ರಾಜಮಾತೆ ಜಿಜಾಬಾಯಿ ಆದರ್ಶವನ್ನು ಪಾಲಿಸುವುದು ಅತ್ಯಾವಶ್ಯಕ!

‘ಛತ್ರಪತಿ ಶಿವಾಜಿಯವರು ಹಿಂದವೀ ಸ್ವರಾಜ್ಯ ಅಂದರೆ ‘ಆದರ್ಶ ಹಿಂದೂ ರಾಷ್ಟ್ರ’ವನ್ನು ಸ್ಥಾಪಿಸಿದರು. ಈ ರಾಷ್ಟ್ರವು ನಿರ್ಮಾಣವಾಗಲೆಂದು ರಾಜಮಾತೆ ಜಿಜಾಬಾಯಿ ಶಿವಾಜಿಯ ಬಾಲ್ಯದಲ್ಲಿಯೆ ಇದರ ಬೀಜವನ್ನು ಬಿತ್ತಿದರು. ಅವರಲ್ಲಿ ಜಾಜ್ಜ್ವಲ್ಯಮಾನ ಧರ್ಮಾಭಿಮಾನ ಹಾಗೂ ರಾಷ್ಟ್ರಾಭಿಮಾನವನ್ನು ನಿರ್ಮಿಸಿದರು. ಜಿಜಾಬಾಯಿ ಶಿವಾಜಿಗೆ ಶಸ್ತ್ರಾಸ್ತ್ರಗಳ ಪ್ರಶಿಕ್ಷಣ ನೀಡಿ ಅವರಲ್ಲಿ ಕ್ಷಾತ್ರವೃತ್ತಿಯನ್ನು ಜಾಗೃತಗೊಳಿಸಿದರು ಹಾಗೂ ಅವರ ಮನಸ್ಸಿನಲ್ಲಿ ಅನ್ಯಾಯ ಮತ್ತು ಅತ್ಯಾಚಾರಗಳ ಬಗ್ಗೆಯ ಕ್ರೋಧವನ್ನು ನಿರ್ಮಿಸಿದರು. ಬಾಲ್ಯದಲ್ಲಿಯೇ ಅವರಲ್ಲಿ ಭಕ್ತಿಯ ಹಾಗೂ ಹಿಂದೂ ಧರ್ಮದ ಬೀಜವನ್ನು ಬಿತ್ತಿದ ಜಿಜಾಬಾಯಿ, ಸರ್ವದೃಷ್ಟಿಯಲ್ಲಿ ‘ಶಿವಾಜಿ’ಯನ್ನು ನಿರ್ಮಿಸಿದರು. ಆದ್ದರಿಂದಲೇ ಹಿಂದವಿ ಸ್ವರಾಜ್ಯದ ಸ್ಥಾಪನೆ ಆಯಿತು ಹಾಗೂ ಇದರ ಫಲಸ್ವರೂಪವೆಂದು ಇವತ್ತು ನಾವು ಹಿಂದೂಗಳೆಂದು ಜೀವಿಸಬಹುದಾಗಿದೆ.

ಓರ್ವ ತಾಯಿಯೇ ಹಿಂದೂ ರಾಷ್ಟ್ರದ ನಿರ್ಮಿತಿಯ ನಿಜವಾದ ಶಿಲ್ಪಿಯಾಗಿದ್ದಳು ಎಂದು ನಿಮ್ಮ ಗಮನಕ್ಕೆ ಈಗ ಬಂದಿರಬಹುದು. ರಾಜಮಾತೆ ಜಿಜಾಬಾಯಿಯನ್ನು ನಮಿಸುತ್ತ, ‘ನಾವು ನಮ್ಮ ಮಕ್ಕಳನ್ನು ಶಿವಾಜಿಯಂತೆ ನಿರ್ಮಿಸಲು ಪ್ರಯತ್ನಿಸುವೆವು ಹಾಗೂ ಹಿಂದೂ ರಾಷ್ಟ್ರದ ಸ್ಥಾಪನೆಯ ಕಾರ್ಯದಲ್ಲಿ ಸಹಭಾಗಿಯಾಗುತ್ತೇವೆ’ ಎಂದು ಮಾತೆಯರೆಲ್ಲರೂ ಪ್ರತಿಜ್ಞೆ ಮಾಡಬೇಕು ! ಹೀಗೆ ಮಾಡಿದಲ್ಲಿಯೇ ಹಿಂದೂ ರಾಷ್ಟ್ರದ ಉದಯಿಸುವ ಸೂರ್ಯನನ್ನು ಬೇಗ ನೋಡಬಹುದು.

ಈಗ ನಾವು ಜಿಜಾಬಾಯಿ ಹಾಗೂ ಇಂದಿನ ತಾಯಂದಿರ ವಿಚಾರಗಳ ತುಲನೆ ಮಾಡೋಣ.

