ನಾಗರಪಂಚಮಿ


ಶ್ರಾವಣದಲ್ಲಿನ ಮೊದಲನೆಯ ಹಬ್ಬ ‘ನಾಗರಪಂಚಮಿ’! ಈ ದಿನ ಸ್ತ್ರೀಯರು ಉಪವಾಸ ಮಾಡುತ್ತಾರೆ. ಹೊಸ ಬಟ್ಟೆ, ಅಲಂಕಾರಗಳನ್ನು ಧರಿಸಿ ನಾಗದೇವತೆಯ ಪೂಜೆ ಮಾಡುತ್ತಾರೆ ಹಾಗೂ ಅವನಿಗೆ ಹಾಲಿನ ನೈವೇದ್ಯವನ್ನು ತೋರಿಸುತ್ತಾರೆ. ಈ ದಿನದಂದು ಏನಾದರೂ ಹೆಚ್ಚುವುದು, ಕತ್ತರಿಸುವುದು ನಿಶಿದ್ಧ. ನಾವು ಈ ಲೇಖನದ ಮೂಲಕ ಈ ಎಲ್ಲ ವಿಷಯಗಳ ಇತಿಹಾಸ ಹಾಗೂ ಶಾಸ್ತ್ರವನ್ನು ತಿಳಿದುಕೊಳ್ಳೋಣ.

ತಿಥಿ

ನಾಗರಪಂಚಮಿಯನ್ನು ಶ್ರಾವಣ ಶುದ್ಧ ಪಂಚಮಿಯಂದು ಆಚರಿಸಲಾಗುತ್ತದೆ.

ಇತಿಹಾಸ

ಅ. ಸರ್ಪಯಜ್ಞ ಮಾಡುವ ಜನಮೇಜಯ ರಾಜನನ್ನು ’ಆಸ್ತಿಕ’ ಎಂಬ ಋಷಿಗಳು ಪ್ರಸನ್ನಗೊಳಿಸಿದರು. ಜನಮೇಜಯನು ’ವರ ಕೇಳಿ’, ಎಂದು ಹೇಳಿದಾಗ ಅವರು ಸರ್ಪಯಜ್ಞವನ್ನು ನಿಲ್ಲಿಸುವಂತೆ ವರ ಬೇಡಿದರು. ಜನಮೇಜಯನು ಸರ್ಪಯಜ್ಞವನ್ನು ನಿಲ್ಲಿಸಿದ ದಿನವೇ ಪಂಚಮಿಯಾಗಿತ್ತು.

ಆ. ಶೇಷನಾಗನು ತನ್ನ ಹೆಡೆಯ ಮೇಲೆ ಪೃಥ್ವಿಯನ್ನು ಧರಿಸುತ್ತಾನೆ. ಪಾತಾಳದಲ್ಲಿರುವ ಶೇಷನಾಗನಿಗೆ ಸಾವಿರ ಹೆಡೆಗಳಿವೆ. ಅವನ ಪ್ರತಿಯೊಂದು ಹೆಡೆಯ ಮೇಲೆ ಒಂದು ವಜ್ರವಿದೆ. ಶ್ರೀವಿಷ್ಣುವಿನ ತಮೋಗುಣದಿಂದ ಅವನ ಉತ್ಪತ್ತಿಯಾಗಿದೆ. ಪ್ರತಿಯೊಂದು ಕಲ್ಪದ (ಕಾಲ ಚಕ್ರದ ಒಂದು ಮಾಪಕ) ಅಂತ್ಯಸಮಯಕ್ಕೆ ಶ್ರೀವಿಷ್ಣು ಮಹಾಸಾಗರದಲ್ಲಿ ಶೇಷಾಸನದ ಮೇಲೆ ಮಲಗುತ್ತಾನೆ. ತ್ರೇತಾಯುಗದಲ್ಲಿ ಶ್ರೀವಿಷ್ಣುವು ರಾಮನ ಅವತಾರ ತಾಳಿದಾಗ ಶೇಷನು ಲಕ್ಷ್ಮಣನ ಅವತಾರ ತಾಳಿದನು. ದ್ವಾಪರ ಮತ್ತು ಕಲಿಯುಗಗಳ ಸಂಧೀಕಾಲದಲ್ಲಿ ಕೃಷ್ಣನ ಅವತಾರವಾಯಿತು, ಆಗ ಶೇಷನು ಬಲರಾಮನಾದನು.

