯರಲ್ಲಿ ಹುಟ್ಟಿತು.

ರಾಣಾಸಂಗ

ದೆಹಲಿಯ ಮೇಲೆ ಬಾದಶಾಹ ಬಾಬರನ ರಾಜ್ಯ ಇತ್ತು. ಅದೇ ಸಮಯದಲ್ಲಿ ಮೇವಾಡದ ಸಿಸೋದಿಯಾ ವಂಶದ ರಾಣಾಸಂಗನು ರಾಜಸ್ಥಾನ, ಪಂಜಾಬ ಮತ್ತು ಸಿಂಧನಲ್ಲಿ ತನ್ನ ಪರಾಕ್ರಮದಿಂದ ದೆಹಲಿಯ ಪರಕೀಯರ ಅಧಿಕಾರವನ್ನು ಕಿತ್ತೋಗಿಯುವ ಪ್ರಯತ್ನವನ್ನು ಪ್ರಾರಂಭ ಮಾಡಿದರು. ಇದರ ಸುಳಿವು ಬಾಬರನಿಗೆ ತಿಳಿಯಿತು ಮತ್ತು ಅವನು ಕ್ರಿ ೧೫೨೭ರಲ್ಲಿ ರಾಣಾಸಂಗನೊಂದಿಗೆ ಯುದ್ಧ ಮಾಡಿದನು. ಈ ಯುದ್ಧದಲ್ಲಿ ರಾಣಾ ಸಂಗನ ಪರಾಭವವಾಯಿತು. ಆದುದರಿಂದ ಹಿಂದವಿ ರಾಜ್ಯಗಳ ಹೊರತಾಗಿ ಮೊಘಲರ ರಾಜ್ಯ ಬಲಶಾಲಿ ಆಗಲು ಸಹಾಯ ಆಯಿತು. ಆದರೂ ಕೂಡಾ, ಬಾಬರನ ಮನಸ್ಸಿನಲ್ಲಿ ರಜಪೂತರ ವಿಷಯದಲ್ಲಿ ಹೆದರಿಕೆ ನಿರ್ಮಾಣ ಆಯಿತು. ಅವನು ರಜಪೂತರೊಂದಿಗೆ ಸಂಘರ್ಷ ಮಾಡುವುದನ್ನು ಬಿಟ್ಟನು. ಈ ಪರಾಭವದಿಂದ ಹಿಂಜರಿಯದ ರಾಣಾಸಂಗನು ಮತ್ತೆ ಯುದ್ಧದ ಸಿದ್ಧತೆಯನ್ನು ಪ್ರಾರಂಭ ಮಾಡಿದನು; ಆದರೆ ದುರ್ದೈವದಿಂದ ಅವನ ಅಕಾಲ ಮೃತ್ಯುವಾಯಿತು.

Leave a Comment