ವಟಪೌರ್ಣಿಮಾ ಮಹತ್ವ




ಮಕ್ಕಳೇ, ವಟಪೌರ್ಣಿಮಾದಂದು ವೃಕ್ಷಗಳಲ್ಲಿರುವ
ಪರೋಪಕಾರಿ ಗುಣವನ್ನು ನಮ್ಮಲ್ಲಿ ಬೆಳೆಸಲು ನಿಶ್ಚಯಿಸೋಣ !

ಬಾಲಮಿತ್ರರೇ, ಮಹಾನ ಹಿಂದೂ ಧರ್ಮ ಹಾಗೂ ಸಂಸ್ಕೃತಿಯು ನಮಗೆ ಉತ್ಕೃಷ್ಟವಾದ ಸಂಸ್ಕಾರಗಳನ್ನು ನೀಡಿದೆ. ಆನಂದಮಯ ಜೀವನವನ್ನು ಜೀವಿಸಲು, ಹಾಗೆಯೇ ಚರಾಚರದಲ್ಲಿ ದೇವರಿದ್ದಾರೆ, ಎಂಬ ತಿಳವಳಿಕೆಯನ್ನು ಪ್ರತಿಯೊಂದು ಜೀವಕ್ಕೆ ಸತತವಾಗಿ ಇರಬೇಕು, ಇದಕ್ಕಾಗಿ ನಮಗೆ ಋಷಿ ಮುನಿಗಳು ಹಿಂದೂ ಧರ್ಮ ಶಾಸ್ತ್ರದಲ್ಲಿ ಅನೇಕ ವ್ರತಗಳನ್ನು ಹೇಳಿದ್ದಾರೆ. ಹಿಂದಿನ ಕಾಲದಲ್ಲಿ ಈ ವ್ರತಗಳ ಪಾಲನೆಯನ್ನು ಕಟ್ಟುನಿಟ್ಟಾಗಿ ಮಾಡಲು ಪ್ರತಿಯೊಬ್ಬ ಹಿಂದೂ ಪ್ರಯತ್ನಿಸುತ್ತಿದ್ದನು. ಅವುಗಳಿಂದ ಬರುವ ವಿವಿಧ ಅನುಭೂತಿಗಳಿಂದ ಅವರಿಗೆ ಈ ವ್ರತಗಳ ಮೇಲೆ ಧೃಢವಾದ ಶ್ರಧ್ದೆ ಇರುತ್ತಿತ್ತು. ಚರಾಚರದಲ್ಲಿರುವ ಪ್ರತಿಯೊಂದು ವಸ್ತುವಿನಲ್ಲಿ ದೇವರ ಅಸ್ತಿತ್ವವು ತುಂಬಿಕೊಂಡಿದೆ, ಎಂಬ ಭಾವವು ಅವರಲ್ಲಿ ನಿರ್ಮಾಣವಾಗುತ್ತಿತ್ತು. ಈಗಿನ ಕಾಲದಲ್ಲೂ ನಾವು ಅದೇ ಶ್ರದ್ಧೆಯನ್ನಿಟ್ಟು ವ್ರತಗಳನ್ನು ಆಚರಿಸಿದರೆ ನಮಗೂ ಅದೇ ರೀತಿಯ ಅನುಭೂತಿಗಳು ಬಂದು ನಮ್ಮೊಳಗೆ ಭಾವ ನಿರ್ಮಾಣವಾಗುವುದು. ಅದಲ್ಲದೆ ಸಮಾಜದಲ್ಲಿ ಇಂದು ಅವ್ಯಾಹತವಾಗಿ ಕಾಣಿಸಿಕೊಳ್ಳುವ ಕೊಲೆ, ಅತ್ಯಾಚಾರ, ವಿದ್ಧ್ವಂಸ, ಬೆಂಕಿ, ಲೂಟಿ ಇಂತಹ ಯಾವುದೇ ಸಮಸ್ಸ್ಯೆಗಳು ಉಳಿಯುವುದಿಲ್ಲ.

