ಶ್ರೀ ಚಾಮುಂಡೇಶ್ವರಿ ದೇವಸ್ಥಾನ, ಮೈಸೂರು

ಶ್ರೀ ಚಾಮುಂಡೇಶ್ವರಿ ದೇವಸ್ಥಾನ

ಚಾಮುಂಡಿಬೆಟ್ಟ ಸಮುದ್ರ ಮಟ್ಟಕ್ಕಿಂತ ಸುಮಾರು ೩೪೮೯ ಅಡಿಗಳ ಎತ್ತರದಲ್ಲಿ ಕಂಗೊಳಿಸುತ್ತಾ ಮೈಸೂರು ನಗರಕ್ಕೆ ಶಿಖರಪ್ರಾಯವಾಗಿರುತ್ತೆ. ಚಾಮುಂಡಿಬೆಟ್ಟವು ಮೈಸೂರು ನಗರದ ದಕ್ಷಿಣದಲ್ಲಿದೆ. ಈ ಬೆಟ್ಟವು ದಕ್ಷಿಣ ಭಾರತದ ಅಷ್ಟ ಪರ್ವತಗಳಲ್ಲಿ ಒಂದಾಗಿದೆ. ಈ ಬೆಟ್ಟದ ಪ್ರಕೃತಿ ಸ್ವಭಾವವು ಇದರ ಸೊಬಗು, ವರ್ಣನಾತೀತವಾದುದು. ಈ ಬೆಟ್ಟದ ಮೇಲಿರುವ ಅತ್ಯಂತ ಹಳೆಯ ದೇವಾಲಯವೆಂದರೆ ಮಹಾಬಲೇಶ್ವರ ದೇವಾಲಯ. ಈ ಬೆಟ್ಟದಲ್ಲಿ ಮಾಕೇಂಡೇಯ ಋಷಿಯು ತಪಸ್ಸನ್ನು ಮಾಡಿದ್ದಾರೆ. ಚಾಮುಂಡಿ ಬೆಟ್ಟವನ್ನು ಮಹಾಭಲಗಿರಿಎಂದೂಕರೆಯುತ್ತಾರೆ.

ಚಾಮುಂಡೇಶ್ವರಿ ದೇವಿಯು ಮೈಸೂರು ವಂಶಸ್ಥರ ಕುಲದೇವತೆಯಾಗಿದ್ದಾಳೆ. ಮುಮ್ಮಡಿ ಕೃಷ್ಣರಾಜ ಒಡೆಯರು ಶ್ರೀ ಚಾಮುಂಡೇಶ್ವರೀ ಅಮ್ಮನವರಿಗೆ ಖಾಸಾ ಮತ್ತು ಜನಾನ ಸವಾರಿಗಳೊಡನೆ ಬೆಟ್ಟಕ್ಕೆ ಬಂದು ತುರಬೆ ಖಸು, ಬಹದರೀ ವರಾಹ, ಮುಂತಾದ ಚಿನ್ನದ ನಾಣ್ಯಗಳನ್ನು ಅಷ್ಟೋತ್ತರ, ತ್ರಿಶತಿ, ಸಹಸ್ರನಾಮಾರ್ಚನೆ ರೂಪವಾಗಿ ಕೊಟ್ಟಿರುವರೆಂದು ರುಂಡ ಮಾಲೆ, ಬೆಳ್ಳಿ ಮಂಟಪ, ಚಿನ್ನ ಬೆಳ್ಳಿಗಳ ಪೀಠೋಪಕರಣ, ಅಪರೂಪವಾದ ಮತ್ತು ಬೆಲೆ ಬಾಳುವ ನವರತ್ನ ಆಭರಣಗಳು ಕಂಠೀಹಾರ ಮತ್ತು ಅಮೂಲ್ಯವಾದ ವಸ್ತ್ರಗಳನ್ನು ಕೊಟ್ಟು ದೇವತಾ ಸೇವೆಯನ್ನು ಮಾಡಿರುವರೆಂದುಉಲ್ಲೇಖವಿದೆ.

