ಗುರುಕುಲರೂಪಿ ಧರ್ಮಶಿಕ್ಷಣ ಪದ್ಧತಿ !

ಯಾವಾಗ ಒಮ್ಮೆ ಪರೀಕ್ಷೆ ಮುಗಿದು ಈ ಅಧ್ಯಯನ ಮುಗಿಯುವುದೋ, ಎಂಬುದಾಗಿದೆ. ಮಕ್ಕಳಿಗೆ ಅಧ್ಯಯನ ಮಾಡಿ ಬಹಳಷ್ಟು ಬೇಸರವಾಗಿದೆ. ಪಠ್ಯಪುಸ್ತಕದಪರಿಚ್ಛೇದಗಳನ್ನು ಪದೇ ಪದೇಓದಿ ಮಕ್ಕಳು ಅತ್ಯಂತ ಬೇಸರಗೊಂಡಿದ್ದಾರೆ. ಪರೀಕ್ಷೆ ಮುಗಿಯುತ್ತಲೇ, ಎಲ್ಲಿಯಾದರೂ ಹಾಯಾಗಿ ಹೋಗಿ ಮಜಾ ಮಾಡಿ ಬರಬೇಕು…. ಎಂಬ ಸಂವಾದವು ಪರೀಕ್ಷೆಯ ಸಮಯದಲ್ಲಿ ಮನೆ ಮನೆಗಳಲ್ಲಿ ಪಾಲಕರ ಹಾಗೂ ಮಕ್ಕಳಿಂದ ಕೇಳಲು ಸಿಗುತ್ತವೆ, ಇವೆಲ್ಲವೂ ಇಂದಿನ ಅಧ್ಯಯನಕ್ರಮದ ಹಾಗೂ ವಿಜ್ಞಾನದ ದೊಡ್ಡ ಅಪಯಶವಾಗಿದೆ. ಅಧ್ಯಯನ ಮಾಡಿ ಮಕ್ಕಳು ಆನಂದದಿಂದ ಇರುವರು ಎಂಬ ದೃಶ್ಯವನ್ನು ಕಾಣುವುದೇ ದುರ್ಲಭವಾಗಿದೆ.

ಆಧ್ಯಾತ್ಮ ಆಧಾರಿತ ಶಿಕ್ಷಣ ಈ ಕುಂದು ಕೊರತೆಗಳನ್ನು ಪರಿಹರಿಸುತ್ತದೆ. ಹಿಂದಿನ ಗುರುಕುಲದ ದೃಶ್ಯ ಸ್ವಲ್ಪು ನೆನೆಪಿಸಿ ನೋಡಿ! ತಕ್ಷಣ ನಮ್ಮ ಮುಖದ ಮೇಲೆ ಆನಂದ ಹರಡುತ್ತದೆ; ಏಕೆಂದರೆ ಹಿಂದೆ ಗುರುಕುಲದಲ್ಲಿ ಹಿಂದೂ ಧರ್ಮದ ಆಚಾರ ಮತ್ತು ವಿಚಾರ ಪದ್ಧತಿಗಳಿಗೆ, ಹಿಂದೂ ಧರ್ಮದ ಶಾಸ್ತ್ರಗಳಿಗೆ ಅತ್ಯಂತ ಮಹತ್ತ್ವ ಕೊಟ್ಟು ದೇವತೆಗಳ, ಋಷಿಗಳ ಕೃಪೆಯಿಂದ ಅಧ್ಯಯನ ಹಾಗೂ ಅಧ್ಯಾಪನಮಾಡುತ್ತಿದ್ದುದರಿಂದ ಆ ವಾತಾವರಣವೇ ಚೈತನ್ಯದಿಂದ ಆನಂದಮಯವಾಗಿರುತ್ತಿತ್ತು. ಈಗ ಇದೆಲ್ಲವೂ ಕಾಲಗತಿಗನುಸಾರ ನಷ್ಟವಾಗಿದೆ.

