ಪ್ರಾಚೀನ ಋಷಿ ಮುನಿಗಳ ಅಮೂಲ್ಯ ಕೊಡುಗೆ ಆಯುರ್ವೇದ !

ತಮ್ಮ ಶರೀರ ಹಾಗೂ ಮನಸ್ಸಿನ ಆರೋಗ್ಯವನ್ನು ಕಾಪಾಡುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ಆಯುರ್ವೇದವು ಪ್ರಾಚೀನ ಕಾಲದಿಂದ ಉಪಯೋಗದಲ್ಲಿರುವ ಪರಿಣಾಮಕಾರಿ ಸಾಧನವಾಗಿದೆ.
'ಆಯುರ್ವೇದ ಅಂದರೆ ಆಯುಷ್ಯದ ವೇದ. ರೋಗರುಜಿನಗಳಿಂದ ಮುಕ್ತಿ ಮತ್ತು ಆರೋಗ್ಯಸಂಪನ್ನರಾಗಿ ಜೀವನ ನಡೆಸಲು ಯಾವ ಸಾಮಾಗ್ರಿಗಳು ಉಪಯುಕ್ತವಾಗಿವೆಯೋ, ಅಂತಹ ದ್ರವ್ಯಗಳು ಆಯುರ್ವೇದದ ಔಷಧಿಗಳಲ್ಲಿ ಉಪಯೋಗಿಸಲ್ಪಡುತ್ತವೆ. ಅಂದರೆ ಆಯುರ್ವೇದದಲ್ಲಿ ಸಿಹಿ, ಹುಳಿ, ಉಪ್ಪು, ಖಾರ, ಕಹಿ, ಒಗರು ಮುಂತಾದ ಸ್ವಾದಗಳ ಅಥವಾ ಸ್ವಾದಗಳುಳ್ಳ ದ್ರವ್ಯಗಳು ದೋಷ, ಧಾತು ಮತ್ತು ಮಲ ಇವುಗಳ ಮೇಲೆ ಬೀರುವ ಪರಿಣಾಮದ ಉಲ್ಲೇಖವಿದೆ.

ನ ಅನೌಷಧಂ ಜಗತಿ ಕಿಂಚಿತ್ ದ್ರವ್ಯಂ ಉಪಲಭ್ಯತೆ
ಚರಕ ಸೂ ೨೬-೧೨

'ಔಷಧವೆಂದು ಉಪಯೋಗಿಸಲಾಗದ ಯಾವುದೇ ದ್ರವ್ಯ ಜಗತ್ತಿನಲ್ಲಿ ಉಪಲಬ್ಧವಿಲ್ಲ' ಎಂದು ಆಯುರ್ವೇದದಲ್ಲಿ ತಿಳಿಸಲಾಗಿದೆ. ('ಆಯುರ್ವೇದೀಯ ಔಷಧಿ', ವೈದ್ಯಾಚಾರ್ಯ ಡಾ. ವಸಂತ್ ಬಾಳಾಜಿ ಆಠವಲೆ ಮತ್ತು ಡಾ. ಕಮಲೇಶ ವಸಂತ್ ಆಠವಲೆ)

ಆಯುರ್ವೇದದಲ್ಲಿ ಧನವಂತರೀ ದೇವರು ಮತ್ತು ಪ್ರಾರ್ಥನೆಯ ಮಹತ್ತ್ವ

ರೋಗಗಳ ನಾಶ ಮಾಡಿ ಆರೋಗ್ಯವನ್ನು ಪ್ರದಾನಿಸುವ ಧನವಂತರೀ ದೇವರಿಗೆ ಆಯುರ್ವೇದದಲ್ಲಿ ವಿಶೇಷ ಸ್ಥಾನಮಾನ ಇದೆ. ಔಷಧೀಯ ಗಿಡಗಳನ್ನು ಕೀಳುವಾಗ, ಅವುಗಳನ್ನು ಉಪಯೋಗಿಸುವಾಗ, ಔಷಧವನ್ನು ಸೇವಿಸುವಾಗ ಹೀಗೆ ಪ್ರಿತಿಯೊಂದು ಹಂತದಲ್ಲಿ ಪ್ರಾರ್ಥನೆಗೆ ಮಹತ್ವವನ್ನು ನೀಡಲಾಗಿದೆ.

