ರಕ್ಷಾ ಬಂಧನ ಹಬ್ಬದ ನಿಮಿತ್ತ ವಿಶೇಷ ಲೇಖನ

ರಕ್ಷಾಬಂಧನ

೧. ಹಿಂದೂ ಸಂಸ್ಕೃತಿಯಲ್ಲಿನ ನೆಂಟಸ್ತಿಕೆಯ ಬಂಧನ

೧ಅ ೧. ಹಿಂದೂ ಸಂಸ್ಕೃತಿಯನೆಂಟಸ್ತಿಕೆಯ ಬಂಧನವು ನಮಗೆ ಆದರ್ಶ ಜೀವನ ಬದುಕುವ ಪಾಠ ಕಲಿಸುವುದು : ಮಿತ್ರರೇ, ನಮ್ಮ ಹಿಂದೂ ಸಂಸ್ಕೃತಿಯಲ್ಲಿ ಅನೇಕ ಆಪ್ತ ಸಂಬಂಧಗಳಿವೆ. ಆಪ್ತ ಸಂಬಂಧಗಳಿಂದಲೇ ನಾವೆಲ್ಲರೂಇಂದುಸರಗಳಲ್ಲಿರುವ ಮಣಿಗಳಂತೆ ಪ್ರೇಮದ ಸಂಬಂಧಗಳಿಂದ ಜೋಡಿಸಲ್ಪಡುತ್ತೇವೆ. ಆಪ್ತ ಸಂಬಂಧಗಳಿಂದಲೇ ಪ್ರತಿಯೊಂದು ಕುಟುಂಬವು ಆನಂದದಿಂದ ಹಾಗೂ ಸುಖದಿಂದ ಇರುವುದು.

೧ಅ ೨. ಪಾಶ್ಚಿಮಾತ್ಯರ ಅನುಕರಣದಿಂದ ಸಂಬಂಧಗಳು ದೂರವಾಗುವ ಭಯ ನಿರ್ಮಾಣವಾಗುವುದು : ನಮ್ಮ ಹಿಂದೂ ಸಂಸ್ಕೃತಿಯಲ್ಲಿತಾಯಿ, ತಂದೆ, ಸಹೋದರಿ,ಪತಿ, ಪತ್ನಿ, ಮಾಮಾ, ಚಿಕ್ಕಪ್ಪ, ಚಿಕ್ಕಮ್ಮ ಹೀಗೆ ಅನೇಕ ಸಂಬಂಧಗಳಿವೆ. ಮಿತ್ರರೇ, ಈ ಸಂಬಂಧಗಳಿಲ್ಲದಿದ್ದರೆ, ನಾವು ಆದರ್ಶ ಜೀವನವನ್ನು ಜೀವಿಸಲು ಸಾಧ್ಯವಿದೆಯೇ? ಈ ಸಂಬಂಧಗಳೇ ನಮಗೆ ಆದರ್ಶ ಜೀವನ ಜೀವಿಸುವ ಪಾಠ ಕಲಿಸುತ್ತವೆ. ಆದರೆ ಪಾಶ್ಚಾತ್ಯರ ಅನುಕರಣದ ವಿಕೃತಿಯಿಂದ ಈ ಎಲ್ಲ ಸಂಬಂಧಗಳು ದೂರವಾಗಬಹುದೇನೊಎಂಬ ಚಿಂತೆಯಾಗುತ್ತದೆ. ಇತ್ತಿಚೆಗೆ ನಾವು ನೋಡುತ್ತೇವೆಯಾರಿಗೂ ಇನ್ನೊಬ್ಬರ ಬಗ್ಗೆ ಪ್ರೇಮ, ಪ್ರೀತಿಯು ಉಳಿದಿಲ್ಲ.

