ಸಂಸ್ಕಾರ

ಈ ಕಾಲದಲ್ಲಿ ಒಬೊಬ್ಬರೇ ಮಕ್ಕಳು ಇರುವ ಮನೆಗಳಲ್ಲಿ ಅವರನ್ನು ಹೆಚ್ಚು ಮುದ್ದು ಮಾಡುತ್ತಾರೆ. ಶಾರೀರಿಕ ದೃಷ್ಟಿಯಿಂದ ಅವರನ್ನು ರಕ್ಷಿಸಲಾಗುತ್ತದೆ. ಅವರ ಇಷಗಳ ಬಗ್ಗೆ ಬೇಡ ಎನ್ನುವಷ್ಟು ಕಾಳಜಿ ಮಾಡಲಾಗುತ್ತದೆ, ಇದರಿಂದ ಮುಂಬರುವ ಕ್ಲಿಷ್ಟಕರವಾದ ಆಯುಷ್ಯದಲ್ಲಿ ಮುಂದೆ ಹೋಗಲು ಮನಸ್ಸು ಹಾಗು ಶರೀರ ತಯಾರಾಗುವುದಿಲ್ಲಿ. ಪ್ರಸಿದ್ಧ ಪ್ರವಚನಕಾರರಾದ ಡಾ.ಸಚ್ಚಿದಾನಂದ ಶೇವಡೆಯವರ ’ನಿವಡಕ ಮುಕ್ತವೇಧ’ ಈ ಲೇಖನ ಮಾಲೆಯ ಸಂಗ್ರಹದಿಂದ ’ಹಿಂದುಸ್ಥಾನ್ ದೈನಿಕದಲ್ಲಿ ಪ್ರಸಿದ್ಧಿ ಮಾಡಲಾದ ’ಬಾಂಡುಗೂಳ್’ ’(ಮರದ ಬಳ್ಳಿ)’ ಈ ಲೇಖನವನ್ನು ಈ ನಿಮಿತ್ತವಾಗಿ ಕೊಡುತ್ತಿದ್ದೇವೆ.

ಈಗಿನ ಕಾಲದಲ್ಲಿನ ಪಾಲಕರು ಅವರ ಮಕ್ಕಳ ಭವಿಷ್ಯದ ಬಗ್ಗೆ ಬೇಡ ಎನ್ನುವಷ್ಟು ಜಾಗರೂಕರಾಗಿರುತ್ತಾರೆ. ನಮಗೆ ಚಿಕ್ಕಂದಿನಲ್ಲಿ ಏನು ಸಿಗಲಿಲ್ಲವೋ ಅದನ್ನು ನಾವು ನಮ್ಮ ಮಕ್ಕಳಿಗೆ ಕೊಡುತ್ತಿದ್ದೇವೆ ಎಂಬಂತಹ ಔಪಚಾರಿಕ ಭೂಮಿಕೆಯನ್ನು ವಹಿಸುತ್ತಾರೆ ಅವರು ಚಿಕ್ಕವಾರಾಗಿದ್ದಾಗ ಅವರಿಗೆ ಏನು ಸರಿಯಾಗಿ ಸಿಗಲಿಲ್ಲ? ಅದು ಸಿಗಲಿಲ್ಲ ಎಂಬ ತಿಳುವಳಿಕೆ ಅವರಿಗೆ ಯಾವಾಗ ಬಂತು? ಎಂಬಂತಹ ಪ್ರಶ್ನೆಗಳನ್ನು ಅವರು ಸುಲಭವಾಗಿ ಮರೆತುಬಿಡುತ್ತಾರೆ. ಇಂದಿನ ಯುಗದಲ್ಲಿ ’ನಾವಿಬ್ಬರು ನಮಗೆ ಒಬ್ಬರು’ ಎಂದು ಆಗಿರುವುದರಿಂದ ತಂದೆ ತಾಯಿಯ ಪ್ರೇಮದ ಕೇಂದ್ರಬಿಂದು ಕೇವಲ ಒಂದು ಮಗುವಾಗಿರುತ್ತದೆ. ಅದರಿಂದ ಆ ಮಗುವಿಗೆ ಪ್ರೇಮದ ದೊಡ್ಡ ಮಳೆಯನ್ನೇ ಸುರಿಸಲಾಗುತ್ತದೆ. ಈ ಪ್ರೇಮದಿಂದ ಅವರು ಹಟಮಾರಿಗಳಾಗುತ್ತಾರೆ. ಬಾಯಿಯಿಂದ ಮಾತು ಬರುವ ಮುಂಚೆಯೇ ಆ ವಸ್ತುವನ್ನು ಅವರ ಮುಂದೆ ಇಡಲಾಗುತ್ತದೆ. ಆದ್ದರಿಂದ ಈ ಮಕ್ಕಳು ಅವರಿಗೆ ಇಷ್ಟವಾದ ವಸ್ತು ಸಿಗಲಿಲ್ಲವೆಂದರೆ ಅವರು ಆತ್ಮ ಹತ್ಯೆ ಮಾಡಿಕೊಳ್ಳಲು ಪ್ರವೃತ್ತರಾಗುತ್ತಾರೆ.