ಮಹಿಷಮರ್ದಿನಿ, ಚಂಡ ಮತ್ತುಮುಂಡ

​ಮಾರ್ಕಂಡೇಯ ಪುರಾಣದ ಪ್ರಕಾರ, ದುರ್ಗೆಯು ಚಂಡ ಮತ್ತು ಮುಂಡರ ವಿರುದ್ಧ ಯುದ್ಧ ಮಾಡುವಾಗ, ಕೋಪೋಕ್ತಳಾಗಿ ಭಯಾನಕ ಕಾಳಿಯ ರೂಪದಲ್ಲಿ ಕಾಣಿಸಿಕೊಳ್ಳುತ್ತಾಳೆ. ದೇವರ ಈ ಇಬ್ಬರು ಶತ್ರುಗಳ ತಲೆ ಕಡಿದು, ಆ ತಲೆಗಳನ್ನು ದೇವಿ ಮಾತೆಗೆ ಅರ್ಪಿಸುತ್ತಾಳೆ. ಕಾಳಿಯ ಈ ಪರಾಕ್ರಮ ಅವಳಿಗೆ ಚಾಮುಂಡಿ ಎಂಬ ಹೆಸರನ್ನು ತಂದಿತು (ಯಸ್ಮತ್ ಚಂಡಂ ಚ ಮುಂಡಂ ಚ ಗ್ರಹತಿ ವಾತ್ರ ಉಪಾಗತ; ಚಾಮುಂಡಿ ಏತಿ ತತೊ ಲೋಕ ಖ್ಯಾತಿ ದೇವಿ ಭವಿಷ್ಯಾತಿ).

ಅಸುರ ರಕ್ತಬೀಜ’ತನ್ನ ಒಂದೇ ಒಂದು ಹನಿ ರಕ್ತವು ನೆಲಕ್ಕೆ ಬಿದ್ದರೆ ಅವರಿಂದ ಅಸಂಖ್ಯಾತ ಅಸುರರನ್ನು ಹುಟ್ಟಿಸುವಶಕ್ತಿ’ ಹೊಂದಿದ್ದನು. ಇವನನ್ನು ಕೊಲ್ಲಲು ಕಾಳಿದೇವಿಯನ್ನು ಕರೆಯಿಸಲಾಯಿತು. ದೇವಿ ಮಹಾತ್ಮೆಯ ಪ್ರಕಾರ, ಚಾಮುಂಡಿಯು ರಕ್ತಬೀಜನಿಂದ ಹೊರಬಂದ ಎಲ್ಲ ರಕ್ತವನ್ನು ತನ್ನ ದೊಡ್ಡ ನಾಲಿಗೆಯಿಂದ ನೆಕ್ಕಿ ಕುಡಿದಳು. ತನ್ನ ಬಾಯಿಯನ್ನು ಪಾತಾಳ ಮುಟ್ಟುವಂತೆ ಅಗಲವಾಗಿ ತೆರೆದು ರಕ್ತಬೀಜ ಮತ್ತು ಅವನಿಂದ ಉತ್ಪತ್ತಿಯಾದಅಸುರನನ್ನು ತನ್ನ ಬಾಯಿಯಲ್ಲಿ ಹಾಕಿಕೊಂಡಳು.

ದಂತಕಥೆಗಳ ಪ್ರಕಾರ, ಉಜ್ಜಯನಿ ರಾಜನಾದ ಬಿಜ್ಜಲರಾಯನಿಗೆ ಏಳು ಹೆಣ್ಣು ಮಕ್ಕಳಿದ್ದು ಅವರಲ್ಲಿ ಚಾಮುಂಡಿ ಒಬ್ಬಳು. ಈ ಅಕ್ಕ ತಂಗಿಯರು ಯಾವುದೋ ಕಾರಣಕ್ಕಾಗಿ ತಮ್ಮಲ್ಲಿಯೇ ಜಗಳಾಡಿ ಉತ್ತರದ ಕಡೆ ಹೊದರು. ಆವಾಗ ಚಾಮುಂಡಿಯು ಮಹಿಷಾ ಮಂಡಳ ಎಂಬ ಸಮೃದ್ಧ ರಾಜ್ಯದಲ್ಲಿ ನೆಲೆಯೂರಲು ನಿರ್ಧರಿಸಿದಳು. ಉತ್ತನಹಳ್ಳಿಯ ತನ್ನ ತಂಗಿ ಉರಿಕಾಂತಿಯ ಸಹಾಯದಿಂದ, ಚಾಮುಂಡಿ ಮಹಿಷನನನ್ನು ವಧಿಸಿ, ‘ಮಹಿಷಮರ್ದಿನಿ’ ಎಂದು ಪ್ರಸಿದ್ಧಳಾದಳು. ಈ ದಂತಕಥೆಯು ಬಹುಶ ಚಾಮುಂಡೇಶ್ವರಿ ಅಧಿದೇವತೆಯಾಗಲು ಕಾರಣವಾಯಿತು. ಕೆಲವು ಪುರಾಣ ಮತ್ತು ಗ್ರಂಥಗಳ ಪ್ರಕಾರ ಚಾಮುಂಡಿಗೆ ಕಾಳಿ ಅಥವಾ ಕರಾಳಿ ಎಂದು ವಿಶೇಷಿಸಲಾಗಿದೆ.

