ತಕ್ಷಶಿಲಾ ವಿದ್ಯಾಪೀಠ

ತಕ್ಷಶಿಲಾ ವಿದ್ಯಾಪೀಠ


’ಭಾರತದಲ್ಲಿ ಪ್ರಾಚೀನಕಾಲದಿಂದಲೂ ಅತೀ ದೊಡ್ಡವಿದ್ಯಾಪೀಠ (ವಿಶ್ವವಿದ್ಯಾಲಯ)ಗಳು ಅಸ್ತಿತ್ವದಲ್ಲಿದ್ದವು. ಅವುಗಳಲ್ಲಿ ತಕ್ಷಶೀಲಾ, ನಾಲಂದಾ, ವಿಕ್ರಮಶಿಲಾ, ನಾಗಾರ್ಜುನ, ಕಾಶಿಪ್ರತಿಷ್ಠಾನ, ಉಜ್ಜಯಿನಿ, ವಲ್ಲಭಿ, ಕಾಂಚಿ, ಮದುರಾ, ಅಯೋಧ್ಯೆ​,ಈ ವಿದ್ಯಾಪೀಠಗಳು ಪ್ರಸಿದ್ಧವಾಗಿದ್ದವು. ಕಾಲಕ್ರಮಾನುಸಾರ ತಕ್ಷಶೀಲಾ ವಿಶ್ವವಿದ್ಯಾಲಯವು ಇವುಗಳಲ್ಲಿನ ಅತ್ಯಂತ ಪ್ರಾಚೀನ ವಿದ್ಯಾಪೀಠವಾಗಿದೆ. ತಕ್ಷಶಿಲಾ ಈ ಪಟ್ಟಣವು ಕ್ರಿಸ್ತಪೂರ್ವ ೮೦೦ ರಿಂದ ಕ್ರಿಸ್ತಪೂರ್ವ ೪೦೦ ರ ಕಾಲದಲ್ಲಿ ಇತ್ತೀಚಿನ ಪಾಕಿಸ್ತಾನದ ರಾವಲ್ಪಿಂಡಿ ಪಟ್ಟಣದ ಪಶ್ಚಿಮದಲ್ಲಿ ೨೦ ಮೈಲು ದೂರದಲ್ಲಿತ್ತು.ಅದು ಪ್ರಾಚೀನ ಗಂಧಾರದ, ಅಂದರೆ ಈಗಿನ ಅಫಗಾನಿಸ್ತಾನದ ರಾಜಧಾನಿಯಾಗಿತ್ತು. ಅರಾಯನಎಂಬ ಗ್ರೀಕ ಇತೀಹಾಸಕಾರನ ಪ್ರಕಾರ ಸಿಕಂದರನ ಕಾಲದಲ್ಲಿ ಈ ಪಟ್ಟಣವು ಹೆಚ್ಚು ವೈಭವಶಾಲಿಯಾಗಿತ್ತು.

ತಕ್ಷಶಿಲಾ : ಹಿಂದೂಗಳ ಹೃದಯವನ್ನು ಹೆಮ್ಮೆಯಿಂದ ಅರಳಿಸುವ ಪ್ರಾಚೀನ ಭಾರತೀಯ ವಿಶ್ವವಿದ್ಯಾಲಯಗಳಲ್ಲೊಂದು

