ವಟಸಾವಿತ್ರಿ ವ್ರತ (ವಟ ಪೌರ್ಣಿಮೆ)

ವಟಸಾವಿತ್ರಿಯ ವ್ರತ ಆರಂಭದ ಹಿನ್ನೆಲೆ

ಸಾವಿತ್ರಿಯು ಸತ್ಯವಾನನ ಪ್ರಾಣಹರಣದ ನಂತರ ಯಮಧರ್ಮನೊಂದಿಗೆ ಮೂರು ದಿನಗಳ ವರೆಗೆ ಶಾಸ್ತ್ರ ಚರ್ಚೆ ಮಾಡಿದಳು. ಆಗ ಪ್ರಸನ್ನನಾದ ಯಮಧರ್ಮನು ಸತ್ಯವಾನನನ್ನು ಪುನಃ ಜೀವಂತಗೊಳಿಸಿದನು. ಈ ಚರ್ಚೆಯು ವಟ ವೃಕ್ಷದ (ಆಲದಮರ) ಕೆಳಗೆ ಆದುದರಿಂದ ವಟವೃಕ್ಷಕ್ಕೆ ಸಾವಿತ್ರಿಯ ಹೆಸರನ್ನು ಜೋಡಿಸಲಾಯಿತು. ಸಾವಿತ್ರಿಯಂತೆಯೇ ತಮ್ಮ ಪತಿಯ ಆಯುಷ್ಯವು ಹೆಚ್ಚಾಗಲಿ ಎಂದು ಸ್ತ್ರೀಯರು ಈ ವ್ರತವನ್ನು ಆರಂಭಿಸಿದರು.

ವ್ರತದ ದೇವತೆ : ಸಾವಿತ್ರಿಯೊಂದಿಗೆ ಬ್ರಹ್ಮನು ಈ ವ್ರತದ ಮುಖ್ಯ ದೇವತೆಯಾಗಿದ್ದಾನೆ.

ಸ್ತ್ರೀಯರು ವಟಪೌರ್ಣಿಮೆಯಂದು ವಟವೃಕ್ಷದ ಪೂಜೆ ಮಾಡುವುದರ ಮಹತ್ವ

ವಟವೃಕ್ಷವು ಶಿವರೂಪಿಯಾಗಿದೆ. ಶಿವರೂಪಿ ವಟವೃಕ್ಷದ ಪೂಜೆ ಮಾಡುವುದು, ಅಂದರೆ ವಟವೃಕ್ಷದ ಮಾಧ್ಯಮದಿಂದ ಒಂದು ರೀತಿಯಲ್ಲಿ ಶಿವರೂಪಿ ಪತಿಯನ್ನೇ ಸ್ಮರಿಸಿ, ಅವನ ಆಯುಷ್ಯವನ್ನು ಹೆಚ್ಚಿಸಿ ಅವನಿಂದ ಆಯುಷ್ಯದಲ್ಲಿ ಬರುವ ಪ್ರತಿಯೊಂದು ಕರ್ಮಕ್ಕೆ ಜೊತೆ ಸಿಗಲೆಂದು ಈಶ್ವರನನ್ನು ಪೂಜಿಸುವುದಾಗಿದೆ. ಕರ್ಮಕ್ಕೆ ಶಿವನ ಜೊತೆಯಿದ್ದಲ್ಲಿ, ಶಕ್ತಿ ಮತ್ತು ಶಿವ ಇವರ ಸಂಯುಕ್ತ ಕ್ರಿಯೆಯಿಂದ ವ್ಯವಹಾರದಲ್ಲಿನ ಕರ್ಮವು ಸಾಧನೆಯಾಗಿ ಅದರಿಂದ ಜೀವಕ್ಕೆ ಲಾಭವಾಗುತ್ತದೆ.

