ವ್ಯಾಸ ಮಹರ್ಷಿಗಳ ಬಗ್ಗೆ ಶ್ಲೋಕ

ನಮೋಸ್ತು ತೇ ವ್ಯಾಸ ವಿಶಾಲಬುದ್ಧೇ ಫುಲ್ಲಾವಿಂದಾಯತಪತ್ರನೇತ್ರ |
ಯೇನ ತ್ವಯಾ ಭಾರತತೈಲಪೂರ್ಣಃ ಪ್ರಜ್ಜ್ವಾಲಿತೋ ಜ್ಞಾನಮಯಪ್ರದೀಪಃ||

ಅರ್ಥ : ಮಹಾಭಾರತರೂಪದತೈಲದಿಂದ ತುಂಬಿರುವ ಜ್ಞಾನಮಯ ದೀಪವನ್ನು ಪ್ರಜ್ವಲಿಸುತ್ತಿರುವ ವಿಶಾಲ ಬುದ್ಧಿಯನ್ನು ಹೊಂದಿರುವ ವ್ಯಾಸ ಮಹರ್ಷಿಗಳಿಗೆ ನನ್ನ ನಮಸ್ಕಾರಗಳು.

ವ್ಯಾಸಂ ವಸಿಷ್ಠನಪ್ತಾರಂ ಶಕ್ತೇಃ ಪೌತ್ರಮಕಲ್ಮಷಮ್ |
ಪರಾಶರಾತ್ಮಜಂ ವಂದೇ ಶುಕತಾತಂ ತಪೋನಿಧಿಮ್||

ಅರ್ಥ : ಯಾರು ವಸಿಷ್ಠ ಋಷಿಗಳ ಮರಿಮಗ, ಶಕ್ತಿ ಋಷಿಗಳ ಮೊಮ್ಮಗ, ಪರಾಶರ ಋಷಿಗಳ ಮಗ ಮತ್ತು ಶುಕ ಋಷಿಗಳ ತಂದೆಯಾಗಿರುವರೋ ಆ ನಿಷ್ಕಳಂಕ, ತಪೋನಿಧಿ ವ್ಯಾಸ ಮಹರ್ಷಿಗಳಿಗೆ ನಾನು ನಮಸ್ಕರಿಸುತ್ತೇನೆ.

ವ್ಯಾಸಾಯ ವಿಷ್ಣುರೂಪಾಯ ವ್ಯಾಸರೂಪಾಯ ವಿಷ್ಣವೇ |
ನಮೋ ವೈ ಬ್ರಹ್ಮನಿಧಯೇ ವಾಸಿಷ್ಠಾಯ ನಮೋ ನಮ:||

ಅರ್ಥ : ವಿಷ್ಣುರೂಪದ ವ್ಯಾಸರು ಅಥವಾ ವ್ಯಾಸರೂಪದಲ್ಲಿರುವ ವಿಷ್ಣುವಿಗೆ (ಭಗವಾನ ವೇದವ್ಯಾಸ ಋಷಿಗಳು ಪ್ರತ್ಯಕ್ಷ ವಿಷ್ಣು ಸ್ವರೂಪವೇ ಆಗಿದ್ದಾರೆ) ನಾನು ನಮಸ್ಕಾರ ಮಾಡುತ್ತೇನೆ. ವಸಿಷ್ಠರ ವಂಶಸ್ಥರಾದ ಬ್ರಹ್ಮನಿಧಿ ವ್ಯಾಸರಿಗೆ ನನ್ನ ನಮಸ್ಕಾರಗಳು.

ಅಚತುರ್ವದನೋ ಬ್ರಹ್ಮಾ ದ್ವಿಬಾಹುರಪರೋ ಹರಿ: |
ಅಭಾಲಲೋಚನ: ಶಂಭುಃ ಭಗವಾನ್ ಬಾದರಾಯಣ: ||

ಅರ್ಥ : ಭಗವಾನ ವೇದವ್ಯಾಸರಿಗೆ ನಾಲ್ಕು ಮುಖಗಳಿಲ್ಲದಿರುವಾಗಲೂ ಬ್ರಹ್ಮದೇವರ ಸ್ವರೂಪವಾಗಿದ್ದಾರೆ. ಎರಡು ಕೈಗಳನ್ನು ಹೊಂದಿರುವ ಭಗವಾನ ವಿಷ್ಣುವಾಗಿದ್ದಾರೆ ಮತ್ತು ಹಣೆಯಲ್ಲಿ ಮೂರನೇ ನೇತ್ರವಿಲ್ಲದಿರುವಾಗಲೂ ಶಿವಸ್ವರೂಪರಾಗಿದ್ದಾರೆ.

ಮುನಿಂ ಸ್ನಿಗ್ಧಾಮಂಬುಜಾಭಾಸಂ ವೇದವ್ಯಾಸಮಕಲ್ಮಷಮ್ |
ವೇದವ್ಯಾಸಂ ಸರಸ್ವತ್ಯಾವಾಸಂ ವ್ಯಾಸಂ ನಮಾಮ್ಯಹಮ್ ||

ಅರ್ಥ : ಕಣ್ಣುಗಳನ್ನು ತಣಿಸುವ ಸುಂದರವಾದ ಕಮಲದ ರೀತಿಯಲ್ಲಿ ಕಳಂಕರಹಿತ(ಕಳಂಕವಿಲ್ಲದ) ಸರಸ್ವತಿಯ ತವರುಮನೆಯಾಗಿರುವ ಭಗವಾನ ವೇದವ್ಯಾಸರಿಗೆ ನಾನು ನಮಸ್ಕರಿಸುತ್ತೇನೆ.

