ಆಷಾಢ ಏಕಾದಶಿ

ಆಷಾಢ ಏಕಾದಶಿಇತಿಹಾಸ

ಹಿಂದೆ ದೇವತೆಗಳಹಾಗೂ ದಾನವರನಡುವೆ ಯುದ್ಧವಾಯಿತು. ಕುಂಭ ದೈತ್ಯನ ಪುತ್ರ ಮೃದುಮಾನ್ಯನು ತಪಸ್ಸನ್ನು ಆಚರಿಸಿ ಶಿವನಿಂದ ಅಮರತ್ವವನ್ನು ಪಡೆದನು. ಅದರಿಂದ ಬ್ರಹ್ಮದೇವ, ಶ್ರೀವಿಷ್ಣು, ಶಿವ ಈ ಎಲ್ಲ ದೇವತೆಗಳಿಗೆಅವನನ್ನು ಸಂಹರಿಸಲು ಆಗಲಿಲ್ಲ. ಅವನ ಭಯದಿಂದ ದೇವತೆಗಳು ಚಿತ್ರಕೂಟ ಪರ್ವತದ ಮೇಲೆ ಧಾತ್ರಿ ಮರದ ಕೆಳಗೆ ಒಂದು ಗುಹೆಯಲ್ಲಿ ಅಡಗಿ ಕುಳಿತರು. ಅವರಿಗೆ ಆ ಆಷಾಢ ಏಕಾದಶಿಯಂದು ಉಪವಾಸ ಮಾಡಬೇಕಾಯಿತು. ಅವರೆಲ್ಲರಿಗೂ ಮಳೆಯಲ್ಲಿ ಸ್ನಾನದ ಯೋಗವು ಕೂಡಿಬಂತು. ಅಕಸ್ಮಾತ ಅವರೆಲ್ಲರೂ ನೆರೆದಿರುವಾಗ ಅವರೆಲ್ಲರ ಶ್ವಾಸವು ಒಗ್ಗೂಡಿ ಆ ಶ್ವಾಸದಿಂದ ಒಂದು ಶಕ್ತಿ ಉತ್ಪನ್ನವಾಯಿತು. ಆ ಶಕ್ತಿಯಿಂದ ಗುಹೆಯ ಬಾಗಿಲಲ್ಲಿ ಕಾಯುತ್ತ ಕುಳಿತಿದ್ದ ಮೃದುಮಾನ್ಯ ದೈತ್ಯನಸಂಹಾರವಾಯಿತು. ಈ ಶಕ್ತಿದೇವಿಯೇ ಏಕಾದಶಿ ದೇವತೆ. ಆಷಾಢಏಕಾದಶಿ ವ್ರತದಲ್ಲಿ ಎಲ್ಲ ದೇವತೆಗಳ ತೇಜವು ಒಂದಾಗಿರುತ್ತದೆ.

ಆಷಾಢ ಏಕಾದಶಿಗೆ ದೇವಶಯನಿ ಏಕಾದಶಿ ಎಂದು ಕರೆಯುವ ಕಾರಣ

ಮನುಷ್ಯನ ಒಂದು ವರ್ಷವೆಂದರೆ ಇದುದೇವತೆಗಳ ಒಂದು ದಿನಕ್ಕೆ ಸಮಾನ. ದಕ್ಷಿಣಾಯನವು ದೇವತೆಗಳ ರಾತ್ರಿಯಾಗಿದ್ದು ಉತ್ತರಾಯಣವು ಅವರಿಗೆ ಹಗಲು ಇರುತ್ತದೆ. ಆಷಾಢ ಮಾಸದಲ್ಲಿ ಬರುವ ಕರ್ಕ ಸಂಕ್ರಾಂತಿಗೆ ಉತ್ತರಾಯಣವು ಪೂರ್ಣಗೊಂಡು ದಕ್ಷಿಣಾಯನವು ಪ್ರಾರಂಭವಾಗುವುದು, ಅಂದರೆ ದೇವತೆಗಳ ರಾತ್ರಿ ಪ್ರಾರಂಭವಾಗುತ್ತದೆ; ಆದುದರಿಂದ ಆಷಾಢ ಏಕಾದಶಿಯನ್ನು ದೇವಶಯನಿ (ದೇವತೆಗಳ ನಿದ್ರೆಯ) ಏಕಾದಶಿ ಎಂದು ಕರೆಯುತ್ತಾರೆ.

ವ್ರತದ ಶಾಸ್ತ್ರೋಕ್ತ ವಿಧಿ

ಹಿಂದಿನ ದಿನ (ದಶಮಿಯಂದು) ಒಪ್ಪೊತ್ತಿನ ಆಹಾರ ಸೇವಿಸುತ್ತಾರೆ. ಏಕಾದಶಿಯಂದು ಪ್ರಾತಃ ಸಮಯ ಸ್ನಾನ ಮಾಡಿ, ಉಪವಾಸ ಮಾಡುತ್ತಾರೆ. ತುಳಸಿಯನ್ನು ಅರ್ಪಿಸಿ ಶ್ರೀವಿಷ್ಣು ಪೂಜೆ ಮಾಡಿ,ರಾತ್ರಿ ಹೊತ್ತು ಹರಿಭಜನೆಯಲ್ಲಿ ಜಾಗರಣೆ ಮಾಡುತ್ತಾರೆ. ಆಷಾಢ ಶುಕ್ಲ ದ್ವಾದಶಿಯಂದು ವಾಮನನ ಪೂಜೆ ಮಾಡಿ ಉಪವಾಸ ಅಂತ್ಯಗೊಳಿಸುತ್ತಾರೆ.

ಗುರುದೇವ ಡಾ. ಕಾಟೇಸ್ವಾಮಿ (ಘನಗರ್ಜಿತ, ಡಿಸೆಂಬರ ೨೦೦೫)

ಆಷಾಢ ಏಕಾದಶಿಯ ಆಚರಣೆಯ ಪ್ರಮುಖ ತೀರ್ಥಕ್ಷೇತ್ರ ಪಂಢರಪುರದ ಬಗ್ಗೆ ತಿಳಿದುಕೊಳ್ಳಲು ಕ್ಲಿಕ್ ಮಾಡಿ!