ಇ. ಶ್ರೀಕೃಷ್ಣನು ಶ್ರಾವಣ ಶುದ್ಧ ಪಂಚಮಿಯಂದು ಯಮುನೆಯಲ್ಲಿರುವ ಕಾಳಿಂಗನ ಮರ್ದನ ಮಾಡಿದ್ದನು.

ಈ. ಐದು ಯುಗಗಳ ಹಿಂದೆ ಸತ್ಯೇಶ್ವರಿ ಎಂಬ ಕನಿಷ್ಠ ದೇವಿ ಇದ್ದಳು. ಅವಳಿಗೆ ಸತ್ಯೇಶ್ವರ ಎಂಬ ಸಹೋದರನಿದ್ದನು. ನಾಗರಪಂಚಮಿಯ ಹಿಂದಿನ ದಿನ ಸತ್ಯೇಶ್ವರನ ಮೃತ್ಯುವಾಯಿತು. ಸತ್ಯೇಶ್ವರಿಗೆ ಆಕೆಯ ಸಹೋದರ ನಾಗರೂಪದಲ್ಲಿ ಕಾಣಿಸಿದನು. ಆಗ ಅವಳು ಆ ನಾಗರೂಪವನ್ನು ತನ್ನ ಸಹೋದರನೆಂದು ಸ್ವೀಕರಿಸಿದಳು. ಆಗ ನಾಗದೇವತೆಯು ಅವಳಿಗೆ ’ಯಾವ ಸಹೋದರಿಯು ನನ್ನನ್ನು ತನ್ನ ಸಹೋದರನೆಂದು ಪೂಜಿಸುವಳೋ, ನಾನು ಅವಳ ರಕ್ಷಣೆ ಮಾಡುತ್ತೇನೆ’ ಎಂದು ವಚನ ನೀಡಿತು. ಅದಕ್ಕಾಗಿಯೇ ಪ್ರತಿಯೊಬ್ಬ ಸ್ತ್ರೀಯು ಅಂದು ನಾಗನ ಪೂಜೆ ಮಾಡಿ ನಾಗರಪಂಚಮಿಯನ್ನು ಆಚರಿಸುತ್ತಾಳೆ.

ಉಪವಾಸದ ಮಹತ್ತ್ವ

ಸತ್ಯೇಶ್ವರಿಯ ಸಹೋದರನ ಮ್ರುತ್ಯುವಾದಾಗ ಸತ್ಯೇಶ್ವರಿಯು ಸಹೋದರನ ಶೋಕದಲ್ಲಿ ಅನ್ನ ಗ್ರಹಣ ಮಾಡಲಿಲ್ಲ. ಆದುದರಿಂದ ಅಂದು ಸ್ತ್ರೀಯರು ಸಹೋದರರ ಹೆಸರಿನಲ್ಲಿ ಉಪವಾಸ ಮಾಡುತ್ತಾರೆ, ’ಸಹೋದರನಿಗೆ ಚಿರಂತನ ಆಯುಷ್ಯ ಹಾಗೂ ಅನೇಕ ಆಯುಧಗಳ ಪ್ರಾಪ್ತಿಯಾಗಲಿ ಮತ್ತು ಅವನ ಪ್ರತಿಯೊಂದು ದುಃಖ ಹಾಗೂ ಸಂಕಟಗಳ ನಿವಾರಣೆಯಾಗಲಿ’ ಎಂಬುದು ಈ ಉಪವಾಸದ ಹಿಂದಿನ ಕಾರಣವಾಗಿದೆ. ನಾಗರಪಂಚಮಿಯ ಹಿಂದಿನ ದಿನ ಸಹೋದರಿಯು ತನ್ನ ಸಹೋದರನಿಗಾಗಿ ನಾಗ ದೇವತೆಗೆ ಪ್ರಾರ್ಥಿಸಿದರೆ ಅವಳ ಸಹೋದರನಿಗೆ ಶೇ.೭೫ರಷ್ಟು ಲಾಭವಾಗುತ್ತದೆ ಹಾಗೂ ಅವನ ರಕ್ಷಣೆಯಾಗುತ್ತದೆ.

