ಸತ್ಸೇವೆಯ ಮಹತ್ವ

ಪ್ರಭು ಶ್ರೀರಾಮನು ರಾವಣನ ಕೈಯಿಂದ ಸೀತಾದೇವಿಯನ್ನು ಬಿಡಿಸಲು ಲಂಕೆಗೆ ಹೋದರು. ಆದರೆ ದಾರಿಯಲ್ಲಿ ಸಮುದ್ರ ಇತ್ತು. ಸಮುದ್ರವನ್ನು ದಾಟಿ ಹೇಗೆ ಲಂಕೆಗೆ ಹೋಗಬಹುದು? ಆಗ ವಾನರ ಸೇನೆ ಮತ್ತು ಹನುಮಂತನು ತೀರ್ಮಾನ ಮಾಡಿದರು, ಸಮುದ್ರದಲ್ಲಿ ಕಲ್ಲನ್ನು ಹಾಕಿ ಸೇತುವೆಯನ್ನು ಕಟ್ಟುವುದು ಮತ್ತು ಅದರ ಮೇಲೆ ನಡೆದು ಹೋಗುವುದು. ಏನು ಆಶ್ಚರ್ಯ! ಅವರು ಕಲ್ಲು ಹಾಕಿದ ತಕ್ಷಣ ಕಲ್ಲು ನೀರಿನಲ್ಲಿ ತೇಲುತ್ತಿದ್ದವು ಮತ್ತು ಕೆಲವು ದಿನಗಳಲ್ಲೇ ಸೇತುವೆಯು ತಯಾರಾಯಿತು.

