ಏಕಶ್ಲೋಕಿಮಹಾಭಾರತಮ್ |

ಆದೌ ಪಾಂಡವಧಾರ್ತರಾಷ್ಟ್ರಜನನಂ ಲಾಕ್ಷಾಗೃಹೇ ದಾಹನಂ

ದ್ಯೂತೇ ಶ್ರೀಹರಣಂ ವನೇ ವಿಹರಣಂ ಮತ್ಸ್ಯಾಲಯೇ ವರ್ಧನಮ್ |

ಲೀಲಾಗೋಗ್ರಹಣಂ ರಣೇ ವಿತರಣಂ ಸಂಧಿಕ್ರಿಯಾಜೃಮ್ಭಣಂ

ಭೀಷ್ಮದ್ರೋಣಸುಯೋಧನಾದಿಮಥನಂ ಏತನ್ಮಹಾಭಾರತಮ್ ||

ಅರ್ಥ : ಪಾಂಡು ಮತ್ತು ಧೃತರಾಷ್ಟ್ರರ ಮಕ್ಕಳ ಜನ್ಮ (ದೊಂದಿಗೆ ಪ್ರಾರಂಭವಾಗಿ), (ಪಾಂಡವರು ಇದ್ದ) ಅರಗಿನಮನೆಯನ್ನು ಸುಡುವುದು, ಕಪಟದಿಂದ ರಾಜ್ಯವನ್ನು ಕಬಳಿಸುವುದು, (ಪಾಂಡವರು) ವನವಾಸಕ್ಕೆ ಹೋಗುವುದು, ಮತ್ಸ್ಯ ರಾಜ್ಯದಲ್ಲಿ ವಾಸ, ಗೋವುಗಳ ಅಪಹರಣ ಮತ್ತು ಯುದ್ಧ, (ಭಗವಾನ್ ಕೃಷ್ಣನಿಂದ ಪಾಂಡವ-ಕೌರವರ) ಸಂಧಾನಕ್ಕೆ ವಿಫಲ ಯತ್ನ, ಭೀಷ್ಮ ದ್ರೋಣಾಚಾರ್ಯ ದುರ್ಯೋಧನಾದಿಗಳ ಮೃತ್ಯು, ಇದುವೇ ಮಹಾಭಾರತದ ಸಾರಾಂಶ.

Leave a Comment