ಮಕರ ಸಂಕ್ರಾಂತಿ


ಸವಿ ಮಾತು ದಿನವೊಂದಕ್ಕೆ ಸೀಮಿತವಾಗದಿರಲಿ,
ಪ್ರತಿಯೊಂದುಮಾತಿನಲ್ಲಿ ಸವಿ ಇರಲಿ ಎಂದು ಹೇಳುವ ಮಕರಸಂಕ್ರಾಂತಿ,

ಇದು ಚೈತನ್ಯಯುತ ಹಬ್ಬ !

೧. ಕೆಟ್ಟ ಮಾತನಾಡುವ ದುರ್ಗುಣರೂಪ ದೈತ್ಯನನ್ನು ನಾಶ ಮಾಡುವ ನಿಶ್ಚಯದ ಅವಕಾಶ ನೀಡುವ ಹಬ್ಬವೆಂದರೆ ಮಕರಸಂಕ್ರಾಂತಿ

ಸ್ನೇಹಿತರೇ, ಇಂದು ನಾವು ಮಕರಸಂಕ್ರಾಂತಿ ಹಬ್ಬದ ಬಗ್ಗೆ ತಿಳಿದುಕೊಳ್ಳೋಣ.

೧ಅ. ಮಕರಸಂಕ್ರಾಂತಿ ಹಬ್ಬದ ವೈಶಿಷ್ಟ್ಯ : ಸ್ನೇಹಿತರೇ, ಇಂದಿನವರೆಗೆ ನಮ್ಮ ಪ್ರತಿಯೊಂದು ಹಬ್ಬ ಯಾವುದಾದರೂ ವಿಶಿಷ್ಟ ತಿಥಿಗೆ ಬರುತ್ತದೆ ಎಂದು ನೋಡಿದ್ದೇವೆ; ಆದರೆ ಮಕರಸಂಕ್ರಾಂತಿಯು ತಿಥಿವಾಚಕವಲ್ಲ! ಸೂರ್ಯ ಮಕರ ರಾಶಿಯಲ್ಲಿ ಸಂಕ್ರಮಣವಾಗುವ ದಿನದಂದು ಈ ಹಬ್ಬವನ್ನು ಆಚರಿಸುತ್ತಾರೆ.

೧ಆ. ಬೇರೆಯವರಿಗೆ 'ಮನಸ್ಸಿಗೆ ದುಃಖವಾಗುವಂತೆ' ಮಾತನಾಡುವ ದುರ್ಗುಣವು ಒಂದು ದೈತ್ಯವೇ ಆಗಿದ್ದು ಅದನ್ನು ನಷ್ಟ ಮಾಡುವುದು ಆವಶ್ಯಕ ! : ಸಂಕ್ರಾಂತಿಯನ್ನು ಒಂದು ದೇವತೆಯೆಂದು ಪರಿಗಣಿಸುತ್ತಾರೆ. ಈ ದೇವತೆಯು ಈ ದಿನದಂದು 'ಸಂಕರಾಸುರ' ಹೆಸರಿನ ದೈತ್ಯನನ್ನು ವಧಿಸಿದಳು ಎಂಬ ಕಥೆಯಿದೆ. ಇದರಿಂದ ನಾವು ಏನು ಅನುಸರಿಸಬೇಕು ? ನಾವು ಕೂಡಾ ನಮ್ಮ ಮನಸ್ಸಿನಲ್ಲಿರುವ ಕೆಟ್ಟ ವಿಚಾರಗಳನ್ನು ಮತ್ತು ದುರ್ಗುಣಗಳನ್ನು ನಾಶ ಮಾಡಲು ನಿಶ್ಚಯಿಸೋಣ ! ಇತರರನ್ನು ನೋಯಿಸುವಂತಹ ಮಾತುಗಳನ್ನು ಆಡುವುದು ಕೂಡ ಒಂದು ದುರ್ಗುಣ ಆಗಿದೆ. ಆದುದರಿಂದ ಮಕರಸಂಕ್ರಾಂತಿಯ ದಿನದಂದು ಈ ದುರ್ಗುಣದಂತಹ ದೈತ್ಯನನ್ನು ಸಂಹರಿಸುವ ನಿಶ್ಚಯವನ್ನು ಮಾಡೋಣ.