ಬಾಲಮಿತ್ರರೇ, ಕಾರಹುಣ್ಣಿಮೆ (ಜ್ಯೇಷ್ಠ ಹುಣ್ಣಿಮೆ), ಕಲಿಯುಗ ವರ್ಷ ೫೧೧೫ (೨೩.೬.೨೦೧೩) ಈ ದಿನದಂದು ವಟಪೌರ್ಣಿಮಾ ಆಚರಿಸುತ್ತಿದ್ದೇವೆ ! ಈ ಪ್ರಯುಕ್ತ ನಾವು ಜೀವನದಲ್ಲಿ ನೈತಿಕ ಮೌಲ್ಯಗಳನ್ನು ವೃದ್ಧಿಸಿ ಸುಸಂಸ್ಕಾರಿತ, ಆದರ್ಶ ಹಾಗೂ ಆನಂದಮಯ ಜೀವನವನ್ನು ಹೇಗೆ ಜೀವಿಸಬೇಕು? ಎಂಬುದನ್ನು ಕಲಿಯಬೇಕಾಗಿದೆ.

ವಟವೃಕ್ಷದ ಪೂಜೆ ಏಕೆ?

ಅಖಂಡ ಸುಮಂಗಲಿಯಾಗಿರಬೇಕೆಂದು, ಹಿಂದೂ ಸ್ತ್ರೀಯರು ವಟವೃಕ್ಷದ ಪೂಜೆ ಮಾಡುವುದು : ನಾವು ವರ್ಷಕೊಮ್ಮೆ ವಟಪೌರ್ಣಿಮಾ ಆಚರಿಸುತ್ತೇವೆ. ಈ ದಿನದಂದು ಪ್ರತಿಯೊಬ್ಬ ವಿವಾಹಿತ ಹಿಂದೂ ಸ್ತ್ರೀಯು ಅಖಂಡ ಸುಮಂಗಲಿಯಾಗಿರಬೇಕೆಂದು ವಟವೃಕ್ಷದ ಪೂಜೆ ಮಾಡುತ್ತಾಳೆ. ಪ್ರತಿಯೊಂದು ಮರದಲ್ಲಿ ದೇವರಿರುವುದರಿಂದ ವೃಕ್ಷಗಳನ್ನು ಕೂಡ ದೇವರಂತೆ ಪೂಜೆ ಮಾಡಿ ! ಎಂಬ ಸಂದೇಶವನ್ನು ನಮಗೆ ಋಷಿಮುನಿಗಳು ನೀಡಿದ್ದಾರೆ.

ಪ್ರತಿಯೊಂದು ವೃಕ್ಷದಲ್ಲಿ ದೇವರ ಅಸ್ತಿತ್ವ ಇದೆ

'ಪ್ರತಿಯೊಂದು ಮರದಲ್ಲಿ ದೇವರ ಅಸ್ತಿತ್ವವಿದೆ' ಎಂಬ ಅರಿವು ಇಟ್ಟುಕೊಳ್ಳುವುದರ ಅವಶ್ಯಕತೆ ! : ಬಾಲಮಿತ್ರರೇ, ನಮಗೆ ಶಾಲೆಯಲ್ಲಿ 'ಪರಿಸರ' ಎಂಬ ವಿಷಯವನ್ನು ಕಲಿಸಲಾಗುತ್ತದೆ. ಇದರಲ್ಲಿ 'ಗಿಡಗಳನ್ನು ನೆಟ್ಟು ಬೆಳೆಸಿರಿ' ಹಾಗೆಯೇ 'ಮರಗಳು ಮಿತ್ರರು' ಎಂದು ಹೇಳಲಾಗುತ್ತದೆ; ಆದರೆ ಇದರ ಬಗ್ಗೆ ನಿಜವಾಗಿಯೂ ನಮಗೆ ಅಂತರಿಕ ಅರಿವು ಇರುತ್ತದೆಯೇ ? ಇಲ್ಲವಲ್ಲ ? ಹಿಂದಿನ ಕಾಲದಲ್ಲಿ 'ಗಿಡಗಳನ್ನು ಬೆಳೆಸಿರಿ', ಅಥವಾ 'ಮರಗಳು ಮಿತ್ರರು' ಎಂದು ಹಿಂದೂ ಬಾಂಧವರಿಗೆ ಹೇಳುವ ಅವಶ್ಯಕತೆಯೇ ಇರಲಿಲ್ಲ. ಆಗ ಪ್ರತಿಯೊಂದು ವೃಕ್ಷದೊಳಗೆ ದೇವರಿದ್ದಾನೆ, ಎಂಬುದಾಗಿ ಎಲ್ಲ ಹಿಂದೂಗಳಲ್ಲಿ ಶ್ರದ್ಧೆ ಇರುತ್ತಿತ್ತು. ಆದ್ದರಿಂದ ಅವರು ಪ್ರತಿದಿನ ವೃಕ್ಷಗಳಿಗೆ ನಮಸ್ಕರಿಸುತ್ತಿದ್ದರು. ಮರಗಳಿಂದಲೇ ನಾವು ಜೀವಂತವಾಗಿದ್ದೇವೆ, ಎಂಬ ಕೃತಜ್ಞತೆಯ ಭಾವ ಅವರ ಮನಸ್ಸಿನಲ್ಲಿ ಸಹಜವಾಗಿ ಇರುತ್ತಿತ್ತು.

