ಎಲ್ಲಿ ಗ್ರಹಗಳ ಸಂಪೂರ್ಣ ಮಾಹಿತಿಯನ್ನು ಅಲ್ಪಾವಧಿಯಲ್ಲಿ ಕಂಡು ಹಿಡಿಯುವ ಋಷಿಗಳು

ಪರಮೇಶ್ವರನು ನಿರ್ಮಿಸಿದ ವಿಷಯಗಳ ಸಂಶೋಧನೆಯನ್ನು ಮಾಡಲು ಮಿತಿಯಿದೆ ಅಥವಾ ಸಂಶೋಧಿಸುವವರಿಗೆ ತಮ್ಮ ಮಿತಿಯನ್ನು ಮೀರಲು ಆಗುವುದಿಲ್ಲ. ಇದಕ್ಕೆ ವಿರುದ್ಧವಾಗಿ ಈಶ್ವರಪ್ರಾಪ್ತಿಯ ತಳಮಳ ಇರುವವರು ಅನಂತ ಬ್ರಹ್ಮಾಂಡವನ್ನು ಸೂಕ್ಷ್ಮದಿಂದ ನೋಡಬಹುದು ಮತ್ತು ಅವರಿಗೆ ಬ್ರಹ್ಮಾಂಡದಲ್ಲಿನ ಪ್ರತಿಯೊಂದು ಘಟಕದ ಹೆಸರುಗಳೂ ವೈಶಿಷ್ಟ್ಯಸಹಿತ ಗೊತ್ತಾಗುತ್ತವೆ. ಇದರ ಉತ್ತಮ ಉದಾಹರಣೆ ಎಂದರೆಹಿಂದೂ ಪಂಚಾಂಗ’. ಹಿಂದೂ ಪಂಚಾಂಗದ ಗತಿಯು ಅನಂತ ಬ್ರಹ್ಮಾಂಡದ ಗತಿಯ ಮೇಲೆ ಅವಲಂಬಿಸಿದೆ. ಒಂದು ಬ್ರಹ್ಮಾಂಡದ, ಒಂದು ಆಕಾಶಗಂಗೆಯಲ್ಲಿನ, ಒಂದು ಸೂರ್ಯ ಮಂಡಲದ ಗತಿಯೂ ಅನಂತ ಬ್ರಹ್ಮಾಂಡದ ಗತಿಯ ಮೇಲೆ ಅವಲಂಬಿಸಿಕೊಂಡಿರುತ್ತದೆ. ಇದರಿಂದ ಮಾನವನ ೬೦ ವರ್ಷಗಳಲ್ಲಿ, ಒಂದು ಸೂರ್ಯಮಂಡಲದ ಗತಿಯು ಯಾವ ರೀತಿಯಲ್ಲಿ ನಿರ್ಧರಿತವಾಗುತ್ತದೆಯೋ, ಗತಿಯ ಆಧಾರದಲ್ಲಿಯೇ ಅನಂತ ಬ್ರಹ್ಮಾಂಡದ ಗತಿಯೂ ನಿರ್ಧರಿತವಾಗುತ್ತದೆ. ಆದುದರಿಂದ ಪ್ರತಿ ೬೦ ವರ್ಷಕ್ಕೊಮ್ಮೆ ಮೊದಲ ಪಂಚಾಂಗವು ಮತ್ತೊಮ್ಮೆ ಅಸ್ತಿತ್ವಕ್ಕೆ ಬರುತ್ತದೆ. ಅದರಲ್ಲಿ ಎಳ್ಳಷ್ಟೂ ವ್ಯತ್ಯಾಸವಾಗುವುದಿಲ್ಲ.