ಸ್ನೇಹಿತರೇ, ಇಂದು ಅನೇಕ ಮಕ್ಕಳು ತಮ್ಮ ಮಾತಿನಿಂದ ಇತರರಿಗೆ ದುಃಖ ನೀಡುತ್ತಾರೆ. ಉದಾ. ಕೆಲವು ಮಕ್ಕಳು ತಮ್ಮ ತಾಯಿಗೆ 'ನಿನಗೆ ಏನೂ ತಿಳಿಯುವುದಿಲ್ಲ, ನೀನು ದಡ್ಡಿ' ಎಂದು ಹೇಳುತ್ತಾರೆ. ತಂದೆಗೆ 'ನಿಮಗೆ ಏನು ಗೊತ್ತಾಗುತ್ತದೆ ? ನೀವು ಹೇಳುವುದನ್ನು ಕೇಳುವುದಿಲ್ಲ' ಎಂದು ಹೇಳುತ್ತಾರೆ.

ಸ್ನೇಹಿತರನ್ನು 'ನಾಯಿ, ಕತ್ತೆ' ಎಂಬ ಅಪಶಬ್ದಗಳಿಂದ ಕರೆಯುತ್ತಾರೆ. ಇಂತಹ ಮಾತನಿಂದ ನಾವು ಇತರರಿಗೆ ಸತತವಾಗಿ ದುಃಖ ನೀಡುತ್ತೇವೆ. ನಾವು ಈ ಕೆಟ್ಟ ಮಾತನಾಡುವ ದುರ್ಗುಣರೂಪಿ ದೈತ್ಯನನ್ನು ನಾಶಮಾಡುವ ನಿಶ್ಚಯ ಮಾಡೋಣ.

೧ಇ. ನಮ್ಮ ಒಳ್ಳೆಯ ಮಾತಿನಿಂದ ಇತರರಿಗೆ ಆನಂದ ದೊರೆಯುವುದು ಆವಶ್ಯಕವಾಗಿದೆ ! : ಈ ದಿನದಂದು ನಾವೆಲ್ಲರೂ ಪರಸ್ಪರರಿಗೆ ಎಳ್ಳುಬೆಲ್ಲ ನೀಡುತ್ತೇವೆ ಮತ್ತು 'ಎಳ್ಳುಬೆಲ್ಲ ತಿಂದು ಒಳ್ಳೆದು ಮಾತನಾಡಿ' ಎಂದು ಹೇಳುತ್ತೇವೆ. ಯಾರಿಗೂ ಎಂದಿಗೂ ಕೆಟ್ಟ ಮಾತನಾಡದಿರಿ. ಎಳ್ಳುಬೆಲ್ಲ ತಿಂದಾಗ ತಿನ್ನುವವನಿಗೆ ಆನಂದ ದೊರೆಯುತ್ತದೆ. ಅದರಂತೆ ನಮ್ಮ ಸವಿ ಮಾತಿನಿಂದ ಇತರರಿಗೆ ಆನಂದ ದೊರೆಯಬೇಕು. ಹೀಗೆ ಮಾತನಾಡಿದರೆ ಮಾತ್ರ 'ಎಳ್ಳುಬೆಲ್ಲ ತಿಂದು ಒಳ್ಳೆದು ಮಾತನಾಡಿ' ಎಂದು ಹೇಳೋಣ. ಸ್ನೇಹಿತರೇ ಹೀಗೆ ನುಡಿಯೋಣವಲ್ಲವೇ ?

