ದೇಶಭಕ್ತ ದತ್ತೂ ರಂಗಾರಿ

ಮಿತ್ರರೇ, ಬಾಲ ಕ್ರಾಂತಿಕಾರರು ಚಿಕ್ಕ ವಯಸ್ಸಿನಲ್ಲಿಯೇ ದೇಶಕ್ಕಾಗಿ ತ್ಯಾಗ, ಬಲಿದಾನ ನೀಡಿದ್ದಾರೆ. ‘ಭಾರತಮಾತೆಯನ್ನು ಆಂಗ್ಲರಿಂದ ಹೇಗೆ ಸ್ವತಂತ್ರಗೊಳಿಸಬಹುದು’, ‘ದೇಶಕ್ಕಾಗಿ ಪ್ರಾಣವನ್ನೂ ಅರ್ಪಿಸಲು’ ತಯಾರಾಗುವ ಏಕೈಕ ವಿಚಾರದಿಂದ ಅವರು ಇಂದಿಗೂ ದೇಶಭಕ್ತರೆಂದು ಅನಿಸಿಕೊಳ್ಳುತ್ತಾರೆ. ನಾವು ಇಂತಹ ಓರ್ವ ಬಾಲ ದೇಶಭಕ್ತನ ಬಗ್ಗೆ ನೋಡೋಣ.

ಬೆಳಗಾವಿ ಜಿಲ್ಲೆಯಲ್ಲಿ ಬೈಲಹೊಂಗಲ ಎಂಬ ಹೆಸರಿನ ಊರಿದೆ. ಆ ಊರಿನಲ್ಲಿ ದತ್ತು ರಂಗಾರಿ ಎಂಬ ಹೆಸರಿನ ೧೩ ವರ್ಷದ ಬಾಲಕನು ವಾಸಿಸುತ್ತಿದ್ದನು. ಆ ಸಮಯದಲ್ಲಿ ಭಾರತದಲ್ಲಿ ಆಂಗ್ಲರ ವಿರುದ್ಧ ‘ಭಾರತ ಬಿಟ್ಟು ತೊಲಗಿ’ ಆಂದೋಲನವು ನಡೆಯುತ್ತಿತ್ತು. ದತ್ತು ರಂಗಾರಿಯು ಕಾಂತ್ರಿಕಾರಿಗಳ ವಿಚಾರದಿಂದ ಪ್ರೇರಿತನಾಗಿ ‘ಭಾರತ ಬಿಟ್ಟು ತೊಲಗಿ’ ಆಂದೋಲನದಲ್ಲಿ ಸೇರಿಕೊಂಡನು. ದೇಶಭಕ್ತರಾದ ಕ್ರಾಂತಿಕಾರಿಗಳು ಯಾವಾಗಲೂ ತಮ್ಮ ಸುಖ-ಸೌಲಭ್ಯಗಳ ಬಗ್ಗೆ ವಿಚಾರ ಮಾಡುವುದಿಲ್ಲ, ಅವರ ಮನಸ್ಸಿನಲ್ಲಿ ಕೇವಲ ಹೇಗಾದರೂ ತಮ್ಮ ದೇಶದ ಹಿತವಾಗಬೇಕು ಎಂಬ ವಿಚಾರ ಮಾತ್ರ ಇರುತ್ತಿತ್ತು. ಅದಕ್ಕಾಗಿ ಅವರು ಸಾಯಲೂ ಸಿದ್ಧರಾಗಿರುತ್ತಿದ್ದರು.