'ಪ್ರತಿಯೊಂದುಮರದಲ್ಲಿ ದೇವರ ಅಸ್ತಿತ್ವ ಇದೆ' ಎಂದು ಸತತವಾಗಿ ಅರಿವು ಇರಲಿ, ಎಂದು ವಟಪೌರ್ಣಿಮಾ ನಿಮಿತ್ತ ನಾವೆಲ್ಲರೂ ಈಶ್ವರನ ಚರಣಗಳಲ್ಲಿ ಪ್ರಾರ್ಥನೆ ಮಾಡೋಣ!

ವಟಪೌರ್ಣಿಮಾ – ಪರೀಕ್ಷೆಗೆ ಮಾತ್ರವಲ್ಲ, ಗುಣಗಳನ್ನು ಬೆಳೆಸಲು ಪೂರಕ!

'ಪರಿಸರ' ಎಂಬ ವಿಷಯವನ್ನು ಕೆಲವ ಪರೀಕ್ಷೆಯಲ್ಲೂ ಅಂಕ ಗಳಿಸುವ ದೃಷ್ಟಿಯಿಂದ ಅಧ್ಯಯನ ಮಾಡದೆ, ಮರಗಳಲ್ಲಿ ಇರುವ ಗುಣಗಳನ್ನು ನಮ್ಮಲ್ಲಿ ಬೆಳೆಸುವ ದೃಷ್ಟಿಯಿಂದ ಅಧ್ಯಯನ ಮಾಡೋಣ : ನಮಗೆ ಶಾಲೆಯಲ್ಲಿ 'ಪರಿಸರ'ದ ಎಂಬ ವಿಷಯವನ್ನು ಕಲಿಸಲಾಗುತ್ತದೆ. ಅದನ್ನು ಏಕೆ ಕಲಿಸುತ್ತಾರೆ, ಎಂದು ನಾವು ವಿಚಾರ ಮಾಡಿದ್ದು ಇದೆಯೇ ? ಈಗಿನ ವಿದ್ಯಾರ್ಥಗಳು ಕೇವಲ ವಾರ್ಷಿಕ ಪರೀಕ್ಷೆಯಲ್ಲಿ ಒಳ್ಳೆಯ ಅಂಕಗಳು ದೊರೆಯಲಿ ಎಂದು ಈ ವಿಷಯದ ಅಧ್ಯಯನ ಮಾಡುತ್ತಾರೆ; ಇದು ಯೋಗ್ಯ ವಿಚಾರವೇ ? ಇಲ್ಲವಲ್ಲ ? ಹಾಗಾದರೆ ವಟಪೌರ್ಣಿಮಾ ದಿನದಂದು 'ನಾನು ಕೇವಲ ಪರೀಕ್ಷೆಯಲ್ಲಿ ಒಳ್ಳೆಯ ಅಂಕಗಳಿಗೆ ಮಾತ್ರ ಅಧ್ಯಯನ ಮಾಡುವುದಿಲ್ಲ, 'ಪ್ರತಿಯೊಂದು ಮರದಲ್ಲಿ ದೇವರಿದ್ದಾನೆ' ಎಂದು ಅನುಭವಿಸಿ ಮರಗಳಲ್ಲಿರುವ ಗುಣಗಳನ್ನು ನನ್ನಲ್ಲಿ ಬೆಳೆಸಲು ಪ್ರಯತ್ನಿಸುತ್ತೇನೆ' ಎಂದು ನಿಶ್ಚಯಿಸೋಣ.