೧ಈ. ಕೇವಲ ಮಕರಸಂಕ್ರಾಂತಿಯ ದಿನದಂದು ಸವಿ ಮಾತನಾಡುವುದಕ್ಕಿಂತ ಪ್ರತಿದಿನ ಸವಿ ಮಾತನಾಡಿ ಇತರರರಿಗೆ ಆನಂದ ನೀಡೋಣ : ಸ್ನೇಹಿತರೇ, ನಮ್ಮ ಮಾತು ಪ್ರತಿದಿನ ಇತರರಿಗೆ ಆನಂದ ನೀಡುವಂತಿರುತ್ತದೆಯೇ ? ನಾವು ಕೇವಲ ಒಂದೇ ದಿನ ಸವಿ ಮಾತನಾಡಬೇಕೇ ಅಥವಾ ಪ್ರತಿದಿನ ಇತರರಿಗೆ ಆನಂದವಾಗುವಂತೆ ಮಾತನಾಡಬೇಕೇ ? ನಮ್ಮ ವರ್ತನೆ ಹೀಗೆ ಇರುತ್ತದೆಯೇ ? ಇಂದು ಕೆಲವು ಮಕ್ಕಳು ತಮ್ಮ ತಂದೆ-ತಾಯಿಯೊಂದಿಗೂ ಸರಿಯಾಗಿ ಮಾತನಾಡುವುದಿಲ್ಲ. ಹಿರಿಯರಿಗೆ ಉದ್ಧಟತನದಿಂದ ಉತ್ತರಗಳನ್ನು ನೀಡುತ್ತಾರೆ. ಕೆಲವು ಮಕ್ಕಳು ತರಗತಿಯಲ್ಲಿ ಪರಸ್ಪರರಿಗೆ ಬೈಯ್ಯುತ್ತಾರೆ ಎಂದು ನೋಡುತ್ತೇವೆ. ಹಾಗಾದರೆ ಕೇವಲ ಒಂದೇ ದಿನದಂದು ಸವಿ ಮಾತನಾಡುವ ನಾಟಕ ಮಾಡಬೇಕೇ ? ಪ್ರತಿದಿನ ನಮ್ಮ ವರ್ತನೆ ಆದರ್ಶವಾಗಿರಬೇಕಲ್ಲವೇ ?

೧ಉ. ಮಕರಸಂಕ್ರಾಂತಿಯಿಂದ 'ದೇವರೊಂದಿಗೆ ಮಾತನಾಡುತ್ತಿದ್ದೇವೆ ಈ ಭಾವದಿಂದ ಮಾತನಾಡಲು ನಿಶ್ಚಯಿಸೋಣ' ! : ಸ್ನೇಹಿತರೇ, ಈ ಮಕರಸಂಕ್ರಾಂತಿಯ ದಿನದಂದು ನಾವೆಲ್ಲರೂ 'ಇಂದಿನಿಂದ ಯಾರಿಗೆ ದುಃಖವಾಗುವಂತೆ ಮಾಡನಾಡುವುದಿಲ್ಲ. ನಮ್ಮ ಸವಿ ಮಾತಿನಿಂದ ಅತ್ಮೀಯತೆಯನ್ನು ಬೆಳೆಸುತ್ತೇವೆ ! ಪ್ರತಿಯೊಬ್ಬರಲ್ಲಿ ದೇವರಿದ್ದಾನೆ ಮತ್ತು ನಾನು ಆ ದೇವರೊಂದಿಗೆ ಮಾತನಾಡುತ್ತಿದ್ದೇನೆ' ಎಂದು ನಿಶ್ಚಯಿಸೋಣ. ಸ್ನೇಹಿತರೇ, ನಮ್ಮೆದುರಿನಲ್ಲಿ ದೇವರು ಬಂದರೆ ಆಗ ನಾವು ಅವನೊಂದಿಗೆ ಹೇಗೆ ಮಾತನಾಡುವೆವು ? ಹಾಗೂ ಪ್ರತಿಯೊಬ್ಬ ವ್ಯಕ್ತಿಯಲ್ಲಿ ದೇವರಿದ್ದಾನೆ ಮತ್ತು ಆ ದೇವರೊಂದಿಗೆ ನಾನು ಮಾತನಾಡುತ್ತಿದ್ದೇನೆ ಎಂಬ ಭಾವದಿಂದ ಮಾತನಾಡುವುದು ಅಂದರೆ ಸವಿ ಮಾತನಾಡುವುದೇ ಅಲ್ಲವೇ ? ಹಾಗಾದರೆ ಮಿತ್ರರೇ, ಇಂದಿನ ಮಕರಸಂಕ್ರಾಂತಿಯ ದಿನದಂದು ನಾವೆಲ್ಲರೂ ಈ ರೀತಿಯ ಭಾವವಿಟ್ಟು ಮಾತನಾಡಲು ನಿಶ್ಚಯಿಸೋಣ !