ದತ್ತು ರಂಗಾರಿಯ ವಯಸ್ಸು ೧೩; ಆದರೆ ಇಷ್ಟು ಕಡಿಮೆ ವಯಸ್ಸಿನಲ್ಲಿಯೂ ಅವನ ಮನಸ್ಸಿನಲ್ಲಿ ದೇಶದ ಪ್ರತಿ ಅಪಾರ ಪ್ರೇಮ ಹಾಗೂ ಭಕ್ತಿಯಿತ್ತು. ದೇಶಕ್ಕಾಗಿ ಅವನು ತನ್ನ ಸರ್ವಸ್ವವನ್ನೂ ತ್ಯಜಿಸಲು ನಿಶ್ಚಯ ಮಾಡಿದನು ಹಾಗೂ ‘ಆಂಗ್ಲರೇ, ಭಾರತ ಬಿಟ್ಟು ತೊಲಗಿ’ ಈ ಆಂದೋಲನದಲ್ಲಿ ಸಹಭಾಗಿಯಾದನು. ಈ ಆಂದೋಲನದಲ್ಲಿ ಆಂಗ್ಲರು ಭಾರತೀಯ ಕ್ರಾಂತಿಕಾರರನ್ನು ಹಿಮ್ಮೆಟ್ಟಲು ಹಾಗೂ ಕ್ರಾಂತಿಕಾರರನ್ನು ಕೊಲ್ಲಲು ಗುಂಡು ಹಾರಿಸತೊಡಗಿದರು. ದತ್ತು ರಂಗಾರಿಗೆ ಒಂದು ಬಾರಿಯೂ ತನ್ನ ಪ್ರಾಣ ಹೋಗಬಹುದು ಎಂದು ಭಯವಾಗಲಿಲ್ಲ. ಅವನು ಕೈಯಲ್ಲಿ ಭಾರತದ ಬಾವುಟವನ್ನು ಹಿಡಿದು ಎದೆಗುಂದದೇ ವಿರೋಧಿಸಿದನು. ಆದರೆ ಈ ವೀರ ದೇಶಭಕ್ತನು ಆಂಗ್ಲರ ಗುಂಡಿನ ದಾಳಿಯಿಂದ ಮೃತನಾದನು.

ಅದೇ ಸಮಯದಲ್ಲಿ ಓರ್ವ ಕವಿಯು ಈ ಕ್ರಾಂತಿಕಾರಿಗಳ ತ್ಯಾಗವನ್ನು ನೋಡಿ ಒಂದು ಕವಿತೆಯನ್ನು ಬರೆದನು ಇದರಲ್ಲಿ ಅವರ ವರ್ಣನೆಯನ್ನು ಹೀಗೆ ಮಾಡಿದ್ದಾನೆ. ಈ ಕವಿತೆಯು ಹೀಗಿದೆ.

ತೈಯಾರ ಹೈ ಹಮ್ ಜೇಲಮೇ ಚಕ್ಕಿ ಚಲಾನೆಕೆ ಲಿಯೆ,
ಕಟಿಬದ್ಧ ಹೈ ಹಮ್ ಮೂಂಜಕೀ ರಸ್ಸಿ ಬನಾನೆಕೇ ಲಿಯೆ |
(ಜೈಲಿನಲ್ಲಿ ಎಂತಹ ಕಷ್ಟದ ಕೆಲಸವನ್ನು ಮಾಡಲೂ ಸಿದ್ಧರಿದ್ದೇವೆ)

ಮಂಜೂರ ಸುಖರೀ ಕೂಟನಾ, ಕೊಲ್ಹೂ ಚಲಾನಾ ಹೈ ಹಮೆ,
(ಯಾವ ಗಾಣವನ್ನು ವೀರ ಸಾವರಕರರು ಅಂಡಮಾನಿನ ಕಾರಾಗೃಹದಲ್ಲಿ ಎಳೆದಿದ್ದರೋ ಅದು)
ತೈಯಾರ ಹಮ್ ಅಧಭುನಾ ದಾನಾ ಚಬಾನೆಕೆ ಲಿಯೆ |
(ಅಂದರೆ ತಿನ್ನಲು ಸಿಕ್ಕಿದರೂ ಸಿಗದಿದ್ದರೂ ಚಿಂತೆಯಿಲ್ಲ.)

