ಭಾವೈಕ್ಯ ಭಾರತದ ಗುರುತು!

ಪ್ರಾಚೀನ ಕಾಲದಿಂದ ಸಂಸ್ಕೃತವು ಅಖಿಲ ಭಾರತದ ಭಾಷೆಯೆಂದು ಗುರುತಿಸಲ್ಪಡುತ್ತಿತ್ತು. ಕಾಶ್ಮೀರದಿಂದ ಲಂಕಾದವರೆಗೆ, ಗಾಂಧಾರದಿಂದ ಮಗಧದವರೆಗಿನ ವಿದ್ಯಾರ್ಥಿಗಳು ನಲಂದಾ, ತಕ್ಷಶಿಲಾ, ಕಾಶಿ ಮುಂತಾದ ವಿದ್ಯಾಪೀಠಗಳಲ್ಲಿ ಅನೇಕ ಶಾಸ್ತ್ರಗಳನ್ನು ಮತ್ತು ವಿದ್ಯೆಗಳನ್ನು ಈ ಭಾಷೆಯಲ್ಲಿಯೇ ಅಧ್ಯಯನ ಮಾಡುತ್ತಿದ್ದರು. ಈ ಭಾಷೆಯಿಂದಾಗಿ ರೂದಟ, ಕೈಯ್ಯಟ, ಮಮ್ಮಟ ಮುಂತಾದ ಕಾಶ್ಮೀರಿ ಪಂಡಿತರ ಗ್ರಂಥಗಳು ನೇರವಾಗಿ ರಾಮೇಶ್ವರದವರೆಗೆ ಪ್ರಸಿದ್ಧವಾದವು. ಆಯುರ್ವೇದದ ಜನಕರಾದ ಚರಕರು ಪಂಜಾಬದವರು, ಸುಶ್ರುತರು ವಾರಾಣಸಿಯವರು, ವಾಗ್ಭಟರು ಸಿಂಧ್ ಪ್ರಾಂತ್ಯದವರು, ಕಶ್ಯಪರು ಕಾಶ್ಮೀರದವರು ಮತ್ತು ವೃಂದರು ಮಹಾರಾಷ್ಟ್ರ ದವರಾಗಿದ್ದರು ಆದರೆ ಸಂಸ್ಕೃತದಿಂದಾಗಿಯೇ ಅವರು ಇಡೀ ಭಾರತದ ಗೌರವಾನ್ವಿತ ವ್ಯಕ್ತಿಗಳಾದರು.

ಇಂದಿನ ರಾಜ್ಯಕರ್ತರು ಮಾತ್ರ ಭಾರತವನ್ನು ಭಾವೈಕ್ಯದಿಂದಿಡಬಲ್ಲ ಈ ಭಾಷೆಯನ್ನು ಮರೆಯುತ್ತಿದ್ದಾರೆ. ಮೊದಲಿನಿಂದಲೂ ಸಂಸ್ಕೃತವನ್ನು ಕಡ್ಡಾಯಗೊಳಿಸುವ ಬದಲು ಆಂಗ್ಲವನ್ನೇ ಕಡ್ಡಾಯ ಭಾಷೆಯನ್ನಾಗಿಸಲು ನೋಡುತ್ತಿದ್ದಾರೆ. ಸಂಸ್ಕೃತ ವಿದ್ಯಾಪೀಠದ ಅವಶ್ಯಕತೆ ಏನಿದೆ ಎಂಬ ಪ್ರಶ್ನೆಯನ್ನು ಅವರು ವಿಚಾರಿಸುತ್ತಿದ್ದಾರೆ. ಫೆಬ್ರವರಿ ೨೦೦೭ರಲ್ಲಿ ವಾರಾಣಸಿಯಲ್ಲಿ ‘ಸಂಪೂರ್ಣಾನಂದ ಸಂಸ್ಕೃತ ವಿಶ್ವವಿದ್ಯಾಲಯ’ದ ೨೭ನೆಯ ದೀಕ್ಷಾ ಸಮಾರಂಭಕ್ಕೆ ಆಮಂತ್ರಿಸಲ್ಪಟ್ಟ ಉತ್ತರಪ್ರದೇಶದ ರಾಜ್ಯಪಾಲ ಮತ್ತು ಆ ವಿದ್ಯಾಪೀಠದ ಕುಲಪತಿಯಾಗಿದ್ದ ಶ್ರೀ.ಟಿ. ರಾಜೇಶ್ವರ ಇವರು ಸಂಸ್ಕೃತ ಭಾಷೆಯ ವಿರುದ್ಧ ಮುಂದಿನಂತೆ ಭಾಷಣ ಮಾಡಿದರು.

ಸಂಸ್ಕೃತವು ಎತ್ತಿನಗಾಡಿಯ ಕಾಲದ ಭಾಷೆಯಾಗಿದೆ. ಈ ಭಾಷೆಗಾಗಿ ವಿಶ್ವವಿದ್ಯಾಲಯವನ್ನು ಸ್ಥಾಪಿಸುವ ಅವಶ್ಯಕತೆಯಿಲ್ಲ. ಸಂಸ್ಕೃತದಲ್ಲಿನ ಪದವಿಯಿಂದ ಏನೂ ಲಾಭವಿಲ್ಲ. ಈ ಭಾಷೆಯು ತಿಂಗಳಿಗೆ ಎರಡು-ಮೂರು ಲಕ್ಷ ರೂಪಾಯಿಗಳನ್ನು ಸಂಪಾದಿಸಿ ಕೊಡಲಾರದು. ಅದಕ್ಕಿಂತ ಆಂಗ್ಲ ಭಾಷೆಯನ್ನು ಅಧ್ಯಯನ ಮಾಡಿರಿ ಎಂಬ ನುಡಿಮುತ್ತುಗಳನ್ನು(!) ಅವರು ಉದುರಿಸಿದರು. ವಿದ್ಯಾರ್ಥಿಗಳು ಅವರಿಗೆ ಹೊರಗೆ ಹೋಗುವ ದಾರಿಯನ್ನು ತೋರಿಸಿದರು. ಇಷ್ಟಾದರೂ ಸಂಸ್ಕೃತದ ಮಹತ್ವವನ್ನು ಅರಿಯದ ಇಂತಹ ಮೂರ್ಖ ರಾಜ್ಯಕರ್ತರನ್ನು ಅಧಿಕಾರದಿಂದ ತೊಲಗಿಸಿ ಭಾರತ ಬಿಟ್ಟು ಹೋಗಲು ದಾರಿ ತೋರಿಸುವುದೊಂದೇ ಇದಕ್ಕೆ ಪರಿಹಾರವಾಗಿದೆ.

Leave a Comment