ನಾಗಾರ್ಜುನ : ಭಾರತೀಯ ರಸಾಯನ ಶಾಸ್ತ್ರದ ಜನಕ

೭ನೆ ಶತಮಾನದ ಪ್ರಾರಂಭದಲ್ಲಿದ್ದ ನಾಗಾರ್ಜುನ ಭಾರತೀಯ ರಸಾಯನ ಶಾಸ್ತ್ರದ ಜನಕರೆಂದು ಪ್ರಸಿದ್ಧರಾಗಿದ್ದಾರೆ. ಈ ಕ್ಷೇತ್ರದಲ್ಲಿ ಅವರ ಕಾರ್ಯ ಅವಿಸ್ಮರಣೀಯವಾಗಿದೆ. ವಿಶೇಷವಾಗಿ ಇತರ ಧಾತುಗಳನ್ನು ಚಿನ್ನವಾಗಿ ಪರಿವರ್ತಿಸುವ ರಸವಿದ್ಯೆ ಮತ್ತು ನೀರಿನ ಮೇಲೆ ಮಾಡಿದ ಸಂಶೋಧನೆಗಳು ಅದ್ವಿತೀಯವಾಗಿವೆ. ನೀರಿನ ವಿಷಯದಲ್ಲಿ ಸರ್ವಾಂಗೀಣ ಅಧ್ಯಯನವನ್ನು ಮಾಡುವತ್ತ ೧೨ ವರ್ಷಗಳ ಕಾಲ ಸಂಶೋಧನೆ ನಡೆಸಿದವರು. ಪಾಶ್ಚಾತ್ಯರು ಮುಂದೆ ಮಾಡಿದ ಪ್ರತಿಯೊಂದು ಸಂಶೋಧನೆಯ ಅಡಿಪಾಯವನ್ನು ನಾಗಾರ್ಜುನರು ಹಾಕಿಟ್ಟಿದ್ದರು.