ಪಂಢರಪುರ

ಭಕ್ತ ಪುಂಡಲಿಕನ ಆಗ್ರಹದ ಮೇರೆಗೆ,ಅವನು ಬೀಸಿದ ಇಟ್ಟಿಗೆಯ ಮೇಲೆ ಆ ವಿಠಲನು ಸೊಂಟದ ಮೇಲೆ ಕೈಗಳನ್ನಿಟ್ಟು ನಿಂತಿರುವನು.ಭಾಗವತ ಧರ್ಮದ ಪತಾಕೆಯು ಪಂಢರಪುರದ ವಿಠಲನಿಗಾಗಿ ಅನೇಕ ವರ್ಷಗಳಿಂದ ಹಾರಾಡುತ್ತಿದೆ. ಪ್ರತಿಯೊಬ್ಬ ಸಾಮಾನ್ಯ ವ್ಯಕ್ತಿ, ಪ್ರಾಮಾಣಿಕ ಹಾಗೂ ಸಜ್ಜನ ಜೀವದ ಮೇಲೆ ಈ ವಿಠಲನು ತನ್ನ ಮಾಯಾಜಾಲವನ್ನು ಹಾಕಿರುವನು. ಅವನಿಗಾಗಿ ದೂರ ದೂರದಿಂದ ಜನರು ಪ್ರತಿವರ್ಷ ಕಾಲ್ನಡಿಗೆಯಿಂದ ಬರುತ್ತಾರೆ. ಈ ಪಂಢರಿಯ ದರಬಾರಿನ ವೈಶಿಷ್ಟ್ಯವೆನೆಂದು ತಿಳಿದುಕೊಳ್ಳೋಣ.

ವಿಠಲನ ದರ್ಶನ ಪಡೆಯುವ ಮುನ್ನ ಪುಂಡಲಿಕನ ಸಮಾಧಿಯ ದರ್ಶನ ಪಡೆಯಬೇಕು ಎಂಬುದು ಪರಂಪರೆ. ಪಂಢರಪುರದಲ್ಲಿ ಭೀಮಾ ನದಿಯ ಪ್ರವಾಹವು ಅರ್ಧಚಂದ್ರಾಕೃತಿಯಲ್ಲಿದೆ ಎಂದು ಆ ನದಿಯನ್ನು ಚಂದ್ರಭಾಗಾನದಿ ಎಂದು ಕರೆಯುತ್ತಾರೆ. ನದಿಯ ದಡದಲ್ಲಿಯೇ ಪುಂಡಲಿಕನ ಸಮಾಧಿ ಇದೆ. ಇಲ್ಲಿಂದ ಹತ್ತಿರದಲ್ಲಿಯೇ ವಿಠಲನ ದೇವಸ್ಥಾನವಿದೆ. ದೇವಸ್ಥಾನವು ಪೂರ್ವಾಭಿಮುಖವಾಗಿದ್ದು ಅದು ಸುತ್ತಲೂ ಒಟ್ಟು ಎಂಟು ಬಾಗಿಲುಗಳಿರುವಗೋಡೆಗಳಿವೆ. ಪೂರ್ವದಿಕ್ಕಿಗಿರುವ ಮಹಾದ್ವಾರಕ್ಕೆ ನಾಮದೇವನ ಬಾಗಿಲು ಎಂದುಕರೆಯುತ್ತಾರೆ. ಅಲ್ಲಿ ಒಳಗೆ ಹೋಗಲು ರಸ್ತೆಯಿಂದ ಹನ್ನೆರಡು ಮೆಟ್ಟಿಲುಗಳಿವೆ. ಅದರ ಮೊದಲ ಮೆಟ್ಟಿಲಿಗೆ ನಾಮದೇವ ಮೆಟ್ಟಿಲು ಎಂದು ಕರೆಯುತ್ತಿದ್ದು, ಜನರು ಈ ಮೆಟ್ಟಿಲ ಮೇಲೆ ಕಾಲಿಡದೇ ಮುಂದೆ ಹೋಗುತ್ತಾರೆ. ಈ ಮೆಟ್ಟಿಲ ಎದುರಿನಲ್ಲಿಯೇ ಸಂತ ಚೋಖಾಮೇಳಾ ಇವರ ಸಮಾಧಿಯು ಬಲಗಡೆಯ ಮನೆಯ ತುದಿಯಲ್ಲಿದೆ.