೧ ಆ. ಸಂಬಂಧ ಕಾಪಾಡುವುದು ಹಾಗೂ ಅದನ್ನು ಉಳಿಸಿಕೊಳ್ಳುವುದು, ಅಂದರೆ ಹಿಂದೂ ಸಂಸ್ಕೃತಿಯ ರಕ್ಷಣೆ ಮಾಡಿದಂತೆ : ಮಿತ್ರರೇ, ನಮ್ಮ ಸಹೋದರನು ಉತ್ತಮ ಅಂಕಗಳೊಂದಿಗೆ ಉತ್ತಿರ್ಣನಾದರೆ ಅದನ್ನು ಎಲ್ಲರಿಗೂ ಆನಂದದಿಂದ ಹೇಳುತ್ತೇವೆ ಅಲ್ಲವೇ? ನಮ್ಮ ತಂದೆ ನಮಗೆ ಹೊಸ ವಸ್ತು ತಂದ ನಂತರ ನಾವು ಅದನ್ನು ಎಲ್ಲರಿಗೂ ತೋರಿಸುತ್ತೇವೆ. ಇದರಿಂದ ಎಲ್ಲರಿಗೂ ಏನುಗಮನಕ್ಕೆ ಬಂದಿರಬಹುದುಎಂದರೆನಮ್ಮ ಜೀವನದಲ್ಲಿ ಚಿಕ್ಕ ಚಿಕ್ಕ ವಿಷಯಗಳಲ್ಲಿರುವ ಆನಂದ ನಾವು ನಮ್ಮ ಬಂಧು-ಮಿತ್ರರೊಂದಿಗೆ ಹಂಚಿಪಡೆಯಬಹುದಾಗಿದೆ!ಸಂಬಂಧಗಳನ್ನು ಕಾಪಾಡುವುದು ಹಾಗೂ ಅದನ್ನು ಉಳಿಸಿಕೊಳ್ಳುವುದು, ಅಂದರೆ ಹಿಂದೂ ಸಂಸ್ಕೃತಿಯ ರಕ್ಷಣೆ ಮಾಡಿದಂತೆ ಆಗುವುದು. ಹಾಗಾದರೆ ಮಿತ್ರರೇ, ನಾವು ಹಾಗೆ ಮಾಡೋಣವಲ್ಲವೆ ?

೧ ಇ. ಹಿಂದೂ ಸಂಸ್ಕೃತಿಯ 'ರಕ್ಷಾಬಂಧನ ಹಬ್ಬದಿಂದ' ಸಹೋದರರ-ಸಹೋದರಿಸಂಬಂಧದ ಲ್ಲಿ ವೃದ್ಧಿಯಾಗುವುದು : ಮಿತ್ರರೇ, ರಕ್ಷಾಬಂಧನ ಹಬ್ಬವು ಸಹೋದರ-ಸಹೋದರಿಯರಸಂಬಂಧದಲ್ಲಿ ವೃದ್ದಿ ತರುವ ಹಬ್ಬವಾಗಿದೆ. ಸಹೋದರ-ಸಹೋದರಿಯರ ಸಂಬಂಧ ಬಹಳ ಮಹತ್ತ್ವದ್ದಾಗಿದೆ. ಈ ದಿವಸ ಸಹೋದರಿಯು ಸಹೋದರನಿಗೆ ರಾಖಿ ಕಟ್ಟುತ್ತಾಳೆ. ಇದರಿಂದ ಅವರಲ್ಲಿ ಪ್ರೇಮ ವೃದ್ಧಿಯಾಗುತ್ತದೆ. ರಾಖಿ ಕಟ್ಟುವ ಸಹೋದರಿಯ ರಕ್ಷಣೆ ಮಾಡುವ ಹೊಣೆ ಸಹೋದರನದ್ದಾಗಿರುತ್ತದೆ.

೧ ಈ. ರಕ್ಷಾಬಂಧನದಿಂದ ಈ ಸಂಬಂಧವು ಪವಿತ್ರ ಬಂಧನದಲ್ಲಿ ರೂಪಾಂತರವಾಗುವುದು : ಯಾವಾಗ ಒಬ್ಬ ಹುಡುಗಿ ಅಥವಾ ಸ್ತ್ರೀ ಒಬ್ಬ ಹುಡುಗನಿಗೆ ಅಥವಾ ಪುರುಷನಿಗೆ ರಾಖಿ ಕಟ್ಟುವಳೊ, ಆ ಕ್ಷಣದಿಂದ ಅವಳು ಅವನ ಸಹೋದರಿಯಾಗುತ್ತಾಳೆ. ನಮ್ಮ ಹಬ್ಬಗಳು ಎಷ್ಟೊಂದು ಮಹಾನ ಆಗಿವೆ ಅಲ್ಲವೇ!ಒಂದು ರಕ್ಷಾಬಂಧನದಿಂದ ಸಂಬಂಧವು ಪವಿತ್ರ ಬಂಧನದಲ್ಲಿ ರೂಪಗೊಳ್ಳುತ್ತದೆ!

