ಆಝಾದ ಹಿಂದ್ ಸೇನೆಯ ಕ್ಯಾಪ್ಟನ ಲಕ್ಷ್ಮೀ

ಕ್ಯಾಪ್ಟನ ಲಕ್ಷ್ಮೀಯವರು ೨೪.೧೦.೧೯೧೪ ರಂದು ಮದ್ರಾಸಿನಲ್ಲಿ ಜನಿಸಿದರು. ಕ್ರಿ.ಶ. ೧೯೩೮ ರಲ್ಲಿ ತಮ್ಮ ೨೪ ನೇ ವಯಸ್ಸಿನಲ್ಲಿ ಅವರು ಎಮ್.ಬಿ.ಬಿ.ಎಸ್ ಪರೀಕ್ಷೆಯಲ್ಲಿ ಉತ್ತೀರ್ಣರಾದರು. ಸಿಂಗಪುರ್.ನಲ್ಲಿ ನೇತಾಜೀ ಸುಭಾಷಚಂದ್ರ ಬೋಸ್ ಭಾಷಣದಿಂದ ಪ್ರಭಾವಿತರಾಗಿ ಆಝಾದ ಹಿಂದ್ ಸೇನೆಯತ್ತ ಆಕರ್ಷಿತರಾದರು. ಅಕ್ಟೋಬರ ೨೨, ಝಾನ್ಸಿ ರಾಣಿ ಲಕ್ಷ್ಮೀಬಾಯಿಯ ಜನ್ಮದಿನವಾಗಿದ್ದರಿಂದ ನೇತಾಜಿಯವರು ೧೯೪೩ ರ ಅಕ್ಟೋಬರ ೨೨ ರಂದು ಆಝಾದ ಹಿಂದ್ ಸೇನೆಯಲ್ಲಿ ಸ್ತ್ರೀಯರ 'ಝಾನ್ಸಿ ರಾಣಿ ಲಕ್ಷ್ಮೀ' ಪಥಕವನ್ನು ಸ್ಥಾಪಿಸಿದರು. ಲಕ್ಷ್ಮೀ ಈ ಪಥಕದ ನೇತೃತ್ವವನ್ನು ಸ್ವೀಕರಿಸಿದರು.

ಕ್ಯಾಪ್ಟನ ಲಕ್ಷ್ಮೀಯು ತಮ್ಮ ಸೈನ್ಯದ ವಿವಿಧ ವಿಭಾಗಗಳೊಂದಿಗೆ ಶತ್ರುಗಳ ವಿರುದ್ಧ (ಆಂಗ್ಲ ಸೈನ್ಯ) ಪ್ರತ್ಯಕ್ಷ ಹೋರಾಡಲು ಹೊರಟರು. ಆ ಸಮಯದಲ್ಲಿ ಅವರ ಬಳಿ ಬೇಕಾದಷ್ಟು ಆಹಾರ ಸಾಮಗ್ರಿ, ಬಟ್ಟೆಬರೆ, ಸಿಡಿಮದ್ದುಗಳಿರಲಿಲ್ಲ ಹಾಗೂ ಯಾವ ಭಾಗದಲ್ಲಿ ಹೋಗಬೇಕಿತ್ತೋ ಆ ಪ್ರದೇಶವು ದಟ್ಟ ಅರಣ್ಯ, ಹೊಳೆ, ಕಂದಕಗಳಿಂದ ತುಂಬಿತ್ತು. ಬೆಳಗ್ಗಿನ ಜಾವದಲ್ಲಿ ಆಕ್ರಮಣಕ್ಕಾಗಿ ಹೊರಡಲು ಆಜ್ಞೆಯಾಗಿತ್ತು. ಆಂಗ್ಲರ ಸೈನ್ಯವು ಸುಮಾರು ೧ ಮೈಲಿ ದೂರದಲ್ಲಿರುವಾಗಲೇ ಧಾಳಿ ಮಾಡುತ್ತ ಮುಂದುವರೆಯಿತು. ಕ್ಯಾಪ್ಟನ ಲಕ್ಷ್ಮೀಯು ಅದಕ್ಕೆ ಪ್ರತ್ಯುತ್ತರ ನೀಡಲು ಆದೇಶಿಸಿದರು. 'ಝಾನ್ಸಿ ರಾಣಿ' ಸೈನ್ಯವು ಆಂಗ್ಲರ ಮೇಲೆರಿ ಬಂತು. ಬಂದೂಕುಗಳು ಸದ್ದು ಆಕಾಶವನ್ನೇ ಸೀಳುವಂತೆ ಇತ್ತು! ತೋಪುಗಳಿಂದ ಭಯಂಕರ ಬೆಂಕಿಯ ಚೆಂಡುಗಳು ಶತ್ರುಗಳ ಮೇಲೆ ಬಂದೆರಗಿದವು. 'ಜಯ ಹಿಂದ', 'ಇನ್ಕಲಾಬ ಜಿಂದಾಬಾದ', 'ಆಝಾದ ಹಿಂದ ಜಿಂದಾಬಾದ' ಘೋಷಣೆಗಳು ಆಂಗ್ಲ ಸೈನ್ಯಕ್ಕೆ ನಡುಕ ತಂದವು. ಜಯಘೋಷದೊಂದಿಗೆ ತೋಪುಗಳಿಂದ ಆಕ್ರಮಣ ನಡೆಯುತ್ತಲೇ ಇತ್ತು. ಕ್ಯಾಪ್ಟನ ಲಕ್ಷ್ಮೀಯ 'ಝಾನ್ಸಿಯ ರಾಣಿ' ವಿಜಯಿಯಾಯಿತು.

ಭಾರತ ಹಾಗೂ ಬ್ರಹ್ಮದೇಶದ ಗಡಿಯಲ್ಲಿ ನಡೆದ ಈ ಯುದ್ಧದಲ್ಲಿ ಝಾನ್ಸಿ ರಾಣಿ ಸೈನ್ಯವು ಆಂಗ್ಲರ ಪುರುಷರ ಸೈನ್ಯವನ್ನು ಮುಷ್ಠಿಯಲ್ಲಿ ಮೂಗು ಹಿಡಿದು ಶರಣಾಗುವಂತೆ ಮಾಡಿತು !

Leave a Comment