ಅವರ ಮನಸ್ಸು ಬಲಹೀನವಾಗಿರುತ್ತದೆ, ಏನು ಬೇಕೋ ಅದು ಸಿಗುತ್ತದೆ, ಇದು ಚಿಕ್ಕಂದಿನಿಂದ ಅವರ ಮನಸ್ಸಿನಲ್ಲಿನ ಬಲವಾಗಿ ಧೋರಣೆಯಾಗಿದ್ದರಿಂದ ’ಇಲ್ಲ’ ಎಂಬುದನ್ನು ಅರಗಿಸಿಕೊಳ್ಳುವುದು ಅಥವ ಅಪಯಶವನ್ನು ತಡೆದುಕೊಳ್ಳುವಂತಹ ಬಲಶಾಲಿತನ ಅವರಲ್ಲಿರುವುದಿಲ್ಲ.

ಮಕ್ಕಳಿಗೆ ಒಂದು ಸಣ್ಣ ಗಾಯವಾದರೂ ಸಹ ’ಸ್ಪೆಶಲಿಸ್ಟ್’ನ ಹತ್ತಿರ ಜೀವದ ಹಂಗಿನಲ್ಲಿ ಓಡುವ ಪಾಲಕರನ್ನು ನಾನು ನೋಡಿದ್ದೇನೆ. ಮಕ್ಕಳು ಎಂಟನೇ ತರಗತಿಗೆ ಹೋಗುವವರೆಗೂ ಶಾಲೆಗೆ ಬಿಡುವ ತಾಯಿಯನ್ನೂ ಸಹ ನೋಡಿದ್ದೇನೆ, ಮಕ್ಕಳನ್ನು ಸ್ವತಂತ್ರ್ಯವಾಗಿ ಆಡಲು ಬಿಡಿ. ಅದರಲ್ಲಿ ಬಿದ್ದು ಸಣ್ಣ ಪುಟ್ಟ ಗಾಯವಾದರೂ ಪರವಾಗಿಲ್ಲ. ಇದೇ ಮಣ್ಣಿನೊಂದಿಗೆ ಅವರ ಪರಿಚಯವಿರುತ್ತದೆ,ಆದರೆ ಅದನ್ನು ತಿಳಿದುಕೊಳ್ಳುವವರು ಯಾರು?