೨. ನಮ್ಮ ಮಾತಿನಿಂದ ಇತರರಿಗೆ ದುಃಖ ನೀಡದಿರುವ ನಿಶ್ಚಯ ಮಾಡೋಣ !

ನಾವು ನಿಜವಾದ ಅರ್ಥದಿಂದ ಮಕರಸಂಕ್ರಾತಿ ಆಚರಿಸೋಣ ! ಇಂದು ಮಕರಸಂಕ್ರಾಂತಿಯಿಂದ ನಾವು ಇತರರಿಗೆ ನೋವಾಗುವಂತೆ ಮಾಡನಾಡದೆ ಸವಿ ಮಾತನಾಡಿ ಇತರರಿಗೆ ಆನಂದ ನೀಡಲು ನಿಶ್ಚಯಿಸೋಣ ! ಇದೇ ನಿಜವಾದ ಮಕರಸಂಕ್ರಾಂತಿಯಾಗಿದೆ. ಸ್ನೇಹಿತರೇ, ನಮ್ಮ ಮಾತಿನಿಂದ ಇತರರಿಗೆ ದುಃಖ ನೀಡುವುದು ಪಾಪವಾಗಿದೆ. ನಾವು ಈ ಪಾಪದ ಪಾಲುದಾರರು ಆಗಬೇಕೇ ? ಇಲ್ಲವಲ್ಲ ! ಹಾಗಾದರೆ ಇಂದಿನಿಂದ ನಮ್ಮ ನಡೆ-ನುಡಿಯಲ್ಲಿ ಆದರ್ಶ ಬದಲಾವಣೆಯನ್ನು ತರಲು ನಿಶ್ಚಯಿಸೋಣ –

ಅ. ನಾವು ತಂದೆ-ತಾಯಿಯೊಂದಿಗೆ ಉದ್ಧಟವಾಗಿ ಮಾತನಾಡದೆ ನಮ್ರತೆಯಿಂದಲೇ ಮಾತನಾಡಬೇಕು.

ಆ. ಸ್ನೇಹಿತರಿಗೆ ಬೈಯ್ಯಬಾರದು.

ಇ. ಶಿಕ್ಷಕರು, ಅಣ್ಣ-ಅಕ್ಕ, ಹಿರಿಯರು ಮತ್ತು ನೆರೆಹೊರೆಯವರೊಂದಿಗೆ ಉದ್ಧಟವಾಗಿ ಮಾತನಾಡಬಾರದು.

ಈ. ಇತರರ ಹೆಸರು, ಕುಂದು-ಕೊರತೆಗಳ ಅಪಹಾಸ್ಯ ಮಾಡಬಾರದು.

ಉ. ಇತರರಿಗೆ ನೋವಾಗುವಂತಹ ಕುಚೇಷ್ಟೆ ಮಾಡಬಾರದು.