ಮಕ್ಕಳ ಭವಿಷ್ಯ

ಅ. ಇಂದಿನ ತಾಯಂದಿರು :

‘ಮಗುವು ಸ್ವಂತಕ್ಕಾಗಿಯೇ ಜೀವಿಸಬೇಕು’ ಎಂದು ತಿಳಿದು ಅವರ ಮೇಲೆ ಸಂಕುಚಿತವೃತ್ತಿಯ ಸಂಸ್ಕಾರ ಮಾಡಲ್ಪಡುವುದು : ‘ನಮ್ಮ ಮಗ ಅಥವಾ ಮಗಳು ಆಧುನಿಕ ವೈದ್ಯ (ಡಾಕ್ಟರ) ಅಥವಾ ಅಭಿಯಂತರು ಆಗಬೇಕು ಹಾಗೂ ಎಲ್ಲೆಲ್ಲು ಗುರುತಿಸಲ್ಪಡಬೇಕು’ ಎಂಬುವುದು ಇಂದಿನ ತಾಯಂದಿರ ಮಾನಸಿಕತೆಯಾಗಿದೆ. ಅವರಿಗೆ ‘ಮಕ್ಕಳು ತಮ್ಮಷ್ಟಕ್ಕೆ ಜೀವಿಸಬೇಕು’ ಎಂದೆನಿಸುತ್ತದೆ. ಅಂದರೆ ‘ಸಂಕುಚಿತ ಮಾನಸಿಕತೆ’ ಇದು ಹಿಂದೂ ರಾಷ್ಟ್ರದ ನಿರ್ಮಿತಿಯ ಹಾದಿಯಲ್ಲಿ ದೊಡ್ಡ ಬಂಡೆಗಲ್ಲಾಗಿದೆ. ಯಾವ ತಾಯಿಯು ಸಂಕುಚಿತ ಸ್ವಭಾವದ ಸಂಸ್ಕಾರ ಮಾಡುವಳೋ ಅವಳು ಪರೋಕ್ಷವಾಗಿ ರಾಷ್ಟ್ರದ ಹಾನಿಯನ್ನೇ ಮಾಡುತ್ತಿರುವಳು; ಏಕೆಂದರೆ ಇಂತಹ ಸಂಸ್ಕಾರಗಳಿರುವ ವ್ಯಕ್ತಿಯು ರಾಷ್ಟ್ರದ ವಿಚಾರವನ್ನೇ ಮಾಡದಿರುವುದರಿಂದ ಅವರು ರಾಷ್ಟ್ರರಕ್ಷಣೆಗಾಗಿ ಸಿದ್ಧವಾಗುವುದೇ ಇಲ್ಲ.

ಆ. ಜಿಜಾಬಾಯಿ :

‘ಶಿವಾಜಿಯು ರಾಷ್ಟ್ರಕ್ಕಾಗಿಯೇ ಜೀವಿಸಬೇಕು’ ಎಂಬ ಸಂಸ್ಕಾರ ಮಾಡುವುದು : ನನ್ನ ಶಿವಾಜಿ ಜೀವನದಲ್ಲಿ ಬೆಳೆಯಬೇಕು; ಆದರೆ ಅವನು ರಾಷ್ಟ್ರಕ್ಕಾಗಿ ಜೀವಿಸಬೇಕು. ತನ್ನ ಹೆಸರು ಪ್ರಸಿದ್ಧವಾಗುವುದಕ್ಕಿಂತ ರಾಷ್ಟ್ರದ ಹೆಸರನ್ನು ಪ್ರಸಿದ್ಧಗೊಲಿಸಬೇಕು’ ಎಂಬ ವ್ಯಾಪಕ ವಿಚಾರವು ಜಿಜಾಬಾಯಿ ಅವರದಾಗಿತ್ತು. ತಾಯಂದಿರೇ ಮಕ್ಕಳ ಮನಸ್ಸನ್ನು ವ್ಯಾಪಕಗೊಳಿಸಬಹುದು; ಆದುದರಿಂದ ಪ್ರತಿಯೊಬ್ಬ ತಾಯಿಯು ‘ನಾವೂ ಮಕ್ಕಳ ಮನಸ್ಸನ್ನು ವ್ಯಾಪಕಗೊಳಿಸಿ ಹಿಂದೂ ರಾಷ್ಟ್ರದ ನಿರ್ಮಿತಿಯಲ್ಲಿ ಅಳಿಲು ಸೇವೆಯನ್ನು ಮಾಡುವೆವು’ ಎಂದು ನಿಶ್ಚಯಿಸಬೇಕು.

