೨೦೦೭ರಲ್ಲಾದ ಕೆಲವು ಸುಖಕರ ಮತ್ತು ದುಃಖಮಯ ಘಟನೆಗಳು

ಎಪ್ರಿಲ್ ೨೩, ೨೦೦೭ರಂದು ಭಾರತದ ಅಂದಿನ ರಾಷ್ಟ್ರಪತಿ ಡಾ.ಅಬ್ದುಲ್ ಕಲಾಂ ಇವರು ಗ್ರೀಸ್ ದೇಶಕ್ಕೆ ಹೋಗಿದ್ದರು. ಅಲ್ಲಿನ ಒಂದು ಸ್ವಾಗತ ಸಮಾರಂಭದಲ್ಲಿ ಗ್ರೀಸ್‌ನ ರಾಷ್ಟ್ರಪತಿ ಕಾರ್ಲೋಸ್ ಪಾಂಪಾಡಲೀಸ್‌ರು ‘ರಾಷ್ಟ್ರಪತಿ ಮಹಾಭಾಗ, ಸುಸ್ವಾಗತಂ ಯವನದೇಶೇ’ ಎಂಬ ಸಂಸ್ಕೃತ ವಾಕ್ಯದಿಂದ ತಮ್ಮ ಭಾಷಣವನ್ನು ಪ್ರಾರಂಭಿಸಿದ್ದರು. ತಮ್ಮ ಭಾಷಣದಲ್ಲಿ ಅವರು ಸಂಸ್ಕೃತವು ಪ್ರಾಚೀನ ಭಾರತದ ಭಾಷೆಯಾಗಿದ್ದು ಈ ಭಾಷೆಯ ಸಂಬಂಧವು ಗ್ರೀಕ್‌ನೊಂದಿಗೂ ಇರುವುದಾಗಿ ಅಭಿಮಾನದಿಂದ ತಿಳಿಸಿದರು.

ಜುಲೈ ೨೦೦೭ರಲ್ಲಿ ಅಮೇರಿಕಾ ಸೆನೆಟ್‌ಅನ್ನು ವೈದಿಕ ಪ್ರಾರ್ಥನೆಯಿಂದ ಪ್ರಾರಂಭಿಸಲಾಯಿತು. ಕಳೆದ ೨೧೮ ವರ್ಷಗಳ ಅಮೇರಿಕಾದ ಇತಿಹಾಸದಲ್ಲಿ ಈ ವಿಷಯವು ಮೊದಲಬಾರಿ ಘಟಿಸಿತು. ಓಂ ಶಾಂತಿಃ ಶಾಂತಿಃ ಶಾಂತಿಃ| ಎಂಬ ಸಂಸ್ಕೃತ ಪ್ರಾರ್ಥನೆಯನ್ನು ಹೇಳಿ ಸಂಸ್ಕೃತವನ್ನು ಮೃತಭಾಷೆ ಎನ್ನುವ ನೆಹರೂ-ಗಾಂಧಿ ಕುಟುಂಬಕ್ಕೆ ಅಮೇರಿಕಾ ಸೆನೆಟ್ ಛಡಿಯೇಟನ್ನೇ ನೀಡಿತು. ಅಮೇರಿಕನ್ ವಿದ್ಯಾಪೀಠಗಳಲ್ಲಿಯೂ ಸಂಸ್ಕೃತದ ಅಧ್ಯಯನ ಮತ್ತು ಅಧ್ಯಾಪನವು ಕಳೆದ ಅನೇಕ ವರ್ಷಗಳಿಂದ ನಡೆಯುತ್ತಿದೆ. ಅಲ್ಲಿನ ಕ್ಯಾಲಿಫೋರ್ನಿಯಾ ವಿದ್ಯಾಪೀಠದಲ್ಲಿ ೧೮೯೭ರಿಂದ ಸಂಸ್ಕೃತವನ್ನು ಕಲಿಸಲಾಗುತ್ತಿದೆ. ಅಗೋಸ್ತು ೨೭, ೨೦೦೭ ರಲ್ಲಿ ಜರುಗಿದ ಕ್ಯಾಲಿಫೋರ್ನಿಯಾ ಸೆನೆಟ್ ಸಹ ಸಂಸ್ಕೃತದ ಮಂತ್ರೋಚ್ಚಾರದಿಂದಲೇ ಪ್ರಾರಂಭವಾಗಿತ್ತು. ಮೆರಿ ಲ್ಯಾಂಡ್ (ಅಮೇರಿಕಾ) ವಿದ್ಯಾಪೀಠದ ವಿದ್ಯಾರ್ಥಿಗಳು ಸಂಸ್ಕೃತ ಭಾರತೀ ಎಂಬ ಹೆಸರಿನ ಒಂದು ಸಂಘವನ್ನು ಸ್ಥಾಪಿಸಿದ್ದು ಅವರು ಒಂದು ಸಂಕೇತ ಸ್ಥಳವನ್ನೂ ಪ್ರಾರಂಭಿಸಿದ್ದಾರೆ.

ಸಪ್ತಸಮುದ್ರಗಳಾಚೆ ಸಂಸ್ಕೃತವನ್ನು ಪ್ರಶಂಸಿಸಲಾಗುತ್ತಿದ್ದರೂ ಭಾರತದಲ್ಲಿನ ಕಾಂಗ್ರೆಸ್ ರಾಜ್ಯಕರ್ತರ ಸಂಸ್ಕೃತದ್ವೇಷವು ಮಾತ್ರ ಕಡಿಮೆಯಾಗುತ್ತಿಲ್ಲ. ಜುಲೈ ೨೦೦೭ರಲ್ಲಿ ಮಧ್ಯಪ್ರದೇಶದ ರಾಜ್ಯಪಾಲ ಬಲರಾಮ ಜಾಖಡರು ತಾಂತ್ರಿಕ ಕಾರಣಗಳನ್ನು ಮುಂದೊಡ್ಡಿ ಆ ರಾಜ್ಯದಲ್ಲಿನ ಮೊದಲ ಸಂಸ್ಕೃತ ವಿದ್ಯಾಪೀಠವನ್ನು ಸ್ಥಾಪಿಸಲು ಭಾಜಪ ಸರಕಾರವು ಸಮ್ಮತಿ ನೀಡಿದ್ದ ವಿಧೇಯಕವನ್ನು ತಡೆಹಿಡಿದರು.