ವಟವೃಕ್ಷಕ್ಕೆ ನೂಲನ್ನು ಸುತ್ತುವುದರ ಮಹತ್ವ

ವಟವೃಕ್ಷದ ಮೇಲಿನ ಬಿರುಕಿನಲ್ಲಿ ಇರುವ ಸುಪ್ತ ಲಹರಿಗಳು ಶಿವತತ್ತ್ವವನ್ನು ಆಕರ್ಷಿಸಿ ವಾಯುಮಂಡಲದಲ್ಲಿ ಪ್ರಕ್ಷೇಪಿಸುತ್ತವೆ. ವಟವೃಕ್ಷಕ್ಕೆ ಹತ್ತಿಯ ದಾರದಿಂದ ಸುತ್ತುವಾಗ ಜೀವದ ಭಾವಕ್ಕೆ ಅನುಗುಣವಾಗಿ ಮರದಲ್ಲಿನ ಶಿವತತ್ತ್ವಕ್ಕೆ ಸಂಬಂಧಿತ ಲಹರಿಗಳು ಕಾರ್ಯನಿರತವಾಗಿ ಆಕಾರ ಪಡೆಯುತ್ತವೆ. ಜೀವಕ್ಕೆ ಹತ್ತಿಯ ದಾರದಲ್ಲಿನ ಪೃಥ್ವಿ ಮತ್ತು ಜಲ ತತ್ತ್ವಗಳ ಸಂಯೋಗದಿಂದ ಈ ಲಹರಿಗಳನ್ನು ಗ್ರಹಿಸಲು ಸುಲಭವಾಗುತ್ತವೆ.

ವಟವೃಕ್ಷದ ಪೂಜೆಯಲ್ಲಿ ಐದು ಹಣ್ಣುಗಳನ್ನು ಏಕೆ ಅರ್ಪಿಸುತ್ತಾರೆ ?

ಹಣ್ಣುಗಳು ಮಧುರರಸದ, ಅಂದರೆ ಆಪ ತತ್ತ್ವದ ದರ್ಶಕವಾಗಿರುವುದರಿಂದ ಹಣ್ಣುಗಳ ಕಡೆಗೆ ಆಕರ್ಷಿತವಾಗುವ ಹಾಗೂ ಪ್ರಕ್ಷೇಪಿತವಾಗುವ ದೇವತೆಗಳ ಲಹರಿಗಳು ಕಡಿಮೆ ಸಮಯದಲ್ಲಿ ಜೀವದ ದೇಹದಲ್ಲಿನ ಕೋಶಗಳವರೆಗೆ ತಲುಪಬಹುದು.

ಪ್ರಾರ್ಥನೆ

ಎಲ್ಲ ಪವಿತ್ರ ವೃಕ್ಷಗಳ ತುಲನೆಯಲ್ಲಿ ವಟವೃಕ್ಷದ ಆಯುಷ್ಯವು ಹೆಚ್ಚಿನದ್ದಾಗಿದ್ದು ಅದರ ವಿಸ್ತಾರವೂ ಹೆಚ್ಚಿರುತ್ತದೆ. ಸ್ತ್ರೀಯರು ಇಂತಹ ವಟವೃಕ್ಷದ ಪೂಜೆಯನ್ನು ಮಾಡಿ ’ನನಗೆ ಹಾಗೂ ನನ್ನ ಪತಿಗೆ ಆರೋಗ್ಯ ಸಂಪನ್ನ ದೀರ್ಘಾಯುಷ್ಯ ಲಭಿಸಲಿ, ಧನಧಾನ್ಯ ಹಾಗೂ ಮಕ್ಕಳು – ಬಂಧು ಬಳಗದಿಂದ ನನ್ನ ಪ್ರಪಂಚವು ಸವಿಸ್ತಾರ ಹಾಗೂ ಸಂಪನ್ನವಾಗಲಿ’ ಎಂಬ ಪ್ರಾರ್ಥನೆಯನ್ನು ಮಾಡಬೇಕು.