ಇದೇ ಮಾತುಗಳೇ ಅವರ ಊಟ ಮಾಡುವ ಅಭ್ಯಾಸದಲ್ಲೂ ಕಂಡುಬರುತ್ತದೆ. ಆಲುಗಡ್ಡೆಯ ಪಲ್ಯದಂತೆ ಬೇರೆ ಪಲ್ಯಗಳನ್ನು ತಿನ್ನದಿರುವ ಮಕ್ಕಳು ಹಾಗು ಇದನ್ನು ಹೊಗಳುವ ತಂದೆ-ತಾಯಂದರು ನಮ್ಮ ಅಕ್ಕಪಕ್ಕದಲ್ಲೂ ಇರಬಹುದು. ಚಿಕ್ಕಂದಿನಲ್ಲಿ ನನಗೆ ಸೊರೆಕಾಯಿ ಹಾಗು ಸುವರ್ಣಗಡ್ಡೆ ಇಷ್ಟವೇ ಆಗುತ್ತಿರಲಿಲ್ಲ, ಆದರೆ ಮನೆಯಲ್ಲಿ ತಟ್ಟೆಯಲ್ಲಿ ಮೊದಲು ಬಡಿಸಿದ್ದನ್ನು ತಿನ್ನಬೇಕೆಂಬ ನಿಯಮವಿತ್ತಾದ್ದರಿಂದ ಆ ಪಲ್ಯವನ್ನು ತಿನ್ನುತ್ತಿದ್ದೆ ಬೇಕಾದರೆ ನಂತರ ಬಡಿಸಿಕೊಳ್ಳದಿದ್ದರೂ ಆಯಿತು. ಅದು ಮೊದಲು ಬಡಿಸಬೇಕಾದರೆ ಬೇರೆಯವರ ತಟ್ಟೆಯಲ್ಲಿ ಎಷ್ಟು ಬಡಿಸಿರುತ್ತಾರೋ ಅಷ್ಟೇ ಇರುತ್ತಿತ್ತು. ದಿನ ಕಳೆದಂತೆ ನನಗೆ ಈ ಪಲ್ಯಗಳು ಇಷ್ಟವಾಗತೊಡಗಿದವು. ಈಗ ವ್ಯಾಖ್ಯಾನ ಹಾಗು ಬರವಣಿಗೆಯ ನಿಮಿತ್ತವಾಗಿ ದೇಶವೆಲ್ಲಾ ಸುತ್ತಿದರೂ ನನಗೆ ಆಹಾರದ ಬಗ್ಗೆ ಏನೂ ಅಡಚಣೆಯಾಗುವುದಿಲ್ಲ.

ಶಾಲೆಯಲ್ಲಿ ವಿಧ್ಯಾರ್ಥಿಗಳಿಗೆ ಶಿಕ್ಷೆಯಾದರೆ, ಅದನ್ನು ಪಾಲಕರು ವಿಚಾರಿಸಲು ಹೋಗುತ್ತಾರೆ, ಅದರಲ್ಲೂ ಮಕ್ಕಳ ತಪ್ಪನ್ನಲ್ಲ! ಏಕೆಂದರೆ ಅವರಿಗೆ ತಮ್ಮ ಮಕ್ಕಳ ತಪ್ಪಿರಬಹುದು ಎಂದು ಅನಿಸುವುದೇ ಇಲ್ಲ. ಈ ವಿಷಯದಲ್ಲಿ ಮೇಲಿನ ತನಕ ತಕರಾರು ಹೋಗದಿರಲೆಂದು ಶಿಕ್ಷಕರೇ ಪರಾಭೂತರಾಗುತ್ತಾರೆ, ಆದರೆ ಮಕ್ಕಳಿಗೆ ಗರ್ವ ಬರುತ್ತದೆ.