ಒಳಗಡೆ ಹೋಗುವಾಗ ಚಿಕ್ಕದಾದ ಮುಕ್ತಿ ಮಂಟಪವಿದೆ. ಅಲ್ಲಿ ಎಡಗಡೆಯಲ್ಲಿ ಗಣಪತಿ ಹಾಗೂ ಮಹಾದ್ವಾರದ ಮಹಡಿಯ ಮೇಲೆ ನಗಾರೆಯ ಕೋಣೆಯಿದೆ. ಇಲ್ಲಿ ಗರುಡ ಮತ್ತು ಸಮರ್ಥ ರಾಮದಾಸರು ಸ್ಥಾಪಿಸಿದ ಹನುಮಂತನ ದೇವಸ್ಥಾನವಿದೆ. ಇದರ ನಂತರಕಲ್ಲಿನ ಮಂಟಪದ ಗೋಡೆಯಲ್ಲಿ ಮೂರು ಬಾಗಿಲುಗಳಿವೆ. ಮಧ್ಯದ ಬಾಗಿಲಿನ ಎರಡೂ ಬದಿಯಲ್ಲಿ ಜಯ ವಿಜಯರೆಂಬ ದ್ವಾರಪಾಲರು ಹಾಗೂ ಗಣೇಶ ಮತ್ತು ಸರಸ್ವತಿ ಇರುವರು. ಮಧ್ಯದ ಬಾಗಿಲಿನಿಂದ ಹದಿನಾರು ಕಂಬಗಳ ಮಂಟಪಕ್ಕೆ ತಲುಪುತ್ತೇವೆ. ಅಲ್ಲಿ ಚಪ್ಪರದಲ್ಲಿ ದಶಾವತಾರದ ಹಾಗೂ ಕೃಷ್ಣಲೀಲೆಯ ಚಿತ್ರಗಳಿವೆ.

ಹತ್ತಿರದಲ್ಲಿಯೇ ಕಾಶೀ ವಿಶ್ವನಾಥ, ರಾಮ-ಲಕ್ಷ್ಮಣ, ಕಾಳಭೈರವ, ದತ್ತಾತ್ರೇಯ, ನರಸಿಂಹ ಇವರ ಮೂರ್ತಿಗಳಿವೆ. ಇನ್ನೊಂದು ಕಂಬ ಚಿನ್ನ-ಬೆಳ್ಳಿಗಳಿಂದ ಶೃಂಗರಿಸಲಾಗಿದ್ದುಅದರ ಮೇಲೆ ಚಿಕ್ಕದಾದ ವಿಷ್ಣುಮೂರ್ತಿಯಿದೆ. ಇಲ್ಲಿ ಮೊದಲು ಗರುಡ ಸ್ತಂಭವಿತ್ತು ಎಂದು ಹೇಳುತ್ತಾರೆ. ಮುಂದೆ ನಾಲ್ಕು ಕಂಬಗಳ ಮಂಟಪವಿದೆ. ಉತ್ತರಕ್ಕೆ ದೇವರ ಮಲಗುವ ಕೋಣೆಯಿದೆ. ನಂತರದ ಜಾಗವು ‘ಕಮಾನ’ ಹೆಸರಿನಲ್ಲಿದ್ದು ಅಲ್ಲಿಂದ ಮುಂದೆ ಗರ್ಭಗುಡಿಯಿದೆ. ಅಲ್ಲಿ ಸಿಂಹಾಸನದಲ್ಲಿ ಇಟ್ಟಿಗೆಯ ಮೇಲೆಪಾಂಡುರಂಗನಕಲ್ಲಿನಮೂರ್ತಿ ಇದ್ದು ಅದರ ಎತ್ತರವು ಒಂದು ಮೀಟರಿಗಿಂತ ತುಸು ಹೆಚ್ಚು ಇದೆ.

ಮಿತ್ರರೇ, ಭಕ್ತನು ನೀಡಿದ ಇಟ್ಟಿಗೆಯನ್ನು ಕೂಡ ಸ್ವೀಕರಿಸಿ ಪಂಢರಪುರದಲ್ಲಿ ನೆಲಿಸಿದ ಶ್ರೀ ವಿಠಲ ದೇವರನ್ನು ನಮಿಸೋಣ!