ಔಷಧ ನಿರ್ಮಿತಿಯ ಪಿತಾಮಹ: ಆಚಾರ್ಯ ಚರಕರು!




ವಿವಿಧ ಸಿದ್ಧಾಂತಗಳಿಂದಾಗಿ ಶರೀರಶಾಸ್ತ್ರದ ಬಗ್ಗೆ ಗೊಂದಲದ ಸ್ಥಿತಿಯಿದೆ. ಆದರೆ ಕ್ರಿಸ್ತಪೂರ್ವ ೬೦೦ರಲ್ಲಿ ಆಚಾರ್ಯ ಚರಕರು ಶರೀರಶಾಸ್ತ್ರ, ಗರ್ಭಶಾಸ್ತ್ರ, ರಕ್ತಪರಿಚಲನಾಶಾಸ್ತ್ರ, ಔಷಧಶಾಸ್ತ್ರ ಮುಂತಾದವುಗಳ ಬಗ್ಗೆ ಅಪಾರ ಸಂಶೋಧನೆಯನ್ನು ಮಾಡಿದ್ದರು. ಮಧುಮೇಹ, ಕ್ಷಯರೋಗ, ಹೃದಯವಿಕಾರ ಮುಂತಾದ ಭೀಕರ ರೋಗಗಳ ಮೂಲಕಾರಣ ಮತ್ತು ಔಷಧೋಪಚಾರಗಳ ವಿಷಯದಲ್ಲಿಯೂ ಅವರು ಅಮೂಲ್ಯವಾದ ಜ್ಞಾನ ಭಂಡಾರವನ್ನು ಅಖಿಲ ಜಗತ್ತಿಗಾಗಿ ತೆರೆದಿಟ್ಟಿದ್ದಾರೆ. ಪಾಶ್ಚಾತ್ಯರನ್ನೂ ದಿಙ್ಮೂಢಗೊಳಿಸುವ ವೈಜ್ಞಾನಿಕ ಸಂಶೋಧನೆಗಳನ್ನು ಋಷಿಮುನಿಗಳಿಗೆ ಸಾಧನೆಯ ಬಲದಿಂದ ಮಾಡಲು ಸಾಧ್ಯವಾಯಿತು.