ಋಷಿಮುನಿಗಳಿಗೆ ತಿಳಿದ ಧನಾತ್ಮಕ ಹಾಗೂ ಋಣಾತ್ಮಕ ಬಿಂದು, ಅವುಗಳ ಬಗ್ಗೆ ವಿಜ್ಞಾನದ ಸಂಶೋಧನೆ

ರಾಜಧಾನಿ ದೆಹಲಿಯಲ್ಲಿ ವೈದಿಕವಾಸ್ತುವಿನ ಬಗ್ಗೆ ಅಧ್ಯಯನ ಮಾಡುತ್ತಿರುವ ಆಧುನಿಕ ವಾಸ್ತುಕಾರರು ತಮ್ಮ ವರದಿಯಲ್ಲಿಯಾವುದೇ ಸ್ಥಾನವು ಕೆಟ್ಟದಾಗಿಲ್ಲ, ಆದರೆ ಅದರ ಉಪಯೋಗಿಸುವ ಪದ್ಧತಿ ಯೋಗ್ಯವಿರಬೇಕು. ಬಹುಶಃ ೧೦೦ ಕಿ.ಮೀ. ಕ್ಷೇತ್ರದಲ್ಲಿ ಭೂಮಿಯ ಶಕ್ತಿಯ ಪ್ರಭಾವವು ಸಮಾನವಾಗಿರುತ್ತದೆ. ಆದುದರಿಂದ ಅಲ್ಲಿ ಸಕಾರಾತ್ಮಕ ಮತ್ತು ನಕಾರಾತ್ಮಕ ಬಿಂದುಗಳನ್ನು ಹುಡುಕಬೇಕಾಗುತ್ತದೆ. ವಿಶ್ರಾಂತಿ ಕೋಣೆ ಮತ್ತು ನಡುಮನೆಯನ್ನು ಸಕಾರಾತ್ಮಕ ಶಕ್ತಿಕೇಂದ್ರದಲ್ಲಿ ನಿರ್ಮಿಸಬೇಕು. ಎಲ್ಲಿ ಕಡಿಮೆ ಸಕಾರಾತ್ಮಕ ಶಕ್ತಿಕೇಂದ್ರವಿದೆಯೋ ಅಲ್ಲಿ ಶೌಚಾಲಯ ಅಥವಾ ಸ್ನಾನಗೃಹವನ್ನು ನಿರ್ಮಿಸಬೇಕು, ಏಕೆಂದರೆ ಮನುಷ್ಯನು ಅಲ್ಲಿ ಕಡಿಮೆ ಸಮಯ ಇರುತ್ತಾನೆಎಂದು ಹೇಳಿದ್ದಾರೆ.

ವರದಿಯಲ್ಲಿ ಮುಂದೆಭಾರತದಲ್ಲಿ ಪ್ರಹರಗಳನ್ನು ನಂಬಲಾಗಿದೆ. (ದಿನದ ಮೂರು ತಾಸಿನ ಕಾಲವೆಂದರೆ ಪ್ರಹರ) ಪ್ರತಿಯೊಂದು ಪ್ರಹರದಲ್ಲಿ ವಿವಿಧ ರೀತಿಯ ಶಕ್ತಿತರಂಗಗಳು ಹೊರಡುತ್ತವೆ. ವಿಶೇಷವಾಗಿ ರಾತ್ರಿ ಎರಡು ಗಂಟೆಯಿಂದ ಪ್ರಾತಃಕಾಲ ಗಂಟೆಯವರೆಗಿನ ಸಮಯವನ್ನು ಬ್ರಾಹ್ಮೀಮುಹೂರ್ತ ಎಂದು ಹೇಳುತ್ತಾರೆ. ಸಮಯದಲ್ಲಿ ಸೂರ್ಯೋದಯಕ್ಕಿಂತ ಮೊದಲು ಕೆಲವು ಸಕಾರಾತ್ಮಕ ಶಕ್ತಿತರಂಗಗಳು ಮನುಷ್ಯನವರೆಗೆ ತಲುಪುತ್ತವೆ. ಶಕ್ತಿತರಂಗಗಳು ಕಟ್ಟಡದ ಈಶಾನ್ಯ ದಿಕ್ಕಿಗೆ ಇದ್ದರೆ ಅವು ಅಲ್ಲಿಯೇ ನಿಲ್ಲುತ್ತವೆ. ಸಕಾರಾತ್ಮಕ ಶಕ್ತಿತರಂಗಗಳು ಕಟ್ಟಡವನ್ನುಚಾರ್ಜ್ಗೊಳಿಸುವುದಿಲ್ಲ. ವಿಷಯಗಳು ಪ್ರಯೋಗದಿಂದ ಗಮನಕ್ಕೆ ಬಂದಿವೆಎಂದು ಕೊಡಲಾಗಿದೆ. (‘ನವಭಾರತ ನಾಗಪೂರ’, ೧೭..೧೯೯೬)