೧ ಉ. ನಮ್ಮ ಹಬ್ಬಗಳ ಮಹತ್ತ್ವವು ತಿಳಿಯದಿರುವುವುದರ ದುಷ್ಪರಿಣಾಮ : ಇಂದು ನಮ್ಮ ದುರಾದೃಷ್ಟ ಏನೆಂದರೆ, ಯಾವ 'ದಿವಸ'ಗಳಿಗೆ ಮಹತ್ತ್ವಗಳಿಲ್ಲವೊ ಅವನ್ನು ನಾವು ಕ್ಷಣಮಾತ್ರ ಯೋಚಿಸದೆಆಚರಿಸುತ್ತಿದ್ದೇವೆ. ಇಂದಿನ ಮಕ್ಕಳಿಗೆ ರಕ್ಷಾಬಂಧನದ ಮಹತ್ತ್ವ ಗೊತ್ತಿಲ್ಲದಿರುವುದರಿಂದ ಅವರು ಪಾಶ್ಚಿಮಾತ್ಯರ 'ಫ್ರೆಂಡಶಿಪ ಡೇ', 'ರೋಜ ಡೇ', 'ವ್ಯಾಲೆಂಟೈನ್ ಡೇ’ ಮುಂತಾದ ನಿರರ್ಥಕ'ಡೇ' (ದಿವಸ)ಗಳನ್ನು ಆಚರಿಸುತ್ತಿದ್ದಾರೆ. ಮಿತ್ರರೇ, ನನಗೆ ಹೇಳಿ, ಈ ‘ಡೇ’ ಆಚರಿಸುವುದರಿಂದ ಸಮಾಜದಲ್ಲಿಯಾವ ಪವಿತ್ರ ಸಂಬಂಧನಿರ್ಮಾಣವಾಗುತ್ತದೆ? ಸಮಾಜಕ್ಕೆ ಇದರಿಂದ ಯಾವ ಲಾಭವಾಗುತ್ತದೆ? ಲಾಭಕ್ಕಿಂತ ಹಾನಿ ಆಗುವುದು! ಮಿತ್ರರೇ, ಹಾಗಾದರೇ ಈ ‘ಡೇ’ಗಳನ್ನು ಏಕೆ ಆಚರಿಸುವುದು? ನೀವು ಆಚರಿಸುತ್ತೀರ? ರಕ್ಷಾಬಂಧನದಂದು,‘ನಾವು ಪಾಶ್ಚಿಮಾತ್ಯರ ‘ಡೇ’ ಆಚರಿಸುವುದಿಲ್ಲ ! ’ಎಂದುನಾವು ನಿಶ್ಚಯಿಸೋಣ.

೧ ಊ. ಪ್ರತಿದಿನ ಸ್ತ್ರೀಯರ ಮೇಲಾಗುವಅತ್ಯಾಚಾರ ತಡೆಯುವ ದಿವಸ ! : ಮಿತ್ರರೇ, ನಾವು ಪ್ರತಿದಿನಸ್ತ್ರೀಯರ ಮೇಲಾಗುವಅತ್ಯಾಚರಗಳ ಬಗ್ಗೆ ಸುದ್ದಿಗಳನ್ನು ಓದುತ್ತೇವೆ/ಕೇಳುತ್ತೇವೆ. ಸಮಾಜದ ಈ ವಿಕೃತಿ ನಮಗೆ ನಷ್ಟ ಮಾಡಬೇಕಾದರೆ, ಪ್ರತಿಯೊಬ್ಬ ಪುರುಷನು ‘ಈ ರಾಷ್ಟ್ರದ ಪ್ರತಿಯೊಬ್ಬ ಸ್ತ್ರೀಯು ನನ್ನ ಸಹೋದರಿಯಂತೆ ಹಾಗೂ ಅವಳ ರಕ್ಷಣೆ ಮಾಡುವುದು ನನ್ನ ಪರಮ ಕರ್ತವ್ಯವಾಗಿದೆ’ಎಂಬ ನಿಶ್ಚಯ ಮಾಡಬೇಕು. ಈ ರೀತಿ ಪ್ರತಿಜ್ಞೆಯನ್ನು ಮಾಡಿದರೆ, ದೇಶದಲ್ಲಿ ನಡೆಯುವ ಅತ್ಯಾಚಾರಗಳನ್ನು ತಡೆಯಬಹುದು!ಇದೇ ನಿಜವಾದ ರಕ್ಷಾಬಂಧನನೆಯ ಆಚರಣೆ! ಮಿತ್ರರೇ, ನಾವು ಹೀಗೆ ನಿಶ್ಚಯಿ ಮಾಡೋಣವೆ?