ಹೊಸಬಟ್ಟೆ ಮತ್ತು ಅಲಂಕಾರ ಧರಿಸುವ ಕಾರಣ

ಸತ್ಯೇಶ್ವರಿಯ ಸಹೋದರ ಶೋಕವನ್ನು ಕಂಡು ನಾಗದೇವನು ಪ್ರಸನ್ನನಾದನು, ಅವನು ಆಕೆಯ ಶೋಕವನ್ನು ದೂರಗೊಳಿಸಿ ಆಕೆಯನ್ನು ಆನಂದಗೊಳಿಸಲು ಧರಿಸಲು ಹೊಸ ಬಟ್ಟೆಗಳನ್ನು ನೀಡಿದನು. ಅಂತೆಯೆ ವಿವಿಧ ಅಲಂಕಾರಗಳನ್ನು ಕೊಟ್ಟು ಆಕೆಯನ್ನು ಶೃಂಗರಿಸಿದನು. ಇದರಿಂದ ಸತ್ಯೇಶ್ವರನು ಸಮಾಧಾನಗೊಂಡನು. ಆದುದರಿಂದ ನಾಗರಪಂಚಮಿಯಂದು ಸ್ತ್ರೀಯರು ಹೊಸ ಬಟ್ಟೆ ಹಾಗೂ ಅಲಂಕಾರ ಧರಿಸುತ್ತಾರೆ.

ಮೆಹಂದಿ ಹಚ್ಚುವುದರ ಮಹತ್ತ್ವ

ಸತ್ಯೇಶ್ವರನು ನಾಗರಾಜನ ರೂಪದಲ್ಲಿ ಸತ್ಯೇಶ್ವರಿಯ ಎದುರಿನಲ್ಲಿ ನಿಂತನು. ’ಅವನು ಹೊರಟು ಹೋಗುವನು’, ಎಂದು ತಿಳಿದು ಅವಳು ಅವನಿಂದ, ಅಂದರೆ ನಾಗರಾಜನಿಂದ ಕೈಮೇಲೆ ವಚನ ಕೇಳಿಕೊಂಡಳು. ಆ ವಚನವನ್ನು ನೀಡುವಾಗ ಸತ್ಯೇಶ್ವರಿಯ ಕೈಮೇಲೆ ವಚನ ಚಿಹ್ನೆ ನಿರ್ಮಾಣವಾಯಿತು. ಆ ವಚನದ ಪ್ರತೀಕವೆಂದು ನಾಗರಪಂಚಮಿಯ ಹಿಂದಿನ ದಿನ ಸ್ತ್ರೀಯರು ತಮ್ಮ ಕೈಗಳ ಮೇಲೆ ಮೆಹಂದಿ ಬಿಡಿಸುತ್ತಾರೆ.