ಜೀವನವು ಸತತವಾಗಿ ಸಂಘರ್ಷಗಳಿಂದ ಕೂಡಿರುತ್ತದೆಂಬ ತಿಳುವಳಿಕೆಯನ್ನು ಮಕ್ಕಳಿಗೆ ನೀಡಬೇಕು. ಇಚ್ಛೆಯಿದ್ದರೆ ಮಾರ್ಗವು ಲಭಿಸುವುದು. ಅದರಂತೆ ಅವರನ್ನು ಮಾರ್ಗವನ್ನು ಹುಡುಕಿಕೊಳ್ಳಲು ಬಿಡಬೇಕು.ಪಾಲಕರೇ ಅವರ ’ಗೈಡ್’ ಆಗಬೇಕೆಂದೇನು ಇಲ್ಲ. ಇಂದಿನ ಮಕ್ಕಳ ಮೇಲೆ ದೃಢವಾದ ಸಂಸ್ಕಾರವಾಗಬೇಕು. ಇದಕ್ಕಾಗಿಯೇ ರಾಷ್ಟ್ರಪುರುಷರ ಚರಿತ್ರೆಯನ್ನು ಓದಬೇಕು ಹಾಗು ಅದನ್ನು ಕೇಳಿಸಿಕೊಳ್ಳಬೇಕು. ಇಂದಿನ ಮಕ್ಕಳಿಗೆ ಶಾಲೆ, ಕ್ಲಾಸ್ ಹಾಗು ’ಟಿವಿ.’ಯಿಂದ ಅಧಿಕವಾಗಿ ಓದುವುದು ಹಾಗು ವ್ಯಾಖ್ಯಾನವನ್ನು ಬರೆಯುವುದಕ್ಕೆ ಸಮಯವೇ ಇರುವುದಿಲ್ಲ. ಇದರಿಂದ ಪಾಲಕರೇ ಸಮಯವನ್ನು ಮಾಡಿಕೊಳ್ಳಬೇಕು. ಮಕ್ಕಳನ್ನು ಪರಾವಲಂಬಿಯಾದ ಮರದ ಬಳ್ಳಿಯನ್ನಾಗಿಸಬೇಕೆ ಅಥವ ಸ್ವತಂತ್ರ್ಯವಾಗಿ ಅಸ್ಥಿತ್ವವಿರುವ ವೃಕ್ಷವನ್ನಾಗಿಸಬೇಕೇ ಎಂಬುದು ತಂದೆ ತಾಯಂದರ ಕೈಯಲ್ಲಿದೆ. ಮಕ್ಕಳ ಜೀವನವನ್ನು ರೂಪಿಸುವವರು ನಾವಲ್ಲ, ನಾವು ಕೇವಲ ಅವರಿಗೆ ಸಹಾಯವನ್ನು ಮಾಡುತ್ತೇವೆ ಎಂಬ ಭಾವನೆಯನ್ನು ತಂದೆ-ತಾಯಂದರು ಮನಸ್ಸಿನಲ್ಲಿಟ್ಟುಕೊಳ್ಳಬೇಕು. ಇದಕ್ಕಾಗಿ ಯೋಗ್ಯವಾಗಿ ನಡೆದುಕೊಳ್ಳುವ ನಿಯಮವನ್ನು ಮಾಡುವುದು, ಬಲವಂತ ಮಾಡುವುದು, ಕೆಲವು ಪ್ರಸಂಗಗಳಲ್ಲಿ ಹೊಡೆಯುವುದು, ಇವನ್ನು ಮಾಡಲೇ ಬೇಕಾಗುತ್ತದೆ. ಮಕ್ಕಳ ಪ್ರವೃತ್ತಿಯಂತೆ ನೀಡಿ ಅವರಿಗೆ ಏನು ಬೇಕೋ ಅದನ್ನು ನೀಡಬೇಕು ಎಂಬುದು ಮೂರ್ಖತನ. ಮೊದಲಿನ ಶಿಸ್ತುಪ್ರಿಯ ತಂದೆತಾಯಂದರ ಕಾಲದಲ್ಲಿ ಆತ್ಮಹತ್ಯೆಯ ಪ್ರಮಾಣ ತುಂಬಾ ಕಡಿಮೆ ಇತ್ತು. ಈಗ ಅದು ಗಣನೀಯವಾಗಿ ಹೆಚ್ಚಾಗಿದೆ. ಇಂದು ಅವರನ್ನು ಹೆಚ್ಚಾಗಿ ಮುದ್ದಿಸಿದರೆ ಹಾಗು ಅದರಿಂದ ವೇದನೆ, ಪ್ರೇಮ ಹೋಗಿ ಇದೇ ಮಕ್ಕಳು ದೊಡ್ಡವರಾದ ಮೇಲೆ ಅವರು ನಿಮ್ಮಡೆಗೆ ಬೆನ್ನು ತಿರುಗಿಸುತ್ತಾರೆ ಎಂಬ ನಿಜಾಂಶವನ್ನು ಗಮನದಲ್ಲಿಟ್ಟುಕೊಳ್ಳಿ.
(೨೬.೦೬.೨೦೦೬, ಹಿಂದುಸ್ಥಾನ)

Leave a Comment