ಹಬ್ಬಗಳ ಮಹತ್ವ!

ವಿದ್ಯಾರ್ಥಿ ಮಿತ್ರರೇ, ನಮ್ಮ ಆದರ್ಶ ಹಿಂದೂ ಸಂಸ್ಕೃತಿಯಲ್ಲಿ ನಾವು ಅನೇಕ ಹಬ್ಬಗಳನ್ನು ಆಚರಿಸುತ್ತೇವೆ. ‘ಈ ಹಬ್ಬಗಳನ್ನು ಏಕೆ ಹಾಗೂ ಹೇಗೆ ಮಾಡಬೇಕು? ಅದರ ಹಿಂದಿನ ಶಾಸ್ತ್ರವೇನು?,’ ಎಂಬುದನ್ನು ನಮಗೆ ಯಾರೂ ಹೇಳುವುದಿಲ್ಲ. ಆದುದರಿಂದ ನಮ್ಮ ಹಬ್ಬಗಳಲ್ಲಿ ಅನೇಕ ವಿಕೃತ ಹಾಗೂ ಅಯೋಗ್ಯ ವಿಷಯಗಳು ನಿರ್ಮಾಣವಾಗಿವೆ. ಆದುದರಿಂದ ನಮ್ಮಲ್ಲಿನಮ್ಮವೇ ಹಬ್ಬಗಳ ಬಗ್ಗೆ ಆದರ ಹಾಗೂ ತನ್ನತನವು ಕಂಡು ಬರುವುದಿಲ್ಲ. ಮಿತ್ರರೆ, ಇದು ಯೋಗ್ಯವೇ? ನಮ್ಮ ಹಬ್ಬಗಳೆಂದರೆ ಯಾರದೋ ಮನಸ್ಸಿನ ಕಲ್ಪನೆ ಅಥವಾ ಯಾರೋ ಹೇಳುತ್ತಾರೆಎಂದು ನಾವು ಆಚರಿಸುವುದಿಲ್ಲ. 'ಸಮಾಜದ ಮೇಲೆ ಒಳ್ಳೆ ಸಂಸ್ಕಾರವಾಗಬೇಕು ಹಾಗೂ ಎಲ್ಲರಲ್ಲಿ ದೇವರ ಮೇಲಿನ ಶ್ರದ್ಧೆ ಬೆಳೆಯಬೇಕು’, ಇದಕ್ಕಾಗಿ ನಮ್ಮ ಋಷಿಮುನಿಗಳು ಈ ಹಬ್ಬಗಳನ್ನು ನಿರ್ಮಿಸಿದ್ದಾರೆ.

ಮಿತ್ರರೇ, ನಾವೆಲ್ಲರೂ ಪ್ರತಿಯೊಂದು ಹಬ್ಬವನ್ನು ಭಾವಪೂರ್ಣವಾಗಿ ಆಚರಿಸುವ ನಿಶ್ಚಯ ಮಾಡೋಣ. ಪ್ರತಿಯೊಬ್ಬರ ಮನದಲ್ಲಿ ನಮ್ಮ (ಹಿಂದೂಗಳ) ಹಬ್ಬಗಳ ಬಗ್ಗೆ ಆದರ ಹಾಗೂ ಭಕ್ತಿಭಾವವನ್ನು ನಿರ್ಮಾಣ ಮಾಡೋಣ. ಹಿಂದೂ ಧರ್ಮದಲ್ಲಿನ ಪ್ರತಿಯೊಂದು ಹಬ್ಬದ ಹಿಂದಿನ ಉದ್ದೇಶ ತಿಳಿದುಕೊಂಡರೆ, ನಾವು ಆದರ್ಶ ಹಾಗೂ ಆನಂದಮಯಜೀವನ ಜೀವಿಸಬಹುದು.

– ಶ್ರೀ. ರಾಜೇಂದ್ರ ಮಹಾದೇವ ಪಾವಸಕರ (ಗುರುಜಿ), ಪನವೇಲ.

Leave a Comment