ವಿದ್ಯಾಪೀಠದ ಪರಿಸರವು ಅತ್ಯಂತಭವ್ಯ ಹಾಗೂ ನಿಸರ್ಗರಮಣೀಯವಾಗಿತ್ತು. ವಿಶಾಲವಾದ ಕಟ್ಟಡದಲ್ಲಿ ೧೦ ಸಾವಿರ ವಿದ್ಯಾರ್ಥಿಗಳು ಶಿಕ್ಷಣ ಪಡೆದುಕೊಳ್ಳಬಹುದಾಷ್ಟು ವ್ಯವಸ್ಥೆಯಿತ್ತು. ಶೈಕ್ಷಣಿಕ ಕ್ಷೇತ್ರದಲ್ಲಿ ಅಂತರಾಷ್ಟ್ರೀಯ ಕೀರ್ತಿಯನ್ನು ಪಡೆದವಿದ್ಯಾಪೀಠದಲ್ಲಿಪ್ರವೇಶ ಪಡೆಯಲು ವಿದ್ಯಾರ್ಥಿಗಳ ಸಾಲು ನಿಂತಿರುತ್ತಿತ್ತು. ಈ ವಿದ್ಯಾರ್ಥಿಗಳಲ್ಲಿ ಭಾರತದ, ಹಾಗೆಯೇ ಪೂರ್ವದಲ್ಲಿ ಇಂಡೊನೆಶಿಯಾ, ವಿಎತ್ನಾಮ್​, ಚೀನಾ, ಜಪಾನ, ಪಶ್ಚಿಮದಲ್ಲಿ ಇರಾನ, ಇರಾಕನಿಂದ ಗ್ರೀಸ ಹಾಗೂ ರೋಮವರೆಗಿನ ವಿಧ್ಯಾರ್ಥಿಗಳು ಬರುತ್ತಿದ್ದರು ಹಾಗೂ ಇಲ್ಲಿರಿಂದ ೧೦ ವರ್ಷಗಳ ವರೆಗೆ ಇದ್ದು ಶಿಕ್ಷಣ ಪಡೆಯುತ್ತಿದ್ದರು. ಇಲ್ಲಿನ ಅಭ್ಯಾಸಕ್ರಮವು ೧೮ ಶಾಸ್ತ್ರ ಹಾಗೂ ೧೮ ಕಲೆಗಳನ್ನು ಒಳಗೊಂಡಿತ್ತು. ಧರ್ಮ ಹಾಗೂ ತತ್ತ್ವಜ್ಞಾನ ಇವುಗಳು ಆಗಿನ ಕಾಲದ ಮಹತ್ತ್ವದ ವಿಷಯಗಳಾಗಿದ್ದವು. ತಕ್ಷಶಿಲೆಯಲ್ಲಿ ನೀಡಲಾಗುತ್ತಿದ್ದ ಶಿಲ್ಪಕಲೆ ಹಾಗೂ ಸ್ಥಾಪತ್ಯಕಲೆಯ ಶಿಕ್ಷಣವು ಇಂದಿನ ಅಭಿಯಾಂತ್ರಿಕ ಮಹಾವಿದ್ಯಾಲಯದಲ್ಲಿ ನೀಡಲಾಗುತ್ತಿರುವ ವಿಷಯಗಳಿಗೆ ಹೊಂದಾಣಿಕೆಯಾಗುತ್ತಿದ್ದವು. ತಕ್ಷಶಿಲೆಗೆ ಇಷ್ಟೊಂದು ಮಹತ್ತ್ವದ ಸ್ಥಾನವು ಪ್ರಾಪ್ತಿಯಾಗಲು ಪ್ರಮುಖಕಾರಣವೆಂದರೆವಿದ್ಯಾಪೀಠಕ್ಕೆ ಲಭಿಸಿದ ವಿದ್ವಾಂಸರು, ಚಟುವಟಿಕೆಯುಳ್ಳ ಹಾಗೂ ಋಷಿಗಳಿಗೆ ಸಮಾನವಾದ ಶಿಕ್ಷಕರು. ಈ ಶಿಕ್ಷಕರನ್ನು ಆಗಿನ ಕಾಲದ ಸೀಸರೊ, ಪ್ಲೀನಿಯವರಂತಹ ಪಾಶ್ಚಾತ್ಯ ಪಂಡಿತರು ಪ್ರಶಂಶಿಸಿದ್ದಾರೆ. ಈ ವಿಶ್ವವಿದ್ಯಾಲಯಕ್ಕೆ ಒಳ್ಳೆಯ ಹೆಸರು ತರುವ ಕೆಲಸವನ್ನು ಚಾಣಕ್ಯ (ಉರ್ಫ) ಕೌಟಿಲ್ಯ ಇವರು ಮಾಡಿದ್ದರು.

ವಿದ್ಯಾಕೇಂದ್ರದ ಮೇಲೆ ಇರಾನ, ಗ್ರೀಕ, ಶಕ, ಕುಶಾಣ, ಹೂಣರಂತಹಪರಕೀಯರು ಸತತವಾಗಿ ಆಘಾತ ಮಾಡಿ ಕ್ರಿಸ್ತ ಶಕೆ ೫೦೦ ರ ಸುಮಾರುವಿಶ್ವವಿದ್ಯಾಲಯವನ್ನು ನಾಶಗೊಳಿಸಿದರು.

ಆಧಾರ​ : (ದೈನಿಕ ದೇಶೋನ್ನತಿ, ಅಕೋಲಾ, ೪. ೧೨. ೨೦೦೫)

ಮಕ್ಕಳೇ, ಈ ವಿದ್ಯಾಪೀಠಗಳ ಉಜ್ವಲ ಇತಿಹಾಸವನ್ನು ತಿಳಿಯಿರಿ! ನಿಮ್ಮ ಮನಸ್ಸಿನಲ್ಲಿರುವ ಪಾಶ್ಚಾತ್ಯ ಶಿಕ್ಷಣವೆಂದರೆ ಶ್ರೇಷ್ಟವಾದದ್ದು ಹಾಗೂ ಭಾರತೀಯ ಧರ್ಮಶಿಕ್ಷಣ ಇದು ಕೀಳುಮಟ್ಟದ್ದು ಎಂಬ ಕೀಳುಭಾವನೆಯನ್ನು ತೆಗೆದು ಹಾಕಿರಿ !

Leave a Comment