ಮಕ್ಕಳಲ್ಲಿ ರಾಷ್ಟ್ರದ ಬಗ್ಗೆ ಅಭಿಮಾನವನ್ನು ಹೇಗೆ ನಿರ್ಮಾಣ ಮಾಡುವಿರಿ ?

ಸದ್ಯದ ಸ್ಥಿತಿ

ನಾವು ಮಕ್ಕಳ ಅವಲೋಕನವನ್ನು ಮಾಡಿದಾಗ, ಮಕ್ಕಳಲ್ಲಿ ರಾಷ್ಟ್ರಾಭಿಮಾನದ ಅಭಾವ ಕಂಡು ಬರುತ್ತದೆ. ಒಂದು ವೇಳೆ ಈ ಸ್ಥಿತಿಯು ಹೀಗೆಯೇ ಉಳಿದರೆ, ರಾಷ್ಟ್ರದ ವಿನಾಶವಾಗಲು ಸಮಯ ತಗಲದು. ಆದುದರಿಂದ ನಾವು ಮಕ್ಕಳಲ್ಲಿ ರಾಷ್ಟ್ರಾಭಿಮಾನ ನಿರ್ಮಾಣವಾಗುವ ಸಲುವಾಗಿ ಪ್ರಯತ್ನ ಮಾಡಲೇಬೇಕು.

ರಾಷ್ಟ್ರದ ನಾಗರಿಕರ ಒಮ್ಮತ ಹಾಗೂ ಸಂಘಟಿತತನದಿಂದ ರಾಷ್ಟ್ರದ ಅಖಂಡತ್ವವು ಸ್ಥಿರವಾಗಿರುತ್ತದೆ. ಇಂದಿನ ವಿದ್ಯಾರ್ಥಿಗಳೇ ಭಾವಿ ಭಾರತದ ನಾಗರಿಕರಾಗಿರುತ್ತಾರೆ. ಆದುದರಿಂದ ವಿದ್ಯಾರ್ಥಿಗಳಲ್ಲಿ ಚಿಕ್ಕಂದಿನಿಂದಲೇ ಪ್ರಖರ ರಾಷ್ಟ್ರಾಭಿಮಾನವನ್ನು ನಿರ್ಮಾಣ ಮಾಡುವುದು ಅತ್ಯಂತ ಆವಶ್ಯಕವಾಗಿರುತ್ತದೆ. ಇಲ್ಲದಿದ್ದರೆ ದೊಡ್ಡವರಾದ ಮೇಲೆ ಸಮಾಜಕ್ಕಾಗಿ ಅಂದರೆ ರಾಷ್ಟ್ರಕ್ಕಾಗಿ ತ್ಯಾಗ ಮಾಡುವ ವೃತ್ತಿಯು ಅವರಲ್ಲಿ ನಿರ್ಮಾಣವಾಗಲು ಸಾಧ್ಯವಿಲ್ಲ. ಅನೇಕ ವರ್ಷಗಳ ನಂತರವೂ ಜಗತ್ತಿನಾದ್ಯಂತ ಪಸರಿಸಿದ ಇಸ್ರೇಲಿನ ನಾಗರಿಕರು ಒಂದೆಡೆ ಬರಲು ಸಾಧ್ಯವಾಯಿತು, ಅದರ ಹಿಂದೆ ಮುಂದಿನ ಪೀಳಿಗೆಯಲ್ಲಿ ಅವರು ನಿರ್ಮಾಣ ಮಾಡಿದ ಪ್ರಖರ ರಾಷ್ಟ್ರಭಕ್ತಿಯೇ ಕಾರಣ.

