ಜಲಮಾಲಿನ್ಯ – ನದಿಗಳ ಮೇಲಿನ ಅತ್ಯಚಾರ !

ಪವಿತ್ರ ನದಿಗಳು ಚರಂಡಿಗೆ ರೂಪಾಂತರ

ದಿಲ್ಲಿಗೆ ತಾಗಿ ಹರಿಯುವ ಯಮುನಾ ನದಿಯ ಮೇಲೆ ಆ ನಗರವು ಅಕ್ಷರಶಃ ಅತ್ಯಾಚಾರವೆಸಗಿದೆ. ನಗರದ ಶೇ. ೫೭ ರಷ್ಟು ಅಂದರೆ ಪ್ರತಿದಿನ ಮುನ್ನೂರು ಕೋಟಿ ಲೀಟರ್ ಕೊಳಚೆ ನೀರನ್ನು ನದಿಯಲ್ಲಿ ಬಿಡಲಾಗುತ್ತದೆ. ಕೇವಲ ೧ ಗಂಟೆಯಲ್ಲಿ ೨೪ ಜನರು ಲೋಕನಾಯಕ ಸೇತುವೆ ಎಂಬ ಹೊಸ ಸೇತುವೆಯಿಂದ ನಿರ್ಮಾಲ್ಯದೊಂದಿಗೆ ಅನೇಕ ವಿಧದ ವಸ್ತುಗಳನ್ನು ನದಿಗೆ ಹಾಕಿದರೆ ಒಂದು ಪಂಚತಾರಾ ಉಪಹಾರಗ್ರಹದಲ್ಲಿ ತಂಗಿರುವ ಜನರ, ಅಂತೆಯೇ ಗ್ರಾಹಕರ ಎಂಜಲು ಅನ್ನವನ್ನು ಒಂದು ’ಪೆಜೋ’ ರಿಕ್ಷಾದ ಮೂಲಕ ಯಮುನಾ ನದಿಯಲ್ಲಿ ಹಾಕಲಾಗುತ್ತಿದೆ ಎಂದು ಸ್ಥಳೀಯರು ಹೇಳಿದ್ದಾರೆ.

ನದಿಯನ್ನು ಕೊಳಚೆಗುಂಡಿಯನ್ನಾಗಿಸುವ ಕೃತಘ್ನ ಜನತೆ !

ಯಮುನೆಯ ದಡದಲ್ಲಿ ಬಹುದೊಡ್ಡ ಪ್ರಮಾಣದಲ್ಲಿ ಪ್ಲಾಸ್ಟಿಕ ಕಸವು ದೊರೆಯುತ್ತದೆ. ನದಿಯ ದಡದಲ್ಲಿ ಸ್ವಲ್ಪ ದೂರದಲ್ಲಿ ಸಂಗ್ರಹಿಸಲಾದ ಕಸದ ರಾಶಿಯನ್ನು ನೋಡಿದಾಗ ಪ್ರತಿಯೊಬ್ಬರ ಕಣ್ಣು ಅಗಲವಾಗುತ್ತದೆ.ಅದರಲ್ಲಿ ನೀರಿನ ಬಾಟಲಿಗಳು ಹೆಚ್ಚಿನ ಪ್ರಮಾಣದಲ್ಲಿ ಕಂಡುಬಂದಿವೆ. ಇಲ್ಲಿ ಅವುಗಳನ್ನು ಮಾರಲು ಸಂಗ್ರಹಿಸುವ ದೊಡ್ಡ ಉದ್ಯೋಗ ನಡೆಯುತ್ತದೆ.

ಜಗತ್ಪ್ರಸಿದ್ಧ ವಸ್ತುಗಳ ವಿಡಂಬನೆ

ಆಗ್ರಾದ ತಾಜಮಹಲಿನ ಸಮೀಪದಿಂದ ಹರಿದು ಹೋಗುವ ಯಮುನೆಯ ನೊರೆಯುವ ಹಾಗೂ ಕಪ್ಪು, ದುರ್ಗಂಧ ಸೂಸುವ ನೀರು, ತಾಜನ ಹಿಂಬದಿಯಲ್ಲಿ ಸಂಗ್ರಹವಾದ ಕೊಳೆ ಹಾಗೂ ಕಸವು ವಾಂತಿ ಬರಿಸುವಂತಿತ್ತು. ಈ ವರ್ಷ ಯಮುನೆಯಲ್ಲಿ ಬಂದ ನೆರೆಯಿಂದ ತಾಜಮಹಲಿನ ಎದುರಿನ ಬದಿಯ ದಡದಲ್ಲಿ ಕಸವು ಸಿಕ್ಕಿಬಿತ್ತು. ಇದರಿಂದ ಅಲ್ಲಿನ ಪರಿಸರವು ವಿದ್ರೂಪಗೊಂಡಿತ್ತು. ಪ್ರವಾಸಿಗರು ಹೆಚ್ಚಿನ ಪ್ರಮಾಣದಲ್ಲಿ ಬರುವ ಸಮಯವಾಗಿದ್ದರೂ ಅದರ ಸ್ವಚ್ಛತೆಯಾಗಿರಲಿಲ್ಲ.

ಕಾನಪುರದಲ್ಲಿ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಗಂಗೆಯ ಮಾಲಿನ್ಯವಾಗುತ್ತದೆ.

– ಶ್ರೀ. ಶಿವಾಜೀ ನಿಕುಂಭ, ಜಳಗಾವ. (ದೈನಿಕ ಲೋಕಮತ, ೧.೪.೨೦೧೧)

Leave a Comment