ಆದರೆ ಮೈಸೂರಿನ ಚಾಮುಂಡಿ ಬೆಟ್ಟದಲ್ಲಿರುವ ಚಾಮುಂಡಿಯ ವಿಗ್ರಹ ಮರಳು ಮಾಡುವಂತೆ ಸುಂದರವಾಗಿದೆ. ವಿಗ್ರಹವು ಅತಿ ದೊಡ್ಡದಾಗಿರದಿದ್ದರೂ ಅದನ್ನು ಉಜ್ವಲವಾಗಿ ತೋರಿಸಲಾಗಿದೆ. ಶ್ರೀ ಕೃಷ್ಣರಾಜ ಒಡೆಯರ ‘ಶ್ರೀ ತತ್ವಾನಿಧಿ’ಯಲ್ಲಿ ಚಾಮುಂಡಿಯನ್ನು ಚಿನ್ನದ ಬಣ್ಣ (ಹೇಮಾಂಬ), ಮೂರು ಕಣ್ಣುಗಳ (ತ್ರೀನೇತ್ರ), ಯೌವ್ವನ (ನತಾವ್ವನಾಸ್ತ), ತೆಳು ಸೊಂಟ (ಕೃಷ ಮಧ್ಯ), ವಿಶಾಲ ಕಣ್ಣುಗಳು (ವಿಶಾಲಾಕ್ಷಿ), ಆಕರ್ಷಿಸುವ ಸ್ತನಗಳು (ಚಾರು-ಪಿನ-ಪಾಯೋಧರ) ಮತ್ತು ಸುಂದರ ಕುತ್ತಿಗೆ (ಸುಗ್ರೀವ) ಗಳಿಂದ ವರ್ಣಿಸಲಾಗಿದೆ.

ದೇವತೆಯು ಅಷ್ಟ ಭುಜಗಳಿಂದ ಕೂಡಿದ್ದು, ಅವಳ ಮೇಲಿನ ಬಲಗೈ ಮತ್ತು ಕೆಳಗಿನ ಎಡಗೈಯಲ್ಲಿ ತ್ರಿಶೂಲವಿದ್ದು, ಅದು ರಾಕ್ಷಸರ ಎದೆಯನ್ನು ಸೀಳುವಂತೆ ತೋರಿಸಲಾಗಿದೆ. ದೇವಿಯ ಉಳಿದ ಕೈಗಳಲ್ಲಿ ಖಡ್ಗ, ಬಾಣ, ವಜ್ರ, ಚಾಕು, ಈಟಿ, ಶಂಖ ಮತ್ತು ಸರ್ಪವಿದೆ. ಕೂತಿರುವ ದೇವತೆಯು ಹೊಯ್ಸಳರ ಕಲೆಯನ್ನು ನೆನಪಿಸುತ್ತದೆ. ಬೆಳ್ಳಿ ಮಂಟಪದಲ್ಲಿ ದೇವಿಯ ಹಲವಾರು ಅವತಾರಗಳಿವೆ. ಉತ್ಸವ ಮೂರ್ತಿಯಲ್ಲೂ ಇದೇ ಸಮನಾದ ಲಕ್ಷಣಗಳಿವೆ.