೩. ದೇವರ ಭಕ್ತಿ ವೃದ್ಧಿಸುವ ದಿನ

ಮಕರಸಂಕ್ರಾಂತಿಯ ಇನ್ನೊಂದು ವೈಶಿಷ್ಟವೆಂದರೆ ಆ ದಿನದಂದು ವಾತಾವರಣದಲ್ಲಿ ದೇವರ ಚೈತನ್ಯ ಹೆಚ್ಚಿರುತ್ತದೆ; ಆದ್ದರಿಂದ ನಾವು ಆ ದಿನದಂದು ಸಾಧ್ಯವಾದಷ್ಟು ಕುಲದೇವತೆಯ ನಾಮಜಪ ಮಾಡೋಣ. ಅದರಿಂದ ನಮಗೆ ದೇವರ ಹಚ್ಚೆಚ್ಚು ಶಕ್ತಿ ದೊರೆಯುತ್ತದೆ. ಸ್ನೇಹಿತರೇ, ನಾವು ದೇವರಲ್ಲಿ ನಮ್ಮ ದುರ್ಗುಣಗಳನ್ನು ನಾಶ ಪಡಿಸುವ ಶಕ್ತಿಯನ್ನು ಕೇಳೋಣ !

೪. ಮಕರಸಂಕ್ರಾಂತಿಗೆ ಪ್ಲಾಸ್ಟಿಕ್ ವಸ್ತುಗಳನಲ್ಲ, ಧರ್ಮದ ಜ್ಞಾನ ನೀಡುವ ಗ್ರಂಥ
ಅಥವಾ ಸಾತ್ವಿಕ ವಸ್ತುಗಳನ್ನೇ ಉಡುಗೊರೆಯನ್ನಾಗಿ ನೀಡೋಣ !

ಬೇರೆಯವರಿಗೆ ಉಡುಗೊರೆ ನೀಡುವುದು ಅಂದರೆ ಇನ್ನೊಬ್ಬ ವ್ಯಕ್ತಿಯಲ್ಲಿರುವ ಈಶ್ವರನಲ್ಲಿ ತನು-ಮನ ಮತ್ತು ಧನ ಅರ್ಪಿಸಿ ಶರಣು ಹೋಗುವುದು ಎಂದು ಹೇಳಬಹುದು. 'ದೇವರೇ, ಈ ದೇಹವು ನಿನ್ನದಿದೆ, ಮನಸ್ಸು ಕೂಡಾ ನಿನ್ನದೇ ಆಗಿದೆ ಮತ್ತು ನನ್ನಲ್ಲಿರುವ ಹಣವೂ ನಿನ್ನದೇ' ಎಂಬ ಭಾವವು ಉಡುಗೊರೆ ನೀಡುವಾಗ ನಮ್ಮಲ್ಲಿ ನಿರ್ಮಾಣವಾಗಬೇಕು. ಅದಕ್ಕಾಗಿ ಉಡುಗೊರೆಯೆಂದು ನಾವು ಯಾವುದನ್ನು ನೀಡುತ್ತೇವೆಯೋ ಅದು ಸಾತ್ವಿಕವಾಗಿರಬೇಕು. ಪ್ಲಾಸ್ಟಿಕಿನ ಡಬ್ಬಾ ನೀಡಿದರೆ ಯಾವ ಲಾಭವಾಗುತ್ತದೆ ? ಕೇವಲ ವಸ್ತು ಇಡಲು ಸಹಾಯವಾಗುತ್ತದೆ; ಆದರೆ ಸ್ನೇಹಿತರೇ, ನಾವು ಶ್ರೀರಾಮರಕ್ಷಾಸ್ತೊತ್ರ ಅಥವಾ ಶ್ರೀ ಗಣಪತಿ, ಶ್ರೀ ಸರಸ್ವತೀದೇವಿ ಇತ್ಯಾದಿ ದೇವತೆಗಳ ಬಗ್ಗೆ ತಿಳಿಸುವ ಕಿರುಗ್ರಂಥ ನೀಡಿದರೆ ಅನೇಕರಿಗೆ ನಮ್ಮ ಧರ್ಮದ ಜ್ಞಾನ ದೊರೆಯುತ್ತದೆ. ದೇವರ ಬಗ್ಗೆ ಅವರಲ್ಲಿ ಇರುವ ಭಕ್ತಿಯು ವೃದ್ಧಿಯಾಗುತ್ತದೆ. ಇಂತಹ ಉಡುಗೊರೆ ನೀಡುವುದು ದೇವರಿಗೆ ಕೂಡಾ ಇಷ್ಟವಾಗುತ್ತದೆ; ಆದ್ದರಿಂದ ಸ್ನೇಹಿತರೇ, ನಾವು ನಮ್ಮ ತಂದೆ-ತಾಯಿಯಗೆ ಇಂತಹ ಒಳ್ಳೆಯ ಉಡುಗೊರೆ ನೀಡಲು ವಿನಂತಿಸೋಣ !