ಋಷಿರ್ನಾಮ್ನಾಂ ಸಹಸ್ರಸ್ಯ ವೇದವ್ಯಾಸೋ ಮಹಾಮುನಿಃ |
ಅರ್ಥ : ಸಹಸ್ರಾರು ಋಷಿಗಳ ಮಧ್ಯದಲ್ಲಿ ವೇದವ್ಯಾಸರಿಗೆ ಮಹಾ ಮುನಿಯ ಸ್ಥಾನವಿದೆ.

ವ್ಯಾಸೋಚ್ಛಿಷ್ಟಂ ಜಗತ್ಸರ್ವಮ್ |
ಅರ್ಥ : ಸಂಪೂರ್ಣ ಜಗತ್ತಿನ ಆಧ್ಯಾತ್ಮ ವಿಷಯದ ಜ್ಞಾನವನ್ನು ಹೊಂದಿರುವುದೇ ವ್ಯಾಸ ಮುನಿಗಳ ವೈಶಿಷ್ಟ್ಯವಾಗಿದೆ.

ವೇದವ್ಯಾಸಂ ಸ್ವಾತ್ಮರೂಪಂ ಸತ್ಯಸಂಧಂ ಪರಾಯಣಮ್ |
ಶಾಂತಂ ಜಿತೇಂದ್ರಿಯಕ್ರೋಧಂ ಸಶಿಷ್ಯಂ ಪ್ರಣಮಾಮ್ಯಹಮ್ ||

ಅರ್ಥ : ಆತ್ಮಸ್ವರೂಪ, ಸತ್ಯಶೀಲ, ತತ್ಪರತೆ, ಶಾಂತ ಹಾಗೂ ಇಂದ್ರಿಯಗಳನ್ನು ನಿಗ್ರಹಿಸಿರುವ ಮತ್ತು ಪ್ರೇಮ ಸ್ವರೂಪಗರಾಗಿರುವ ವ್ಯಾಸರಿಗೆ ಮತ್ತು ಅವರ ಶಿಷ್ಯರಿಗೆ ನಾನು ವಂದನೆಗಳನ್ನು ಸಲ್ಲಿಸುತ್ತೇನೆ.

ಪಾರಾಶರ್ಯಂ ಪರಮಪುರುಷಂ ವಿಶ್ವದೇವೈಕಯೋನಿಂ
ವಿದ್ಯಾವಂತಂ ವಿಪುಲಮತಿದಂ ವೇದವೇದಾಙ್ಗವೇದ್ಯಮ್ |
ಶಶ್ವಚ್ಛಾತಾಂ ಶಮಿತವಿಷಯಂ ಶುದ್ಧತೇಜೋ ವಿಶಾಲಂ
ವೇದವ್ಯಾಸಂ ವಿಗತಶಮಲಂ ಸರ್ವದಾಹಂ ನಮಾಮಿ ||

ಅರ್ಥ : ಪರಾಶರ ಮುನಿಗಳ ಪುತ್ರ, ಪರಮ ಪುರುಷ, ವಿಶ್ವ ಮತ್ತು ದೇವರುಗಳ ಜ್ಞಾನದ ಉತ್ಪತ್ತಿ ಸ್ಥಾನ, ವಿದ್ಯೆ ಮತ್ತು ವಿಫುಲ ಬುದ್ಧಿಯನ್ನು ಹೊಂದಿರುವ, ವೇದ ಮತ್ತು ವೇದಾಂಗವನ್ನು ತಿಳಿದಿರುವ, ಚಿರಂಜೀವಿ, ಶಾಂತ ಹಾಗೂ ವಿಷಯಗಳ ಮೇಲೆ ವಿಜಯವನ್ನು ಹೊಂದಿರುವ, ಶುದ್ಧವಾದ ತೇಜ ಪ್ರಕಾಶಿಸುತ್ತಿರುವ, ಜ್ಞಾನವಂತನಾಗಿರುವ ಭಗವಾನ ವೇದವ್ಯಾಸರಿಗೆ ನಾನು ಸದಾ ಸರ್ವದಾ ಶರಣಾಗಿದ್ದೇನೆ.

ಶ್ರವಣಾಞ್ಜಲಿಪುಟಪೇಯಂ ವಿರಚಿತವಾಂಭಾರತಾಖ್ಯಮಮೃತಂ ಯಃ |
ತಮಹಮರಾಗಮಕೃಷ್ಣಂ ಕೃಷ್ಣದ್ವೈಪಾಯನಂ ವಂದೇ ||

ಅರ್ಥ : ಯಾರು ಕಿವಿಗಳನ್ನು ಬೊಗಸೆಯನ್ನಾಗಿ ಮಾಡಿಕೊಂಡು ಸ್ವೀಕರಿಸುವಂತಹ 'ಮಹಾಭಾರತ' ಹೆಸರಿನ ಅಮೃತವನ್ನು ನಿರ್ಮಿಸಿದರೋ ಆ ಅನಾಸಕ್ತ, ನಿಷ್ಕಳಂಕ ಕೃಷ್ಣದ್ವೈಪಾಯನ ವ್ಯಾಸರಿಗೆ ನಾನು ನಮಸ್ಕರಿಸುತ್ತೇನೆ.

Leave a Comment