ಸಾಷ್ಟಾಂಗ ನಮಸ್ಕಾರವನ್ನು ಹೇಗೆ ಮಾಡಬೇಕು?

ಉಪಾಸ್ಯ ದೇವತೆಗೆ ಶರೀರದಿಂದ, ಮನಸ್ಸಿನಿಂದ ಮತ್ತು ವಾಣಿಯಿಂದ ಶರಣಾಗಿ ಮಾಡಿದ ನಮಸ್ಕಾರವೆಂದರೆ, ‘ಸಾಷ್ಟಾಂಗ ನಮಸ್ಕಾರ’ !

ಸಾಷ್ಟಾಂಗ ನಮಸ್ಕಾರ ಮಾಡುವ ವಿಧಾನ

  • ಮೊದಲು ಎರಡೂ ಕೈಗಳನ್ನು ಎದೆಯ ಸಮೀಪ ಜೋಡಿಸಬೇಕು (ನಮಸ್ಕಾರದ ಮುದ್ರೆಯಂತೆ). ನಂತರ ಸೊಂಟ ಬಗ್ಗಿಸಬೇಕು, ನಂತರ ಎರಡೂ ಅಂಗೈಗಳನ್ನು ನೆಲದ ಮೇಲಿಡಬೇಕು, ಮೊದಲು ಬಲಗಾಲನ್ನು, ಆಮೇಲೆ ಎಡಗಾಲನ್ನು ಹಿಂದಕ್ಕೆ ಸರಿಸಿ ಎರಡೂ ಕಾಲುಗಳನ್ನು ನೇರವಾಗಿ ಉದ್ದ ಮಾಡಬೇಕು.
  • ಕೈಗಳನ್ನು ಮಡಚಿ ತಲೆ, ಎದೆ, ಅಂಗೈ, ಮೊಣಕಾಲು ಮತ್ತು ಕಾಲುಗಳ ಬೆರಳುಗಳು ನೆಲಕ್ಕೆ ತಾಗುವಂತೆ ಮಲಗಬೇಕು ಹಾಗೂ ಕಣ್ಣುಗಳನ್ನು ಮುಚ್ಚಿಕೊಳ್ಳಬೇಕು.
  • ಮನಸ್ಸಿನಿಂದ ನಮಸ್ಕರಿಸಬೇಕು ಮತ್ತು ಬಾಯಿಯಿಂದ ‘ನಮಸ್ಕಾರ’ ಎಂದು ಹೇಳಬೇಕು.
  • ಎದ್ದುನಿಂತು ಎರಡೂ ಕೈಗಳನ್ನು ಅನಾಹತಚಕ್ರದ ಬಳಿ (ಎದೆಯ ಮೇಲೆ) ಜೋಡಿಸಿ ಶರಣಾಗತ ಭಾವದಿಂದ ನಮಸ್ಕಾರ ಮಾಡಬೇಕು.

Leave a Comment