ಆಯುರ್ವೇದದ ಮಹತ್ವವನ್ನು ಅರಿತುಕೊಳ್ಳಿ

ಈಗಿನ ಕಾಲದಲ್ಲಿ ಆರೋಗ್ಯದಲ್ಲಿ ಸ್ವಲ್ಪ ಏರುಪೇರು ಕಂಡುಬಂದರೆ ನಾವು ಕೂಡಲೇ 'ಅಲ್ಲೋಪಥಿಕ್' ಔಷಧಿಗಳನ್ನು ಸೇವಿಸಲು ಪ್ರಾರಂಭಿಸುತ್ತೇವೆ. ಋಷಿಮುನಿಗಳು ಪ್ರಾಚೀನ ಕಾಲದಿಂದ ಹೇಳಿಬಂದಿರುವ ಆಯುರ್ವೇದದ ಮಹತ್ವವನ್ನು ನಾವು ಮರೆತು ಹೊಗುತ್ತೇವೆ. 'ಅಲ್ಲೋಪಥಿಕ್' ಔಷಧಿಗಳ ಸೇವನೆಯಿಂದ ದುಷ್ಪರಿಣಾಮಗಳಿರಬಹುದು ಅಥವಾ ಇನ್ಯಾವುದಾದರೊಂದು ರೋಗ ಪ್ರಾರಂಭವಾಗಬಹುದು. ಆಯುರ್ವೇದಿಕ ಔಷಧಿಗಳಿಂದ ಹೀಗೆ ಆಗುವುದಿಲ್ಲ. ಆಯುರ್ವೇದಿಕ ಔಷಧಿಗಳಿಂದ ರೋಗಮುಕ್ತ ಮತ್ತು ದೀರ್ಘಾಯುಶೀಗಳಾಗಬಹುದು. ಹೀಗೆ ಆಯುರ್ವೇದದ ಮಹತ್ವವನ್ನು ತಿಳಿದ ಪಾಶ್ಚಾತ್ಯರು ಆಯುರ್ವೇದಿಕ ಔಷಧಿಗಳನ್ನು 'ಪೇಟೆಂಟ' ಮಾಡಲು ಹೊರಟಿದ್ದಾರೆ.

ಆಯುರ್ವೇದೀಯ ಔಷಧಿಗಳ ಆಧುನೀಕರಣ

ರೋಗಗಳ ಮೇಲೆ ಆಯುರ್ವೇದಿಕ ಔಷಧಿಗಳ ಪರಿಣಾಮವು ನಿಧಾನಗತಿಯಲ್ಲಿ ಆಗುತ್ತದೆ; ಆದುದರಿಂದ 'ಗಂಭೀರ ರೋಗಗಳ ಮೇಲೆ ಆಯುರ್ವೇದಿಕ ಔಷಧಿಗಳು ವಿಶೇಷ ಪರಿಣಾಮ ಬೀರುವುದಿಲ್ಲ' ಎಂಬ ಗ್ರಹಿಕೆ ಇದೆ. ಆದುದರಿಂದ ಇಂತಹ ಔಷಧಗಳಲ್ಲಿರುವ ಕಾರ್ಯಶೀಲ ತತ್ತ್ವಗಳನ್ನು (ಆಲ್ಕಲೋಯಿಡ್ಸ್, ಗ್ಲುಕೋಸೈಡ್ಸ್) ಬೇರ್ಪಡಿಸಿ, ಅವುಗಳ ಇಂಜೆಕ್ಶನ್ ಅಥವಾ ಗುಳಿಗೆಗಳನ್ನು ತಯಾರಿಸಬೇಕು. ('ಆಯುರ್ವೇದೀಯ ಔಷಧಿ', ವೈದ್ಯಾಚಾರ್ಯ ಡಾ. ವಸಂತ ಬಾಳಾಜಿ ಆಠವಲೆ ಮತ್ತು ಡಾ. ಕಮಲೇಶ ವಸಂತ ಆಠವಲೆ)

ಮಕ್ಕಳೇ, ಆಯುರ್ವೇದವು ಋಷಿಮುನಿಗಳು ನಮಗೆ ನೀಡಿದ ಒಂದು ಅಮೂಲ್ಯ ದೇಣಿಗೆ! ಪರಂಪರಾಗತವಾಗಿ ಬಂದಿರುವ ಹಿಂದೂ ಸಂಸ್ಕೃತಿಯ ಈ ದೇಣಿಗೆಯನ್ನು ಉಳಿಸಿ ಬೆಳೆಸುವ ಜವಾಬ್ದಾರಿಯು ನಿಮಗಿದೆ ಎಂಬುದು ಗಮನದಲ್ಲಿಟ್ಟುಕೊಳ್ಳಿ !

Leave a Comment