ವೃಕ್ಷಗಳಲ್ಲಿರುವ ಗುಣಗಳು

ಅ. ಪರೋಪಕಾರದ ಗುಣ : ಮಿತ್ರರೇ, ಮರಗಳು ಸ್ವತಃ ಬಿಸಿಲಿನಲ್ಲಿದ್ದು ಬಿಸಿಲಿನ ತೀವ್ರತೆಯನ್ನು ಸಹಿಸಿ ಇತರರಿಗೆ ನೆರಳು ನೀಡುತ್ತವೆ. ಮಳೆಗಾಲದಲ್ಲಿ ಮಳೆಯ ತೀವ್ರತೆ ಸಹಿಸಿ ಅವುಗಳ ಛತ್ರಛಾಯೆ ಬಯಿಸಿ ಬಂದ ಎಲ್ಲ ಜೀವಗಳ ರಕ್ಷಣೆ ಮಾಡುತ್ತವೆ. ನಮಗೆ ಹಣ್ಣು ಹಾಗೂ ಹೂ ಕೊಡುತ್ತವೆ. ಇದರಿಂದ 'ನಾವು ಕೂಡ ಸತತವಾಗಿ ಇತರರಿಗೆ ಸಹಾಯ ಮಾಡಬೇಕು', 'ನಮ್ಮಿಂದ ಇತರರಿಗೆ ಆನಂದ ಸಿಗಬೇಕು' ಎಂಬುದನ್ನು ಕಲಿಯೋಣ. ಇತರರಿಗೆ ತೊಂದರೆಯಾಗುವಂತೆ ವ್ಯವಹರಿಸಲು ನಮ್ಮ ಧರ್ಮ ಕಲಿಸುವುದಿಲ್ಲ ಎಂದು ಗಮನದಲ್ಲಿ ಇಟ್ಟುಕೊಳ್ಳಬೇಕು.

ಆ . ಅಹಂಕಾರ ಇಲ್ಲದಿರುವುದು : ಮರಗಳು ನಮಗೆ ಬಯಸಿದ್ದನ್ನು ಕೊಡುತ್ತವೆ; ಅದರೆ ಅವುಗಳಲ್ಲಿ 'ನಾನು ಮಾಡಿದೆ'ನೆಂಬ ಅಹಂಭಾವ ಎಂದಿಗೂ ಕಾಣುವುದಿಲ್ಲ. 'ಎಲ್ಲವನ್ನೂ ದೇವರೇ ಮಾಡುತ್ತಾರೆ' ಎಂಬ ಭಾವ ಅವರಲ್ಲಿ ಇರುತ್ತದೆ. ಆದರೆ ನಾವು, ಏನೇ ಮಾಡಿದರೂ, 'ನಾನು ಮಾಡಿದೆ' ಎಂದು ಹೇಳುತ್ತೇವೆ. ಮಕ್ಕಳೇ, ಇನ್ನು ಮುಂದೆ ಮರಗಳಂತೆ 'ದೇವರೇ ಎಲ್ಲವನ್ನು ಮಾಡುತ್ತಾರೆ' ಎಂಬ ಭಾವವನ್ನು ನಮ್ಮಲ್ಲಿ ಬೆಳೆಸಿಕೊಳ್ಳೋಣ.

ಇ. ಇತರರಿಗೆ ಆನಂದ ಕೊಡುವುದು : ನಾವು ಗಿಡ – ಮರಗಳಿಂದ ಅನೇಕ ಔಷಧಿಗಳನ್ನು ನಿರ್ಮಿಸುತ್ತೇವೆ. ಮರಗಳಿಂದ ನಮಗೆ ಸಾಕಷ್ಟು ಆನಂದ ಸಿಗುತ್ತದೆ. ಇಂದಿನಿಂದ ನಾವು ಕೂಡ 'ನಮ್ಮ ಪ್ರತಿಯೊಂದು ಕೃತಿಯಿಂದ ಇತರರಿಗೆ ಆನಂದ ಸಿಗಲೆಂದು' ಪ್ರಯತ್ನಿಸೋಣ.

