ಸ್ವಾಮಿ ವಿವೇಕಾನಂದ


ಸ್ವಾಮಿ ವಿವೇಕಾನಂದರ ಪೂರ್ವಾಶ್ರಮದ ಹೆಸರು ’ನರೇಂದ್ರ’. ಮುಂದೆ ಅವರು ಸ್ವಾಮಿ ವಿವೇಕಾನಂದರಾದರು.

ನರೇಂದ್ರ ಚಿಕ್ಕವನಿದ್ದಾಗ ಆಟದಲ್ಲಿ ಮುಳುಗಿ ಬಿಡುತ್ತಿದ್ದನೆಂದು ಅಪ್ಪ ಚಿಂತಿಸುತ್ತಿದ್ದರು

ನರೇಂದ್ರನ ತಂದೆ ಕಲಕತ್ತಾದಲ್ಲಿ ಒಬ್ಬ ಪ್ರಸಿದ್ಧ ವಕೀಲರಾಗಿದ್ದರು. ಒಂದು ಸಲ ಅವರಿಗೆ ನ್ಯಾಯಾಲಯದಿಂದ ಮನೆಗೆ ಬರಲು ತಡವಾಯಿತು. ಆಗಲೂ ನರೇಂದ್ರ ಹೊರಗೇ ಆಡುತ್ತಿದ್ದ. ಇದನ್ನು ನೋಡಿ ಅವರು ತಮ್ಮ ಪತ್ನಿಯನ್ನು ಕರೆದು ಹೇಳಿದರು, "ನಿನಗೆ ಇವನ ಬಗ್ಗೆ ಕಾಳಜಿ ಇದೆ ಎಂದು ನನಗನಿಸುವುದಿಲ್ಲ. ಕಾಳಜಿ ಇದ್ದರೆ ನೀನು ಇವನನ್ನು ಇಷ್ಟು ಹೊತ್ತಿನಲ್ಲಿ ಹೀಗೆ ಹೊರಗೆ ಹೋಗಿ ಆಟವಾಡಲು ಬಿಡುತ್ತಿರಲಿಲ್ಲ" ಎಂದು. ಇದನ್ನು ಕೇಳಿದ ತಾಯಿ ನರೇಂದ್ರನನ್ನು ಮನೆ ಒಳಗೆ ಕರೆದುಕೊಂಡು ಹೋದರು.

ಧರ್ಮ-ಅಧರ್ಮದ ಯುದ್ಧದಲ್ಲಿ ಶ್ರೀಕೃಷ್ಣನಂತೆ ಸಾರಥಿಯಾಗಬೇಕೆಂದು ತಾಯಿಯು ಮಗನಿಗೆ ತಿಳಿಸುವುದು

ರಾತ್ರಿ ಊಟವಾದ ನಂತರ ಎಲ್ಲರು ಮಲಗಿದರು. ನರೇಂದ್ರ ಮತ್ತು ಅವನ ತಾಯಿ ಮಾತ್ರ ಎಚ್ಚರವಾಗಿದ್ದರು. ಏನೂ ಹೇಳದೆ ತಾಯಿಯು ನರೇಂದ್ರನನ್ನು, ಗೀತೋಪದೇಶ ಮಾಡುತ್ತಿರುವ ಕೃಷ್ಣನ ದೊಡ್ಡ ಚಿತ್ರದ ಮುಂದೆ ಕರೆದುಕೊಂಡು ಹೋದರು. ಅರ್ಜುನನಿಗೆ ಭಗವದ್ಗೀತೆಯನ್ನು ಉಪದೇಶ ಮಾಡುತ್ತಿರುವ ಚಿತ್ರ ಅವಳಿಗೆ ತುಂಬಾ ಆಧಾರವೆನಿಸುತ್ತಿತ್ತು. ತಾಯಿಯು ನರೇಂದ್ರನನ್ನು ಕೇಳಿದರು, "ಮಗು, ನಿನಗೆ ಇವರಿಬ್ಬರಲ್ಲಿ ಯಾರಂತೆ ಆಗಬೇಕೆಂದು ಅನಿಸುತ್ತದೆ?" ಆಗ ನರೇಂದ್ರ ಉತ್ತರಿಸಿದನು, "ಬಂಡಿ ಓಡಿಸುವವನಂತೆ". ಆಗ ಅವನ ತಾಯಿ "ನಿನಗೆ ಬಂಡಿ ಓಡಿಸುವವನಂತೆ ಆಗಬೇಕೆಂಬ ಇಚ್ಛೆ ಇದೆ ಅಲ್ಲವೇ, ಹಾಗಿದ್ದರೆ ನೋಡು ಭಗವಾನ ಶ್ರೀಕೃಷ್ಣನು ಕೂಡ ಸಾರಥಿಯೇ ಆದರೆ ಯಾರಿಗೆ? ಅಧರ್ಮ ನಾಶಕ್ಕಾಗಿ ಸಜ್ಜಾಗಿ ನಿಂತಿರುವ ಅರ್ಜುನನಿಗೆ!" ಎಂದು ಹೇಳಿದರು.

