ನೆಹರೂರವರ ಸಂಸ್ಕೃತ ದ್ವೇಷದಿಂದ ನಮಗಾದ ಅಪರಿಮಿತ ಹಾನಿಗಳು!

ನೆಹರೂರವರಿಂದಾಗಿ ಮೂರು ಯುಗಗಳವರೆಗೆ ಕ್ಷಯವಾಗದೇ ಇದ್ದ (ಅಕ್ಷಯವಾಗಿದ್ದ) ಮತ್ತು ಜನರಿಗೆ ಕರಗತವಾಗಿದ್ದ ಸಂಸ್ಕೃತಭಾಷೆಯು ನಾಶ ಹೊಂದುವ ಪರಿಸ್ಥಿತಿಯು ಬಂದೊದಗಿತು. ಮಹಾತ್ಮಾ ಗಾಂಧಿಯವರು ಎಲ್ಲ ಪ್ರದೇಶಗಳನ್ನು ವ್ಯಾಪಿಸಿಕೊಳ್ಳುವ ಭಾಷೆಯ ಸ್ವರೂಪದಲ್ಲಿ ಹಿಂದಿ ಭಾಷೆಗೆ ಸಮರ್ಥನೆ ನೀಡಿದರು. ಬಾಪೂವಿನ ಇಚ್ಛೆ ಎಂದು ಇಡೀ ದೇಶವು ಅದನ್ನು ಸ್ವೀಕರಿಸಿತು. ನೆಹರೂರವರು, ಸಂಸ್ಕೃತದ ಪ್ರಚಾರವನ್ನು ಮಾಡ ಬಾರದು, ಸಂಸ್ಕೃತದ ಕುರಿತು ಚರ್ಚೆಯನ್ನು ಮಾಡಬಾರದು ಎಂಬ ಪ್ರಕಾರದ ಸೂಚನೆಯನ್ನು ಹೊರಡಿಸಿ ಸಂಸ್ಕೃತದ ಪ್ರಭಾವದ ಮೇಲೆ ಕೊನೆಯ ಆಘಾತವನ್ನು ಮಾಡಿದರು. ಸಂಸ್ಕೃತ ಭಾಷೆಯನ್ನು ವಿರೋಧಿ ಸುವಲ್ಲಿ ಅವರ ಉದ್ದೇಶಗಳು ಮುಂದಿನಂತಿದ್ದವು.

೧. ಸಂಸ್ಕೃತ ಭಾಷೆಯ ಜ್ಞಾನವನ್ನು ನಿಲ್ಲಿಸಿದರೆ ಹಿಂದೂಗಳು ಮಾಡು ತ್ತಿರುವ ಎಲ್ಲ ಕೃತಿಗಳು ಮೇಲುಮೇಲಿನದ್ದಾಗುತ್ತವೆ. ಏಕೆಂದರೆ ಹಿಂದೂಗಳ ಎಲ್ಲ ಗ್ರಂಥಗಳು ಸಂಸ್ಕೃತದಲ್ಲಿಯೇ ಇವೆ. ಹಿಂದೂಗಳ ಪೂಜಾಪದ್ಧತಿಗಳು (ಕರ್ಮಕಾಂಡಗಳು) ಸಂಸ್ಕೃತದಲ್ಲಿವೆ. ಸಂಸ್ಕೃತದ ಜ್ಞಾನವಿಲ್ಲವಾದರೆ ಅವರಿಗೆ ತಾವು ಮಾಡುತ್ತಿರುವ ಕೃತಿಗಳ ಅರ್ಥವೇ ಗೊತ್ತಾಗುವುದಿಲ್ಲ.

೨. ಸಂಸ್ಕೃತ ಭಾಷೆಯ ಉಚ್ಚಾರದಿಂದಾಗಿ ಸಪ್ತದೇಹಗಳು ಅತ್ಯಂತ ದೊಡ್ಡ ಪ್ರಮಾಣದಲ್ಲಿ ಶುದ್ಧವಾಗುತ್ತವೆ. ಆದುದರಿಂದ ಮಾಂತ್ರಿಕರಿಗೆ ಸ್ಥಾನಗಳನ್ನು ನಿರ್ಮಾಣ ಮಾಡಲು ಆಗುವುದಿಲ್ಲ. ಆದುದರಿಂದ ಅವರು ಸಂಸ್ಕೃತಭಾಷೆಯ ಉಚ್ಚಾರದ ಮೇಲೆಯೂ ನಿರ್ಬಂಧ ಹೇರಿದರು.