ಮಕ್ಕಳಿಗೆ ಯೋಗ್ಯ ದೃಷ್ಟಿಕೋನವನ್ನು ನೀಡುವ ಇತಿಹಾಸವನ್ನು ಕಲಿಸುವುದು ಆವಶ್ಯಕ

ನಿಜವಾಗಿ ಹೇಳಬೇಕೆಂದರೆ ಇತಿಹಾಸ ವಿಷಯವನ್ನು ಕಲಿತು ಮಕ್ಕಳಲ್ಲಿ ರಾಷ್ಟ್ರಾಭಿಮಾನವು ನಿರ್ಮಾಣವಾಗಬೇಕಿತ್ತು, ಆದರೆ ನಮ್ಮ ಶಿಕ್ಷಣವು ಅಂಕಗಳನ್ನು ನೋಡುತ್ತದೆ.. ಪರೀಕ್ಷೆಗಳಲ್ಲಿ ದೊರೆತ ಅಂಕಗಳ ಮೇಲೆ ಮಕ್ಕಳ ‘ಮೌಲ್ಯಮಾಪನ’ ಮಾಡಲಾಗುತ್ತದೆ. ಅದರಿಂದಾಗಿ ಮಕ್ಕಳ ಗಮನವು ಅಂಕಗಳನ್ನು ಹೆಚ್ಚಿಸಿಕೊಳ್ಳುವತ್ತ ಇರುತ್ತದೆ. ಇಂದಿನ ಮಕ್ಕಳು ಎಲ್ಲ ವಿಷಯಗಳಂತೆ ‘ಇತಿಹಾಸ’ ಈ ವಿಷಯವನ್ನು ಅಂಕಗಳಿಗಾಗಿ ಕಲಿಯುತ್ತಾರೆ. ಉದಾ. ‘ಭಗತಸಿಂಗ ಈ ಚರಿತ್ರೆಯು ಪರೀಕ್ಷೆಯಲ್ಲಿ ೧೦ ಅಂಕಗಳಿಗೆ ಕೇಳುತ್ತಾರೆ’. ಇದರ ಹಿಂದಿನ ದೃಷ್ಟಿಕೋನವನ್ನು ನಾವೇ ಬದಲಾಯಿಸಬೇಕು. ಇತಿಹಾಸವನ್ನು ಅಂಕಗಳಿಗಾಗಿ ಕಲಿಯದೇ ಅದು ಅವರಲ್ಲಿ ರಾಷ್ಟ್ರಪ್ರೇಮವನ್ನು ನಿರ್ಮಾಣ ಮಾಡಬೇಕು ಎನ್ನುವ ರೀತಿಯಲ್ಲಿ ಅವರಿಗೆ ಕಲಿಸಬೇಕು ಹಾಗೂ ಇದೇ ದೃಷ್ಟಿಕೋನವನ್ನು ಪಾಲಕರು ಮತ್ತು ಶಿಕ್ಷಕರು ಮಕ್ಕಳಿಗೆ ಕೊಡಬೇಕು. ಒಂದು ವೇಳೆ ಭಾವೀ ಪೀಳಿಗೆಯು ರಾಷ್ಟ್ರಪ್ರೇಮಿಯಾಗದಿದ್ದಲ್ಲಿ, ರಾಷ್ಟ್ರದ, ಪರೋಕ್ಷವಾಗಿ ನಮ್ಮ ವಿನಾಶವು ಖಚಿತವಾಗಿದೆ. “ರಾಷ್ಟ್ರ ಉಳಿದರೆ ಸಮಾಜ ಉಳಿದೀತು ಮತ್ತು ಸಮಾಜ ಉಳಿದರೆ ನಾನು ಉಳಿಯುವೆನು”, ಎನ್ನುವ ದೃಷ್ಟಿಕೋನವನ್ನೇ ಪಾಲಕರು ಹಾಗೂ ಶಿಕ್ಷಕರು ಮಕ್ಕಳಲ್ಲಿ ಬಿಂಬಿಸಬೇಕು.

ಇತಿಹಾಸದ ಉದಾಹರಣೆಗಳನ್ನು ನೀಡಿ ಮಕ್ಕಳಲ್ಲಿ ರಾಷ್ಟ್ರಪ್ರೇಮವನ್ನು ನಿರ್ಮಿಸಿ !

ಇತಿಹಾಸದ ಪ್ರಸಂಗಗಳನ್ನು ಕಲಿಸುವಾಗ ಮಕ್ಕಳಲ್ಲಿ ರಾಷ್ಟ್ರಪ್ರೇಮವು ನಿರ್ಮಾಣವಾಗುತ್ತದೆ ಎನ್ನುವುದನ್ನು ಖಚಿತಪಡಿಸಿಕೊಳ್ಳಬೇಕು. ಇದಕ್ಕಾಗಿ ಮಕ್ಕಳ ವರದಿಯನ್ನು ತೆಗೆದುಕೊಳ್ಳಬೇಕು, ಉದಾ. ‘ದೇಶದ ಸ್ವಾತಂತ್ರ್ಯಕ್ಕಾಗಿ ಅನೇಕರು ಪ್ರಾಣದ ಆಹುತಿಯನ್ನು ನೀಡಿದರು. ಅಂತಹ ಸಂದರ್ಭದಲ್ಲಿ ಧ್ವಜವು ಸ್ವಾತಂತ್ರ್ಯದಿನದಂದು ರಸ್ತೆಯ ಮೇಲೆ ಬಿದ್ದಿರುವುದು ಕಂಡಾಗ ನಿನಗೆ ಏನನ್ನಿಸುತ್ತದೆ ?’ ಎನ್ನುವಂತಹ ಕೃತಿಯ ಸ್ತರದ ಪ್ರಶ್ನೆಗಳನ್ನು ಮಕ್ಕಳಿಗೆ ಕೇಳಬೇಕು. ಇದರ ಮೂಲಕ ‘ಧ್ವಜದ ಅವಮಾನವನ್ನು ತಡೆಯಬೇಕು‘, ಎನ್ನುವುದನ್ನು ನಾವು ಮಕ್ಕಳಿಗೆ ಕಲಿಸಬಹುದು. ರಾಷ್ಟ್ರಪ್ರೇಮವನ್ನು ನಿರ್ಮಾಣ ಮಾಡುವಂತಹ ಚಲನಚಿತ್ರಗಳನ್ನು ಮಕ್ಕಳಿಗೆ ತೋರಿಸಬೇಕು.