ಸಂಸ್ಕಾರ ಮಾಡುವುದು

ಅ ಇಂದಿನ ತಾಯಂದಿರು :

‘ಆಂಗ್ಲ ಭಾಷೆಯ ಪುಸ್ತಕಗಳನ್ನು ಓದಿ ಮಕ್ಕಳು ಜ್ಞಾನಿಗಳಾಗಬಹುದು’ ಎಂದೆನಿಸುವುದು : ‘ತಮ್ಮ ಮಕ್ಕಳು ಆಂಗ್ಲ ಭಾಷೆಯ ದೊಡ್ಡ ದೊಡ್ಡ ಪುಸ್ತಕಗಳನ್ನು ಓದಿದರೆ ಅವರು ತಾವಾಗಿಯೇ ಜ್ಞಾನಿಗಳಾಗುವರು’ ಎಂಬ ಭ್ರಮೆ ಇಂದಿನದ ತಾಯಂದಿರಲ್ಲಿ ಇದೆ. ಮಕ್ಕಳು ಪುಸ್ತಕಗಳನ್ನು ಓದಿದರೆ ಒಂದು ಪದವಿ ಅವರಿಗೆ ಸಿಗನಹುದು; ಆದರೆ ಅದರಿಂದ ಮಕ್ಕಳಲ್ಲಿ ಒಳ್ಳೆಯ ಸಂಸ್ಕಾರಗಲಾಗುವುದಿಲ್ಲ ಎಂದು ತಾಯಂದಿರು ನೆನಪಿನಲ್ಲಿ ಇಟ್ಟುಕೊಳ್ಳಬೇಕಾದ ಮಾತು.

ಆ. ಜಿಜಾಬಾಯಿ :

ಶಿವಾಜಿಗೆ ರಾಮಾಯಣ ಹಾಗೂ ಮಹಾಭಾರತದ ಕಥೆಗಳನ್ನು ಹೇಳುವುದು : ಜಿಜಾಬಾಯಿ ಶಿವಾಜಿಗೆ ಪ್ರತಿದಿವಸ ರಾಮಾಯಣ- ಮಹಾಭಾರತದ ಕಥೆಗಳನ್ನು ಹೇಳಿಕೊಡುತ್ತಿದ್ದರು. ಆದುದರಿಂದ ಶಿವಾಜಿಯೊಳಗೆ ಅನ್ಯಾಯದ ವಿರುದ್ಧ ಕ್ರೋಧ ನಿರ್ಮಾಣವಾಯಿತು ಹಾಗೂ ಅವರು ಹಿಂದವಿ ಸ್ವರಾಜ್ಯವನ್ನು ಸ್ಥಾಪಿಸಲು ಪಣತೊಟ್ಟಿದರು .

ತಾಯಂದಿರೇ, ನಮ್ಮ ಧರ್ಮಗ್ರಂಥಗಳೇ ಮಕ್ಕಳಿಗೆ ಆದರ್ಶ ಜೀವನದ ಪಾಠವನ್ನು ಕಲಿಸಲು ಯೋಗ್ಯವಾಗಿವೆ. ಆದುದರಿಂದ ತಮ್ಮ ಮಕ್ಕಳಿಗೆ ರಾಮಾಯಣ ಹಾಗೂ ಮಹಾಭಾರತ ಮುಂತಾದ ಗ್ರಂಥಗಳನ್ನು ಓದಲು ನೀಡಿ. ಆಗಲೇ ಪ್ರತಿಯೊಬ್ಬರ ಮನೆಯಲ್ಲಿ ಓರ್ವ ಶಿವಾಜಿ ನಿರ್ಮಾಣವಾಗಲು ಸಾಧ್ಯ.

ಬೇಸರ ಕಳೆಯಲೂ ಕೂಡ ದೂರದರ್ಶನದಲ್ಲಿ ಮೂಡುವ
ಕುಸಂಸ್ಕಾರ ನಿರ್ಮಿಸುವ ಮಾಲಿಕೆಗಳನ್ನು ನೋಡಬೇಡಿ !

ಇಂದಿನ ಸ್ತ್ರೀಯರು ಸಮಯ ಕಳೆಯಲೆಂದು ದೂರದರ್ಶನದಲ್ಲಿ ಮೂಡಿಬರುವ ಮಾಲಿಕೆಗಳನ್ನು ನೋಡುತ್ತಾರೆ. ಈ ಮಾಲಿಕೆಗಳಲ್ಲಿ ಕೋಪ, ದ್ವೇಷ, ಮತ್ಸರ ಹಾಗೂ ಹೊಡೆದಾಟ ಇವೇ ನೋಡಲು ಸಿಗುತ್ತವೆ. ಆದುದರಿಂದ ಒಳ್ಳೆಯ ಸಂಸ್ಕಾರವಾಗುವ ಬದಲು ವಿಕಾರಗಳನ್ನೇ ನೋಡಬೇಕಾಗುತ್ತದೆ. ಮಕ್ಕಳು ಕೂಡ ಇವೇ ಕಾರ್ಯಕ್ರಮಗಳನ್ನು ನೋಡುತ್ತಿರುವುದರಿಂದ ಅವರ ಮೇಲೆಯೂ ಅದರ ಕೆಟ್ಟ ಪರಿಣಾಮವಾಗುತ್ತದೆ. ಆದುದರಿಂದ ತಾಯಂದಿರೆ, ನೀವು ರಾಷ್ಟ್ರ ಮತ್ತು ಧರ್ಮದ ಅಭಿಮಾನ ವೃದ್ಧಿಸುವ ಮಾಲಿಕೆಗಳನ್ನು ನೋಡಿ!

ಶ್ರೀ ರಾಜೇಂದ್ರ ಪಾವಸಕರ (ಗುರುಜಿ), ಪನವೇಲ