ಅಧ್ಯಾತ್ಮ ವಿಷಯದ ಗ್ರಂಥ, ಸಂತರ ಚರಿತ್ರೆ, ದೇವತೆಗಳ ಪೌರಾಣಿಕ ಕಥೆ, ಸಂತರು ಮಾಡಿದ ಕೆಲವು ವಿಷಯದಲ್ಲಿನ ಮಾರ್ಗದರ್ಶನ ಇವೆಲ್ಲ ಎಷ್ಟು ಓದಿದರೂ, ಪುನಃ ಪುನಃ ಓದಿದರೂ ಅದರಲ್ಲಿ ಸಿಗುವ ಆನಂದವು ಪ್ರತಿದಿನ ಹೆಚ್ಚುತ್ತಲೇ ಇರುತ್ತದೆ. ಇವುಗಳನ್ನು ಓದುವುದರಿಂದ ಎಂದಿಗೂ ಬೇಸರ ಬರುವುದಿಲ್ಲ; ಇಂತಹ ಪ್ರಕಾರದ ಗ್ರಂಥ ಓದುವುದರಿಂದ ಚೈತನ್ಯ ಸಿಗುತ್ತದೆ ಹಾಗೂ ಇದರಿಂದ ಬುದ್ಧಿಯ ಶುದ್ದಿ ಅಗುವುದರಿಂದ ಅನಂದ ಸಿಗುತ್ತದೆ. ಆದುದರಿಂದ ಪ್ರತಿದಿನ ಸಂತರ ಚರಿತ್ರೆ ಓದಿದರೂ, ಪ್ರತಿದಿನ ನಮಗೆ ಅದರಿಂದ ಹೊಸ ಅರ್ಥವೇ ಆಗುತ್ತಿರುತ್ತದೆ. ಹೀಗೇಕೆ ಆಗುತ್ತದೆ ಎಂದರೆ ಪ್ರತಿದಿನ ಓದುವುದರಿಂದ ನಮ್ಮ ದೇಹದ ಅನುಕ್ರಮವಾಗಿ ಸ್ಥೂಲದೇಹ, ಮನೋದೇಹ, ಕಾರಣದೇಹ ಹಾಗೂ ಮಹಾಕಾರಣದೇಹ ಹೀಗೆ ಒಳಗಿನ ಶುದ್ಧಿಯಾಗುತ್ತ ಹೋಗುವುದರಿಂದ ಆಯಾ ದೇಹದ ಮಟ್ಟಕ್ಕೆ ಮನಸ್ಸಿಗೆ ಹಾಗೂ ಬುದ್ಧಿಗೆ ತಿಳಿಯುವ ಸಂತರ ಚರಿತ್ರೆಯ ಭಾವರ್ಥವು ಬೇರೆಯೆ ಇರುತ್ತದೆ; ಆದ್ದರಿಂದ ಪ್ರತಿದಿನ ಬೇರೆನೇ ಆನಂದ ಸಿಗುತ್ತದೆ.

ವಿಜ್ಞಾನದಲ್ಲಿ ಚೈತನ್ಯ ಇಲ್ಲದಿರುವುದರಿಂದ ಅದು ವಿದ್ಯಾರ್ಥಿಗಳಿಗೆ ಮೈಗಳ್ಳತನ ಮಾಡಲು ಕಲಿಸುತ್ತದೆ. ಈ ಮೈಗಳ್ಳತನವು ಬೇಸರ ತರುವಂತೆ ಇರುತ್ತದೆ, ಆದುದರಿಂದ ಇಂತಹ ಅಧ್ಯಯನದಿಂದ ವಿದ್ಯಾರ್ಥಿಗಳಿಗೆ ಒತ್ತಡ ಬರುತ್ತದೆ. ಆದರೆ ಅಧ್ಯಾತ್ಮವು ನಿತ್ಯ ನೂತನ ಹಾಗೂ ಚೈತನ್ಯಮಯವಾಗಿರುವುದರಿಂದ ಅದು ಭಕ್ತರಿಗೆ ಪ್ರತಿನಿತ್ಯ ವಿನೂತನ ಆನಂದ ಕೊಡುತ್ತದೆ, ಓದುವಾಗ ಆಳವಾಗಿ ಓದುತ್ತಿದ್ದಂತೆ ಆನಂದವು ದ್ವಿಗುಣವಾಗುತ್ತಿರುವ ಅನುಭವವು ನಮಗೆ ದೊರಕುತ್ತದೆ, ಆದುದರಿಂದಲೇ ಸಂತರ ಚರಿತ್ರೆ ಓದುವಾಗ ಅದು ಬೇಸರವನ್ನುಂಟು ಮಾಡಿದೆ, ಇದು ಯಾವಾಗ ಓದಿ ಮುಗಿಯುತ್ತದೆ, ಎಂದೆನಿಸುವುದು ಯಾರ ಮುಖದಲ್ಲಿಯೂಕಾಣುವುದಿಲ್ಲ. ಇದರ ಕಾರಣವೆಂದರೆ ಸಂತರಚರಿತ್ರೆಯ ಚೈತನ್ಯ ಹಾಗೂ ಅದರೊಳಗಿನ ಸಂತರ ಅನುಭೂತಿಗಳ ಪ್ರತ್ಯಕ್ಷ ಮಾತು!

ಹಾಗಾದರೆ, ನಡೆಯಿರಿ ಪುನಃ ಒಮ್ಮೆ ಆನಂದವನ್ನು ಕೊಡುವ ಗುರುಕುಲರೂಪದ ಧರ್ಮಶಿಕ್ಷಣ ಪದ್ಧತಿಯನ್ನು ತರಲು ಕಟಿಬದ್ಧರಾಗೋಣ ಹಾಗೂ ಮುಂದಿನ ಪೀಳಿಗೆಗಾದರೂ ಚೈತನ್ಯದ ಹಾಗೂ ಇದರಿಂದ ದೊರಕುವ ದೇವರ ಕೃಪೆಯ ಆನಂದ ಕೊಡಲು ಸಿದ್ಧರಾಗೋಣ!

-ಸೌ. ಅಂಜಲಿ ಗಾಡಗೀಳ, ರಾಮನಾಥಿ, ಗೋವಾ
(ಚೈತ್ರ ಹುಣ್ಣಿಮೆ (ದವನದ ಹುಣ್ಣಿಮೆ), ಕಲಿಯುಗ ವರ್ಷ ೫೧೧೩ )