ತಾಯಿಯ ಆರ್ತತೆಯ ಅರಿವಾಗುವುದು

"ಕೇವಲ ವ್ಯಾಪಕ ಧ್ಯೇಯವಷ್ಟೇ ಇದ್ದರೆ ಸಾಲದು ಅದಕ್ಕಾಗಿ ಪ್ರಯತ್ನ ಮಾಡುವುದು ಅವಶ್ಯಕವಾಗಿದೆ. ಅದಕ್ಕಾಗಿ ಶಿಕ್ಷಣವೂ ಅಷ್ಟೇ ಮುಖ್ಯವಾಗಿದೆ. ಶಿಕ್ಷಣವಿಲ್ಲದೆ ಕಲಿಯುವುದು ಹೇಗೆ ಸಾಧ್ಯ? ಹಾಗಿದ್ದರೆ ಈಗ ಮುಖ್ಯವೇನೆಂದರೆ ಸತತವಾಗಿ ನಮ್ಮ ಧ್ಯೇಯದ ಕಡೆ ಲಕ್ಷ್ಯವಿರುವುದು. ನಿನ್ನ ಧ್ಯೇಯದ ಅರಿವು ಸದಾ ನಿನ್ನ ಮನಸ್ಸಿನಲ್ಲಿರಲಿ. ಈಗ ನೀನು ನಿನ್ನ ಸಂಪೂರ್ಣ ಲಕ್ಷ್ಯ ಅಧ್ಯಯನದ ಕಡೆಗೆ ನೀಡು". ತಾಯಿ ಹೇಳುವುದು ನರೇಂದ್ರನಿಗೆ ಅರ್ಥವಾಗಲಿಲ್ಲ ಆದರೆ ಅದರ ಹಿಂದಿನ ಆರ್ತತೆಯ ಅರಿವಾಯಿತು. ತಾಯಿಯು ನರೇಂದ್ರನ ಮನಸ್ಸಿನಲ್ಲಿ ವ್ಯಾಪಕ ಧ್ಯೇಯದ ಚಿತ್ರಣ ಮೂಡಿಸಿದ್ದರು. ಕಾಲಾಂತರ ನರೇಂದ್ರನ ವಿದ್ಯಾಭ್ಯಾಸವು ಸಂಪೂರ್ಣವಾಯಿತು. ಕೆಲಸಕ್ಕಾಗಿ ಅವರು ತುಂಬಾ ಹುಡುಕಾಡಿದರು ಆದರೆ ಮನಸ್ಸಿಗೆ ಇಷ್ಟವಾಗುವಂತ ಕೆಲಸ ಸಿಗಲಿಲ್ಲ.

ನರೇಂದ್ರ ಮತ್ತು ರಾಮಕೃಷ್ಣ ಪರಮಹಂಸರ ಭೇಟಿ

ಒಂದು ಸಲ ನರೇಂದ್ರನ ಸ್ನೇಹಿತನು ಅವನನ್ನು ರಾಮಕೃಷ್ಣ ಪರಮಹಂಸರ ಬಳಿ ಕರೆದುಕೊಂಡು ಹೋದರು. ನರೇಂದ್ರನನ್ನು ನೋಡಿದ ತಕ್ಷಣ ರಾಮಕೃಷ್ಣರು "ಎಲ್ಲಿದ್ದೆ ನೀನು ಇಷ್ಟು ದಿನ? ಯಾವಾಗದಿಂದ ನಾನು ನಿನ್ನ ದಾರಿ ಕಾಯುತ್ತಿದ್ದೆ!" ಎಂದು ಉದ್ಗರಿಸಿದರು. ರಾಮಕೃಷ್ಣರು ಅವರ ಮೇಲೆ ಕೃಪೆಯ ಧಾರೆಯನ್ನೇ ಎಳೆದರು. ಧರ್ಮಪ್ರಸಾರದ ಮಹತ್ವದ ಜವಬ್ದಾರಿಯನ್ನು ಅವರು ನರೇಂದ್ರನಿಗೆ ವಹಿಸಿದರು. ಭಾರತದಲ್ಲಿ ಮಾತ್ರವಲ್ಲದೇ ಸಪ್ತಸಾಗರದ ಆಚೆ ನರೇಂದ್ರನು ’ಸನಾತನ ಧರ್ಮ’ದ ಧ್ವಜವನ್ನು ಹಾರಿಸಿದನು!

ಮಕ್ಕಳೇ, ನರೇಂದ್ರನು ಭಗವಾನ ಶ್ರೀಕೃಷ್ಣನ ಆದರ್ಶವನ್ನು ಕಣ್ಣಮುಂದೆ ಇಟ್ಟುಕೊಂಡು ಅವರ ಹಾಗೆ ವ್ಯಾಪಕವಾಗಬೇಕೆಂಬ ಧ್ಯೇಯವನ್ನಿಟ್ಟಿದ್ದನು. ನೀವೂ ಸಹ ಧರ್ಮಪ್ರಸಾರದ ವ್ಯಾಪಕ ಧ್ಯೇಯವನ್ನು ನಿಶ್ಚಯಿಸಿ ಅದನ್ನು ಸಾಧಿಸಲು ತಳಮಳದಿಂದ ಪ್ರಯತ್ನಿಸಿರಿ.

ಶ್ರೀ. ಪ್ರಸಾದ ಮ್ಹೆಸಕರ

Leave a Comment