ರಾಷ್ಟ್ರಕ್ಕಾಗಿ ಬಲಿದಾನ ನೀಡಿದವರ ಬಗ್ಗೆ ಕೃತಜ್ಞತಾಭಾವವನ್ನು ನಿರ್ಮಾಣ ಮಾಡಿ !

ಸ್ವಾತಂತ್ರ್ಯಕ್ಕಾಗಿ ಸಂಪೂರ್ಣ ಆಯುಷ್ಯವನ್ನು ಬಲಿಕೊಟ್ಟ, ಕಾರಾಗೃಹದಲ್ಲಿ ಭಯಂಕರ ಕಷ್ಟಗಳನ್ನು ಅನುಭವಿಸಿದ ಸ್ವಾತಂತ್ರ್ಯಸೈನಿಕರು ಮತ್ತು ಕ್ರಾಂತಿಕಾರರು ಹಾಗೆಯೇ ಇಂದಿಗೂ ದೇಶದ ಗಡಿಯ ರಕ್ಷಣೆಯನ್ನು ಮಾಡುವುದಕ್ಕಾಗಿ ಪೂರ್ಣ ಆಯುಷ್ಯವನ್ನು ಮುಡಿಪಾಗಿಸುವ ಸೈನಿಕರ ಬಗ್ಗೆ ಮಕ್ಕಳ ಮನಸ್ಸಿನಲ್ಲಿ ಆದರ ಹಾಗೂ ಕೃತಜ್ಞತೆಯ ಭಾವವನ್ನು ನಿರ್ಮಿಸುವುದು ಆವಶ್ಯಕವಾಗಿದೆ.

ರಾಷ್ಟ್ರಕ್ಕಾಗಿ ತ್ಯಾಗ ಮಾಡಲು ತಯಾರಿ !

ವೈಯಕ್ತಿಕ ಸುಖಕ್ಕಿಂತ ರಾಷ್ಟ್ರಕ್ಕಾಗಿ ತ್ಯಾಗ ಮಾಡುವುದೇ ಅಧಿಕ ಯೋಗ್ಯ ವಿಷಯವಾಗಿದೆ, ಎನ್ನುವ ಸಂಕಲ್ಪನೆಯು ಮಕ್ಕಳ ಮನಸ್ಸಿನಲ್ಲಿ ಬಿಂಬಿತವಾಗುವುದು ಆವಶ್ಯಕವಾಗಿದೆ. ‘ತ್ಯಾಗ’ ಈ ವಿಷಯವು ಕೈಗೂಡುವುದಕ್ಕಾಗಿ ಕೇವಲ ರಾಷ್ಟ್ರಪ್ರೇಮ ಸಾಕಾಗುವುದಿಲ್ಲ. ಅದರಿಂದಾಗಿ ಸ್ವಾರ್ಥ ಮತ್ತು ಅಹಂಭಾವವು ಬೆಳೆಯುವ ಸಾಧ್ಯತೆಯಿರುತ್ತದೆ. ಆದರೆ ನಿಸ್ವಾರ್ಥತೆ ಮತ್ತು ತ್ಯಾಗದ ಭಾವನೆಯು ನಿರ್ಮಾಣವಾಗಲು ನಿಜವಾದ ರಾಷ್ಟ್ರಪ್ರೇಮವು ನಿರ್ಮಾಣವಾಗುವುದಕ್ಕಾಗಿ ತಯಾರಿ ಆವಶ್ಯಕವಾಗಿದೆ.