ಯಾವಾಗ ಎಲ್ಲಾ ವಾನರರು ಸೇತುವೆಯನ್ನು ಕಟ್ಟುತ್ತಿದ್ದರು, ಅವರನ್ನು ಒಂದು ಅಳಿಲು ನೋಡಿತು. ಅದು ವಿಚಾರ ಮಾಡಿತು, "ಶ್ರೀರಾಮನು ಸಾಕ್ಷಾತ್ ದೇವರಿದ್ದಾರೆ. ಶ್ರೀರಾಮನ ಸೇವೆ ಎಂದು ಈ ವಾನರರು ಸೇತುವೆಯನ್ನು ಕಟ್ಟುತ್ತಿದ್ದಾರೆ. ಹಾಗಿದ್ದರೆ ನಾನು ಕೂಡ ಅವರಿಗೆ ಸಹಾಯ ಮಾಡುವೆನು. ಇದು ಕೂಡ ಅವರ ಸೇವೆಯಾಗಿದೆ." ಅದು ಕೂಡಲೆ ಒಂದು ಸಣ್ಣ ಕಲ್ಲನ್ನು ತನ್ನ ಕೈಯಲ್ಲಿ ಹಿಡಿದು ಸಮುದ್ರದಲ್ಲಿ ಎಸೆಯಲು ಪ್ರಾರಂಭಿಸಿತು. ಇದನ್ನು ನೋಡಿ ವಾನರರಿಗೆ ಆಶ್ಚರ್ಯ ಅನಿಸಿತು. ಅವರು ಕೇಳಿದರು, "ಏ ಅಳಿಲೇ, ನೀನು ಕಣ ಕಣಗಳನ್ನು ತಂದು ಹಾಕುತ್ತಿದ್ದೀಯಾ, ಅದರಿಂದ ಸೇತು ಕಟ್ಟಲು ಆಗುತ್ತದೆಯಾ? ಆಗ ಅಳಿಲು ಹೇಳಿತು," ವಾನರಣ್ಣ ನಾನು ನಿಮ್ಮ ರೀತಿ ದೊಡ್ಡ ದೊಡ್ಡ ಕಲ್ಲು ತರಲು ಸಾಧ್ಯವಿಲ್ಲ. ನಿಮ್ಮ ರೀತಿ ಸೇತುವೆ ಕಟ್ಟಲು ಸಾಧ್ಯವಿಲ್ಲ. ಹಾಗಾಗಿ ನಾನು ಸಣ್ಣ ಕಲ್ಲನ್ನು ಹಾಕುತ್ತಿದ್ದೇನೆ. ನನ್ನ ಕಡೆಯಿಂದ ಸೇವೆಯು ಆಗಲಿ, ಚಿಕ್ಕದಾದರೂ ಪರವಾಗಿಲ್ಲ." ಹೀಗೆ ಹೇಳಿದ ಅಳಿಲು ಮತ್ತೆ ಮರಳನ್ನು ತರಲು ಹೋಯಿತು. ಹೀಗೆ ತುಂಬಾ ಸಲ ಮಾಡಿದ ನಂತರ ಅಳಿಲಿಗೆ ಸುಸ್ತಾಯಿತು. ಸುಸ್ತಾದರೂ ನಿಲ್ಲದ ಅಳಿಲು ಸೇವೆಯನ್ನು ಮುಂದುವರೆಸಿತು. ಅಳಿಲು ಮನಸ್ಸಿನಲ್ಲಿ ಏನು ವಿಚಾರ ಮಾಡುತ್ತಿದ್ದಿತು ಗೊತ್ತಿದೆಯಾ? ನನ್ನ ದೇಹದಲ್ಲಿ ಎಲ್ಲಿವರೆಗೆ ಸ್ವಲ್ಪವಾದರೂ ಶಕ್ತಿ ಇದೆಯೋ ಅಲ್ಲಿಯ ವರೆಗೂ ನಾನು ಶ್ರೀರಾಮನ ಸೇವೆ ಮಾಡುವೆನು. ಹೀಗೆ ಹೇಳಿ ಮತ್ತೆ ಸೇವೆ ಮಾಡಲು ಅಳಿಲು ಹೋಗುತ್ತಿರುವಾಗ ಅಳಿಲನ್ನು ಪ್ರೀತಿಯಿಂದ ಒಬ್ಬರು ನೋಡಿದರು, ಯಾರು ತಿಳಿಯಿತೇ, ಪ್ರತ್ಯಕ್ಷ ಪ್ರಭು ಶ್ರೀರಾಮನೇ ಅಳಿಲನ್ನು ಪ್ರಿತಿಯಿಂದ ನೋಡಿದರು ಮತ್ತು ಅಳಿಲನ್ನು ಕೈಯಲ್ಲಿ ಎತ್ತಿಕೊಂಡರು. ಶ್ರೀರಾಮನು ಅವರಿಗೆ ಹೇಳಿದರು, "ಅಳಿಲೇ ನೀನು ತುಂಬಾ ಚಿಕ್ಕವಳಿದ್ದೀಯಾ ಆದರೂ ತುಂಬಾ ಒಳ್ಳೆ ಸೇವೆಯನ್ನು ಮಾಡಿದ್ದೀಯ. ನಾನು ಪ್ರಸನ್ನನಾಗಿದ್ದೇನೆ. ಶ್ರೀರಾಮನು ತನ್ನ ಬಲಗೈಯ ಮಧ್ಯದ ಮೂರು ಬೆರಳನ್ನು ಅಳಿಲಿನ ಬೆನ್ನಿನ ಮೇಲೆ ಸವರಿದರು. ಹೀಗಾಗಿ ಅಳಿಲಿನ ವಂಶಸ್ಥರ ಮೇಲೆಲ್ಲ ಪ್ರಭು ಶ್ರೀರಾಮನ ಬೆರಳಿನ ಗುರುತಿರುತ್ತದೆ. ಶ್ರೀರಾಮನು ಹೇಳಿದರು "ಯಾರ‍್ಯಾರು ನಿನ್ನ ರೀತಿ ಸೇವೆ ಮಾಡುತ್ತಾರೆಯೋ ಅವರ ಮೇಲೆ ನಾನು ಪಸನ್ನನಾಗುತ್ತೇನೆ. ಅವರಿಗೆ ಜೀವನದಲ್ಲಿ ಯಾವುದೇ ಕಷ್ಟವು ಬರದಂತೆ ನಾನು ನೋಡುತ್ತೇನೆ. ತಿಳಿಯಿತಾ, ನಾವು ದೇವರ ಸೇವೆ ಮಾಡಿದರೆ ನಮಗೆ ಎಂದೂ ಕಷ್ಟವಾಗುವುದಿಲ್ಲ. ಹಾಗಿದ್ದರೆ ನಮಗೆ ದೇವರ ಕೃಪೆ ಎಂದು ಆಗುವುದು? ಅಳಿಲಿಗೆ ದೇವರ ಕೃಪೆಯಾಕಾಯಿತು?

ಮಕ್ಕಳೇ, ಸೇವೆ ಎಂದರೆ ಏನು? ಸೇವೆ ಎಂದರೆ ದೇವರಿಗೆ ಇಷ್ಟವಾಗುವಂತೆ ಸೇವೆ ಮಾಡುವುದು. ದೇವರ ಸೇವೆಯಲ್ಲಿ ಸಹಭಾಗಿಯಾಗುವುದೆಂದರೆ ದೇವರಿಗೆ ಇಷ್ಟವಾಗುವ ಸೇವೆ ಮಾಡುವುದು. ಹೇಗೆ ನಮ್ಮ ಅಮ್ಮ ನಮ್ಮನ್ನು ಪ್ರೀತಿಸುತ್ತಾರೋ ಹಾಗೆ ದೇವರೂ ಸಹ ನಮ್ಮನ್ನು ಪ್ರೀತಿಸುತ್ತಾರೆ.