ಜೋಕಾಲಿ ಆಡುವ ಮಹತ್ತ್ವ

ಮಾರನೆಯ ದಿನ ಸತ್ಯೇಶ್ವರಿಗೆ ನಾಗರಾಜನು ಕಾಣಿಸಲಿಲ್ಲ. ಆಗ ಅವಳು ಕಾಡಿನಲ್ಲಿ ಅಲ್ಲಲ್ಲಿ ಓಡ ತೊಡಗಿದಳು ಮತ್ತು ಹುಡುಕುತ್ತಾ ಗಿಡ ಮರಗಳ ಟೊಂಗೆಗಳ ಮೇಲೆ ಹತ್ತಿ ನೋಡ ತೊಡಗಿದಳು. ಅನಂತರ ನಾಗರಾಜನು ಅವಳ ಎದುರಿನಲ್ಲಿ ಬಂದು ಸತ್ಯೇಶ್ವರನ ರೂಪದಲ್ಲಿ ಪ್ರಕಟವಾದನು. ಆಗ ಅವಳು ಆನಂದದಿಂದ ಗಿಡಗಳ ಟೊಂಗೆಗಳ ಮೇಲೆ ಜೋಕಾಲಿ ಆಡತೊಡಗಿದಳು. ಆದುದರಿಂದ ಸ್ತ್ರೀಯರು ಅಂದು ಜೋಕಾಲಿ ಆಡುತ್ತಾರೆ. ಆ ದಿನ ಜೋಕಾಲಿ ಆಡುವ ಉದ್ದೇಶವು ಹೀಗಿದೆ – ’ಜೋಕಾಲಿಯು ಹೇಗೆ ಮೇಲೆ ಹೋಗುವುದೋ, ಹಾಗೆ ಸಹೋದರನು ಪ್ರಗತಿಯ ಶಿಖರವನ್ನು ಮುಟ್ಟಲಿ ಹಾಗೂ ಜೋಕಾಲಿಯು ಕೆಳಗೆ ಬರುವಂತೆಯೇ ಸಹೋದರನ ಜೀವನದಲ್ಲಿ ಬಂದ ಎಲ್ಲ ಅಡಚಣೆ ಮತ್ತು ದುಃಖಗಳು ಕಡಿಮೆಯಾಗಲಿ’. ಮೇಲಿನ ಭಾವದಿಂದ ಸಹೋದರಿಯರು ಪ್ರತಿಯೊಂದು ವಿಚಾರ ಮತ್ತು ಕೃತಿ ಮಾಡಿದಾಗ ಅವರ ಸಹೋದರನ ಆಧ್ಯಾತ್ಮಿಕ ಮತ್ತು ವ್ಯವಹಾರಿಕ ಉನ್ನತಿಯಾಗುತ್ತದೆ.

ನಾಗರಪಂಚಮಿಯ ದಿನ ಮಾಡಬೇಕಾದ ಪ್ರಾರ್ಥನೆ

ನಾಗರಪಂಚಮಿಯಂದು ಸಹೋದರಿಯು ತನ್ನ ಸಹೋದರನ ಉನ್ನತಿಗಾಗಿ ಈಶ್ವರನಿಗೆ ಕಳಕಳಿಯಿಂದ ಮತ್ತು ಭಾವಪೂರ್ಣವಾಗಿ ಪ್ರಾರ್ಥನೆ ಮಾಡುವಳೋ, ಆ ಸಹೋದರಿಯ ಮೊರೆ ಈಶ್ವರನ ಚರಣಗಳಿಗೆ ತಲುಪುತ್ತದೆ. ಆದುದರಿಂದ ಪ್ರತಿಯೊಬ್ಬ ಯುವತಿಯು ಅಂದು ಪ್ರತಿಯೊಬ್ಬ ಯುವಕನಿಗೆ ಸದ್ಬುದ್ಧಿ, ಶಕ್ತಿ, ಮತ್ತು ಸಾಮರ್ಥ್ಯ ಸಿಗಲೆಂದು ಪ್ರಾರ್ಥಿಸಬೇಕು.

ಮಿತ್ರರೇ, ಇತ್ತೀಚೆಗೆ ‘ಅನೇಕ ಪ್ರಾಣಿಗಳ ಜಾತಿಗಳು ನಷ್ಟವಾಗುತ್ತಿವೆ. ಜನರು ಪ್ರಾಣಿಗಳನ್ನು ಅವೈಧ ಮಾರ್ಗದಿಂದ ಬೇಟೆಯಾಡುತ್ತಿದ್ದಾರೆ'ಎಂದುನಾವು ಓದುತ್ತಿದ್ದೇವೆ.ಇದಕ್ಕಾಗಿ ನಾಗರಪಂಚಮಿ ಪ್ರಯುಕ್ತವಾಗಿ ನಾವು ಎಲ್ಲರೂಪ್ರಾಣಿಗಳ ಬೇಟೆಯಾಡದೆಅವುಗಳ ಸಂವರ್ಧನೆ ಮಾಡಲು ಪ್ರಯತ್ನ ಮಾಡುವ ನಿಶ್ಚಯವನ್ನು ಮಾಡೋಣ.

(ಆಧಾರ : ಸನಾತನ-ನಿರ್ಮಿತ ಗ್ರಂಥ 'ಹಬ್ಬ, ಧಾರ್ಮಿಕ ಉತ್ಸವ ಮತ್ತು ವ್ರತಗಳು')

Leave a Comment