೬. ಚೈತನ್ಯ ನೀಡುವ ಎಳ್ಳು

ಸ್ನೇಹಿತರೇ, ಈ ಕಾಲಾವಧಿಯಲ್ಲಿ ಚಳಿಯಿರುತ್ತದೆ, ಆದ್ದರಿಂದ ಈ ದಿನಗಳಲ್ಲಿ ಎಳ್ಳಿನ ಸೇವನೆ ಆಯುರ್ವೇದಕ್ಕನುಸಾರ ಲಾಭದಾಯಕವಾಗಿರುತ್ತದೆ. ಎಳ್ಳು ತಿನ್ನುವುದರಿಂದ ನಮ್ಮಲ್ಲಿ ದೇವತೆಗಳ ಚೈತನ್ಯ ಗ್ರಹಿಸುವ ಕ್ಷಮತೆ ವೃದ್ಧಿಸುತ್ತದೆ. ಈ ಚೈತನ್ಯದಿಂದಾಗಿ ನಮ್ಮಲ್ಲಿನ ದುರ್ಗುಣ ತೊಲಗಿಸುವ ಶಕ್ತಿ ನಿರ್ಮಾಣವಾಗುತ್ತದೆ. ದೇವತೆಗಳ ಗುಣಗಳು ನಮ್ಮಲ್ಲಿ ಬರುತ್ತವೆ. ಎಳ್ಳು ಚೈತನ್ಯದ ಕುರುಹು, ನಾವು ಇತರರಿಗೆ ಎಳ್ಳು ನೀಡುತ್ತೇವೆ ಅಂದರೆ ಇತರರಿಗೆ ಚೈತನ್ಯ ನೀಡುತ್ತೇವೆ. ಮಿತ್ರರೇ, ಈ ದಿನದಿಂದ ನಮ್ಮ ವರ್ತನೆ ಮತ್ತು ಮಾತುಗಳಿಂದ ಚೈತನ್ಯ ನೀಡಲು ನಿಶ್ಚಯಿಸೋಣ, ಇದೇ ನಿಜವಾದ ಮಕರಸಂಕ್ರಮಣವಾಗಿದೆ !

ಮಿತ್ರರೇ, ಈ ಮಕರಸಂಕ್ರಾಂತಿಗೆ ನಮ್ಮಲ್ಲಿ ದೇವರ ಗುಣಗಳನ್ನು ತಂದು ಚೈತನ್ಯ ವೃದ್ಧಿಸೋಣ ಮತ್ತು ನಮ್ಮ ಆದರ್ಶ ಮತ್ತು ಒಳ್ಳೆಯ ಮಾತಿನಿಂದ ಮಕರಸಂಕ್ರಾಂತಿ ದಿನದಂದೇ ಅಲ್ಲದೆ ಪ್ರತಿದಿನ ಇತರರಿಗೆ ಚೈತನ್ಯರೂಪಿ ಎಳ್ಳುಬೆಲ್ಲ ನೀಡೋಣ.

– ಶ್ರೀ. ರಾಜೇಂದ್ರ ಪಾವಸ್ಕರ (ಗುರೂಜಿ), ಪನವೆಲ.