ಕಂಬಲ, ಬಿಛೌನಾ ಓಢನೆಮೆಂ ಕಷ್ಟ ಹೀ ಹೈ ಕ್ಯಾ ಹಮೆ,
ತೈಯಾರ ಹೈ ಹಮ್ ಭೂಮಿಕೊ ಬಿಸ್ತರ ಬನಾನೆಕೆ ಲಿಯೆ |
(ನಿದ್ದೆ ಮಾಡಲು ಹಾಸಿಗಯೇ ಬೆಕಾಗಿಲ್ಲ, ನೆಲದ ಮೇಲೆ ಮಲಗಬೇಕಾದರೂ ಸಿದ್ಧರಿದ್ದೇವೆ.)

ಜಾಂಘಿಯೆ, ಕುರ್ತೆ, ಕಡೆ ಮೆ ಶರ್ಮ ಹೈ ಕುಛ ಭೀ ನಹಿ,
ತೈಯಾರ ಹೈ ನಂಗೆ ಬದನ ಜೀವನ ಬಿತಾನೆಕೆ ಲಿಯೆ |
(ಉತ್ತಮ ಬಟ್ಟೆಗಳ ಆಸೆಯಿಲ್ಲ, ಹಾರಕಲು ಏನು, ಬೆತ್ತಲೆ ಇರಲೂ ನಾವು ಸಿದ್ಧರಿದ್ದೇವೆ)

ನಿಜ ಧರ್ಮ ಪಾಲನ ಕೆ ಲಿಯೆ, ಡರ ತೋಪ-ಗೋಲೋಂಕಾ ಕಹಾಂ,
ತೈಯಾರ ಹೈ ಆನಂದಪೂರ್ವಕ ಮೃತ್ಯು ಪಾನೆಕೆ ಲಿಯೆ |
(ಭಾರತ ಮಾತೆಯ ರಕ್ಷಣೆಗಾಗಿ, ಧರ್ಮ ಪಾಲನೆಗಾಗಿ ನಾವು ಮೃತ್ಯುವನ್ನೂ ನಗು ನಗುತ್ತ ಅಪ್ಪಿಕೊಳ್ಳಲು ಸಿದ್ಧರಿದ್ದೇವೆ.)

ಜಬತಕ ನಹೀಂ ಸ್ವಾಧೀನ ಭಾರತ, ಸ್ವರ್ಗಮೆ ಭಿ ಸುಖ ನಹೀಂ,
ತೈಯಾರ ಹೈ ಹಮ್ ನರಕ ಕಾ ಭೀ ಕಷ್ಟ ಪಾನೆಕೇ ಲಿಯೆ |
(ಭಾರತ ಸ್ವತಂತ್ರವಾಗುವ ತನಕ ಸ್ವರ್ಗ ಸಿಕ್ಕಿದರೂ ಅದರಲ್ಲಿ ಸುಖವೆಲ್ಲಿದೆ, ಭಾರತಂಬೆಯನ್ನು ಸ್ವತಂತ್ರಗೊಳಿಸಲು ನಾವು ನರಕದಂತಹ ಕಷ್ಟವನ್ನು ಸಹಿಸಲೂ ಸಿದ್ಧರಿದ್ದೇವೆ.)

ಈ ಕವಿತೆಯಿಂದ ಗಮನಕ್ಕೆ ಬರುವುದೇನೆಂದರೆ ಈ ಬಾಲಕ್ರಾಂತಿಕಾರಿಗಳಿಗೆ ಮಾತೃಭೂಮಿಯೇ ಎಲ್ಲಕ್ಕಿಂತ ಶ್ರೇಷ್ಠವಾದುದು ಅಂದರೆ ಭಾರತಮಾತೆಯೇ ಸರ್ವಸ್ವ ಆಗಿದ್ದಳು. ಭಾರತವನ್ನು ಸ್ವತಂತ್ರಗೊಳಿಸಲು ಮಾತೃಭೂಮಿಯ ರಕ್ಷಣೆಗಾಗಿ ಅವರು ತಮ್ಮ ಜೀವನವನ್ನು ತ್ಯಜಿಸಿದರು.