ಈ. ವಿಷ ಪೂರಿತ ಗಾಳಿಯನ್ನು ಸೇವಿಸಿ ಪ್ರಾಣಿಜೀವಿಗಳಿಗೆ ಬೇಕಾಗುವ ಆಮ್ಲಜನಕವನ್ನು ನಿರ್ಮಿಸುವುದು : ಪ್ರಾಣಿಜೀವಿಗಳಿಗೆ ಮಾರಕವಾಗಿರುವ ವಾತಾವರಣದಲ್ಲಿರುವ ಇಂಗಾಲ-ಡೈಆಕ್ಸೈಡ್.ಅನ್ನು ಮರಗಳು ಸೇವಿಸುತ್ತವೆ ಹಾಗೂ ನಮಗೆ ಜೀವಿಸಲು ಅತ್ಯಾವಶ್ಯಕವಾಗಿರುವ ಆಮ್ಲಜನದ ಉತ್ಪತ್ತಿಯನ್ನು ಮಾಡುತ್ತವೆ. ಮನುಷ್ಯ, ಪ್ರಾಣಿ, ಪಕ್ಷಿ, ಬಳ್ಳಿಗಳು, ಕೀಟಗಳಿಗೂ ಮರಗಳು ಆಧಾರ ನೀಡುತ್ತವೆ. ನಾವು ಇದರ ಬಗ್ಗೆ ಕೃತಜ್ಞರಾಗಿರಬೇಕು.
ಮಕ್ಕಳೇ, ಈಗ ಹೇಳಿ, ಮರದೊಳಗೆ ದೇವರಿದ್ದಾರೆಯೋ ಇಲ್ಲವೋ ?

ತ್ಯಾಗವೇ ಆನಂದದ ಮಾರ್ಗ !

ಆನಂದಮಯ ಹಾಗೂ ಆದರ್ಶ ಜೀವನ ಜೀವಿಸಲು ವೃಕ್ಷಗಳಂತೆ ತ್ಯಾಗ ಮಾಡಲು ಕಲಿಯಿರಿ ! : ತ್ಯಾಗದಲ್ಲಿ ಆನಂದ ಇರುತ್ತದೆ ಎಂಬುದನ್ನು ಹಿಂದೂ ಧರ್ಮದಲ್ಲಿ ಹೇಳಲಾಗಿದೆ. ಮಕ್ಕಳೇ, ಮರಗಳು ನಮಗೆ ತ್ಯಾಗ ಮಾಡಲು ಕಲಿಸುತ್ತವೆ. ಸರ್ವಸ್ವವನ್ನು ಇತರರಿಗಾಗಿ ಅರ್ಪಿಸಿ ಆನಂದ ಕೊಡಲು ಕಲಿಸುತ್ತವೆ. ಪರೋಪಕಾರ ಮಾಡುವುದು, ಇತರರಿಗೆ ಸಹಾಯ ಮಾಡುವುದು ಮುಂತಾದ ಎಲ್ಲ ಗುಣಗಳು ನಮಗೆ ಮರಗಳಿಂದ ಕಲಿಯಲು ಸಿಗುತ್ತದೆ; ಆದುದರಿಂದಲೇ, ಮರಗಳ ಪೂಜೆಯನ್ನು ಮಾಡುವ ಪದ್ಧತಿ ಹಿಂದೂ ಧರ್ಮಶಾಸ್ತ್ರದಲ್ಲಿ ಇರುತ್ತದೆ. ಮರಗಳಲ್ಲಿ ಇರುವ ಗುಣಗಳನ್ನು ನಾವು ನಮ್ಮೊಳಗೆ ವಿಕಸಿತಗೊಳಿಸಿದರೆ, ನಾವು ನಿಜಕ್ಕೂ ಆನಂದಮಯ ಹಾಗೂ ಆದರ್ಶ ಜೀವನ ಜೀವಿಸಬಹುದು.

ಬಾಲಮಿತ್ರರೇ, ಇಂದಿನಿಂದ ನಾವೆಲ್ಲರೂ ಮರಗಳ ಎಲ್ಲ ಗುಣಗಳನ್ನು ನಮ್ಮಲ್ಲಿ ಅಳವಡಿಸಿ, ನಮ್ಮ ಹಾಗೂ ಇತರರ ಜೀವನ ಆನಂದಮಯ ಮಾಡಲು ಪ್ರಯತ್ನಿಸೋಣ. 'ಇದಕ್ಕಾಗಿ ನಮಗೆ ಶಕ್ತಿ ಹಾಗೂ ಬುದ್ಧಿ ನೀಡು', ಎಂದು ಈಶ್ವರನಲ್ಲಿ ಪ್ರಾರ್ಥಿಸೋಣ.

ಶ್ರೀ ರಾಜೇಂದ್ರ ಪಾವಸಕರ (ಗುರುಜಿ) ಪನವೇಲ