ಕರದರ್ಶನ

ಕರದರ್ಶನದವಿಧಾನ

ಎರಡೂ ಕೈಗಳ ಬೊಗಸೆಯನ್ನು ಮಾಡಿ, ಅದರಲ್ಲಿ ಮನಸ್ಸು ಏಕಾಗ್ರಗೊಳಿಸಿ, ಮುಂದಿನ ಶ್ಲೋಕವನ್ನು ಹೇಳಬೇಕು.

ಕರಾಗ್ರೇ ವಸತೇ ಲಕ್ಷ್ಮೀಃ ಕರಮಧ್ಯೇ ಸರಸ್ವತೀ |
ಕರಮೂಲೇ
ಸ್ಥಿತೇ ಗೌರೀ ಪ್ರಭಾತೇ ಕರದರ್ಶನಮ್ ||

ಅರ್ಥ : ಕೈಗಳ ಆಗ್ರ (ಮುಂಭಾಗ) ಭಾಗದಲ್ಲಿ ಲಕ್ಷ್ಮೀಯು ವಾಸಿಸುತ್ತಾಳೆ. ಕೈಗಳ ಮಧ್ಯಭಾಗದಲ್ಲಿ ಸರಸ್ವತೀಯು ವಾಸಿಸುತ್ತಾಳೆ ಮತ್ತು ಮಣಿಗಂಟಿನಲ್ಲಿ ಗೌರಿಯ ವಾಸವಿದೆ; ಆದುದರಿಂದಲೇ ಪ್ರಾತಃಕಾಲದಲ್ಲಿ ಎದ್ದು ಮೊದಲಿಗೆ ಕೈಗಳ (ಅಂದರೆ ದೇವತೆಗಳ) ದರ್ಶನವನ್ನು ಪಡೆಯಬೇಕು.

(ಅಪವಾದ : ಕರಮೂಲೇ ತು ಗೋವಿಂದಃ / ಬ್ರಹ್ಮಃ )

ಪ್ರಾತಃಕಾಲದಲ್ಲಿ ಎದ್ದು ಕರದರ್ಶನ ಅಂದರೆ ಕೈಗಳನ್ನು ನೋಡಿ 'ಕರಾಗ್ರೇ ವಸತೇಲಕ್ಷ್ಮೀಃ…' ಶ್ಲೋಕವನ್ನು ಪಠಿಸುವುದು ಎಂದರೆ ತನ್ನಲ್ಲಿರುವ ಈಶ್ವರನ ದರ್ಶನ ಪಡೆದಂತೆ : ಹಿಂದೂ ಧರ್ಮವು 'ಅಯಂ ಆತ್ಮಾ ಬ್ರಹ್ಮ |' (ಅಂದರೆ 'ಈ ಆತ್ಮವೇ ಬ್ರಹ್ಮ'ವಾಗಿದೆ) ಎಂಬುವುದನ್ನು ಕಲಿಸುತ್ತದೆ. 'ಕರಾಗ್ರೇ ವಸತೇಲಕ್ಷ್ಮೀಃ… ಶ್ಲೋಕವು ಇದ್ದಕ್ಕಿರುವ ಇನ್ನೊಂದು ಉದಾಹರಣೆ. ಪ್ರಾತಃಕಾಲದಲ್ಲಿ ಎದ್ದು ಈ ಶ್ಲೋಕವನ್ನು ಪಠಿಸುವುದು ತನ್ನಲ್ಲಿರುವ ಈಶ್ವರನ ದರ್ಶನವನ್ನು ಪಡೆದಂತೆ !