ರಾಮಭಕ್ತ ಹನುಮಾನ

ಒಂದು ಸಲ ಸೀತಾದೇವಿಯು ತನ್ನ ಹಣೆಗೆ ಸಿಂಧೂರವನ್ನು ಹಚ್ಚಿಕೊಳ್ಳುತ್ತಿದ್ದಳು. ಹನುಮಂತನು ಇದನ್ನು ನೋಡಿ ವಿಚಾರಿಸಿದನು, “ಸೀತಾಮಾತೆ, ನೀವು ಪ್ರತಿದಿನ ಹಣೆಗೆ ಸಿಂಧೂರವನ್ನು ಯಾಕೆ ಹಚ್ಚಿಕೊಳ್ಳುತ್ತೀರಿ?” ಆಗ ಸೀತಾದೇವಿಯು ಹೇಳಿದರು, “ನಾನು ಸಿಂಧೂರ ಯಾಕೆ ಹಚ್ಚುತ್ತೇನೆಂದರೆ, ಇದರಿಂದ ನಿನ್ನ ಸ್ವಾಮಿಯ (ಅಂದರೆ ಶ್ರೀರಾಮನ) ಆಯುಷ್ಯವು ಹೆಚ್ಚಾಗಲಿ ಎಂದು.” ಇದನ್ನು ಕೇಳಿ ಹನುಮಂತನು ವಿಚಾರ ಮಾಡಿದನು, ಕೇವಲ ಹಣೆಗೆ ಸಿಂಧೂರ ಹಚ್ಚುವುದರಿಂದ ಶ್ರೀರಾಮನ ಆಯುಷ್ಯ ಹೆಚ್ಚಾಗುವುದಿದ್ದರೆ, ನಾನು ಇಡೀ ದೇಹಕ್ಕೆ ಹಚ್ಚಿಕೊಳ್ಳುವೆನು. ತಕ್ಷಣ ಹನುಮಂತನು ಸಿಂಧೂರವನ್ನು ತೆಗೆದುಕೊಂಡು ಇಡೀ ದೇಹಕ್ಕೆ ಹಚ್ಚಿಕೊಂಡರು. ಆಗಿನಿಂದ ಹನುಮಂತನು ಸಿಂಧೂರದ ಬಣ್ಣದವನಾದನು.

ಮಕ್ಕಳೇ, ಇದರಿಂದ ನಮಗೇನು ಕಲಿಯಲು ಸಿಕ್ಕಿತು? ಹನುಮಂತನು ಶ್ರೀರಾಮನ ಭಕ್ತನಾಗಿದ್ದನು. ಅವರಿಗೆ ರಾಮನ ಮೇಲೆ ತುಂಬಾ ಪ್ರೀತಿಯಿತ್ತು. ರಾಮನಿಗಾಗಿ ಏನಾದರೂ ಮಾಡಲು ಸಿದ್ಧರಾಗಿದ್ದರು. ಅದಕ್ಕಾಗಿಯೇ ಹನುಮಂತ ಶ್ರೀರಾಮನ ದೊಡ್ಡ ಭಕ್ತರಾಗಿದ್ದರು. ನಾವು ಕೇವಲ ದೇವರ ಸೇವೆ ಮಾಡಲು ಮುಂದೆ ಬಂದರೆ ಸಾಕು ಆಗ ನಾವು ದೇವರ ಮುದ್ದಿನ ಮಕ್ಕಳಾಗುತ್ತೇವೆ.