ದೇಶದ ಸ್ವಾತಂತ್ರ್ಯಕ್ಕಾಗಿ ಸರ್ವಸ್ವದ ತ್ಯಾಗ ಮಾಡಿದ ಕೆಲವು ಸತ್ಪುರುಷರ ಬಗ್ಗೆ ಕ್ರಾಂತಿಕಾರರು ಅಥವಾ ರಾಷ್ಟ್ರಪುರುಷರೆಂದು ಮಾತ್ರ ನಮಗೆ ಪರಿಚಯವಿರುತ್ತದೆ. ಮುಂದಿನ ಪೀಳಿಗೆಯನ್ನು ದೇಶಾಭಿಮಾನಿಯನ್ನಾಗಿಸಲು ಅದಕ್ಕೆ ರಾಷ್ಟ್ರಭಕ್ತಿಯ ಶಿಕ್ಷಣ ನೀಡುವ ಮಹಾನ್ ಧ್ಯೇಯವನ್ನಿರಿಸಿ ಈ ವೀರಪುರುಷರು ಮಾಡಿದ ಕಾರ್ಯವು ಅಷ್ಟೇ ಶ್ರೇಷ್ಠವಾಗಿದೆ.
ಮೊದಲ ಕ್ರಾಂತಿಕಾರರಾದ ವಾಸುದೇವ ಬಳವಂತ ಫಡಕೆ

೧೮೭೪ ರಲ್ಲಿ ಪೂನಾದಲ್ಲಿ ‘ಪೂನಾ ನೇಟಿವ್ ಇನ್ಸ್ಟಿಟ್ಯೂಟ್’ನ್ನು ಸ್ಥಾಪಿಸಿ, ಇದರ ವತಿಯಿಂದ ರಾಷ್ಟ್ರದ ಬಗ್ಗೆ ಶಿಕ್ಷಣ ಕೊಡುವ ಮೊದಲ ಶಾಲೆಯನ್ನು ಸ್ಥಾಪಿಸಿದರು.
ಲೋಕಮಾನ್ಯ ಬಾಲ ಗಂಗಾಧರ ತಿಲಕರು

ಇವರು ೧೮೮೦ ರಲ್ಲಿ ವಿಷ್ಣುಶಾಸ್ತ್ರಿ ಚಿಪಳೂಣಕರ ಮತ್ತು ಗೋಪಾಲ ಗಣೇಶ ಆಗರಕರ ಇವರ ಸಹಾಯದಿಂದ ಪೂನಾದಲ್ಲಿ ‘ನ್ಯೂ ಇಂಗ್ಲಿಷ್ ಸ್ಕೂಲ್’ನ್ನು ಸ್ಥಾಪಿಸಿದರು. ‘ಡೆಕ್ಕನ್ ಎಜ್ಯುಕೇಶನ್ ಸೊಸೈಟಿ’ ಮತ್ತು ‘ಫರ್ಗ್ಯುಸನ್ ಮಹಾವಿದ್ಯಾಲಯ’ವನ್ನೂ ಸ್ಥಾಪಿಸಿದರು.
ಲಾಲಾ ಲಜಪತರಾಯರು

ಇವರು ‘ಆಂಗ್ಲೋ ವೈದಿಕ ಕಾಲೇಜ್’ನ್ನು ಸ್ಥಾಪಿಸಿ ರಾಷ್ಟ್ರೀಯ ವೃತ್ತಿಶಿಕ್ಷಣ ಕೊಟ್ಟರು.
ಪಂಡಿತ ಮದನಮೋಹನ ಮಾಲವೀಯ

ಇವರು ೧ ಕೋಟಿ ೩೪ ಲಕ್ಷ ರೂಪಾಯಿಗಳನ್ನು ಸಂಗ್ರಹಿಸಿ ೧೯೧೬ ರಲ್ಲಿ ಕಾಶಿಯಲ್ಲಿ ‘ಹಿಂದೂ ವಿಶ್ವವಿದ್ಯಾಲಯ’ವನ್ನು ಸ್ಥಾಪಿಸಿದರು.
ಶಿಕ್ಷಣವು ಹೇಗಿರಬೇಕು ?
ಶಿಕ್ಷಕರ ಧರ್ಮಪಾಲನೆ !
ಗುರುಕುಲರೂಪಿ ಧರ್ಮಶಿಕ್ಷಣ ಪದ್ಧತಿ !
ಭಾರತೀಯ ಶಿಕ್ಷಣ ಪದ್ಧತಿಯ ವೈಶಿಷ್ಟ್ಯಗಳು
ಗುರುಕುಲ ಶಿಕ್ಷಣ ಪದ್ಧತಿ
ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸವನ್ನು ಜಾಗೃತಗೊಳಿಸುವ ಅವಶ್ಯಕತೆ